Asianet Suvarna News Asianet Suvarna News

ತುಂಬಾ ಬೇಗ ಡೇಟಿಂಗ್ ಅಪ್ಲಿಕೇಷನ್ ಗೆ ಬಂದ್ಯಾ? ಸತ್ತ ಪತ್ನಿ ಕೇಳಿದ್ಲು ಈ ಪ್ರಶ್ನೆ

ಯುಕೆಯ ವ್ಯಕ್ತಿಯೊಬ್ಬ ವಿಚಿತ್ರ ಕಥೆಯನ್ನು ಎಲ್ಲರ ಮುಂದಿಟ್ಟಿದ್ದಾನೆ. ಎರಡು ವರ್ಷಗಳ ಹಿಂದೆ ಸತ್ತ ಆತನ ಪತ್ನಿ ಜೊತೆ ಚಾಟ್ ಮಾಡಿದ್ದಾನಂತೆ. ಅದೂ ಡೇಟಿಂಗ್ ಅಪ್ಲಿಕೇಷನ್ ನಲ್ಲಿ ಅನ್ನೋದು ವಿಶೇಷ.
 

Uk Man Claims Living In Fear After He Chatted With His Dead Wife roo
Author
First Published Oct 30, 2023, 11:57 AM IST

ದೆವ್ವಗಳ ಬಗ್ಗೆ  ಆಗಾಗ ಸುದ್ದಿಗಳು ಬರ್ತಿರುತ್ತವೆ. ಇಂದಿನ ಯುಗದಲ್ಲಿ ಅದನ್ನು ನಂಬುವವರು ಕಡಿಮೆ. ಭೂತದ ಕಥೆಗಳನ್ನು ಮೂಢನಂಬಿಕೆಯೆಂದು ಭಾವಿಸುವವರೇ ಹೆಚ್ಚು. ಸಿಸಿಟಿವಿಯಲ್ಲಿ ಭೂತದ ಕೃತ್ಯ ಸೆರೆ, ಮನೆಯಲ್ಲಿ ದೆವ್ವದ ಕಾಟ, ಕಣ್ಣಮುಂದೆ ಬಂದ ಪಿಶಾಚಿ ಹೀಗೆ ಜನರು ನಾನಾ ಕಥೆ ಹೇಳ್ತಿರುತ್ತಾರೆ. ಈಗ ದೆವ್ವ ಮಾಡರ್ನ್ ಆದಂತಿದೆ. ಡೇಟಿಂಗ್ ಅಪ್ಲಿಕೇಷನ್ ನಲ್ಲಿ ಭೂತ ಚಾಟ್ ಮಾಡಿದ ಸುದ್ದಿಯೊಂದು ವೈರಲ್ ಆಗ್ತಿದೆ.  

ಎರಡು ವರ್ಷಗಳ ಹಿಂದೆ ಸಾವನ್ನಪ್ಪಿದ ತನ್ನ ಪತ್ನಿಯೊಂದಿಗೆ ಡೇಟಿಂಗ್ ಆ್ಯಪ್ ಟಿಂಡರ್‌ (Tinder) ನಲ್ಲಿ ಮಾತನಾಡಿದ್ದೇನೆ ಎಂದು ವ್ಯಕ್ತಿ ಹೇಳಿದ್ದಾನೆ. ಅವನು ಈ ಕಥೆ (Story) ಯನ್ನು ಘೋಸ್ಟ್ ಹ್ಯಾನ್ಸ್ ಪಾಡ್‌ಕಾಸ್ಟ್‌ನಲ್ಲಿ ಹಂಚಿಕೊಂಡಿದ್ದಾನೆ. ಅದು ಟಿಕ್‌ಟಾಕ್‌ನಲ್ಲಿಯೂ ವೈರಲ್ ಆಗಿದೆ. ಈ ವಿಚಾರವಾಗಿ ತಿಂಗಳಾನುಗಟ್ಟಲೆ ವ್ಯಕ್ತಿ ತೊಂದರೆ ಅನುಭವಿಸಿದ್ದಾನಂತೆ. ಅನೇಕ ಪ್ರಶ್ನೆಗಳು ಆತನನ್ನು ಕಾಡಿದೆಯಂತೆ. ನಂತ್ರ ತನ್ನ ಅನುಭವವನ್ನು ಜನರ ಮುಂದಿಡಲು ನಿರ್ಧರಿಸಿದ್ದಾಗಿ ಆರ ಘೋಸ್ಟ್ ಹ್ಯಾನ್ಸ್ ಪಾಡ್ಕಾಸ್ಟ್ ನಲ್ಲಿ ಹೇಳಿದ್ದಾನೆ.

