ಮದ್ವೆಯಾಗಿ ಒಂದೂವರೆ ವರ್ಷ, ಜೊತೆಯಲ್ಲಿದಿದ್ದು 8 ದಿನ.. ಸಂಬಂಧ ಬೆಳೆಸದ IRS ಅಧಿಕಾರಿ ಗಂಡನ ವಿರುದ್ಧ ಪತ್ನಿ ದೂರು

ಮದುವೆಯಾಗಿ ಒಂದೂವರೆ ವರ್ಷ ಕಳೆದರೂ ತನ್ನನ್ನು ಮುಟ್ಟದ IRS ಅಧಿಕಾರಿ ಗಂಡನ ವಿರುದ್ಧ ಮಹಿಳೆ ದೂರು ದಾಖಲಿಸಿದ್ದಾರೆ. ಜೊತೆಯಲ್ಲಿದಿದ್ದು 8 ದಿನ, ಆದ್ರೆ ಒಮ್ಮೆಯೂ ತನ್ನ ಜೊತೆ ಸಂಬಂಧ ಬೆಳೆಸಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ.

High profile dowry case woman file complaint against irs officer husband in jaipur mrq

ಜೈಪುರ: ರಾಜಸ್ಥಾನ ರಾಜಧಾನಿಯ ಜೈಪುರದಲ್ಲಿ (Jaipur, Rajasthan) ಹೈಪ್ರೊಫೈಲ್ ವರದಕ್ಷಿಣೆ ಯ ಪ್ರಕರಣವೊಂದು (Dowry Case) ದಾಖಲಾಗಿದೆ. ಐಆರ್‌ಎಸ್ ಅಧಿಕಾರಿಯ (IRS Officer) ಪತ್ನಿ ವರದಕ್ಷಿಣೆ ದೂರು (Complaint) ದಾಖಲಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ. ಇಡೀ ಪ್ರಕರಣ ಕೋಟಿ ರೂಪಾಯಿ ವರದಕ್ಷಿಣೆ ಮತ್ತು ದೈಹಿಕ ಸಂಬಂಧಕ್ಕೆ ಸಂಬಂಧಿಸಿದಾಗಿದೆ. ಗುಜರಾತಿನಲ್ಲಿ ಐಆರ್‌ಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಚಿರಾಗ್ ಝಿರ್ವಾಲ್ ವಿರುದ್ಧ ಪತ್ನಿ ಪೂರ್ವಾ ಅವರು ಪಶ್ಚಿಮ ಜೈಪುರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಪ್ರಕಾರ, ಒಂದೂವರೆ ವರ್ಷದ ಹಿಂದೆ ಡಿಸೆಂಬರ್ 2022ರಲ್ಲಿ ಚಿರಾಗ್-ಪೂರ್ವಾ ಸಂಪ್ರದಾಯಬದ್ಧವಾಗಿ, ಗುರು-ಹಿರಿಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆ (Marriage) ನಡೆದಿತ್ತು. 

ಮದುವೆ ಬಳಿಕ ಚಿರಾಗ್ ಮತ್ತು ಆತನ ಪೋಷಕರು ಪೂರ್ವಾರಿಗೆ ಕಿರುಕುಳ (Harassment) ನೀಡಲು ಆರಂಭಿಸಿದರು ಎಂದು ದೂರಿನಲ್ಲಿ ದಾಖಲಾಗಿದೆ. ಮದುವೆಯಾದ ಒಂದೂವರೆ ವರ್ಷದಲ್ಲಿ ಚಿರಾಗ್ ಪತ್ನಿ ಜೊತೆ ಎಂಟು ದಿನ ಮಾತ್ರ ಕಳೆದಿದ್ದಾರೆ. ಈ ಎಂಟು ದಿನದಲ್ಲಿ ಪತ್ನಿ ಜೊತೆ ದೈಹಿಕ ಸಂಬಂಧವೂ (Physical Relationship) ಬೆಳೆಸಿಲ್ಲ. ಮದುವೆಯಾದಗಿನಿಂದ ಚಿರಾಗ್ ಪತ್ನಿಯಿಂದ ಅಂತರ ಕಾಯ್ದುಕೊಳ್ಳುತ್ತಾ ಬಂದಿದ್ದಾರೆ. 

ಲೈಂಗಿಕ ಸಂಪರ್ಕಕ್ಕೆ ನಿರಾಸಕ್ತಿ ಎಂದು ಗಂಡನ ವಿರುದ್ಧ ಸುಳ್ಳು ಮಾಹಿತಿ: ಪತ್ನಿ ಮೇಲೆ ಕ್ರಮಕ್ಕೆ ಹೈಕೋರ್ಟ್‌ ಅಸ್ತು..!

ಪೂರ್ವಾ ತಂದೆ ಹೇಳಿದ್ದೇನು?

ಮಗಳ ಮದುವೆಗೆ ಗಂಡು ಹುಡುಕುತ್ತಿರುವಾಗ ಸಂಬಂಧಿಕರ ಮೂಲಕ  ಚಿರಾಗ್ ಮಾಹಿತಿ ಸಿಕ್ಕಿತು. ಹೆಣ್ಣು ನೋಡುವ ಶಾಸ್ತ್ರದ ಬಳಿಕ ಎರಡೂ ಕುಟುಂಬಗಳಿಂದಲೂ ಮದುವೆಗೆ ಒಪ್ಪಿಗೆ ಸಿಕ್ಕಿತ್ತು. ನಿಶ್ಚಿತಾರ್ಥಕ್ಕೂ ಮೊದಲೇ ಚಿರಾಗ್ ಕುಟುಂಬಸ್ಥರು ವರದಕ್ಷಿಣೆಗೆ ಡಿಮ್ಯಾಂಡ್ ಮಾಡಿದರು ಎಂದು ಪೂರ್ವಾ ತಂದೆ ದಿನೇಶ್ ಹೇಳುತ್ತಾರೆ.

