ಪತಿಯೊಂದಿಗೆ ರೊಮ್ಯಾನ್ಸ್ ಮಾಡೋದು ಹೇಗೆ? ಪುರುಷ ಉಪನ್ಯಾಸಕನಿಂದ ವಿವಿಯಲ್ಲಿ ಹೆಣ್ಣು ಮಕ್ಕಳಿಗೆ ಪಾಠ!
ಪ್ರೀತಿ ಅಂದ್ರೇನು? ದಾಂಪತ್ಯದಲ್ಲಿ ಏನೆಲ್ಲ ಮುಖ್ಯ? ಈ ಪ್ರಶ್ನೆಗಳಿಗೆ ಶಾಲೆಯಲ್ಲಿ ಉತ್ತರ ಸಿಗೋದಿಲ್ಲ. ಯಾವುದೇ ಸ್ಕೂಲ್ ಸಂಬಂಧದ ಬಗ್ಗೆ ತರಬೇತಿ ನೀಡೋದಿಲ್ಲ ಅಂದ್ಕೊಂಡ್ರೆ ನಿಮ್ಮ ನಂಬಿಕೆ ಸುಳ್ಳು. ಇಲ್ಲೊಂದು ವಿಶ್ವವಿದ್ಯಾನಿಲಯ ಉಚಿತವಾಗಿ ಈ ಬಗ್ಗೆ ತರಬೇತಿ ನೀಡ್ತಿದೆ.
ಜಗತ್ತು ಪ್ರತಿ ದಿನ ಬದಲಾಗ್ತಿದೆ. ಹತ್ತು – ಹದಿನೈದು ವರ್ಷಗಳಲ್ಲಿ ನಂಬಲು ಸಾಧ್ಯವಾಗದಷ್ಟು ಬದಲಾವಣೆಯನ್ನು ನಾವು ಸಮಾಜದಲ್ಲಿ ನೋಡ್ತಿದ್ದೇವೆ. ತಂತ್ರಜ್ಞಾನದಿಂದ ಹಿಡಿದು ವೈದ್ಯಕೀಯ ಕ್ಷೇತ್ರ, ಶಿಕ್ಷಣ ಕ್ಷೇತ್ರ ಸೇರಿದಂತೆ ಸಮಾಜ, ಸಂಬಂಧದಲ್ಲೂ ಹೊಸ ಗಾಳಿ ಬೀಸಿದೆ. ವಿಭಿನ್ನ ಕೋರ್ಸ್ ಗಳನ್ನು ನೀವು ಶಿಕ್ಷಣ ಕ್ಷೇತ್ರದಲ್ಲಿ ನೋಡಬಹುದು. ವೃತ್ತಿಗೆ ಯೋಗ್ಯವಾದ ಕೋರ್ಸ್ ಗಳು ಈಗ ಸಾಕಷ್ಟು ಬಂದಿವೆ. ಆದ್ರೆ ಸಂಬಂಧವನ್ನು ಹೇಗೆ ಸಂಭಾಳಿಸಬೇಕು, ದಾಂಪತ್ಯದಲ್ಲಿ ಏನೆಲ್ಲ ಎಚ್ಚರಿಕೆ ತೆಗೆದುಕೊಳ್ಳಬೇಕು, ಹುಡುಗ – ಹುಡುಗಿಯರನ್ನು ಹೇಗೆ ಪ್ರೀತಿಯಲ್ಲಿ ಬೀಳಿಸಿಕೊಳ್ಳಬೇಕು ಸೇರಿದಂತೆ ಮನಸ್ಸಿಗೆ ಸಂಬಂಧಪಟ್ಟ ಶಿಕ್ಷಣವನ್ನು ಎಲ್ಲಿಯೂ ನೀಡಲಾಗ್ತಿಲ್ಲ. ಪುಸ್ತಕ, ವಿಡಿಯೋಗಳನ್ನು ನೋಡಿ ಜನರು ಅದ್ರ ಬಗ್ಗೆ ಒಂದಿಷ್ಟು ಮಾಹಿತಿ ಪಡೆಯುತ್ತಾರೆಯೇ ವಿನಃ ವಿಶ್ವವಿದ್ಯಾನಿಲಯದಲ್ಲಿ ವೃತ್ತಿಪರ ಶಿಕ್ಷಕರು ಇಂಥ ತರಬೇತಿ ನೀಡೋದಿಲ್ಲ. ಆದ್ರೆ ಚೀನಾ ಈಗ ಇಂಥ ಕೋರ್ಸ್ ಕೂಡ ಜಾರಿಗೆ ತಂದಿದೆ.
