ಚಲಿಸುತ್ತಿದ್ದ ಬೈಕ್‌ನಲ್ಲಿ ಗಂಡ ಹೆಂಡತಿ ಜಗಳವಾಗಿ, ಪತ್ನಿ ಚಪ್ಪಲಿಯಿಂದ ಗಂಡನಿಗೆ ಹೊಡೆದ ಘಟನೆ ನಡೆದಿದೆ. ಈ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಲಕ್ನೋ: ಗಂಡ ಹೆಂಡ್ತಿ ಜಗಳ ಉಂಡು ಮಲಗೋ ತನಕ ಅಂತ ಹಿಂದೆ ಗಾದೆಗಳಿತ್ತು. ಆದರೆ ಇಂದು ಗಂಡ ಹೆಂಡತಿ ಜಗಳ ಬೀದಿಯಲ್ಲೂ ಕಾಣ ಸಿಗುತ್ತಿದ್ದು, ಡಿವೋರ್ಸ್ ವರೆಗೂ ಮುಂದುವರೆಯುವುದು ಸಾಮಾನ್ಯ ಎನಿಸಿದೆ. ಅದೇ ರೀತಿ ಇಲ್ಲೊಂದು ಕಡೆ ನಾಲ್ಕು ಗೋಡೆಗಳ ನಡುವೆ ಕಿತ್ತಾಡಬೇಕಾದ ದಂಪತಿ ಚಲಿಸುತ್ತಿದ್ದ ಬೈಕ್ ಮೇಲೆಯೇ ಕಿತ್ತಾಡಿದ್ದು, ಗಂಡ ಬೈಕ್ ಬಿಡುತ್ತಿದ್ದರೆ ಹಿಂದ ಕುಳಿತಿದ್ದ ಪತ್ನಿ, ಕಾಲಿನಲ್ಲಿದ್ದ ಚಪ್ಪಲಿಯನ್ನು ಕೈಗೆ ತೆಗೆದುಕೊಂಡು ಬೈಕ್ ಬಿಡುತ್ತಿದ್ದ ಗಂಡನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಈ ದೃಶ್ಯವನ್ನು ಅವರ ಹಿಂದೆ ಬರುತ್ತಿದ್ದ ವಾಹನಗಳ ಸವಾರರು ಯಾರೋ ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋ ನೋಡಿದ ಜನ ಕಾಲ ಕೆಟ್ಟೋಯ್ತು ಅಂತಿದ್ದಾರೆ.

ಉತ್ತರ ಪ್ರದೇಶದ ಲಕ್ನೋದ ವಾಹನ ಸಂದಣಿಯ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಅಂದಹಾಗೆ ಈ 21 ಸೆಕೆಂಡ್‌ಗಳ ವೀಡಿಯೋವನ್ನು @gharkekalesh ಎಂಬ ಟ್ವಿಟ್ಟರ್‌ ಪೇಜ್‌ನಿಂದ ಪೋಸ್ಟ್ ಮಾಡಲಾಗಿದ್ದು, ಸಾವಿರಾರು ಜನ ವೀಕ್ಷಿಸಿದ್ದಾರೆ. ವೀಡಿಯೋ ಪೋಸ್ಟ್ ಮಾಡಿ ಚಲಿಸುವ ಬೈಕ್ ಮೇಲೆ ಗಂಡ ಹೆಂಡತಿಯ ಜಗಳ, ಹೆಂಡತಿ ಕಾಲಿನಲ್ಲಿದ್ದ ಚಪ್ಪಲಿಯನ್ನು ತೆಗೆದು ಗಂಡನಿಗೆ ಸರಿಯಾಗಿ ಥಳಿಸಿದ್ದಾಳೆ ಎಂದು ಬರೆದು ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಆದರೆ ಇದು ಯಾವಾಗ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ.