ಮದುವೆಗೆ ಮುನ್ನ ಚಿರಾಗ್ ಪೋಷಕರು 1 ಕೋಟಿ ಹಣ ಮತ್ತು 1 ಸಾವಿರ ಚದರ ಮೀಟರ್ ವಿಸ್ತೀರ್ಣದ ನಿವೇಶನವನ್ನು ವರೋಪಚಾರದ ಸಂದರ್ಭದಲ್ಲಿ ನೀಡಬೇಕು ಎಂದು ಡಿಮ್ಯಾಂಡ್ ಮಾಡಿದರು. ಮದುವೆ ಸಂದರ್ಭದಲ್ಲಿ ಹಣ ಹಾಗೂ ನಿವೇಶನ ನೀಡಲು ವಿಫಲವಾದಾಗ ವಧುವನ್ನು ಕರೆದುಕೊಂಡು ಹೋಗುವ ಶಾಸ್ತ್ರವನ್ನೇ ನಿಲ್ಲಿಸಲಾಗಿತ್ತು. ಕೊನೆಗೆ ಚಿರಾಗ್ ಪೋಷಕರ ಮನವೊಲಿಸಿದ್ದರಿಂದ ಮದುವೆ ಶಾಸ್ತ್ರಗಳು ನಡೆದವು. ಮದುವೆ ಬಳಿಕ ಪ್ರತಿನಿತ್ಯ ಪೂರ್ವಾಗೆ ಕಿರುಕುಳ ನೀಡಲಾಗುತ್ತಿತ್ತು ಎಂದು ದಿನೇಶ್ ಆರೋಪಿಸಿದ್ದಾರೆ. 

ಕಿರುಕುಳ ಹೆಚ್ಚಾದಾಗ ದೂರು ದಾಖಲು

ಚಿರಾಗ್ ರಾಜಸ್ಥಾನದ ಝುಂಝುನೂ ಜಿಲ್ಲೆಯ ನಿವಾಸಿಯಾಗಿದ್ದಾರೆ. ಪೂರ್ವ ಹಾಗೂ ಕುಟುಂಬಸ್ಥರು ವರದಕ್ಷಿಣೆಗೆ ಡಿಮ್ಯಾಂಡ್ ಮಾಡೋದು ತಪ್ಪೆಂದು ಎಷ್ಟೇ ಮನವೊಲಿಸಿದರೂ ಚಿರಾಗ್ ಪೋಷಕರ ಅರ್ಥ ಮಾಡಿಕೊಂಡಿಲ್ಲ. ಪೊಲೀಸ್ ಠಾಣೆಗೆ ಹೋದ್ರೆ ಕುಟುಂಬದ ಮರ್ಯಾದೆ ಹೋಗುತ್ತೆ ಎಂದು ಯಾವುದೇ ದೂರು ದಾಖಲಿಸದೇ ತಾವೇ ರಾಜೀ ಪಂಚಾಯ್ತಿ ಮೂಲಕ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದರು. ಚಿರಾಗ್ ಪೋಷಕರ ಕಿರುಕುಳ ಹೆಚ್ಚಾದಾಗ ಅಂತಿಮವಾಗಿ ದೂರು ದಾಖಲಿಸಿದ್ದಾರೆ.

ಪ್ಯಾಲೇಸ್‌ನಲ್ಲಿ ನಿಶ್ವಿತಾರ್ಥ, ರೆಸಾರ್ಟ್‌ನಲ್ಲಿ ಮದುವೆ

ಚಿರಾಗ್ ಮತ್ತು ಪೂರ್ವಾ ನಿಶ್ವಿತಾರ್ಥ ರಾಮಬಾಗ್ ಪ್ಯಾಲೇಸ್‌ನಲ್ಲಿ ಅದ್ಧೂರಿಯಾಗಿ ನಡೆದಿತ್ತು. ನಿಶ್ಚಿತಾರ್ಥದ ಎಲ್ಲಾ ಖರ್ಚು-ವೆಚ್ಚಗಳನ್ನು ಪೂರ್ವಾ ಕುಟುಂಬಸ್ಥರೇ ನೀಡಿದ್ದರು. ಮದುವೆ ಸಹ ಪ್ಯಾಲೇಸ್‌ನಲ್ಲಿಯೇ ನಡೆಯಬೇಕು ಎಂದು ಚಿರಾಗ್ ಪೋಷಕರು ಬೇಡಿಕೆ ಇಟ್ಟಿದ್ದರು. ಇದಕ್ಕೆ ಒಪ್ಪದ ಪೂರ್ವಾ ಪೋಷಕರು ಅಜ್ಮೇರ್ ರಸ್ತೆಯಲ್ಲಿ ಗಾರ್ಡನ್‌ ರೆಸಾರ್ಟ್‌ನಲ್ಲಿ ಮದುವೆ ಮಾಡಿಕೊಟ್ಟಿದ್ದರು.

19ಕ್ಕೆ ಮದುವೆ 23ಕ್ಕೆ ಮಸಣ: ಗಂಡನ ಮನೆಯವರಿಂದಲೇ ಎಳೆ ಪ್ರಾಯದ ಗರ್ಭಿಣಿ ಸೊಸೆಯ ಭೀಕರ ಕೊಲೆ

Latest Videos
Follow Us:
Download App:
  • android
  • ios