Asianet Suvarna News Asianet Suvarna News

Love And Crush: ನಿಮ್ಮ ಕ್ರಶ್‌ಗೂ ನೀವಿಷ್ಟ ಆಗಿದ್ರೆ ಹೀಗೆಲ್ಲ ಮಾಡ್ತಾರೆ..

ಅವಳು ಅಥವಾ ಅವನೆಂದ್ರೆ ಸಿಕ್ಕಾಪಟ್ಟೆ ಇಷ್ಟ. ವಿಚಿತ್ರ ಆಕರ್ಷಣೆ. ಆದ್ರೆ ಅವ್ರು ತನ್ನ ಬರೀ ಫ್ರೆಂಡಾಗಿ ನೋಡ್ತಿದಾರಾ ಅಥ್ವಾ ಅವ್ರಿಗೂ ಫೀಲಿಂಗ್ಸ್ ಇದ್ಯಾ ಅನ್ನೋ ಗೊಂದಲ ಸಾಮಾನ್ಯವಾಗಿ ಬಹುತೇಕ ಯುವಕ ಯುವತಿಯರ ಪ್ರಾಬ್ಲಂ. ನಿಮ್ಮನ್ನು ಕಂಡ್ರೆ ಅವ್ರಿಗೂ ಇಷ್ಟಾನಾ ಅಂತ ತಿಳ್ಕೊಳೋದು ಹೇಗೆ?

Ways to find out if your crush likes you too skr
Author
Bangalore, First Published Dec 29, 2021, 6:04 PM IST
  • Facebook
  • Twitter
  • Whatsapp

ಅವಳಂದ್ರೆ ಜೀವ. ಇಡೀ ದಿನ ಜೊತೆಗೇ ಇರ್ಬೇಕು ಅನ್ಸತ್ತೆ.. ಅವ್ಳ ಹತ್ರ ಮಾತಾಡ್ತಾನೇ ಇರ್ಬೇಕು, ಎಲ್ಲೇ ಹೋದ್ರೂ ಪಕ್ದಲ್ಲಿ ಅವ್ಳೇ ಇರ್ಬೇಕು ಅನ್ಸತ್ತೆ.. ಈ ಹೊಸ ಹೊಸ ಫೀಲಿಂಗ್‌‌ನಿಂದ ಸಿಕ್ಕಾಪಟ್ಟೆ ರೋಮಾಂಚಿತರಾಗಿದ್ದೀರಾ.. ಅವ್ಳಿಂದ ಒಂದ್ ಗುಡ್ ಮಾರ್ನಿಂಗ್ ಮೆಸೇಜ್ ಬಂದ್ರೂ ಕಲ್ಪನೇಲಿ ಕಳ್ದ್ ಹೋಗ್ತೀರಾ. ನಿಮ್ಮ ಮೆಸೇಜ್‌ನ ತಕ್ಷಣ ಆಕೆ ಓದ್ಲಿಲ್ಲಾಂದ್ರೆ ಹಾರ್ಟು ಟೆನ್ಷನ್ನು, ಗೊಂದಲ್ದಲ್ಲಿ ಬಡ್ಕೊಳತ್ತೆ..
ಆದ್ರೆ ಅವ್ಳಿಗೂ ಹಿಂಗೆಲ್ಲ ಅನ್ಸತ್ತಾ, ಅವ್ಳ್ಗೂ ನೀವು ಕ್ರಶ್ಶಾ, ನಿಮ್ಮ ಮೇಲೆ ಪ್ರೀತಿಯಿದ್ಯಾ ಅನ್ನೋದು ಬಗೆಹರಿಯದ ಗೊಂದಲ. ಫೀಲಿಂಗ್ಸ್ ಹೇಳ್ಕೊಂಡ್ರೆ ಇರೋ ಫ್ರೆಂಡ್‌ಶಿಪ್ಪೂ ಹಾಳಾದ್ರೆ ಅನ್ನೋ ಭಯ.. ಹೇಳ್ದೇನೇ ಅವ್ಳ ಮನ್ಸಲ್ಲೇನಿದೆ ಎಂದು ತಿಳ್ಯೋದಾದ್ರೂ ಹೇಗೆ? 

ಟೆನ್ಷನ್ ಮಾಡ್ಕೋಬೇಡಿ. ನೀವೇನೂ ಹೇಳ್ದೇ, ಅವ್ಳೂ ಏನೊಂದೂ ಹೇಳ್ದೇ ಅವ್ಳಿಗೆ ನಿಮ್ ಮೇಲೆ ಫೀಲಿಂಗ್ಸ್ ಇದ್ಯಾ ಅಂತ ತಿಳ್ಕೊಳೋದು ಹೇಗಂತ ನಾವ್ ಹೇಳ್ತೀವಿ. 

ಮಾತು, ಮೆಸೇಜು
ನಿಮ್ಮಿಬ್ಬರ ನಡುವೆ ಮೆಸೇಜ್ ಪಾಸ್ ಆಗ್ದೇ, ಮಾತುಕತೆ ಇಲ್ದೆ ಒಂದು ದಿನವೂ ಕಳೀತಿಲ್ಲ ಅನ್ನೋದು ನಿಜವಾಗಿದ್ರೆ ನಿಮ್ಮ ಕ್ರಶ್‌(crush)ಗೆ ಖಂಡಿತಾ ನೀವಿಷ್ಟ. ಚಾಟ್ ಮಾಡುವಾಗ ಅದನ್ನು ಕೊನೆಗೊಳಿಸುವ ಬದಲು ಮುಂದುವರಿಸೋಕ್ ನೋಡ್ತಿದಾರೆ ಅಂದ್ರೆ, ಸಣ್ಣಪುಟ್ಟ ವಿಷಯವೇ ಅಲ್ಲದ ವಿಷಯಗಳನ್ನೂ ನಿಮ್ ಹತ್ರ ಶೇರ್ ಮಾಡ್ಕೋತಿದಾರೆ ಅಂದ್ರೆ ಆಕೆಗೆ ನಿಮ್ಮ ಜೊತೆ ಮಾತಾಡೋದಿಷ್ಟ, ನಿಮ್ಮೊಂದಿಗೆ ಸದಾ ಸಂಪರ್ಕದಲ್ಲಿರಲು ಬಯಸ್ತಾಳೆ ಎಂದರ್ಥ.  ಎಲ್ಲಕ್ಕಿಂತ ಮುಖ್ಯವಾಗಿ ಹೊರಗೆ ಕಾಫಿ, ಡಿನ್ನರ್, ಮೂವಿ, ಅಥ್ವಾ ಜಸ್ಟ್ ಮೀಟ್ ಆಗೋದಾದ್ರೂ ಸರಿ- ಆಕೆನೇ ಫಸ್ಟ್ ಪ್ಲ್ಯಾನ್ ಮಾಡ್ತಿದಾಳೆ ಅಂದ್ರೆ ಆಕೆಗೆ ನಿಮ್ಮ ಮೇಲೆ ಫೀಲಿಂಗ್ಸ್(feelings) ಇದ್ದೇ ಇದೆ. 

Love : ಪ್ರೀತಿಯಲ್ಲಿ ಬಿದ್ದ ಮಹಿಳೆ ಜಗತ್ತು ಮರೆತು ಮಾಡ್ತಾಳೆ ಈ ತಪ್ಪು

ಮುಚ್ಚುಮರೆ ಇಲ್ಲ
ಆಕೆ ನಿಮ್ಮೊಂದಿಗಿದ್ದಾಗ ಹೆಚ್ಚು ಕಂಫರ್ಟೇಬಲ್(comfortable) ಆಗಿರ್ತಾಳೆ, ಯಾವೊಂದು ವಿಷಯನ್ನೂ ಗುಟ್ಟು ಮಾಡ್ದೇ ನಿಮ್ಮ ಬಳಿ ಹೇಳ್ಕೋತಿದಾಳೆ ಅಂದ್ರೆ ಅವ್ಳಿಗೆ ಫೀಲಿಂಗ್ಸ್ ಇರ್ಬೋದು. ಕೆಲವೊಮ್ಮೆ ಫ್ರೆಂಡ್‌ಶಿಪ್ಪಲ್ಲೂ ಹೀಗಿರ್ತಾರೆ. ಆದ್ರೆ, ಉಳಿದೆಲ್ಲ ಫ್ರೆಂಡ್ಸ್‌ಗಿಂತ ನಿಮ್ಮ ಬಳಿಯೇ ಹೆಚ್ಚು ಮಾತಾಡ್ತಾಳೆ, ಗ್ರೂಪಲ್ಲಿರೋವಾಗ್ಲೂ ನಿಮ್ಮ ಪಕ್ಕವೇ ಇರ್ತಾಳೆ ಅಂದ್ರೆ ಅವ್ಳಿಗೆ ಫೀಲಿಂಗ್ಸ್ ಇದೆ ಅಂತ. 

