Asianet Suvarna News Asianet Suvarna News

ಮಳೆಯಲ್ಲೇ ರೊಮ್ಯಾಂಟಿಕ್ ಮೂಡ್ ಹೆಚ್ಚುತ್ತಾ? ಒದ್ದೆಮುದ್ದೆ ಮಳೆಗಾಲದಲ್ಲಿ ಕೆರಳುವ ಕಾಮನಬಿಲ್ಲು!

ಮಾನ್ಸೂನ್ ಅಬ್ಬರ ಆರಂಭವಾಗಿದೆ. ಸಾಂಪ್ರದಾಯಿಕ ಫ್ಯಾಮಿಲಿಗಳಲ್ಲಿ ಆಷಾಡದ ನೆಪ ಹೇಳಿ ಗಂಡ ಹೆಂಡತಿಯರನ್ನು ದೂರ ಇಡುವ ಕಾಲ ಬಂದಿದೆ. ಅಂಥವರಿಗೆ ಈ ಮಳೆಗಾಲ ವಿರಹ ಹೆಚ್ಚಿಸಬಹುದು. ಜೊತೆಗಿರುವ ದಂಪತಿಗೆ ಬಯಕೆ ಹೆಚ್ಚಿಸುವ ಕಾಲವಿದು.

 

Why Sexual desire and pleasure more in monsoon lifestyle bni
Author
First Published Jun 6, 2024, 3:46 PM IST | Last Updated Jun 6, 2024, 3:46 PM IST

ನೀವು ಯಾವುದೇ ಭಾಷೆಯ ಭಾರತೀಯ ಸಿನಿಮಾ (Indian Movies) ತಗೊಳ್ಳಿ. ಅದರಲ್ಲೂ 90 ರ ದಶಕದ 'ರಾಜಾ ಹಿಂದೂಸ್ತಾನಿ', 'ಕುಚ್ ಕುಚ್ ಹೋತಾ ಹೈ' ಯಂಥಾ ಸಿನಿಮಾಗಳಿರಬಹುದು, ಆ ಹೊತ್ತಿಗೆ ಬಂದ ಶಂಕರ್‌ನಾಗ್, ಅಂಬರೀಶ್, ವಿಷ್ಣು ವರ್ಧನ್ ಮೊದಲಾದವರ ಚಿತ್ರಗಳಿರಬಹುದು, ಇದರಲ್ಲೆಲ್ಲ ಎದೆಯೊಳಗಿದ್ದ ಪ್ರೇಮ ಹೊರಬಂದು ತನ್ನ ನಿಜ ರೂಪ ತೋರಿಸೋದು ಮಳೆಗಾಲದಲ್ಲೇ. ಅದೆಲ್ಲ ಬಿಡಿ, ಒಂದು ಕಾಲದ ಹಾಟ್ ಸಾಂಗ್, 'ಟಿಪ್ ಟಿಪ್ ಬರ್‌ ಸಾ ಪಾನಿ' ಹಾಡಿಗೆ ಅಕ್ಷಯ್ ಕುಮಾರ್ ಜೊತೆಗೆ ರವೀನಾ ಟಂಡನ್ ಮೈ ಬಿಸಿಯೇರಿಸಿದ್ದು ಮಳೆಗಾಲದಲ್ಲೇ. ಇಂದಿಗೂ ಹೆಚ್ಚಿನ ಸಿನಿಮಾಗಳಲ್ಲಿ ಹುಡುಗ ಪ್ರೊಪೋಸ್ ಮಾಡುವಾಗ ಒಂದು ಜೋರು ಮಳೆ ಬಂದೇ ಬರುತ್ತದೆ. ಇದೆಲ್ಲ ಯಾಕೆ ಬೇಸಿಗೆ ಅಥವಾ ಚಳಿಗಾಲದ ಹಿನ್ನೆಲೆ ಯಾಕೆ ಇರಬಾರದು ಅಂತ ನಿಮಗೆ ಅನಿಸಬಹುದು. ಆದರೆ ಇದಕ್ಕೆ ಕಾರಣ ಮಳೆಗಾಲಕ್ಕಿರುವ ಪವರ್. 

