ಇಂದೋರ್ ಕೊಲೆ ಪ್ರಕರಣ ಸದ್ಯ ಎಲ್ಲರ ಗಮನ ಸೆಳೆದಿದೆ. ಚಪ್ರಿ ಹುಡುಗರಿಗಾಗಿ ಪತಿಯನ್ನೇ ಹತ್ಯೆ ಮಾಡಿಸ್ತಿರುವ ಪ್ರಕರಣ ಇದೇ ಮೊದಲಲ್ಲ. ಅಷ್ಟಕ್ಕೂ ಈ ಚಪ್ರಿಗಳು ಹುಡುಗಿಯರಿಗೆ ಯಾಕೆ ಇಷ್ಟ ಆಗ್ತಾರೆ? 

ವಿದ್ಯಾವಂತ (educated), ಬುದ್ಧಿವಂತ, ನೋಡೋಕೆ ಸುಂದರವಾಗಿರುವ, ಶ್ರೀಮಂತ ಪತಿಯನ್ನು ಬಿಟ್ಟು ಹುಡುಗಿಯರು ಚಪ್ರಿ ಹುಡುಗ್ರ ಹಿಂದೆ ಏಕೆ ಓಡ್ತಿದ್ದಾರೆ? ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿರುವ ವಿಷ್ಯ ಇದು. ಪತ್ನಿಯಾದವಳು ನಮ್ಮ ಹತ್ಯೆ ಮಾಡಿ, ಚಪ್ರಿ ಹಿಂದೆ ಹೋದ್ರೆ ನಾವು ಓದಿ, ಕೆಲ್ಸ ಗಿಟ್ಟಿಸಿಕೊಂಡ್ರೂ ಏನು ಪ್ರಯೋಜನ ಅಂತ ಅನೇಕ ಹುಡುಗ್ರು ರೀಲ್ಸ್ ಮಾಡಿ ತಮ್ಮ ನೋವು ತೋಡಿಕೊಳ್ತಿದ್ದಾರೆ. ಇಂದೋರ್ನ ಸೋನಮ್ನ ಗೆಳೆಯ ರಾಜ್ ಕುಶ್ವಾಹನ ಹಾಗೂ ಮೀರತ್ನ ಮುಸ್ಕಾನ್ನ ಪ್ರೇಮಿ ಸಾಹಿಲ್ ಶುಕ್ಲಾ ಫೋಟೋಗಳು ವೈರಲ್ ಆಗ್ತಿವೆ. ಚಪ್ರಿ ಹುಡುಗನಿಗಾಗಿ, ಮಹಿಳೆಯರು ಪತಿಯ ಜೀವ ತೆಗೆದು ಸುಂದರ ಸಂಸಾರವನ್ನು ಯಾಕೆ ಹಾಳು ಮಾಡ್ಕೊಳ್ತಿದ್ದಾರೆ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

ಚಪ್ರಿ (Chapri) ಹುಡುಗ್ರು ಅಂದ್ರೆ ಯಾರು? : ಕೆಲ ವರ್ಷಗಳಿಂದ ಈ ಚಪ್ರಿ ಪದ ಹೆಚ್ಚು ಪ್ರಸಿದ್ಧಿಗೆ ಬಂದಿದೆ. ಕೈನಲ್ಲಿ ಕಾಸಿಲ್ದೆ ಹೋದ್ರೂ ಇದೇ ಅಂತ ಬಿಂಬಿಸುವ, ಬಿಂದಾಸ್ ಆಗಿ ಜೀವನ ನಡೆಸುವ ವ್ಯಕ್ತಿಯನ್ನು ಚಪ್ರಿ ಅಂತ ಕರೆಯಲಾಗುತ್ತೆ. ಆಳವಾದ ವ್ಯಕ್ತಿತ್ವ ಇವರಿಗಿರೋದಿಲ್ಲ. ಚಪ್ರಿ ಪದವನ್ನು ಸಾಮಾನ್ಯವಾಗಿ ತಮಾಷೆಗೆ ಬಳಸ್ತಾರೆ. ಇದೊಂದು ನೆಗೆಟಿವ್ ಪದ ಅಂದ್ರೆ ತಪ್ಪಾಗೋದಿಲ್ಲ.

