ಹಿಂದೊಮ್ಮೆ ಭಾರೀ ಜನಪ್ರಿಯತೆ ಗಳಿಸಿದ್ದ ಹುಡುಗ ಸ್ಯಾಮಿ ಗ್ರೈನರ್. ಮರಳನ್ನು ಹಿಡಿದು ಮುಷ್ಟಿ ಕಟ್ಟಿ ಪೋಸ್ ಕೊಟ್ಟಿದ್ದ ಸ್ಯಾಮಿ ಅಂತರ್ಜಾಲದಲ್ಲಿ ಸಿಕ್ಕಾಪಟ್ಟೆ ಫೇಮಸ್. ಇದೇ ಖ್ಯಾತಿಯನ್ನು ಬಳಕೆ ಮಾಡಿ ತನ್ನ ತಂದೆಯನ್ನು ಉಳಿಸಿಕೊಂಡಿದ್ದ.
ಅಂತರ್ಜಾಲದಲ್ಲಿ ಕೆಲವು ಮೀಮ್ (Meme)ಗಳು ಹವಾ ಸೃಷ್ಟಿಸಿಬಿಡುತ್ತವೆ. ಸಿಕ್ಕಾಪಟ್ಟೆ ವೈರಲ್ (Viral) ಆಗಿ, ಸ್ಥಳೀಯ ಭಾಷೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ರೂಪಾಂತರವಾಗಿ ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ತಲುಪುತ್ತವೆ. ಈ ಹುಡುಗ ಕೂಡ ಲಕ್ಷಾಂತರ ಮೀಮ್ ಗಳಿಗೆ ಕಾರಣನಾಗಿದ್ದ. 2010ರಲ್ಲಿ ಈ ಹುಡುಗನ ಫೋಟೊ (Photo) ತುಂಬ ವೈರಲ್ ಆಗಿತ್ತು. ಫೋಟೊ ನೋಡಿದರೆ, ನಿಮಗೇ ತಿಳಿದುಹೋಗುತ್ತದೆ. ಅಷ್ಟಕ್ಕೂ ಈ ಹುಡುಗ ಯಾರು? ಈಗ ಏನು ಮಾಡುತ್ತಿದ್ದಾನೆ ಗೊತ್ತೇ?
2015ರಲ್ಲಿ ಈ ಹುಡುಗ ಸರಿಸುಮಾರು 75 ಲಕ್ಷ (Lakh) ರೂಪಾಯಿಗಳನ್ನು ಕೇವಲ ದಾನಿಗಳ ಸಹಾಯದಿಂದ ಪಡೆದಿದ್ದ. ಮೀಮ್ ನಿಂದ ಈತ ಗಳಿಸಿದ್ದ ಖ್ಯಾತಿಯ ಮೂಲಕ ಈತನ ತಂದೆಯ ಪ್ರಾಣ ಉಳಿದಿತ್ತು.
ಸಾಮಾನ್ಯವಾಗಿ ಮೀಮ್ ಗಳಲ್ಲಿ ಕ್ಯಾರೆಕ್ಟರ್ ಅಥವಾ ಚಿಕ್ಕದೊಂದು ಪಂಚಿಂಗ್ ಲೈನ್ ಅಷ್ಟೇ ಇರುತ್ತದೆ. ಇದನ್ನು ಕೇವಲ ವಿನೋದಕ್ಕಾಗಿ ಮಾಡಲಾಗುತ್ತದೆ. ವಿಶ್ವದಲ್ಲಿ ಅನೇಕ ಮುಖಗಳಿವೆ. ಅವುಗಳನ್ನು ಇಂತಹ ಮೀಮ್ ಗಳಿಗಾಗಿ ಪ್ರಯೋಗ ಮಾಡಲಾಗುತ್ತದೆ. ಅದಿರಲಿ, ಈ ಹುಡುಗ ಸಹ ಹೀಗೆಯೇ ಮೀಮ್ ಗಳಿಗೆ ಬಳಕೆಯಾಗಿದ್ದ.
ಗುಲಾಬಿ ಕೆನ್ನೆಯ ಹುಡುಗ ಸ್ಯಾಮಿ ಗ್ರೀನರ್
ಮರಳು ಹಿಡಿದು, ಮುಷ್ಟಿ ಕಟ್ಟಿ, ಹಲ್ಲು ಬಿಗಿದುಕೊಂಡು ಸ್ಟೈಲ್ ತೋರಿದ್ದ ಈತನ ಹೆಸರು ಸ್ಯಾಮಿ ಗ್ರೀನರ್ (Sammy Griner). ಅಮೆರಿಕದ ಫ್ಲೋರಿಡಾ(Florida)ದಲ್ಲಿ ನೆಲೆಸುತ್ತಾನೆ. ಯಶಸ್ಸಿನ (Success) ಸಂಭ್ರಮ ಬಿಂಬಿಸುವ ಮೀಮ್ ನಲ್ಲಿ ಸಾಮಾನ್ಯವಾಗಿ ಈ ಫೋಟೊವೇ ಇರುತ್ತದೆ. ಸ್ಯಾಮಿಗೆ ಈಗ 16 ವರ್ಷ. ಹಿಂದಿನ ಚಬ್ಬಿ ಚಬ್ಬಿ ಚೀಕ್ಸ್ ಈಗಿಲ್ಲ. ಸ್ಯಾಮಿ ಪಾಲಕರು ಈತನ ಫೋಟೊವನ್ನು ಹರಾಜು ಮಾಡಿದ್ದರು. ಈ ಮೂಲಕ ಅವರು ಸುಮಾರು 30 ಲಕ್ಷ ರೂಪಾಯಿ ಗಳಿಸಿದ್ದರು.
