ಹುಡುಗರು ತಮಗಿಂತ ಹಿರಿಯ ಹುಡುಗಿಯರನ್ನೇ ಇಷ್ಟಪಡುವುದು ಯಾಕೆ?
ಪ್ರೀತಿ ಅತ್ಯಂತ ಸುಂದರವಾದ ಸಂಬಂಧ. ಸಾಮಾನ್ಯವಾಗಿ ಹುಡುಗರು ತಮಗಿಂತ ಕಿರಿಯ ಹುಡುಗಿಯರನ್ನು ಮದುವೆಯಾಗುತ್ತಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಹುಡುಗರು ತಮಗಿಂತ ಹೆಚ್ಚಿನ ವಯಸ್ಸಿನ ಯುವತಿಯರನ್ನೇ ಮದುವೆಯಾಗುತ್ತಿದ್ದಾರೆ. ಇದಕ್ಕೇನು ಕಾರಣ?
ಪ್ರೀತಿ, ಯಾವಾಗ, ಯಾರ ಜೊತೆ ಮೂಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಪ್ರೀತಿಗೆ ಜಾತಿ-ಧರ್ಮ, ವಯಸ್ಸು, ಹಿನ್ನಲೆ, ಲಿಂಗ ಯಾವುದು ಸಹ ಅಡ್ಡಿಯಾಗುವುದಿಲ್ಲ. ಹೀಗಾಗಿಯೇ ಕೆಲವೊಬ್ಬರು ತುಂಬಾ ಏಜ್ ಗ್ಯಾಪ್ ಇದ್ದರೂ ಮದುವೆಯಾಗುತ್ತಾರೆ. ಅದರಲ್ಲೂ ಸಿನಿಮಾ ಲೋಕದಲ್ಲಿ ಇದು ಹೆಚ್ಚಾಗಿ ನಡೆಯುತ್ತದೆ. ಅನೇಕ ಚಲನಚಿತ್ರ ಮತ್ತು ಟಿವಿ ತಾರೆಯರು ತಮಗಿಂತ ದೊಡ್ಡವರನ್ನು ಮದುವೆಯಾಗಿದ್ದು ಎಲ್ಲಿರಿಗೂ ತಿಳಿದಿದೆ. ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಗಾಯಕ-ನಟ ನಿಕ್ ಜೋನಾಸ್ ಹೊರತುಪಡಿಸಿ, ಮಲೈಕಾ ಅರೋರಾ-ಅರ್ಜುನ್ ಕಪೂರ್, ಐಶ್ವರ್ಯ ರೈ-ಅಭಿಷೇಕ್ ಬಚ್ಚನ್, ಬಿಪಾಶಾ ಬಸು-ಕರಣ್ ಸಿಂಗ್ ಗ್ರೋವರ್ ಮುಂತಾದ ಹೀಗೆ ಸಾಕಷ್ಟು ಬಾಲಿವುಡ್ ತಾರೆಯರು ವಯಸ್ಸಿನ ವ್ಯತ್ಯಾಸವನ್ನು ಹೊರತುಪಡಿಸಿ ಮದುವೆಯಾಗಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಪುರುಷರು (Men) ತಮಗಿಂತ ಹಿರಿಯ ಮಹಿಳೆ (Woman)ಯರನ್ನು ಮದುವೆಯಾಗುವ ಪ್ರಕರಣಗಳು ಹೆಚ್ಚಾಗುತ್ತಿವೆ. ಸಮೀಕ್ಷೆಯೊಂದರ ಪ್ರಕಾರ, 40 ವರ್ಷಕ್ಕಿಂತ ಮೇಲ್ಪಟ್ಟ 34% ಮಹಿಳೆಯರು ಕಿರಿಯ ಪುರುಷರೊಂದಿಗೆ ಪ್ರಣಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮಾತ್ರವಲ್ಲ ವಯಸ್ಸಾದ ಮಹಿಳೆಯರನ್ನು ಸಂಗಾತಿ (Partner)ಯಾಗಿ ಹುಡುಕುತ್ತಿರುವ ಪುರುಷರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ ಎಂದು ಇದು ಸೂಚಿಸುತ್ತದೆ. ಅನೇಕ ಕಿರಿಯ ಪುರುಷರು ಮತ್ತು ಹಿರಿಯ ಮಹಿಳೆಯರು ಸಾಮಾನ್ಯ ಆಸಕ್ತಿಗಳು ಮತ್ತು ಪರಸ್ಪರ ಪ್ರೀತಿಯನ್ನು ಹೊಂದಿರುತ್ತಾರೆ. ಅವರ ಆಕರ್ಷಣೆಯು ವಯಸ್ಸಿನೊಂದಿಗೆ ಯಾವುದೇ ಸಂಬಂಧವನ್ನು (Relationship) ಹೊಂದಿಲ್ಲ ಎಂದು ಗಮನಿಸುವುದು.