ಈ ರಾಶಿಗಳ ಜನ ದಾಂಪತ್ಯದಲ್ಲಿ ಬರೀ ಜಗಳವೇ ಹೆಚ್ಚು

ಲಂಡನ್‌ನಲ್ಲಿ (London) ವಾಸವಾಗಿರುವ ಆತನ ಹೆಸರು ಡೆರೆಕ್.  ಟಿಂಡರ್‌ನಲ್ಲಿ ತನ್ನ ಹೆಂಡತಿಯೊಂದಿಗೆ ಚಾಟ್ ಮಾಡಿದ್ದೇನೆ ಎಂದು ಡೆರಿಕ್ ಹೇಳ್ತಿದ್ದಾನೆ. ಡೆರಿಕ್ ಪತ್ನಿ ಗರ್ಭಕಂಠದ ಕ್ಯಾನ್ಸರ್ ನಿಂದ ಬಳಲುತ್ತಿದ್ದಳು. ಅವಳು ಸತ್ತು ಎರಡು ವರ್ಷವಾಗಿದೆ.

ಪತ್ನಿ ಸಾವನ್ನಪ್ಪಿದ ಎರಡು ವರ್ಷಗಳ ನಂತ್ರ ಒಂದು ದಿನ ಡೆರೆಕ್ ಟಿಂಡರ್ ಅಪ್ಲಿಕೇಷನ್ ನಲ್ಲಿ ಪ್ರೊಫೈಲ್ ಪರಿಶೀಲನೆ ಮಾಡಿದ್ದಾನೆ. ಆತನಿಗೆ ಯಾವುದೂ ಮ್ಯಾಚ್ ಆಗುವ ಪ್ರೊಫೈಲ್ ಸಿಕ್ಕಿರಲಿಲ್ಲ. ಆದ್ರೆ ಆ ದಿನ ತನ್ನ ಪತ್ನಿ ಪ್ರೊಫೈಲ್ ಸಿಕ್ಕಿದೆ. ಇದನ್ನು ನೋಡಿ ಡೆರೆಕ್ ಅಚ್ಚರಿಗೊಂಡಿದ್ದಾನೆ. ಡೆರಿಕ್ ನೋಡಿದ ಪತ್ನಿ ಅಲಿಸನ್ ಪ್ರೊಫೈಲ್ ನಲ್ಲಿ ಮೂರು ಫೋಟೋಗಳಿದ್ದವು. ಈ ಫೋಟೋಗಳನ್ನು ಡೆರೆಕ್ ಹಿಂದೆ ಎಂದೂ ನೋಡಿರಲಿಲ್ಲ. ಒಂದು ಫೋಟೋದಲ್ಲಿ ಅಲಿಸನ್, ಡೆರಿಕ್ ನನ್ನೇ ನೋಡ್ತಾ ನಕ್ಕಂತೆ ಭಾಸವಾಗ್ತಾಯಿತ್ತು. ಆದ್ರೆ ಫೋಟೋ ಬಿಟ್ಟು ಅದ್ರಲ್ಲಿ ಯಾವುದೇ ಹೆಚ್ಚಿನ ಮಾಹಿತಿ ಇರಲಿಲ್ಲ. 

ಸುಮಾರು ಎರಡು ನಿಮಿಷಗಳ ಕಾಲ ನನ್ನ ಉಸಿರನ್ನು ಬಿಗಿ ಹಿಡಿದಿದ್ದನಂತೆ. ಮುಂದಿನ ಎರಡು ದಿನ ನನಗೆ ನಿದ್ರೆ ಬರಲಿಲ್ಲ ಎನ್ನುತ್ತಾನೆ ಡೆರಿಕ್.  ಡೆರೆಕ್  ಆರಂಭದಲ್ಲಿ ಇದನ್ನು ಜೋಕ್ ಎಂದು ಭಾವಿಸಿದ್ದನಂತೆ. ಬಹುಶಃ ಯಾರೋ  ಹೆಂಡತಿಯ ನಕಲಿ ಖಾತೆಯನ್ನು ರಚಿಸಿದ್ದಾರೆ ಎಂದುಕೊಂಡಿದ್ದನಂತೆ. ಆದ್ರೆ ಆ ದಿನ ಬೆಳಗಿನ ಜಾವ ನಡೆದ ಘಟನೆ ಆತನಿಗೆ ಭಯಹುಟ್ಟಿಸಿತ್ತಂತೆ.