ಹುಡುಗಿಯರು ಚಪ್ರಿ ಹುಡುಗರನ್ನು ಇಷ್ಟಪಡಲು ಕಾರಣ : ತಜ್ಞರ ಪ್ರಕಾರ, ದೂರದಲ್ಲಿ ನಿಂತು ನೋಡೋ ನಮಗೆ ಆತ ಚಪ್ರಿಯಂತೆ ಕಾಣ್ತಾನೆ. ಆದ್ರೆ ಅವನನ್ನು ಪ್ರೀತಿಸುವ ಹುಡುಗಿಯರಿಗೆ ಆತನೇ ಹೀರೋ. ಆತ ಅವರಿಗೆ ಭಾವನಾತ್ಮಕ ತೃಪ್ತಿ ನೀಡಿರ್ತಾನೆ. ಅವಳನ್ನು ಗೌರವದಿಂದ ನಡೆಸಿಕೊಳ್ತಾನೆ. ಅವರ ಮುಂದೆ ತನ್ನ ಸ್ವಾಭಿಮಾನವನ್ನು ಉನ್ನತ ಮಟ್ಟದಲ್ಲಿ ಇಟ್ಟುಕೊಂಡಿರ್ತಾನೆ. ತನ್ನ ಸಂಪೂರ್ಣ ಸ್ವಭಾವವನ್ನು ಹುಡುಗಿ ಮುಂದೆ ಬಿಚ್ಚಿಡೋದಿಲ್ಲ. ಹುಡುಗಿ ಆತನ ಒಂದೇ ಮುಖ ನೋಡಿರ್ತಾಳೆ. ಮಾನವೀಯ ಮುಖವನ್ನು ಮಾತ್ರ ಹುಡುಗ ತೋರಿಸಿರ್ತಾನೆ.

ಹುಡುಗಿಯರ ಮನಸ್ಸಿನಲ್ಲಿ ಭ್ರಮೆ ಹುಟ್ಟಿಸಿರ್ತಾರೆ ಚಪ್ರಿಗಳು : ಚಪ್ರಿ ಹುಡುಗರು ತಮ್ಮ ಬಗ್ಗೆ ಒಂದು ಇಮೇಜ್ ಸೃಷ್ಟಿಸಿರ್ತಾರೆ. ಅದು ಹುಡುಗಿಯರನ್ನು ಆಕರ್ಷಿಸುತ್ತೆ. ಹುಡುಗಿಯರು ಭಾವನೆಗೆ ಹೆಚ್ಚು ಬೆಲೆ ಕೊಟ್ಟು, ಅವನ ನೋಟ, ಸ್ಟೇಟಸ್ ಅಲ್ಲಗಳಿತಾರೆ. ಚಪ್ರಿ ಹುಡುಗರು ತಮ್ಮನ್ನು ತುಂಬಾ ಧಾರ್ಮಿಕರೆಂದು ತೋರಿಸಿಕೊಳ್ತಾರೆ. ತಾಯಿ ಅಥವಾ ತಂದೆಯನ್ನು ತುಂಬಾ ಪ್ರೀತಿಸ್ತೇನೆ ಅಂತ ಹುಡುಗಿಯನ್ನು ನಂಬಿಸಿರ್ತಾರೆ. ಆದ್ರೆ ಇದ್ಯಾವುದೂ ಸತ್ಯವಾಗಿರೋದಿಲ್ಲ ಹುಡುಗಿಯರಿಗೆ ಭಾವನಾತ್ಮಕ ಭದ್ರತೆ ಅಗತ್ಯವಿರುತ್ತದೆ. ಅದನ್ನು ಹೇಗೆ ನಿಭಾಯಿಸ್ಬೇಕು ಅನ್ನೋದು ಚಪ್ರಿ ಹುಡುಗ್ರಿಗೆ ಚೆನ್ನಾಗಿ ತಿಳಿದಿರುತ್ತೆ.

