ಇನ್ನೇನು ಮುಂದುವರಿಸೋದಕ್ಕಿಂತ ಬ್ರೇಕ್ ಅಪ್ ಬೆಸ್ಟ್ ಅನಿಸಿದರೆ ಯುದ್ಧ ಬೇಡ.. ಬುದ್ಧರಾಗಿ!
ಜೀವನದಲ್ಲಿ ಸದಾ ಪ್ರೀತಿಯಿರಲು ಸಾಧ್ಯವಿಲ್ಲ. ಸಿಕ್ಕ ಪ್ರೀತಿಯನ್ನು ಕೆಲವೊಮ್ಮೆ ಕಳೆದು ಕೊಳ್ಳಬೇಕಾಗುತ್ತದೆ. ಬ್ರೇಕ್ ಅಪ್ ಸಾಮಾನ್ಯವಾದ್ರೂ ಎಲ್ಲ ಬ್ರೇಕ್ ಅಪ್ ನಲ್ಲಿ ಗಲಾಟೆ ಆಗ್ಲೇಬೇಕು ಎನ್ನುವ ನಿಯಮವಿಲ್ಲ. ಈ ವಿಧಾನವನ್ನೂ ನೀವು ಬಳಸಬಹುದು.
ಪ್ರೀತಿ ಎಲ್ಲ ಬಾರಿ ಸಕ್ಸಸ್ ಆಗ್ಬೇಕು ಅಂದೇನಿಲ್ಲ. ಪ್ರೀತಿಯ ಇನ್ನೊಂದು ಮುಖ ಬ್ರೇಕ್ ಅಪ್. ಪ್ರೀತಿ ಮಾಡುತ್ತಿರುವ ವ್ಯಕ್ತಿಗಳು ಬೇರೆಯಾಗುವ ನಿರ್ಧಾರಕ್ಕೆ ಬಂದಾಗ ಅಲ್ಲೊಂದು ಗಲಾಟೆ, ಅಶಾಂತಿ, ಯುದ್ಧದ ವಾತಾವರಣ ನಿರ್ಮಾಣವಾಗಬೇಕು ಎಂದೇನಿಲ್ಲ. ಇಬ್ಬರು ಪರಸ್ಪರ ಮಾತುಕತೆ ನಡೆಸಿ, ಶಾಂತಿಯಿಂದಲೇ ಪ್ರೀತಿ ಎಂಬ ಬಂಧನದಿಂದ ಹೊರಗೆ ಬರಬಹುದು. ಶಾಂತಿಯುತವಾಗಿ ನಡೆಯುವ ಈ ಬ್ರೇಕ್ ಅಪ್ ಮುಂದೆ ಯಾವುದೇ ಸಮಸ್ಯೆ ತರುವುದಿಲ್ಲ. ಇಬ್ಬರ ಮಧ್ಯೆ ದ್ವೇಷ, ಸೇಡಿನ ಭಾವನೆ ಇರೋದಿಲ್ಲ. ಇಬ್ಬರು ಸೌಮ್ಯವಾಗಿ ಮಾತುಕತೆ ನಡೆಸಿದ್ರೆ ಯಾರಿಗೂ ಹೆಚ್ಚಿನ ಆಘಾತವಾಗುವುದಿಲ್ಲ. ನಾವಿಂದು ಶಾಂತ ರೀತಿಯಲ್ಲಿ ಬ್ರೇಕ್ ಅಪ್ ಮಾಡಿಕೊಳ್ಳೋದು ಹೇಗೆ ಎಂಬುದನ್ನು ನಿಮಗೆ ಹೇಳ್ತೇವೆ.
