Asianet Suvarna News Asianet Suvarna News

Extramarital Affairs : ಈ ಸಂಬಂಧ ಅತಿ ಬೇಗ ಕೊನೆಯಾಗುವುದೇಕೆ?

ಮನುಷ್ಯನ ಆಸೆಗೆ ಅಂತ್ಯವಿಲ್ಲ. ಆತನಿಗೆ ತೃಪ್ತಿ ಸಿಗಲು ಸಾಧ್ಯವೇ ಇಲ್ಲ. ಇದನ್ನು ಸಂಬಂಧದಲ್ಲಿಯೂ ಕಾಣಬಹುದು. ಸಂಗಾತಿ ನೀಡುವ ಪ್ರೀತಿ,ಗೌರವದಿಂದ ತೃಪ್ತಿ ಕಾಣದ ಅನೇಕರು ವಿವಾಹೇತರ ಸಂಬಂಧದ ಮೊರೆ ಹೋಗ್ತಾರೆ. ಆದ್ರೆ ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವಂತೆ ಅಲ್ಲಿ ಹೋದ್ಮೇಲೆ ಸತ್ಯದ ಅರಿವಾಗುತ್ತದೆ. 
 

why extra marital affairs do not last long
Author
Bangalore, First Published Jan 22, 2022, 6:39 PM IST

ಸಂಬಂಧ(Relationship)ಗಳನ್ನು ಬೆಳೆಸುವುದು ಸುಲಭ. ಅವುಗಳನ್ನು ನಿಭಾಯಿಸುವುದು ಕಷ್ಟ ಎಂಬುದರಲ್ಲಿ ಸಂದೇಹವಿಲ್ಲ. ಅನೇಕ ವರ್ಷಗಳ ಕಾಲ ಪ್ರೀತಿ (Love), ವಿಶ್ವಾಸದಿಂದ ಸೂಕ್ಷ್ಮ ಸಂಬಂಧ ಯಾವಾಗ ಮುರಿದು ಬೀಳುತ್ತದೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ. ಪತಿ-ಪತ್ನಿಯರ ಪ್ರೀತಿಯ ಸಂಬಂಧಕ್ಕೆ ಮೂರನೇ ವ್ಯಕ್ತಿ ಪ್ರವೇಶಿಸಿದಾಗ ಎಲ್ಲವೂ ಛಿದ್ರವಾಗುತ್ತದೆ. ಅನೇಕ ಬಾರಿ ದಾಂಪತ್ಯ ಸುಖಕರವಾಗಿಯೇ ಸಾಗುತ್ತಿರುತ್ತದೆ. ಆದ್ರೆ ಒಂದೇ ರೀತಿಯ ಜೀವನ, ಜನರು ಬೋರ್ ಆಗಲು ಕಾರಣವಾಗುತ್ತದೆ. ಜೀವನದಲ್ಲಿ ಹೊಸ ಉತ್ಸಾಹ ತುಂಬಲು, ಥ್ರಿಲ್ ಗಾಗಿ ಇಲ್ಲವೆ ಬೇರೆ ಅನೇಕ ಕಾರಣಕ್ಕೆ ಜನರು ವಿವಾಹೇತರ ಸಂಬಂಧ ಬಯಸ್ತಾರೆ.

ಈ ವಿವಾಹೇತರ ಸಂಬಂಧ (extramarital affairs )ಸುಖಮಯವಾಗಿರುವುದಿಲ್ಲ. ವಿವಾಹೇತರ ಸಂಬಂಧ ಆರಂಭದಲ್ಲಿ ಪ್ರೀತಿ,ಪ್ರಣಯದಿಂದ ಕೂಡಿರುವುದು ನಿಜ. ಆದ್ರೆ ದಿನ ಕಳೆದಂತೆ ಇದರಲ್ಲೂ ಸಾಕಷ್ಟು ಸಮಸ್ಯೆಗಳು ಶುರುವಾಗುತ್ತದೆ. ನಿಧಾನವಾಗಿ ಸಂಬಂಧ ಹಳಸಲು ಕಾರಣವಾಗುತ್ತದೆ. ನಂತ್ರ ವಿವಾಹೇತರ ಸಂಬಂಧ ಅಂತ್ಯಕಾಣುತ್ತದೆ. ಇದಕ್ಕೆ ಕಾರಣವೇನು ಎಂಬುದನ್ನು ನಾವಿಂದು ಹೇಳ್ತೇವೆ.