ರಾಜ್ ಕುಶ್ವಾಹ ತಾಯಿ ನನ್ನ ಮಗ ಕರುಣಾಮಯಿ ಎಂದಿದ್ದಾರೆ. ಬೇರೆಯವರ ಕಾಲಿಗೆ ಚಪ್ಪಲಿ ಇಲ್ಲ ಅಂದ್ರೆ ರಾಜ್ ಕುಶ್ವಾಹ, ತನ್ನ ಚಪ್ಪಲಿ ಕೊಟ್ಟು ಹೋಗ್ತಿದ್ದನಂತೆ. ಹುಡುಗಿಯರನ್ನು ಸೆಳೆಯೋಕೆ ಹುಡುಗರು ಇಂಥಹ ವರ್ತನೆಯನ್ನು ಎಲ್ಲರ ಮುಂದೆ ತೋರಿಸ್ತಾರೆ. ಇದನ್ನೇ ಸತ್ಯ ಅಂದ್ಕೊಂಡು ಕೆಲ ಹುಡುಗಿಯರು ಚಪ್ರಿ ಹುಡುಗ್ರ ಬಲೆಗೆ ಬೀಳ್ತಾರೆ. ನಿನ್ನಂತ ಹುಡುಗಿ ನನಗೆ ಸಿಕ್ಕಿದ್ದು ನನ್ನ ಪುಣ್ಯ ಎನ್ನುತ್ಲೇ ಹುಡುಗಿಯರಿಗೆ ಮತ್ತಷ್ಟು ಹತ್ತಿರ ಆಗ್ತಾರೆ ಹುಡುಗ್ರು. ನನಗೆ ಆದ್ಯತೆ ನೀಡ್ತಾನೆ, ನನ್ನ ಭಾವನೆಗೆ ಬೆಲೆ ನೀಡ್ತಾನೆ, ಅಮ್ಮನನ್ನು ಇಷ್ಟಪಡ್ತಾನೆ, ಬಡವನಾದ್ರೂ ಬಡವರಿಗೆ ಹೆಲ್ಪ್ ಮಾಡ್ತಾನೆ ಇದೆಲ್ಲವನ್ನು ನೋಡಿ, ಆತನನ್ನು ದಿ ಬೆಸ್ಟ್ ಎಂದುಕೊಳ್ಳುವ ಹುಡುಗಿಯರು ಯಾವುದೆ ಕಾರಣಕ್ಕೂ ಆತನನ್ನು ಚಪ್ರಿ ಸ್ಥಾನದಲ್ಲಿ ನಿಲ್ಲಿಸೋದಿಲ್ಲ.

ಕೆಲ ಹುಡುಗಿಯರು ಮುಕ್ತವಾಗಿ ಜೀವನ ನಡೆಸಲು ಬಯಸ್ತಾರೆ. ಆದ್ರೆ ಅದು ಸಾಧ್ಯವಾಗಿರೋದಿಲ್ಲ. ಬಿಂದಾಸ್ ಆಗಿರುವ, ಬಹಿರಂಗವಾಗಿ ಮಾತನಾಡೋ ಹುಡುಗ್ರಿಗೆ ಈ ಹುಡುಗಿಯರು ಆಕರ್ಷಿತರಾಗ್ತಾರೆ. ರೂಲ್ಸ್ ಬ್ರೇಕ್ ಮಾಡಿ, ಹುಡುಗಿಯರಿಗೆ ಸ್ವತಂತ್ರ ನೀಡುವ ಚಪ್ರಿಗಳು ಹುಡುಗಿಯರಿಗೆ ಇಷ್ಟವಾಗ್ತಾರೆ. ವಿದ್ಯಾವಂತ ಪತಿ, ಹಣ, ಆಸ್ತಿ, ಪ್ರೀತಿ ಯಾವ್ದೂ ಅವರ ಕಣ್ಣಿಗೆ ಕಾಣೋದಿಲ್ಲ.