ನಿಮ್ಮಿಷ್ಟ ಕೇಳ್ತಾಳೆ
ಹೋಟೆಲ್‌ಗೆ ಹೋದಾಗ ನಿಮ್ಮಿಷ್ಟದ ಸ್ಯಾಂಡ್‌ವಿಚ್ಚನ್ನೇ ಆರ್ಡರ್ ಮಾಡೋದು, ನೀವು ಹಸಿವು ಅಂತಿದ್ದಂಗೇ ತಿನ್ನಲು ಎಳ್ಕೊಂಡ್ ಹೋಗೋದು, ಅಲ್ಲಿ ನಿಮಗೇನಿಷ್ಟ ಅನ್ನೋದನ್ನೇ ಮುಖ್ಯ ಮಾಡೋದು, ಶರ್ಟ್ ಗಿಫ್ಟ್ ಮಾಡಿದರೆ ನಿಮ್ಮಿಷ್ಟದ ಕಲರ್ ಸೆಲೆಕ್ಟ್ ಮಾಡೋದು- ಹೀಗೆ ಎಲ್ಲ ಕ್ರಿಯೆಗಳಲ್ಲೂ ನಿಮ್ಮ ಇಷ್ಟವನ್ನೇ ಮುಂದೆ ಮಾಡ್ತಿದ್ದಾಳೆ ಅಂದ್ರೆ ಅವ್ಳಿಗೆ ನಿಮ್ಮ ಮೇಲೆ ಪ್ರೀತಿ ಇದ್ದೇ ಇದೆ. ಅಲ್ಲದೆ, ನಿಮ್ಮ ಇಷ್ಟವೇನು, ನಿಮಗೇನೆಂದರೆ ಆಗಲ್ಲ ಅನ್ನೋದು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾಳೆಂದರೂ ನಿಮ್ಮ ವಿಷಯದಲ್ಲಿ ಸೂಕ್ಷ್ಮವಾಗಿ ಗಮನಿಸ್ತಿದಾಳೆ ಅಂತರ್ಥ. 

Zodiacs and nature: ಈ ರಾಶಿಯವರು ಸಿಂಗಲ್ ಆಗಿರೋದೇ ಒಳ್ಳೇದು. ಯಾಕೆ ಗೊತ್ತಾ?

ನಿಮ್ಮ ಪರ
ಕಾಲೇಜಲ್ಲಾಗಲೀ, ಆಫೀಸಲ್ಲಾಗಲೀ ಯಾರೋ ನಿಮಗೆ ಬೈದಾಗ, ನಿಮ್ಮ ಬಗ್ಗೆ ನೆಗೆಟಿವ್ ಮಾತುಗಳಾಡಿದಾಗ ಅಥವಾ ಗೆಳೆಯರು ಚುಡಾಯಿಸಿದಾಗಲೇ ಇರಲಿ, ನಿಮ್ಮ ಪರ ವಹಿಸಿಕೊಂಡು ಮಾತನಾಡುತ್ತಾಳೆಂದರೆ ಅವಳು ಸದಾ ನಿಮ್ಮ ಪಕ್ಕವೇ ಇರಲು ಬಯಸುತ್ತಿದ್ದಾಳೆ ಎಂದರ್ಥ. 

ನಡುವಳಿಕೆ
ಸಾಮಾನ್ಯವಾಗಿ ಯಾವುದೇ ರೀತಿಯ ವ್ಯಕ್ತಿತ್ವವಾದರೂ ಇಷ್ಟ ಪಡುವವರು ಎದುರಿದ್ದಾಗ ಒಂದೇ ನಾಚಿಕೆ, ಆತಂಕ ತೋರಿಸಿಕೊಳ್ಳುತ್ತಾರೆ, ಇಲ್ಲಾ ಹೈಪರ್ ಎನರ್ಜಿಯಲ್ಲಿ ಜಿಗಿದಾಡುತ್ತಾರೆ. ಈ ನಡುವಳಿಕೆಗಳನ್ನು ಗಮನಿಸಿ. ಆಕೆ ನೀವಿದ್ದಾಗ ಹೆಚ್ಚು ಎನರ್ಜಿಯಲ್ಲಿರುತ್ತಾಳೆ ಎನಿಸಿದರೆ ಖಂಡಿತಾ ನೀವೆಂದರೆ ಆಕೆಗೆ ಇಷ್ಟ. 

Follow Us:
Download App:
  • android
  • ios