ಕಿರಿ ಮಗಳ ಕಿತಾಪತಿ: ವಧುವಿನ ಬದಲು ಆಕೆಯ ಸಹೋದರಿಯನ್ನು ಮದ್ವೆಯಾದ ವರ
ಹಲವಾರು ವರ್ಷಗಳ ಹಿಂದೆ, ಕಿರಿಯ ಪುರುಷರು ಮತ್ತು ಹಿರಿಯ ಮಹಿಳೆಯರ ನಡುವಿನ ಪ್ರೀತಿಗೆ ವಿರೋಧ ವ್ಯಕ್ತವಾಗುತ್ತಿತ್ತು. ಇತ್ತೀಚಿಗೆ, ಆದರೂ-ಪ್ರೀತಿ ಮತ್ತು ಸಂಬಂಧಗಳ ಬಗೆಗಿನ ಕಲ್ಪನೆಗಳು ಬದಲಾಗುತ್ತಿವೆ. ವಯಸ್ಸಿನ ಅಂತರದ ಮದುವೆಗಳು ಹೆಚ್ಚು ಸಾಮಾನ್ಯವಾಗಿದೆ ಮತ್ತು ಅಂಗೀಕರಿಸಲ್ಪಟ್ಟಿದೆ. ಅನೇಕ ಯುವಕರು ವಯಸ್ಸಾದ ಮಹಿಳೆಯರತ್ತ ಯಾಕೆ ಆಕರ್ಷಿತರಾಗುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ನೀವು ಕುತೂಹಲ ಹೊಂದಿದ್ದರೆ ಆ ಬಗ್ಗೆ ಇಲ್ಲಿದೆ ಮಾಹಿತಿ.
ಅನುಭವ ಹೆಚ್ಚಿರುತ್ತದೆ: ವಯಸ್ಸಿನೊಂದಿಗೆ ಅನುಭವ (Experience) ಹೆಚ್ಚಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ವಯಸ್ಸಾದ ಮಹಿಳೆಯರಿಗೆ ಪ್ರೀತಿ ಮತ್ತು ಪ್ರಣಯದ ವಿಷಯಗಳಲ್ಲಿ ಹೆಚ್ಚಿನ ಅನುಭವವಿರುತ್ತದೆ. ಅವರು ಸಂಬಂಧವನ್ನು ಬಹಳ ಬೇಗನೆ ಅರ್ಥ ಮಾಡಿಕೊಳ್ಳುತ್ತಾರೆ. ತಮ್ಮ ಸಂಗಾತಿಯನ್ನು ಹೇಗೆ ಸಂತೋಷವಾಗಿರಿಸಿಕೊಳ್ಳಬೇಕೆಂದು ಅವರಿಗೆ ತಿಳಿದಿರುತ್ತದೆ.
ಆರ್ಥಿಕವಾಗಿ ಸಮರ್ಥರಾಗಿದ್ದಾರೆ: ಹಿರಿಯ ಮಹಿಳೆಯರು ಆರ್ಥಿಕವಾಗಿ ಸಮರ್ಥರಾಗಿರುತ್ತಾರೆ. ಅವರಿಗೆ ಭವಿಷ್ಯದ ಬಗ್ಗೆ ಯಾವುದೇ ಭಯವಿರುವುದಿಲ್ಲ. ಆರ್ಥಿಕವಾಗಿ ಸದೃಢವಾಗಿರುವ ಕಾರಣ ಯಾವುದೇ ಸಮಸ್ಯೆ ಬಂದರೂ ಅವರು ಧೈರ್ಯದಿಂದ ಎದುರಿಸುತ್ತಾರೆ. ವೃತ್ತಿ ಜೀವನದಲ್ಲೂ ಈಗಾಗಲೇ ಮುನ್ನಡೆಯನ್ನು ಸಾಧಿಸಿರುತ್ತಾರೆ.