ವೈರಲ್ ಆದ ವೀಡಿಯೋದಲ್ಲಿ ಹೆಂಡ್ತಿ ಹಿಂದೆ ಕುಳಿತಿದ್ದರೆ, ಮುಂದೆ ಗಂಡ ಬೈಕ್ ಓಡಿಸುತ್ತಿದ್ದಾನೆ. ಇವರ ನಡುವೆ ಏನಾಯಿತೋ ಏನು ಬಹುಶಃ ಕೆಲ ಮಾತಿನ ಚಕಮಕಿ ನಡೆದಿರಬೇಕು. ಇದರಿಂದ ಸಿಟ್ಟಿಗೆದ್ದ ಹೆಂಡ್ತಿ ಅದೆಲ್ಲಿತ್ತೋ ಸಿಟ್ಟು, ಕಾಲಿನಲ್ಲಿದ್ದ ಚಪ್ಪಲಿ ತೆಗೆದು ಆತನಿಗೆ ಸರಿಯಾಗಿ ಹೊಡೆದಿದ್ದಾಳೆ. ಆದರೆ ಬಡಪಾಯಿ ಗಂಡ ಮಾತ್ರ ಇದ್ಯಾವುದಕ್ಕೋ ಪ್ರತಿಕ್ರಿಯಿಸದೇ ವೇಗವಾಗಿ ಬೈಕ್ ಓಡಿಸಿದ್ದಾನೆ. ಇತ್ತ ಪತ್ನಿಗೆ ಮಾತ್ರ ಆತನಿಗೆ ಎಷ್ಟು ಥಳಿಸಿದರೋ ಸಮಾಧಾನವಾದಂತೆ ಕಂಡಿಲ್ಲ, ಆಕೆ ಕ್ಯಾಮರಾದಲ್ಲಿ ಕಾಣಿಸುವವರೆಗೂ ಆತ ಮೇಲೆ ಹಲ್ಲೆ ಮುಂದುವರೆಸಿದ್ದಾಳೆ. ಈ ವೀಡಿಯೋವನ್ನು 4 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. 

ಆ ವೀಡಿಯೋ ಇಲ್ಲಿದೆ ನೋಡಿ:

Scroll to load tweet…

ಇನ್ನು ಈ ವೀಡಿಯೋ ನೋಡಿದ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿದ್ದಾರೆ. ಒಬ್ಬರು ಆಕೆ ತಪ್ಪಿ ಹೆಂಡ್ತಿ ತಂಗಿ ಜೊತೆ ಮಲಗಿರಬೇಕು ಎಂದಿದ್ದಾರೆ. ಈ ಏಟಿಗೆ ಆಕೆ ಗಂಡ ಸರಿಯಾದ ಕಾನೂನು ಕ್ರಮಕೈಗೊಳ್ಳುತ್ತಾನೆ ಎಂದು ಭಾವಿಸುವೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಆತ ಗಂಡಸು ತಾಳ್ಮೆ ಕಲಿಯಲೇಬೇಕು ಇಲ್ಲದೇ ಹೋದರೆ ನೀಲಿ ಡ್ರಮ್ ಗತಿ ಆದಿತ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. (ಮೀರತ್‌ನಲ್ಲಿ ಮಹಿಳೆಯೊಬ್ಬಳು ಪ್ರಿಯಕರನಿಗಾಗಿ ಗಂಡನನ್ನು ಕೊಂದು ನೀಲಿ ಡ್ರಮ್‌ನಲ್ಲಿ ಸಿಮೆಂಟ್ ಹಾಕಿ ತುಂಬಿಸಿದ್ದ ಘಟನೆಯ ಹಿನ್ನೆಲೆಯಲ್ಲಿ ಅವರು ಹೀಗೆ ಕಾಮೆಂಟ್ ಮಾಡಿದ್ದಾರೆ. ಸಹೋದರ ಹೆಲ್ಮೆಟ್ ಧರಿಸಿದ್ದರೆ ಇಂತಹ ಅನಾಹುತ ತಪ್ಪುತ್ತಿತ್ತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಏಟು ತಿಂದರೂ ಆತನ ಬ್ಯಾಲೆನ್ಸ್ ಮೆಚ್ಚಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅವಳು ಮಹಿಳೆ ಆಗಿದ್ದರೆ ಅವಳು ಏನು ಬೇಕಾದರೂ ಮಾಡಬಹುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ಕೂಡ ಕೌಟುಂಬಿಕ ಹಿಂಸೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ ಇದು ಒಳ್ಳೆಯ ಲಕ್ಷಣವಲ್ಲ, ಅಪಘಾತವಾದರೆ ಇಬ್ಬರೂ ಜೊತೆಯಲ್ಲೇ ಹೋಗಬೇಕಾದಿತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಈಗ ಭಾರಿ ವೈರಲ್ ಆಗಿದೆ. ಈ ವೀಡಿಯೋ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ.