ಸುಂದರಿ ಅಂತ ಮದ್ವೆಯಾದ, ವರ್ಷದ ಬಳಿಕ ರಹಸ್ಯ ತಿಳಿದಾಗ ಎಂಟು ಜನರ ವಿರುದ್ಧ ದೂರು ದಾಖಲಿಸಿದ
34 ವರ್ಷದ ವ್ಯಕ್ತಿಯ ಮದುವೆ (Marriage) ವರ್ಷದ ಹಿಂದೆ ಆಗಿತ್ತು. ಸೋನೋಗ್ರಾಫಿ ಬಳಿಕ ಡಾಕ್ಟರ್ ಹೇಳಿದ ವಿಷಯ ಕೇಳಿದಾಗ ಗಂಡ (Husband) ಶಾಕ್ ಆಗಿದ್ದನು.
ಅಹಮದಾಬಾದ್: ವರ್ಷವಾದರೂ ಮಕ್ಕಳಾಗದ್ದಕ್ಕೆ ದಂಪತಿ ಆಸ್ಪತ್ರೆಗೆ ಹೋಗಿ ವೈದ್ಯಕೀಯ ತಪಾಸಣೆಗೊಳಗಾದ (Medical Examination) ವೈದ್ಯರು ನೀಡಿದ ಮಾಹಿತಿ ಕೇಳಿದ ವ್ಯಕ್ತಿ, ಅತ್ತೆ-ಮಾವನ (Wife Parents) ವಿರುದ್ಧ ದೂರು ದಾಖಲಿಸಿದ್ದಾರೆ. ಪತ್ನಿ ಯಾಕೆ ಗರ್ಭಿಣಿ (Pregnant) ಆಗ್ತಿಲ್ಲ ಎಂಬ ವಿಷಯ ಕೇಳಿ ಗಂಡನಿಗೆ ನಿಂತಲ್ಲೇ ಕುಸಿದ ಅನುಭವವಾಗಿತ್ತು. ಅಹಮದಾಬಾದದ್ ಸರ್ಕೇಜ್ ನಿವಾಸಿಯಾಗಿರುವ ದಂಪತಿ ಒಂದು ವರ್ಷದಿಂದ ಮಗುವಿಗಾಗಿ ಪ್ರಯತ್ನಿಸುತ್ತಿದ್ದರು. ಪತ್ನಿ ಗರ್ಭಿಣಿಯಾಗದಕ್ಕೆ ಇಬ್ಬರು ಸ್ಥಳೀಯ ತಜ್ಞರ ವೈದ್ಯರ (Doctors) ಬಳಿ ತೆರಳಿ, ತಪಾಸಣೆಗೆಗೊಳಗಾಗಿದ್ದರು. 34 ವರ್ಷದ ವ್ಯಕ್ತಿಯ ಮದುವೆ (Marriage) ವರ್ಷದ ಹಿಂದೆ ಆಗಿತ್ತು. ಸೋನೋಗ್ರಾಫಿ ಬಳಿಕ ಡಾಕ್ಟರ್ ಹೇಳಿದ ವಿಷಯ ಕೇಳಿದಾಗ ಗಂಡ (Husband) ಶಾಕ್ ಆಗಿದ್ದನು.
ಮದುವೆ ವೇಳೆ ಸುಳ್ಳು ಹೇಳಿದ್ದ ಪೋಷಕರು
ನಿಮ್ಮ ಪತ್ನಿಗೆ 40ಕ್ಕಿಂತ ಹೆಚ್ಚು ವಯಸ್ಸಾಗಿದ್ದು, ನೈಸರ್ಗಿಕವಾಗಿ ಆಕೆ ಗರ್ಭ ಧರಿಸಲು ಸಾಧ್ಯವಿಲ್ಲ ಎಂದಿದ್ದರು. ಮದುವೆ ಸಂದರ್ಭದಲ್ಲಿ ತಮ್ಮ ಮಗಳಿಗೆ 32 ವರ್ಷ ಎಂದು ಆಕೆಯ ಪೋಷಕರು ಹೇಳಿದ್ದರು. ಆದರೆ ಸೋನೋಗ್ರಾಫಿಯಲ್ಲಿ ಮಹಿಳೆಯ ವಯಸ್ಸು 40ಕ್ಕಿಂತ ಎಂದು ವೈದ್ಯರು ಖಚಿತಪಡಿಸಿದ್ದರು. ಪತ್ನಿಯ ತಂದೆ, ತಾಯಿ ಸೇರಿದಂತೆ ಎಂಟು ಜನರ ವಿರುದ್ಧ ಸಂತ್ರಸ್ತ ಪತಿ ದೂರು ದಾಖಲಿಸಿದ್ದಾನೆ. ದೂರಿನ ಅನ್ವಯ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಸಹ ಆರಂಭಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಸುಳ್ಳು, ನಂಬಿಕೆ ದ್ರೋಹ, ಫೋರ್ಜರಿ, ವಂಚನೆ, ಕ್ರಿಮಿನಲ್ ಪಿತೂರಿ ಮತ್ತು ಬೆದರಿಕೆಗೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
2023ರ ಮೇ ತಿಂಗಳಿನಲ್ಲಿ ಮೊದಲ ಬಾರಿ ಪತ್ನಿಯನ್ನು ಭೇಟಿಯಾಗಿದ್ದೆ. ಪತ್ನಿಯ ಪೋಷಕರು ನೀಡಿದ ಬಯೋಡೇಟಾದಲ್ಲಿ ಆಕೆಯ ಜನ್ಮ ದಿನಾಂಕ 18ನೇ ಮೇ 1991 ಎಂದು ಬರೆಯಲಾಗಿತ್ತು. ಈ ದಿನಾಂಕದ ಪ್ರಕಾರ ನನಗಿಂತ 18 ತಿಂಗಳು ಚಿಕ್ಕವಳು ಅಂತಾಗಿತ್ತು. ನಂತರ 19ನೇ ಜೂನ್ 2023ರಂದು ನಮ್ಮ ಮದುವೆ ಪಾಲನಪುರ ಬಳಿಯ ಗ್ರಾಮದಲ್ಲಿ ನಡೆಯಿತು ಎಂದು ಸಂತ್ರಸ್ತ ವ್ಯಕ್ತಿ ದೂರಿನಲ್ಲಿ ಹೇಳಿದ್ದಾನೆ.
ಎರಡು ಮಕ್ಕಳ ತಂದೆಯಾಗಿರೋ ಪ್ರಿಯಕರನನ್ನ ಭೇಟಿಯಾಗಲು ಭಾರತಕ್ಕೆ ಬಂದ ಪಾಕಿಸ್ತಾನದ ಚೆಲುವೆ !
ಬರ್ತ್ ಸರ್ಟಿಫಿಕೇಟ್ ನೀಡಲು ಹಿಂದೇಟು
ಮದುವೆಗೂ ಮುನ್ನ ಬರ್ತ್ ಸರ್ಟಿಫಿಕೇಟ್ (Birth Certificate) ನೀಡುವಂತೆ ಗಂಡ ಕೇಳಿದ್ದನು. ಆದರೆ ಪತ್ನಿ ಹಾಗೂ ಆಕೆಯ ಕುಟುಂಬಸ್ಥರು ಬೇರೆ ಬೇರೆ ಕಾರಣ ನೀಡಿ ಬರ್ತ್ ಸರ್ಟಿಫಿಕೇಟ್ ನೀಡಿರಲಿಲ್ಲ. ಕೊನೆಗೆ ಮದುವೆ ನಿಲ್ಲಿಸೋದಾಗಿ ಹೇಳಿದಾಗ ಮಹಿಳೆಯ ಪೋಷಕರು ಶಾಲೆಯ ದಾಖಲೆ ಮತ್ತು ಪಾಸ್‌ಪೋರ್ಟ್ ಕಾಪಿ ನೀಡಿದ್ದರು. ಈ ದಾಖಲೆಗಳಲ್ಲಿ ಮಹಿಳೆಯ ಜನ್ಮ ದಿನಾಂಕ 18 ಮೇ 1991 ಎಂದು ದಾಖಲಾಗಿತ್ತು ಎಂದು ವ್ಯಕ್ತಿ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾನೆ.
ಸೋನೋಗ್ರಾಫಿಯಲ್ಲಿ ಬಯಲಾಯ್ತು ಪತ್ನಿ ರಹಸ್ಯ
ಮದುವೆಯಾದ ನಂತರ ಮಗುವಿಗಾಗಿ ವ್ಯಕ್ತಿ ಪ್ರಯತ್ನಿಸಿದ್ದಾನೆ. ಪತ್ನಿ ಗರ್ಭ ಧರಿಸದ ಹಿನ್ನೆಲೆ ಇಬ್ಬರು ಜೈಪುರ ನಗರದ ಆಸ್ಪತ್ರೆಗೆ ಬಂದಿದ್ದಾರೆ. ಆದ್ರೆ ಇಲ್ಲಿ ಯಾವುದೇ ದಾಖಲೆಗಳನ್ನು ನೀಡಿರಲಿಲ್ಲ. ನಂತರ ಸೆಪ್ಟೆಂಬರ್ 2023ರಂದು ಪಾಲಾಡಿಯ ಪ್ರಸೂತಿ ತಜ್ಞರ (Gynaecologists) ಬಳಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಸೋನೋಗ್ರಾಫಿ ವರದಿ ಪ್ರಕಾರ ಮಹಿಳೆಗೆ 40 ರಿಂದ 42 ವರ್ಷ ಆಗಿದ್ದು, ಆಕೆ ನೈಸರ್ಗಿಕವಾಗಿ ಗರ್ಭ ಧರಿಸಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಪತ್ನಿ ವಯಸ್ಸಿನ ರಹಸ್ಯ ತಿಳಿಯುತ್ತಿದ್ದಂತೆ ಗಂಡ ದೂರು ದಾಖಲಿಸಿದ್ದಾನೆ.
ಮದ್ವೆಯಾಗಿ ಒಂದೂವರೆ ವರ್ಷ, ಜೊತೆಯಲ್ಲಿದಿದ್ದು 8 ದಿನ.. ಸಂಬಂಧ ಬೆಳೆಸದ IRS ಅಧಿಕಾರಿ ಗಂಡನ ವಿರುದ್ಧ ಪತ್ನಿ ದೂರು