ಬೆಳಿಗ್ಗೆ 3.33ರ ಸುಮಾರಿಗೆ ಪತ್ನಿ ಅಕೌಂಟ್ ಗೆ ಡೆರೆಕ್ ಸಂದೇಶ ಕಳುಹಿಸಿದ್ದಾನೆ. ಹೇ… ಇದೆಲ್ಲ ಏನು?, ನನ್ನ ಹೆಂಡತಿ ಫೋಟೋ ಎಲ್ಲಿಂದ ಸಿಕ್ಕಿತು ಎಂದು ಪ್ರಶ್ನೆ ಮಾಡಿದ್ದಾನೆ. ಅದಕ್ಕೆ ಮುಂದಿನ 24 ಗಂಟೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಆದರೆ ಅಂತಿಮವಾಗಿ ಒಂದು ಸಂದೇಶ ಬಂದಿದೆ. ನೀವು ಮನೆಯಲ್ಲಿದ್ದೀರಾ? ನಾನು ಹೊರಗೆ ನಿಂತಿದ್ದೇನೆ. ನನ್ನನ್ನು ಒಳಗೆ ಬರಲು ಬಿಡಿ ಎಂದು ಪತ್ನಿ ಖಾತೆಯಿಂದ ಸಂದೇಶ ಬಂದಿದೆ. ಇದನ್ನು ನೋಡಿದ ಡೆರೆಕ್ ಬೆವರಿಳಿದಿದ್ದಾನೆ.

ಸುಹಾಸನೆ ಕಾಂಡೋಮ್ ಬಳಸೋ ಮುನ್ನ, ಸ್ವಲ್ಪ ಅಲರ್ಜಿ, ಹುಣ್ಣಿನ ಬಗ್ಗೆಯೂ ಗೊತ್ತಿರಲಿ

ಇದಾದ ಕೆಲವೇ ಕ್ಷಣಗಳಲ್ಲಿ ಮನೆಯ ಮುಖ್ಯ ಬಾಗಿಲು ಮುಚ್ಚಿದ ಶಬ್ದ ಕೇಳಿದೆ. ಡೆರೆಕ್ ಮತ್ತಷ್ಟು ಹೆದರಿದ್ದಾನೆ. ಹಾಸಿಗೆ ಮೇಲೆ ಮಲಗಿದ್ದಾನೆ. ಆಗ ಇನ್ನೊಂದು ಮೆಸೇಜ್ ಬಂದಿದೆ. ನೀನು ತುಂಬಾ ಬೇಗ ಟಿಂಡರ್ ಗೆ ಬಂದೆ ಡೇರಿ ಎಂದು ಸಂದೇಶ ಕಳುಹಿಸಲಾಗಿದೆ. ಇದನ್ನು ನೋಡಿದ ಡೆರೆಕ್ ಅಚ್ಚರಿಗೊಳಗಾಗಿದ್ದಾನೆ. ಡೇರಿ ಎಂದು ಕರೆಯೋದು ಆತನ ಹೆಂಡತಿ ಮಾತ್ರ. ಬೇರೆ ಯಾರಿಗೂ ಈ ಹೆಸರು ತಿಳಿದಿಲ್ಲ ಎಂದು ಡೆರೆಕ್ ಹೇಳಿದ್ದಾನೆ. ಡೆರೆಕ್ ಈ ಮೆಸ್ಸೇಜ್ ಓದುತ್ತಿರುವಾಗ್ಲೇ ಬೆಡ್ ರೂಮಿಗೆ ಯಾರೋ ಬಂದಂತಾಗಿದೆ. ಹೆದರಿದ ಡೆರೆಕ್, ಅಲಿಸನ್, ನನ್ನನ್ನು ಕ್ಷಮಿಸಿ. ನಾನು ನಿನ್ನನ್ನು ಪ್ರೀತಿಸುತ್ತೇನೆ. ನಾನು ನಿನ್ನನ್ನು ಕಳೆದುಕೊಂಡು ಎರಡು ವರ್ಷ ಕಳೆದಿದೆ. ನಾನು ಈಗ ಮುಂದುವರಿಯಬೇಕಾಗಿದೆ ಎಂದು ಹೇಳಿದ್ದಲ್ಲದೆ ಹೊರಗೆ ಹೋಗಿ ಬಾಗಿಲ ಬಳಿ ನೋಡಿದ್ದಾನೆ. ಅಲ್ಲಿ ಯಾರೂ ಇರಲಿಲ್ಲ. ವಾಪಸ್ ಬಂದಾಗ ಪ್ರೊಫೈಲ್ ಕೂಡ ಇರಲಿಲ್ಲ. ಏನಾಯ್ತು ನನಗೆ ಗೊತ್ತಾಗಲಿಲ್ಲ ಎಂದಿದ್ದಾನೆ ಡೆರೆಕ್. 

Follow Us:
Download App:
  • android
  • ios