ಸಾಮಾನ್ಯವಾಗಿ ವಿವಾಹೇತರ ಸಂಬಂಧದಲ್ಲಿರುವ ಪುರುಷರು ತಮ್ಮನ್ನು ತಾವು ತಪ್ಪಿತಸ್ಥರೆಂದು ಪರಿಗಣಿಸುವುದಿಲ್ಲ. ಆದ್ರೆ  ಸ್ವಲ್ಪ ಸಮಯದ ನಂತರ ಮಹಿಳೆಯರು ಅಕ್ರಮ ಸಂಬಂಧವನ್ನು ಹೊಂದಿದ್ದಕ್ಕಾಗಿ ಪಶ್ಚಾತ್ತಾಪ ಪಡುತ್ತಾರೆ. ಇದರಿಂದಾಗಿ ಅವರು ಅಂತಹ ಸಂಬಂಧಗಳನ್ನು ದೀರ್ಘಕಾಲ ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಮಹಿಳೆಯರಿಗಿಂತ ಪುರುಷರು ವಿವಾಹೇತರ ಸಂಬಂಧಗಳನ್ನು ಹೆಚ್ಚು ಹೊಂದಿರುತ್ತಾರೆಂಬುದು ಅಧ್ಯಯನಗಳಿಂದ ಬಹಿರಂಗವಾಗಿದೆ. ವಿವಾಹೇತರ ಸಂಬಂಧ ಬೆಳೆಸುವ ಮಹಿಳೆಯರ ಸಂಖ್ಯೆ ಶೇಕಡಾ 12ರಷ್ಟಿದ್ದರೆ ಪುರುಷರ ಸಂಖ್ಯೆ ಶೇಕಡಾ 28ರಷ್ಟಿರುತ್ತದೆ. 

ಈಡೇರದ ಉದ್ದೇಶ : ಸದ್ಯ ಇರುವ ಸಂಬಂಧದಲ್ಲಿ ಕಾಡಿರುವ ಕೊರತೆಯನ್ನು ನೀಗಿಸಿಕೊಳ್ಳಲು ಜನರು ವಿವಾಹೇತರ ಸಂಬಂಧ ಬೆಳೆಸ್ತಾರೆ. ಭಾವನಾತ್ಮಕ ಹಾಗೂ ಶಾರೀರಿಕ ಎರಡೂ ಇಲ್ಲಿ ಕಾರಣವಾಗಬಹುದು. ಆದ್ರೆ ಅವರು ಯಾವ ಉದ್ದೇಶಕ್ಕೆ ಇನ್ನೊಂದು ಪ್ರೀತಿಯಲ್ಲಿ ಬಿದ್ದಿದ್ದರೋ ಅದರಲ್ಲೂ ಉದ್ದೇಶ ಈಡೇರುವುದಿಲ್ಲ. ಕೊರತೆ ಹಾಗೇ ಇರುತ್ತದೆ. ಆಗ ಆ ಸಂಬಂಧದಲ್ಲಿ ಮುಂದುವರೆಯುವ ಆಸಕ್ತಿ ಅವರಿಗಿರುವುದಿಲ್ಲ. ವಿವಾಹೇತರ ಸಂಬಂಧದಿಂದ ಹೊರ ಬರಲು ಮುಂದಾಗ್ತಾರೆ.

ಹೊಟೇಲ್ ಬಿಲ್ : ಮೊದಲೇ ಹೇಳಿದಂತೆ ಭಾವನಾತ್ಮಕ ಹಾಗೂ ಶಾರೀರಿಕ ಎರಡೂ ಕಾರಣಕ್ಕೆ ಇನ್ನೊಂದು ಸಂಬಂಧ ಬೆಳೆದಿರುತ್ತದೆ. ಭಾವನಾತ್ಮಕವಾಗಿ ಹತ್ತಿರವಾದವರು ಸಂಭೋಗ ಸುಖಕ್ಕೆ ಮುಂದಾಗ್ತಾರೆ. ಒಂದು ರಾತ್ರಿಗಾಗಿ ಹೊಟೇಲ್ ಗೆ ಸಾವಿರಾರು ರೂಪಾಯಿ ಖರ್ಚು ಮಾಡ್ತಾರೆ. ಒಂದು ರಾತ್ರಿಗಾಗಿ ಇಷ್ಟೊಂದು ಖರ್ಚು ಮಾಡ್ಬೇಕಾ ಎಂಬ ಪ್ರಶ್ನೆ ಮೂಡುತ್ತಿದ್ದಂತೆ ಅವರ ಮನಸ್ಸು ಬದಲಾಗುತ್ತದೆ.