ಸದ್ದಿಲ್ಲದೆ ಬ್ರೇಕ್ ಅಪ್ (BreakUp) ಮಾಡಿಕೊಳ್ಳೋದು ಹೇಗೆ? :
ಸ್ಥಳದ ಆಯ್ಕೆ ಬಹಳ ಮುಖ್ಯ : ಪ್ರೀತಿ (Love) ಆರಂಭದಲ್ಲಿ ತುಂಬಾ ಸುಂದರವೆನ್ನಿಸಿದ್ರೂ ದಿನ ಕಳೆದಂತೆ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಶುರುವಾಗುತ್ತದೆ. ಹೊಂದಿಕೆ ಇಲ್ಲಿ ಬಹಳ ಮುಖ್ಯವಾಗುತ್ತದೆ. ಒಬ್ಬರು ಏರಿಗೆ ಇನ್ನೊಬ್ಬರು ನೀರಿಗೆ ಹೋಗುವವರಾಗಿದ್ದರೆ ಆ ಸಂಬಂಧ (Relationship) ದಲ್ಲಿ ಹೆಚ್ಚು ದಿನ ಇರೋ ಬದಲು ಬ್ರೇಕ್ ಅಪ್ ಮಾಡಿಕೊಳ್ಳೋದು ಅನಿವಾರ್ಯ. ನೀವು ಬ್ರೇಕ್ ಅಪ್ ಮಾಡಿಕೊಳ್ಳಲೇಬೇಕು ಎನ್ನುವ ಅಂತಿಮ ನಿರ್ಧಾರಕ್ಕೆ ಬಂದಾಗ ಈ ವಿಷ್ಯವನ್ನು ನಿಮ್ಮ ಸಂಗಾತಿ ಮುಂದೆ ಹೇಳುವುದು ಕೂಡ ಬಹಳ ಸವಾಲಿನ ಕೆಲಸ. ಅನೇಕ ಬಾರಿ ನಿಮ್ಮ ಬ್ರೇಕ್ ಅಪ್ ವಿಷ್ಯ ಸಂಗಾತಿಗೆ ತಿಳಿದಿರೋದಿಲ್ಲ. ನೀವು ಏಕಾಏಕಿ ಬಸ್ ನಿಲ್ದಾಣಕ್ಕೆ ಬಂದು ಬ್ರೇಕ್ ಅಪ್ ಅಂದ್ರೆ ಆಗೋದಿಲ್ಲ. ನಿಮ್ಮ ಮನಸ್ಸಿನ ಭಾವನೆಯನ್ನು ಹೇಳಿಕೊಳ್ಳಲು ನೀವು ಶಾಂತವಾದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ನೀವಿಬ್ಬರೇ ಇದ್ದರೆ ಉತ್ತಮ. ನಿಮ್ಮ ಭಾವನೆಯನ್ನು ಅವರಿಗೆ ಸ್ಪಷ್ಟವಾಗಿ ಹೇಳುವಾಗ ಯಾವುದೇ ಗಲಾಟೆ ಅವರನ್ನು ಚಂಚಲಗೊಳಿಸಬಾರದು.
ಆಫೀಸಲ್ಲಿ ಮೀಟಿಂಗ್‌ನಲ್ಲಿದ್ದಾಗಲೇ ನಿಮಿರುವಿಕೆ, ಇಂಥ ಸಮಸ್ಯೆಗೇನು ಪರಿಹಾರ?
ದೂಷಣೆ ಬೇಡ (Don't Blame Each other): ನಿಮ್ಮ ಸಂಬಂಧದಲ್ಲಿ ಪ್ರಾಮಾಣಿಕತೆ ಮುಖ್ಯವಾಗುತ್ತದೆ. ನೀವು ಬ್ರೇಕ್ ಅಪ್ ಗೆ ಯಾರನ್ನೂ ದೂಷಿಸುವ ಅಗತ್ಯವಿಲ್ಲ. ನೀನು ಸರಿಯಿಲ್ಲ, ನೀನು ನನಗೆ ಸಮಯ ನೀಡ್ತಿಲ್ಲ, ನಿನ್ನಿಂದ ನನಗೆ ಬೇಸರವಾಗಿ ಎನ್ನುವ ಪದ ಬಳಕೆ ಬದಲು ನಮ್ಮಿಬ್ಬರ ಸಂಬಂಧ ಸರಿ ಬರುತ್ತಿಲ್ಲ. ನಾವು ದೂರವಾಗುವುದು ಉತ್ತಮ ಎಂದು ನನಗೆ ಅನ್ನಿಸುತ್ತಿದೆ ಎಂಬ ಪದಗಳ ಪ್ರಯೋಗ ಮಾಡಿ. ನಿಮ್ಮ ಸಂಗಾತಿಯೇ ಇದಕ್ಕೆ ಕಾರಣ ಎನ್ನುವ ಯಾವುದೇ ಪದ ಬಳಸಿ ಘರ್ಷಣೆಗೆ ಕಾರಣವಾಗಬೇಡಿ.