ಚಿಕ್ಕವರಿದ್ದಾಗ ಮಳೆಯನ್ನು ಇಷ್ಟ ಪಡುತ್ತಿದ್ದವರೆಲ್ಲ ದೊಡ್ಡವರಾದ ಮೇಲೆ ಮಳೆಯಿಂದ ಕಿಲೋಮೀಟರ್ ಗಟ್ಟಲೆ ದೂರ ಓಡುತ್ತಾರೆ. ಮಳೆ ಬರೋ ಮುಂಚೆ ಮನೆ ಸೇರ್ಬೇಕು ಅನ್ನೋ ಗಡಿಬಿಡಿ, ಮನೆ ಬಂದ್ರೆ ನೆಗಡಿ ಆಗುತ್ತೆ, ಜ್ವರ ಬರುತ್ತೆ ಅನ್ನೋ ಭಯ ಇತ್ಯಾದಿಗಳೆಲ್ಲ ನಮ್ಮನ್ನು ಮಳೆಗಾಲದಿಂದ ವಿಮುಖವಾಗಿಸಿದೆ. ಆದರೆ ಅಧ್ಯಯನದ ಪ್ರಕಾರ ಮಳೆಗಾಲದಲ್ಲಿ ಸೆಕ್ಸ್ ಡ್ರೈವ್ (Sex Drive) ಹೆಚ್ಚು. ಮಳೆಯಲ್ಲಿ ನೆನೆದರೆ ಲೈಂಗಿಕ ಉತ್ಸಾಹ ದುಪ್ಪಟ್ಟು. ಮೈಯ ಬಿಸಿಯನ್ನೆಲ್ಲ ಕರಗಿಸಿ ಕಚಗುಳಿ ಇಡುತ್ತಾ ತಣ್ಣನೆ ಗಾಳಿ ಮೈ ನಡುಗಿಸಿದಾಗ ದೇಹಕ್ಕೆ ಕಾಮದ ಬಯಕೆ ಹೆಚ್ಚಾಗುತ್ತಂತೆ. ಮಳೆಯಲ್ಲಿ ನೆನೆಯದೇ ಇದ್ದರೂ ಹೊರಗೆ ಗುಡುಗು, ಮಿಂಚು ಸಹಿತ ಗಾಳಿ ಮಳೆ ಬರುತ್ತಿರುವಾಗ ಎಂಥಾ ಅರಸಿಕರಲ್ಲೂ ಲೈಂಗಿಕ ಆಸಕ್ತಿ ಕೆರಳುತ್ತದೆ ಅನ್ನೋದು ಪ್ರೂವ್ ಆಗಿದೆ. ಆದರೆ ಇದೆಲ್ಲ ಎಲ್ಲರೂ ಅನುಭವಿಸುವುದೇ ಆದ ಕಾರಣ ಇದಕ್ಕೆ ದಾಖಲೆಗಳನ್ನು ಒದಗಿಸೋ ಅಗತ್ಯ ಇಲ್ಲ ಅಂತಾರೆ ಜನ. 

ಬೇಸಿಗೆಯಲ್ಲಿ ಬಿಸಿಲ ಝಳ ಹೆಚ್ಚಿರುವಾಗ ದೇಹ ಹತ್ತಿರವಾಗೋದಕ್ಕಿಂತ ದೂರವಾಗಿರಲೇ ಬಯಸಬಹುದು, ಆಗ ಹೆಚ್ಚಿರುವ ಸೆಕೆಯಲ್ಲಿ ಸೆಕ್ಸ್ ಬೇಡ ಏನೂ ಬೇಡ ಅನಿಸಬಹುದು. ಜೊತೆಗೆ ಮೈಯಿಂದ ಬೆವರಿನ ರೂಪದಲ್ಲಿ ನೀರಿನ ಅಂಶ ಆಚೆ ಹೋಗಿರುತ್ತೆ. ದಣಿವಾಗೋದು ಹೆಚ್ಚು. ಹೀಗಾಗಿ ಬೇರೆ ಬಯಕೆಗಳಿಗೆಲ್ಲ ಅಂಥಾ ಜಾಗ ಇರೋದಿಲ್ಲ. ಒಂಥರ ಅಸಹನೆ ಹೆಚ್ಚಾಗಬಹುದು. ಆದರೆ ನಮ್ಮಲ್ಲಿ ಹೆಚ್ಚಿನವರು ವಸಂತ ಮಾಸದಲ್ಲಿ ಬಯಕೆಗಳು ಹೆಚ್ಚು ಅಂತಾರೆ. ಅದು ನಿಜ ಇದ್ದರೂ ಇರಬಹುದು. ಆದರೆ ಸೆಕ್ಸ್‌ನ ವಿಷಯದಲ್ಲಿ ಮಾತ್ರ ಮಳೆಗಾಲವನ್ನು ಚೈತ್ರ ವೈಶಾಖಗಳ ವಸಂತ ಋತು ಬೀಟ್ ಮಾಡೋದು ಕಷ್ಟ. 