ಆರ್ಥಿಕ (Financial) ಸ್ಥಿತಿ, ಸ್ಥಾನ – ಗೌರವಕ್ಕೆ ಆದ್ಯತೆ ಹೆಚ್ಚಾಗಿರುವುದು ಸಂಬಂಧದ ಮೇಲೆ ಅಡ್ಡಪರಿಣಾಮ ಬೀರುತ್ತಿದೆ. ಅನೇಕ ಪ್ರೀತಿ (Love) ಸಂಬಂಧಗಳು ತಿಂಗಳಾಗುವುದರೊಳಗೇ ಮುರಿದು ಬೀಳ್ತಿದೆ. ದೀರ್ಘ ದಾಂಪತ್ಯ (Marriage) ಈಗ ಸಾಧನೆ ಎನ್ನುವಂತಾಗಿದೆ. ಪತಿ – ಪತ್ನಿ ಮಧ್ಯೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆಯುತ್ತಿರುತ್ತದೆ. ಇಲ್ಲಿ ಪ್ರಾಕ್ಟಿಕಲ್ ಮಹತ್ವ ಪಡೆಯುತ್ತದೆಯೇ ವಿನಃ ಬೋಧನೆಯಲ್ಲ. ಆದ್ರೆ ಚೀನಾ (China) ದ ವಿಶ್ವವಿದ್ಯಾನಿಲಯದಲ್ಲಿ ಇಂಥ ವಿಚಿತ್ರ ಕೋರ್ಸ್ ಕಲಿಸಲಾಗ್ತಿದೆ. ವಿಶ್ವವಿದ್ಯಾನಿಲಯದ ಈ ಕೋರ್ಸ್ ನಲ್ಲಿ ಹುಡುಗಿಯರಿಗೆ ಪ್ರೀತಿಯ ಬಗ್ಗೆ ತರಬೇತಿ ನೀಡಲಾಗ್ತಿದೆ. ಪತಿಯನ್ನು ಹೇಗೆ ಖುಷಿಪಡಿಸಬೇಕು ಎಂಬುದು ಸೇರಿದಂತೆ ಅಲಂಕಾರ, ಆಕರ್ಷಣೆಗೆ ಸಂಬಂಧಿಸಿದ ವಿಷ್ಯವನ್ನು ಈ ಕೋರ್ಸ್ ನಲ್ಲಿ ಕಲಿಸಲಾಗ್ತಿದೆ. ಯಾವ ವಿಶ್ವವಿದ್ಯಾನಿಲಯದಲ್ಲಿ ಈ ಕೋರ್ಸ್ ಕಲಿಸಲಾಗ್ತಿದೆ, ಏನೆಲ್ಲ ವಿಷ್ಯವಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.
ಶ್ರೀದೇವಿ ಪುತ್ರಿ ಜಾಹ್ನವಿ ರಾಜಕೀಯ ಧುರೀಣನ ಸೊಸೆಯಾಗೋದು ಪಕ್ಕನಾ? ಅಪ್ಪ ಬೋನಿ ಕಪೂರ್ ಹೇಳಿದ್ದೇನು?
ಚೀನಾದ ಈಸ್ಟ್ ಚೀನಾ ನಾರ್ಮಲ್ ಯೂನಿವರ್ಸಿಟಿಯಲ್ಲಿ ಈ ವಿಚಿತ್ರ ಕೋರ್ಸ್ ಕಲಿಸಲಾಗ್ತಿದೆ. ಪುರುಷ ಶಿಕ್ಷಕರೊಬ್ಬರು ಹುಡುಗಿಯರಿಗೆ ಇದ್ರ ಬಗ್ಗೆ ತರಬೇತಿ ನೀಡ್ತಿದ್ದಾರೆ. 36 ಗಂಟೆಗಳ ಅವಧಿಯ ಕೋರ್ಸ್ ಇದಾಗಿದೆ. ಎಲ್ಲ ಪದವಿಪೂರ್ವ ವಿದ್ಯಾರ್ಥಿನಿಯರು ಈ ಕೋರ್ಸ್ ತೆಗೆದುಕೊಳ್ಳಬಹುದು. ಇನ್ನೊಂದು ವಿಶೇಷ ಅಂದ್ರೆ ಈ ಕೋರ್ಸ್ ಉಚಿತವಾಗಿದೆ. ಯಾವುದೇ ವಿದ್ಯಾರ್ಥಿನಿಯರಿಂದ ಹಣವನ್ನು ವಸೂಲಿ ಮಾಡಲಾಗುವುದಿಲ್ಲ ಎಂದು ಮೂಲಗಳು ಹೇಳಿವೆ.
