ವಿಕಾಸ್- ಟೀನಾ ದಂಪತಿಗೆ ಬಹಳ ದಿನಗಳಿಂದ ಖಾಸಗಿ ಕ್ಷಣಗಳನ್ನು ಸವಿಯಲು ಸಾಧ್ಯವಾಗುತ್ತಿಲ್ಲ, ಅದಕ್ಕೆ ಕಾರಣ ಅವರ ಬೆಡ್‌ರೂಮು ದೊಡ್ಡ ಗೋಡೌನ್‌ನಂತೆ ಆಗಿದ್ದುದು. ಮನೆಗೆ ಊರಿನಿಂದ ನೆಂಟರು ಬಂದುಬಿಟ್ಟಿದ್ದರು, ಕೋಣೆಗಳು ಸಾಕಷ್ಟು ಇಲ್ಲದೆ ಹೋದ್ದರಿಂದ ಅವರ ಪುಟ್ಟ ಮಕ್ಕಳು ಈ ಬೆಡ್‌ರೂಮಿನಲ್ಲಿ ಮಲಗಿಕೊಳ್ಳುತ್ತಿದ್ದವು. ಹಗಲಿಡೀ ಆಟವಾಡಿ ಬೆಡ್‌ನ್ನು ಮುದ್ದೆ ಮಾಡಿ, ಆಟದ ಸಾಮಾನು ತಂದು ಸುರಿದು ಹದಗೆಡಿಸುತ್ತಿದ್ದವು. ಬ್ಯಾಗ್‌ಗಳು ಚೆಲ್ಲಾಡಿದ್ದವು. ಬಂಧುಗಳು ವಾಪಸ್‌ ಊರಿಗೆ ಹೋದ ದಿನ ರಾತ್ರಿ, ಇಬ್ಬರೂ ಬೆಡ್‌ರೂಮನ್ನು ಕ್ಲೀನ್‌ ಮಾಡಿ, ತಮ್ಮಿಷ್ಟದ ಪರಿಮಳದ ಫ್ರೆಶ್‌ನರ್‌ ಸಿಂಪಡಿಸಿ, ತಮಗಿಷ್ಟದ ಮಧುರ ಸಂಗೀತ ಹಾಕಿಕೊಂಡು ರಾತ್ರಿಯನ್ನು ಆಸ್ವಾದಿಸಿದರು, ಅದು ರಾತ್ರಿ ಹಿತವಾದ ಮಿಲನವೂ ಅವರಿಂದ ಸಾಧ್ಯವಾಯಿತು.

ನಿಮ್ಮ ಬೆಡ್‌ರೂಮ್‌ ಜಗತ್ತಿನ ಇತರ ಯಾವುದೇ ಸಂಕಷ್ಟಗಳಿಗೆ ತುತ್ತಾಗುವುದನ್ನು ನೀವು ಅವಾಯ್ಡ್‌ ಮಾಡಲೇಬೇಕು. ಇನ್ನೂ ಮಗು ಮಾಡಿಕೊಂಡಿಲ್ಲ ಅಂದರೆ ಭೇಷ್‌. ಮಕ್ಕಳಿಗೆ ಮೂರು ವರ್ಷವಾದ ಕೂಡಲೇ ಬೇರೆ ಮಲಗುವುದನ್ನು ಅಭ್ಯಾಸ ಮಾಡಿಸಬೇಕು. ನಿಮ್ಮ ಖಾಸಗಿ ಕೋಣೆ ನಿಮ್ಮ ಅತ್ಯಂತ ಖಾಸಗಿ ಕ್ಷಣಗಳ ಸಂಗ್ರಹಾಲಯವೇ ಆಗಿರಲಿ. ಉತ್ತಮ ರಾತ್ರಿ, ಸೊಗಸಾದ ಮಿಲನದ ಕ್ಷಣಗಳು, ಬೆಡ್‌ರೂಮಿಗೆ ಬಂದ ಕೂಡಲೇ ಸೆಕ್ಸ್‌ಗೆ ಉತ್ಕಟವಾಗಿ ಹಾತೊರೆಯುವಂತೆ ಆಗುವ ಹಿತಾನುಭವ ಇವೆಲ್ಲ ದೊರೆಯಬೇಕಾದರೆ ನೀವು ಬೆಡ್‌ರೂಮಲ್ಲಿ ಎಂಥ ಫೋಟೋ ಇಡುತ್ತೀರಿ, ಹೇಗೆ ಎಂಬುದು ಕೂಡ ಮುಖ್ಯ.

