ಈ ರಾಶಿಗಳ ಜನ ದಾಂಪತ್ಯದಲ್ಲಿ ಬರೀ ