Asianet Suvarna News Asianet Suvarna News

ಗಂಡನ ಜೊತೆ ಮಾತನಾಡಲು ಸುಸ್ತು ಎನ್ನೋ ಪತ್ನಿ, ಬಾಸ್ ಜೊತೆ ರಾತ್ರಿ ಎಲ್ಲಾ ಮಾತನಾಡುತ್ತಾಳಂತೆ!

ದಾಂಪತ್ಯ ಜೀವನದಲ್ಲಿ ಅನುಮಾನ ಶುರುವಾದ್ರೆ ಜೀವನ ಕಷ್ಟ. ಇಬ್ಬರ ಮಧ್ಯೆ ಪಾರದರ್ಶಕತೆ ಇರ್ಬೇಕು. ಇಲ್ಲೊಬ್ಬ ಪತಿಗೆ ಪತ್ನಿ ಕೆಲಸ ಅನುಮಾನ ತರಿಸಿದೆ. ಇದ್ರಿಂದ ಉಭಯ ಸಂಕಟ ಎದುರಿಸುತ್ತಿದ್ದಾನೆ. ಪತ್ನಿ ಮಾತನ್ನು ಸಂಪೂರ್ಣವಾಗಿ ನಂಬಲಾಗದೆ ಚಡಪಡಿಸುತ್ತಿದ್ದಾನೆ. 
 

wife caught red handed while speaking with boss at night extra marital affair revealed
Author
First Published Sep 2, 2022, 3:45 PM IST

ಕೆಲಸ ಎಷ್ಟೇ ಇರಲಿ, ಜವಾಬ್ದಾರಿ ಏನೇ ಇರಲಿ, ಮನೆ ಹಾಗೂ ಕಚೇರಿಯನ್ನು ಒಟ್ಟಿಗೆ ತರಬಾರದು. ಕಚೇರಿ ಕೆಲಸ ಮನೆಗೆ ಬಂದಾಗ ಸಮಸ್ಯೆ ಶುರುವಾಗುತ್ತದೆ. ಅದ್ರಲ್ಲೂ ಪತಿ ಜೊತೆ ಮಾತನಾಡ್ದೆ ತಡರಾತ್ರಿಯವರೆಗೆ ಬಾಸ್ ಜೊತೆ ಮಾತನಾಡ್ತಾ ಇದ್ರೆ ಅನುಮಾನ ಬರೋದು ಸಾಮಾನ್ಯ. ಇಲ್ಲೊಬ್ಬನಿಗೆ ತನ್ನ ಪತ್ನಿ ವರ್ತನೆ ವಿಚಿತ್ರವೆನ್ನಿಸುತ್ತಿದೆ. ಆಕೆ ಮೇಲೆ ಅನುಮಾನ ಶುರುವಾಗಿದೆ. ಆಕೆ ಕೇಳಿದ್ರೆ ಬಾಸ್ ಜೊತೆ ಯಾವುದೇ ಸಂಬಂಧ ಇಲ್ಲ ಎನ್ನುತ್ತಿದ್ದಾಳೆ. ಆದ್ರೆ ತಡವಾಗಿ ಮನೆಗೆ ಬರೋದಲ್ಲದೆ ಮಧ್ಯರಾತ್ರಿ ನಗ್ತಾ ಬಾಸ್ ಜೊತೆ ಮಾತನಾಡುವ ಪತ್ನಿ ವರ್ತನೆ ಇತನಿಗೆ ಹಿಂಸೆ ನೀಡ್ತಿದೆ. ಏನು ಮಾಡಲಿ ಎಂದು ಪ್ರಶ್ನೆ ಕೇಳಿದ್ದಾನೆ. ಅಷ್ಟಕ್ಕೂ ಅವನ ಕಥೆ ಏನು ಎಂಬುದನ್ನು ನಾವು ಹೇಳ್ತೇವೆ. ಆತನಿಗೆ ಮದುವೆ (Marriage) ಯಾಗಿ ತುಂಬಾ ವರ್ಷ ಕಳೆದಿಲ್ಲ. ಪತ್ನಿ (Wife ) ಕೂಡ ಕೆಲಸ ಮಾಡ್ತಾಳೆ. ಕೆಲಸದ ಕಾರಣಕ್ಕೆ ಕಚೇರಿ (Office) ಯಲ್ಲಿಯೇ ಬಹುತೇಕ ಸಮಯವನ್ನು ಪತ್ನಿ ಕಳೆಯುತ್ತಾಳೆ. ಮನೆಗೆ ರಾತ್ರಿ ಮೇಲೆ ಬರುವ ಪತ್ನಿ, ಕೆಲಸ ಜಾಸ್ತಿ ಇತ್ತು ಎನ್ನುತ್ತ ಮಲಗಲು ಹೋಗ್ತಾಳಂತೆ. ಪತಿ ಜೊತೆ ಮಾತನಾಡೋದು ಅಪರೂಪವಂತೆ. ಕೆಲಸದ ಒತ್ತಡದಲ್ಲಿ ಪತ್ನಿ ಹೀಗೆ ಮಾಡ್ತಿದ್ದಾಳೆ ಎಂದುಕೊಂಡು ಮಲಗಿದ್ದ ಪತಿಗೆ ಒಂದು ದಿನ ಪತ್ನಿ ರಹಸ್ಯ ಗೊತ್ತಾಗಿದೆ.

ತಡರಾತ್ರಿ ಬಾಸ್ (Boss) ಜೊತೆ ಲಲ್ಲೆ : ಪತಿ ಜೊತೆ ಮಾತನಾಡಲು ಸುಸ್ತಾಗಿದೆ ಎಂದಿದ್ದ ಪತ್ನಿ ಮಧ್ಯರಾತ್ರಿ ಬಾಸ್ ಜೊತೆ ಮಾತನಾಡುವಾಗ ಸಿಕ್ಕಿಬಿದ್ದಿದ್ದಾಳೆ. ಪ್ರತಿ ದಿನ ಒಂದಲ್ಲ ಒಂದು ಕಾರಣ ಹೇಳಿ ಬಾಸ್ ಜೊತೆ ಮಾತನಾಡ್ತಾಳಂತೆ. ಮಧ್ಯ ರಾತ್ರಿ ಕೆಲಸದ ಕಾರಣ ಹೇಳಿ ನಗ್ತಿರುವ ಪತ್ನಿ ನೋಡಿ ಸಂಶಯ ಶುರುವಾಗಿದೆ ಎನ್ನುತ್ತಾನೆ ಪತಿ. ಪತ್ನಿ ತಡರಾತ್ರಿ (Late Night) ಮನೆಗೆ ಬರಲು ಇದೇ ಕಾರಣವಾ ಎಂಬ ಪ್ರಶ್ನೆ ಶುರುವಾಗಿದೆ ಎನ್ನುತ್ತಾನೆ. ಪತ್ನಿಗೆ ಬಾಸ್ ಜೊತೆ ವಿವಾಹೇತರ ಸಂಬಂಧವಿದ್ಯಾ (Extra Marital Affair) ಎಂಬ ಅನುಮಾನ ಕಾಡ್ತಿದೆ ಎನ್ನುವ ಪತಿ ಈ ಬಗ್ಗೆ ಪತ್ನಿಗೆ ಪ್ರಶ್ನೆ ಮಾಡಿದ್ದಾನಂತೆ. ಆದ್ರೆ ನಮ್ಮಿಬ್ಬರ ಮಧ್ಯೆ ಯಾವುದೇ ಸಂಬಂಧವಿಲ್ಲವೆಂದು ಪತ್ನಿ ಹೇಳಿದ್ದಾಳಂತೆ.

ಅವಳು ನಿಮಗೆ ಕ್ಲೀನ್ ಬೋಲ್ಡ್ ಆಗಿದ್ದು ಹೌದಾ? ಗೊತ್ತು ಮಾಡಿಕೊಳ್ಳೋದು ಹೇಗೆ?