6 ಸೆಕೆಂಡು ಕಿಸ್ ಫಾರ್ಮುಲಾ! ಪತಿಯರಿಗೆ ತಿಳಿದಿರಲಿ ಈ ಚುಂಬನದ ರಹಸ್ಯ

ಇನ್ನು ಚಳಿಗಾಲದಲ್ಲಿ ಹೆಚ್ಚಿನವರಿಗೆ ಹೊದ್ದುಕೊಂಡು ಮಲಗೋಣ ಅನಿಸೋದೇ ಹೆಚ್ಚು. ಚಳಿಗೆ ನಿದ್ದೆ ತೂಗೋದೂ ಹೆಚ್ಚು. ಬೆಳಗ್ಗೆ ಏಳೋದು ಕಷ್ಟ. ರಾತ್ರಿಯಾಗುತ್ತಲೇ ಹಾಸಿಗೆ ಸೇರೋಣ ಅಂತ ಮನಸ್ಸು ಹಂಬಲಿಸುತ್ತಿರುತ್ತದೆ. ಇಲ್ಲಿ ಶ್ರಮ ಹಾಕಿ ಏನೂ ಮಾಡೋದು ಬೇಡ ಅನಿಸುತ್ತಿರುತ್ತದೆ. ಅಂದುಕೊಂಡ ಯಾವ ಕೆಲಸಗಳೂ ಆಗೋದಿಲ್ಲ. ಹೊರಗೆ ಒಣ ಹವೆ ಇರುವ ಕಾರಣ ಮೈ ಚರ್ಮವೂ ಶುಷ್ಕವಾಗಿ ಚರ್ಮ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. 

ಮಳೆಗಾಲದಲ್ಲಿ (Monsoon) ಮಾತ್ರ ಹಾಗಾಗಲ್ಲ. ಸುರಿಯುವ ಮಳೆ ನಿದ್ದೆ ತರಿಸೋದಿಲ್ಲ, ಬದಲಿಗೆ ಬಯಕೆ ಹುಟ್ಟಿಸುತ್ತದೆ. ಈ ಹೊತ್ತಿಗೆ ಲೈಂಗಿಕ ಬಯಕೆಗಳು ಹೆಚ್ಚಿರುತ್ತವೆ ಅನ್ನೋ ಕಾರಣಕ್ಕೇ ಹಿಂದೆಲ್ಲ ಆಷಾಡ ಮಾಸದಲ್ಲಿ ಗಂಡ ಹೆಂಡತಿಯನ್ನು ದೂರ ಇಡುತ್ತಿದ್ದರಂತೆ. ಈ ಹೊತ್ತಿಗೆ ವಿಪರೀತ ಮೂಡ್ ಬಂದು ಸೆಕ್ಸ್ ಮಾಡಿದರೆ ಖಂಡಿತಾ ಗರ್ಭ ನಿಲ್ಲುತ್ತದೆ. ಮಗು ಹೊರಬರುವ ಹೊತ್ತಿಗೆ ಬಿರು ಬಿರು ಬೇಸಿಗೆ ಸಮಯ. ಆಗ ಹೆರಿಗೆಯಾದರೆ ತಾಯಿಯಾದವಳಿಗೂ ಕಷ್ಟ, ಹುಟ್ಟಿದ ಮಗುವಿಗೂ ತೊಂದರೆ. ಹೀಗಾಗಿ ಈ ತಿಂಗಳು ಅವಾಯ್ಡ್ ಮಾಡಿದ್ರೆ ಆಮೇಲೆ ಮಗು ಹುಟ್ಟಿದರೂ ಸಮಸ್ಯೆ ಇರಲ್ಲ ಅನ್ನೋದು ಹಿರಿಯರ ಲೆಕ್ಕಾಚಾರ. 

ಅದೇನಿದ್ದರೂ ಮಳೆಗಾಲದ ಲೈಂಗಿಕತೆ (Monsoon Sex) ಸುದೀರ್ಘ ಅವಧಿಯವರೆಗೆ ಆನಂದವನ್ನು ಉಳಿಸಬಲ್ಲದು, ಹೆಚ್ಚು ಖುಷಿ ಕೊಡಬಲ್ಲದು ಅನ್ನೋದಂತೂ ಸತ್ಯ ಅಂತಾರೆ ಈ ಬಗ್ಗೆ ಅಧ್ಯಯನ ಮಾಡಿದ ಜ್ಞಾನಿಗಳು ಮತ್ತು ಅನುಭವ ಪಡೆದ ಸಾಮಾನ್ಯ ಜ್ಞಾನಿಗಳು. 

ಚಾಣಕ್ಯ ನೀತಿ: ಹೆಂಡತಿ ತನ್ನ ಪತಿಗೆ ಎಂದಿಗೂ ಈ ವಿಷಯಗಳನ್ನು ಹೇಳಿಕೊಳ್ಳಬಾರದು!
 

Latest Videos
Follow Us:
Download App:
  • android
  • ios