ಗಾಂಗ್ ಲಿ ಎಂಬ ಸಂಶೋಧಕರು ಹುಡುಗಿಯರಿಗೆ ಉಪನ್ಯಾಸ ನೀಡುತ್ತಾರೆ. ಹುಡುಗಿಯರು ತಮ್ಮನ್ನು ತಾವು ಹೇಗೆ ಆಕರ್ಷಿತಗೊಳಿಸಬೇಕು, ಮೇಕಪ್ ಹೇಗೆ ಹಚ್ಚಿಕೊಳ್ಳೋದ್ರಿಂದ ಹುಡುಗಿಯರು ಯಂಗ್ ಆಗಿ ಕಾಣುತ್ತಾರೆ ಎಂಬುದರಿಂದ ಹಿಡಿದು ಹುಡುಗರನ್ನು ಆಕರ್ಷಿಸಲು ದೈಹಿಕ ಫಿಟ್ನೆಸ್ ಕೂಡ ಕಾರಣ ಎಂಬುದನ್ನು ಗಾಂಗ್ ಲಿ ವಿದ್ಯಾರ್ಥಿನಿಯರಿಗೆ ತಿಳಿಸುತ್ತಾರೆ. ಕೆಲ ದಿನಗಳ ಹಿಂದೆ ಉಪನ್ಯಾಸ ನೀಡಿದ್ದ ಗಾಂಗ್ ಲಿ, ತಮ್ಮ ಉಪನ್ಯಾಸದ ಸಂಪೂರ್ಣ ಸಾರಾಂಶದಲ್ಲಿ, ಮಹಿಳೆಯರು, ಮಕ್ಕಳನ್ನು ಪಡೆಯಲು ಇಷ್ಟಪಡ್ತೇವೆ ಎಂಬುದನ್ನು ಪುರುಷರ ಮುಂದೆ ತೋರ್ಪಡಿಸಬೇಕು. ಇದು ಪತಿಯನ್ನು ಹೆಚ್ಚು ಸೆಳೆಯುತ್ತದೆ ಎಂಬುದಾಗಿತ್ತು.
ಈ 8 ನಡುವಳಿಕೆಗಳನ್ನು ಎಲ್ಲ ಪೋಷಕರೂ ಮಕ್ಕಳಿಗೆ ಕಲಿಸ್ಲೇಬೇಕು..
ಇಷ್ಟೇ ಅಲ್ಲ, ಹುಡುಗಿಯರು ಸಾಂಪ್ರದಾಯಿಕವಾಗಿ ಕಾಣಿಸಿಕೊಳ್ಳಬೇಕು, ಬೇಗ ಮನೆಗೆ ಹೋಗುವ ಮಾತುಗಳನ್ನು ಆಡಬೇಕು ಎಂದಿದ್ದ ಗಾಂಗ್ ಲಿ, ರೊಮ್ಯಾನ್ಸ್ ಬಗ್ಗೆಯೂ ಹುಡುಗಿಯರಿಗೆ ಒಂದಿಷ್ಟು ಕಿವಿಮಾತು ಹೇಳಿದ್ದರು. ಚೀನಾ ಸಾಮಾಜಿಕ ಜಾಲತಾಣದಲ್ಲಿ ಗಾಂಗ್ ಲಿ ವಿಡಿಯೋ ಹಾಗೂ ಫೋಟೋ ವೈರಲ್ ಆಗಿದೆ. ಅವರ ಉಪನ್ಯಾಸವನ್ನು ಕೆಲವರು ಮೆಚ್ಚಿಕೊಂಡಿದ್ದಾರೆ. ಮತ್ತೆ ಕೆಲವು ಎನ್ ಜಿಒ ಹಾಗೂ ಸಾಮಾನ್ಯ ಜನರು ಇದನ್ನು ವಿರೋಧಿಸಿದ್ದಾರೆ. ಇದು ಮಹಿಳೆಯ ಗೌರವಕ್ಕೆ ಧಕ್ಕೆ ತರುತ್ತದೆ ಎಂದಿದ್ದಾರೆ.