Relationship Tips: ಪ್ರೇಮಿಗಳಿಗೆ ಮೈಕ್ರೋ ಡೇಟ್ಸ್ ಸೂಕ್ತ: ಒತ್ತಡವಿಲ್ಲದೆ ಭೇಟಿಯಾಗ್ಬೋದು
ಬುದ್ಧಿವಂತಿಕೆ: ಪುರುಷರು ಮಹಿಳೆಯರಲ್ಲಿ ಹುಡುಕುವ ಪ್ರಾಥಮಿಕ ಗುಣಲಕ್ಷಣಗಳಲ್ಲಿ ಬುದ್ಧಿವಂತಿಕೆಯು ಒಂದು ಎಂದು ಸಂಶೋಧನೆ ತೋರಿಸುತ್ತದೆ. ವಯಸ್ಸು ಬುದ್ಧಿಶಕ್ತಿಯ ನೇರ ಸೂಚಕವಲ್ಲವಾದರೂ, ಮಹಿಳೆಯು ಜೀವನದ ಅನುಭವವನ್ನು ಹೊಂದಿದ್ದಾಳೆ ಎಂದು ಅದು ಸಂಕೇತಿಸುತ್ತದೆ, ಅದು ಪ್ರಪಂಚದ ಬಗ್ಗೆ ಹೆಚ್ಚಿನ ಜ್ಞಾನವನ್ನು ನೀಡುತ್ತದೆ. ಹಿರಿಯ ಮಹಿಳೆಗೆ ಪ್ರಪಂಚದ ಬಗ್ಗೆ ಸ್ವಲ್ಪ ತಿಳುವಳಿಕೆ ಇರುತ್ತದೆ. ತಪ್ಪು ಒಪ್ಪುಗಳನ್ನ ಅರಿತವರಿರುತ್ತಾರೆ. ಸಂಗಾತಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡು ಹೋಗುತ್ತಾರೆ. ಪ್ರಪಂಚದ ಬಗ್ಗೆ ತನ್ನದೇ ಆದ ದೃಷ್ಟಿಕೋನವನ್ನು ಹೊಂದಿದ್ದಾಳೆ.
ಲೈಂಗಿಕ ಸಂಬಂಧ ತೃಪ್ತಿಕರ:ಲೈಂಗಿಕ ಸಂಬಂಧದಲ್ಲಿ ಅನುಭವವೂ ಒಂದು ಅಂಶವಾಗಿರಬಹುದು. ವಯಸ್ಸಾದ ಮಹಿಳೆಯು ಹೆಚ್ಚಿನ ಪ್ರಮಾಣದ ಲೈಂಗಿಕ ಪ್ರಾವೀಣ್ಯತೆಯನ್ನು ಹೊಂದಿರಬಹುದು. ಇದು ಯುವಕನಿಗೆ ಅನ್ಯೋನ್ಯತೆಯನ್ನು ಹೆಚ್ಚು ತೃಪ್ತಿಪಡಿಸುತ್ತದೆ.
ಹೆಚ್ಚು ಪ್ರಾಮಾಣಿಕ : ಪ್ರಾಮಾಣಿಕತೆಗೆ ವಯಸ್ಸಿನೊಂದಿಗೆ ಯಾವುದೇ ಸಂಬಂಧವಿಲ್ಲ. ಆದರೆ ಮಹಿಳೆಯರು ಹೆಚ್ಚು ತಿಳುವಳಿಕೆ ಹೊಂದಿರುತ್ತಾರೆ. ಏಕೆಂದರೆ ಹರೆಯದಲ್ಲೂ ಅವರು ಸಮಾಜವನ್ನು ಅರಿತುಕೊಂಡಿರುತ್ತಾರೆ. ಅದಕ್ಕಾಗಿಯೇ ಹುಡುಗರು ತಮಗಿಂದ ಹೆಚ್ಚಿನ ವಯಸ್ಸಿರುವ ಹುಡುಗಿಯರೊಂದಿಗೆ ಹೆಚ್ಚು ಸಂಬಂಧ ಹೊಂದಲು ಬಯಸುತ್ತಾರೆ. ಅಲ್ಲದೆ, ಸಂಬಂಧದಲ್ಲಿ ಮೋಸ ಹೊಗುವ ಸಾಧ್ಯತೆ ಕಡಿಮೆ ಎಂದು ಅವರು ತಿಳಿದಿರುತ್ತಾರೆ.