ಸೋಷಿಯಲ್ ಮೀಡಿಯಾ ಜನಪ್ರಿಯತೆ
ಸ್ಯಾಮಿಯ ಈ ಫೋಟೊವನ್ನು ಆತನ ತಾಯಿ ಲೈನಿ ಗ್ರಿನರ್ (Lainy Griner) 2007ರಲ್ಲಿ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದರು. ಆಗ ಸೋಷಿಯಲ್ ಮೀಡಿಯಾಗಳ ಭರಾಟೆ ಈಗಿನಷ್ಟಿರಲಿಲ್ಲ. ಆದರೂ ಕೆಲವೇ ಸಮಯದಲ್ಲಿ ಆ ಫೋಟೊಕ್ಕೆ ಭಾರೀ ಜನಪ್ರಿಯತೆ ದೊರೆತಿತ್ತು. ಬಳಿಕ, ವಿವಿಧೆಡೆ ಬಳಕೆಯಾಗಲು ಶುರುವಾಗಿತ್ತು. ಅಮೆರಿಕದ ವೈಟ್ ಹೌಸ್ (White House) ಕೂಡ ಈತನ ಫೋಟೊವನ್ನು ಪೋಸ್ಟರ್ ಒಂದಕ್ಕೆ ಬಳಕೆ ಮಾಡಿತ್ತು ಎಂದರೆ ಇದರ ಜನಪ್ರಿಯತೆ (Popularity) ಊಹಿಸಬಹುದು.
ಸ್ಯಾಮಿಯ ಅಮ್ಮ 2007ರಲ್ಲಿ ಸಮುದ್ರ ತೀರ (Beach)ದಲ್ಲಿ ಮುಷ್ಟಿಯಲ್ಲಿ ಮರಳನ್ನು ಹಿಡಿದ ಸ್ಯಾಮಿಯ ಫೋಟೊ ಕ್ಲಿಕ್ ಮಾಡಿದ ಸಮಯದಲ್ಲಿ ಆಕೆಗೆ ಈ ಫೋಟೊ ಇಷ್ಟೆಲ್ಲ ಜನಪ್ರಿಯವಾಗಬಹುದೆನ್ನುವ ಅಂದಾಜೂ ಇರಲಿಲ್ಲ. ಆಗ ಸ್ಯಾಮಿಗೆ ಕೇವಲ 11 ತಿಂಗಳು. ಆ ಫೋಟೊದಿಂದ ಪುಟ್ಟ ಮಗುವೊಂದು ಅಂತರ್ಜಾಲದಲ್ಲಿ ಅಪಾರ ಖ್ಯಾತಿ ಗಳಿಸಿಬಿಟ್ಟಿತ್ತು.
ಸಕ್ಸಸ್ ಕಿಡ್ ಗೆ ಹರಿದುಬಂತು ಹಣ
2015ರ ಸಮಯದಲ್ಲಿ ಸ್ಯಾಮಿಯ ಕುಟುಂಬಕ್ಕೆ ತೀವ್ರ ಹಣದ (Money) ಅಗತ್ಯ ಒದಗಿಬಂತು. ಆತನ ತಂದೆ ಜಸ್ಟಿನ್ (Justin) ಗ್ರಿನರ್ ಗೆ ಕಿಡ್ನಿ ಟ್ರಾನ್ಸ್ ಪ್ಲಾಂಟ್ (Transplant) ಮಾಡಲಾಗಿತ್ತು. ಆಗ ಸ್ಯಾಮಿಯ ಕುಟುಂಬ ಸೋಷಿಯಲ್ ಮೀಡಿಯಾದಲ್ಲಿ ಒಂದು ಪೇಜ್ (Page) ಸೃಷ್ಟಿ ಮಾಡಿ ಪರಿಸ್ಥಿತಿಯನ್ನು ವಿವರಿಸಿತ್ತು. ಈತ “ಸಕ್ಸಸ್ ಕಿಡ್’ ತಂದೆಯೆಂದು ತಿಳಿದ ಕೂಡಲೇ ಲಕ್ಷಾಂತರ ಜನ ಇದಕ್ಕೆ ಸ್ಪಂದಿಸಿದ್ದರು. ಹಾಗೂ ಹಣ ಕಳುಹಿಸಿದ್ದರು. ಹೀಗೆ ಒಟ್ಟಾದ ಹಣ ಬರೋಬ್ಬರಿ 74 ಲಕ್ಷ. ಅಂದಿನಿಂದ ಸ್ಯಾಮಿ ತಂದೆ ಆರೋಗ್ಯವಂತರಾಗಿದ್ದಾರೆ. ಪ್ರಸ್ತುತ, ಸ್ಯಾಮಿ ಅಧ್ಯಯನದ ಕಡೆಗೆ ಗಮನ ನೀಡುತ್ತಿದ್ದಾರೆ.