 

ಬಾಲ್ಕನಿ ಚೆಂದವಿದ್ದರೆ ಮನೆಗೇ ವಿಶೇಷ ಲುಕ್
 

ಉದಾಹರಣೆಗೆ ನೀವು ಬೆಡ್‌ರೂಮಿನಲ್ಲಿ ನಿಮ್ಮ ಮಲಗುವ ಮಂಚಕ್ಕೆ ಅಭಿಮುಖವಾಗಿ ಮಹಾಶಿವ ರುದ್ರನ ಮೂರನೇ ಕಣ್ಣಿನ ಉರಿಮುಖದ ಅಥವಾ ವೀರಭದ್ರನ ಕೋಪಾಟೋಪದ ಫೋಟೋ ಹಾಕಿದ್ದೀರಿ ಎಂದಿಟ್ಟುಕೊಳ್ಳಿ. ಖಂಡಿತವಾಗಿಯೂ ಆ ರೂಮಿನಲ್ಲಿ ನಿಮಗೆ ರೊಮ್ಯಾಂಟಿಕ್‌ ಮೂಡ್‌ ಬರಲಾರದು. ಇಂಥ ಫೋಟೋಗಳು ದೇವರ ಕೋಣೆಗಿರಲಿ. ದೇವರ ಫೋಟೊವೇ ಬೇಕು ಎಂದಿದ್ದರೆ ಒಂದು ಕೃಷ್ಣ- ರಾಧೆಯರ ಉತ್ಕಟವಾದ ಪ್ರೇಮದ ಕ್ಷಣಗಳ ಫೋಟೋವನ್ನು ಹಾಕಿಕೊಳ್ಳಿ. ಕೃಷ್ಣ ಮತ್ತು ರಾಧೆಯರ ದೇಹದ ಸೊಗಸು ಅದರಲ್ಲಿ ಚೆನ್ನಾಗಿ ಕಾಣುವಂತೆ ಇರಲಿ.
 

ಬೆಡ್‌ರೂಮಿಗೆ ಸೂಕ್ತವಾಧ ಚಿತ್ರಗಳೆಂದರೆ ಗ್ರೀಕ್‌ ದೇವ ದೇವತೆಗಳದು. ಈ ದೇವತೆಗಳು ಮೈಕಟ್ಟು ಅತ್ಯಂತ ಸೊಗಸಾದದ್ದು. ಇಲ್ಲಿನ ದೇವರು ಮತ್ತು ದೇವಿಯರು ಸುಪುಷ್ಟವಾಧ ದೇಹವನ್ನು ಹೊಂದಿ, ಎಂಥವರಲ್ಲೂ ಕಾಮನೆಯನ್ನು ಸ್ಫುರಿಸುವಂತೆ ಇರುತ್ತಾರೆ. ಅಥವಾ ಈ ದೇವ ದೇವತೆಗಳು ಮೂರ್ತಿ ಶಿಲ್ಪಗಳು ಕೂಡ ಓಕೆ. ಮಲಗುವ ಮಂಚಕ್ಕೆ ವಾರೆ ಕೋನದಲ್ಲಿ, ಮೇಜಿನ ಮೇಲೆ, ಪ್ರಣಯದಾಟದಲ್ಲಿ ತೊಡಗಿರುವ ಎರಡು ಗ್ರೀಕ್‌ ಮೂರ್ತಿಗಳು ಇಡಬಹುದು. ಇವು ನಿಮ್ಮ ಪ್ರೇಮದ ಗಳಿಗೆಗಳಿಗೆ ಇನ್ನಷ್ಟು ರಸವನ್ನು ತುಂಬುತ್ತವೆ.