ಸಂಗಾತಿ ಹೇಳುವುದನ್ನು ಕೇಳಿ (Listen to your Partner) : ನಿಮ್ಮ ಸಂಗಾತಿ ನಿಮ್ಮ ಮುಂದೆ ಬಂದು ಬ್ರೇಕ್ ಅಪ್ ವಿಷ್ಯವನ್ನು ಹೇಳಿದಾಗ ಕೇಳುವುದು ಬಹಳ ಮುಖ್ಯವಾಗುತ್ತದೆ. ವಾದ – ವಿವಾದಕ್ಕಿಂತ ಅವರು ಏನು ಹೇಳುತ್ತಿದ್ದಾರೆ ಎಂಬುದನ್ನು ಮೊದಲು ಶಾಂತವಾಗಿ ಆಲಿಸಬೇಕು. ಅವರ ಭಾವನೆಗಳಿಗೆ ಬೆಲೆ ನೀಡಬೇಕು. ಸಕ್ರಿಯ ಆಲಿಸುವಿಕೆಯು ಗೌರವ ಮತ್ತು ತಿಳುವಳಿಕೆಯ ಪ್ರಜ್ಞೆಯನ್ನು ಉತ್ತೇಜಿಸುತ್ತದೆ. ನಿಮ್ಮಲ್ಲಿ ನೀವು ಸಿದ್ಧರಾಗಿರಿ : ಇನ್ನು ನೀವೇ ಬ್ರೇಕ್ ಅಪ್ ಸುದ್ದಿಯನ್ನು ಸಂಗಾತಿಗೆ ಹೇಳ್ತಿದ್ದೀರಿ ಎಂದಾದ್ರೆ ಮೊದಲು ನೀವು ಸಿದ್ಧರಾಗಬೇಕು. ನಿಮ್ಮ ಮಾತು ಮುಗಿಸಿದ ನಂತ್ರ ಎದ್ದು ಬರುವುದಲ್ಲ. ಅವರ ಪ್ರಶ್ನೆಗಳನ್ನು ಕೇಳಿ ಅದಕ್ಕೆ ಉತ್ತರ ನೀಡಲು ನೀವು ಸಮರ್ಥರಾಗಿರಬೇಕು. ಗೊಂದಲ ಅಥವಾ ದೀರ್ಘಕಾಲದ ಅಸಮಾಧಾನಕ್ಕೆ ಕಾರಣವಾಗುವ ಯಾವುದೇ ಮಾತುಗಳನ್ನ ಆಡಬೇಡಿ.
ಮುಖೇಶ್ ಅಂಬಾನಿ ಕೋಪ ಇಳಿಸಲು ಮಡದಿ ನೀತಾ ಅಂಬಾನಿ ಟಿಪ್ಸ್ ಇದು!
ಬೇರೆಯಾಗುವಾಗ ಈ ವಿಷಯ ನೆನಪಿರಲಿ : ಇಬ್ಬರಿಗೂ ನೋವಾಗಿರುವ ಕಾರಣ ಇಬ್ಬರಿಗೂ ಸಮಯದ ಅಗತ್ಯವಿರುತ್ತದೆ. ಅನಗತ್ಯ ಸಂಪರ್ಕ ತಪ್ಪಿಸುವುದು ಮುಖ್ಯವಾಗುತ್ತದೆ. ಈ ವಿಷ್ಯವನ್ನು ಹೇಳಲು ಧೈರ್ಯ ಕೂಡ ಅಗತ್ಯ. ಅಲ್ಲದೆ ಸಂಬಂಧ ಮುರಿದುಬೀಳುವ ಸಮಯದಲ್ಲಿ ಇಬ್ಬರು ಕಳೆದ ಒಳ್ಳೆಯ ದಿನಗಳನ್ನು ನೆನಪಿಸಿಕೊಳ್ಳಿ. ಇಬ್ಬರು ಗೌರವದಿಂದಲೇ ಸಂಬಂಧದಿಂದ ಹೊರಬರಲು ಪ್ರಯತ್ನಿಸಿ.