ತಜ್ಞರ ಸಲಹೆ : ಪ್ರತ್ಯಕ್ಷ ನೋಡಿದ್ರೂ ಪ್ರಮಾಣಿಸಿ ನೋಡ್ಬೇಕು ಎನ್ನುತ್ತಾರೆ ತಜ್ಞರು. ಪತ್ನಿ ಫೋನ್ ನಲ್ಲಿ ಮಾತನಾಡೋದನ್ನು ಮಾತ್ರ ಕೇಳಿದ್ದೀರಿ. ಪತ್ನಿ ಬಾಸ್ ಜೊತೆ ಹೇಗಿರ್ತಾಳೆ ಎಂಬುದು ಗೊತ್ತಿಲ್ಲ. ಹಾಗಿರುವಾಗ ಆಕೆ ಬಗ್ಗೆ ತಪ್ಪು ಕಲ್ಪನೆ ಮಾಡಿಕೊಳ್ಳುವುದು ತಪ್ಪು ಎನ್ನುತ್ತಾರೆ ತಜ್ಞರು. ಇಬ್ಬರು ನಿಜವಾಗಿಯೂ ಕೆಲಸದ ಬಗ್ಗೆ ಚರ್ಚೆ ಮಾಡ್ತಿರಬಹುದು. ಸಣ್ಣ ವಿಷ್ಯವನ್ನು ಹಂಚಿಕೊಳ್ಳಲೇಬೇಕಾದ ಪ್ರಾಜೆಕ್ಟ್ ಮೇಲೆ ಕೆಲಸ ಮಾಡ್ತಿರಬಹುದು. ಹಾಗಾಗಿ ಅವರಿಬ್ಬರ ಬಗ್ಗೆ ಸರಿಯಾಗಿ ತಿಳಿಯದೆ ನಿರ್ಣಯಕ್ಕೆ ಬರಬೇಡಿ ಎಂದಿದ್ದಾರೆ ತಜ್ಞರು.

ಅಯ್ಯಯ್ಯೋ..ಬರೋಬ್ಬರಿ ಆರು ವರ್ಷ ತಮ್ಮನ ಜೊತೆಯೇ ಡೇಟಿಂಗ್ ಮಾಡಿದ್ಲು !

ನಗುವುದು, ಮಾತನಾಡುವುದು ಕೆಲಸದ ಮಧ್ಯೆ ಸಾಮಾನ್ಯ. ಇದನ್ನು ತಪ್ಪಾಗಿ ತಿಳಿಯಬಾರದು. ಪತ್ನಿ ಮೇಲೆ ಅನುಮಾನ ಹೆಚ್ಚಾದ್ರೆ ಅವರ ಬಗ್ಗೆ ಮಾಹಿತಿ ಕಲೆ ಹಾಕಿ. ಸ್ವಲ್ಪ ಪತ್ತೆದಾರಿಕೆ ಮಾಡಿ. ಪತ್ನಿ ನಿಮಗೆ ಮೋಸ ಮಾಡ್ತಿದ್ದಾಳೆ ಎನ್ನಿಸಿದ್ರೂ ನೀವು ಆಕೆಯನ್ನು ಕೇಳದೆ ಯಾವುದೇ ನಿರ್ಣಯಕ್ಕೆ ಬರಬೇಡಿ. ಪತ್ನಿಯ ವರ್ತನೆ ನಿಮ್ಮ ಮೇಲೆ ಯಾವ ಪರಿಣಾಮ ಬೀರಿದೆ ಎಂಬುದನ್ನು ಆಕೆಗೆ ಹೇಳಿ. ಆಕೆ ಜೊತೆ ಕುಳಿತು ಮಾತನಾಡಿ. ಏನಾದ್ರೂ ಸಮಸ್ಯೆಯಿದ್ದರೆ ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡಿ. ಯಾವುದೇ ಸಾಕ್ಷ್ಯವಿಲ್ಲದೆ ಪತ್ನಿ ಮೇಲೆ ಆರೋಪ ಮಾಡುವುದಾಗ್ಲಿ, ಕೂಗಾಡುವುದಾಗ್ಲಿ ಮಾಡ್ಬೇಡಿ. ಒಂದ್ವೇಳೆ ಆಕೆ ಮೋಸ ಮಾಡ್ತಿದ್ದರೂ ಸಮಸ್ಯೆಯನ್ನು ಗಂಟಿಲ್ಲದೆ ಬಿಡಿಸಲು ಪ್ರಯತ್ನಿಸಿ ಎನ್ನುತ್ತಾರೆ ತಜ್ಞರು. 
 

Follow Us:
Download App:
  • android
  • ios