 

ಗಂಡ ಊರಲ್ಲಿಲ್ಲ ಅಂದ್ರೆ ಹೆಂಡ್ತಿಗೆ ಹಾಲಿ ಡೇ, ಜಾಲಿ ಡೇ

 

ಮಲಗುವ ಕೋಣೆಯ ಗೋಡೆಯಲ್ಲಿ ಹಾಕಿಕೊಳ್ಳುವ ಫೋಟೋಗಳೂ ಪ್ರಕೃತಿಗೆ ಸಂಬಂಧಿಸಿದ್ದು ಆಗಿದ್ದರೆ ಚೆನ್ನಾಗಿಯೇ ಇರುತ್ತದೆ. ಆದರೆ ಬಿಸಿಲಿನಿಂಧ ಉರಿಯುತ್ತಿರುವ ಹೊಲ ಗದ್ದೆಗಳು, ಕಾಡಿಗೆ ಬೆಂಕಿ ಬಿದ್ದಿರುವ ಫೋಟೋ, ಹುಲಿ- ಸಿಂಹ ಮುಂತಾದ ಕ್ರೂರ ಪ್ರಾಣಿಗಳ ಫೋಟೋಗಳು ಬೇಡ. ಹಾವಿನ ಚಿತ್ರ ಖಂಡಿತ ಬೇಡ. ಇವೆಲ್ಲವೂ ನಿಮ್ಮ ಮೂಡನ್ನು ಕೆಡಿಸುತ್ತವೆ. ನವಿಲಿನ ಫೋಟೋ ಹಾಕಬಹುದು. ಹಸಿರಿನಿಂದ ನಳನಳಿಸುವ ಕಾಡಿನ ಚಿತ್ರ ಹಾಕಬಹುದು. ಒಣಗಿದ ಎಲೆಗಳಿಗಿಂತ ಚಿಗುರು ಎಲೆಗಳು ಒಳ್ಳೆಯದು. ಒಣಗಿದ ಗಿಡಮರಗಳಿಗಿಂತ ಮಳೆಯಲ್ಲಿ ನೆನೆದ ಮರಗಿಡಗಳು ಉತ್ತಮ. ಮಳೆಯ ದೃಶ್ಯ ಇದ್ದರೆ ಮತ್ತಷ್ಟು ಚೆನ್ನಾಗಿರುತ್ತದೆ.

 

ಪತಿಯಲ್ಲಿ ಲೈಂಗಿಕಾಸಕ್ತಿ ಕೆರಳಿಸಲು ಇಲ್ಲಿವೆ ಉಪಾಯ...

 

ಬೆಡ್‌ರೂಮಿನಲ್ಲಿ ನೀವು ಯಾವ ಮನುಷ್ಯರ ಚಿತ್ರ ಹಾಕಬಹುದು? ಉತ್ತಮವಾದ ಸಲಹೆಯೆಂದರೆ, ಯಾರ ಚಿತ್ರವೂ ಬೇಡ. ನಿಮ್ಮ ಕುಟುಂಬದಲ್ಲಿ ಯಾರದೋ ಚಿತ್ರ ಹಾಕುತ್ತೀರಿ ಎಂದಿಟ್ಟುಕೊಳ್ಳಿ, ಅವರ ಜೊತೆಗಿನ ಸಂಬಂಧದ ಸ್ವರೂಪವು ನಿಮ್ಮ ದಂಪತಿಯ ಪ್ರೇಮದ ಗಳಿಗೆಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಯಾವ ಹೆಣ್ಣೂ ತನ್ನ ಗಂಡನೊಡನೆ ತನ್ನ ಖಾಸಗಿ ಕ್ಷಣಗಳನ್ನು, ತನ್ನ ಅತ್ತೆ, ಫೋಟೋದಲ್ಲಾದರೂ ನೋಡಲಿ ಎಂದು ಅಪೇಕ್ಷೆ ಪಡಲಾರಳು ಅಲ್ವೇ?