New Dad: ಮೊದಲ ಬಾರಿ ತಂದೆಯಾಗ್ತಿದ್ದರೆ ನಿಮ್ಮ ತಯಾರಿ ಹೀಗಿರಲಿ

ಓಲ್ಡ್ ಈಸ್ ಗೋಲ್ಡ್ : ವಿವಾಹೇತರ ಸಂಬಂಧ ಬೆಳೆಸುವ ಆರಂಭದಲ್ಲಿ ಜನರು ಕಾಲ್ಪನಿಕ ಲೋಕದಲ್ಲಿರುತ್ತಾರೆ. ಎಲ್ಲವೂ ಅದ್ಭುತ ಎನ್ನಿಸುತ್ತದೆ. ಹೊಸ ವ್ಯಕ್ತಿಯ ಮಾತು,ನಡತೆ ಖುಷಿ ನೀಡುತ್ತದೆ. ಆದ್ರೆ ದಿನ ಕಳೆದಂತೆ ವಾಸ್ತವದ ಅರಿವಾಗಲು ಶುರುವಾಗುತ್ತದೆ. ಮನೆಯ ಸಂಗಾತಿ ಹಾಗೂ ಹೊಸ ಸಂಗಾತಿ ಮಧ್ಯೆ ಹೆಚ್ಚಿನ ವ್ಯತ್ಯಾಸ ಕಾಣಿಸುವುದಿಲ್ಲ. ಆಗ ತಮ್ಮವರು ತಮಗೆ ಉತ್ತಮ ಎಂಬ ನಿರ್ಧಾರಕ್ಕೆ ಬರ್ತಾರೆ.

Relationship Tips: ಸಂಗಾತಿಯನ್ನು ಖುಷಿಪಡಿಸಲು ಸಿಂಪಲ್ ಟಿಪ್ಸ್

ಸಮಯದ ಅಭಾವ: ವಿವಾಹೇತರ ಸಂಬಂಧ ಮುರಿದು ಬೀಳಲು ಇದು ಕೂಡ ಒಂದು ಕಾರಣ. ವಿವಾಹೇತರ ಸಂಬಂಧದಲ್ಲಿರುವ ವ್ಯಕ್ತಿಗೆ ಯಾವುದಕ್ಕೂ ಹೆಚ್ಚಿನ ಆದ್ಯತೆ ನೀಡಲಾಗುವುದಿಲ್ಲ. ಹೊಸ ವ್ಯಕ್ತಿಗೆ ಪ್ರಾಮುಖ್ಯತೆ ಕೊಡಲು ಸಾಧ್ಯವಾಗುವುದಿಲ್ಲ. ಮಕ್ಕಳು,ಸಂಗಾತಿ ಜೊತೆಗಿರುವಾಗ ಅವರು ಕರೆ ಮಾಡಿದಲ್ಲಿ ಅಥವಾ ಭೇಟಿಗೆ ಕರೆದಲ್ಲಿ ಹೋಗಲು ಸಾಧ್ಯವಾಗುವುದಿಲ್ಲ. ಎಲ್ಲವನ್ನೂ ನಿಭಾಯಿಸುವುದು ಕಷ್ಟವಾಗುತ್ತದೆ.  

ಸಂಗಾತಿಗೆ ತಿಳಿದರೆ ಎಂಬ ಭಯ : ಇದು ಬಹುತೇಕ ಮಹಿಳೆಯರನ್ನು ಕಾಡುತ್ತದೆ. ವಿವಾಹೇತರ ಸಂಬಂಧ ಸಂಗಾತಿಗೆ ತಿಳಿದಲ್ಲಿ ದಾಂಪತ್ಯ ಜೀವನ ಹಾಳಾಗಬಹುದು ಎಂಬ ಆತಂಕ ಸದಾ ಇರುತ್ತದೆ. ಇದೇ ಕಾರಣಕ್ಕೆ ಅವರು ಅದರಿಂದ ಆತುರಾತುರವಾಗಿ ಹೊರಗೆ ಬರಲು ಬಯಸುತ್ತಾರೆ.

Follow Us:
Download App:
  • android
  • ios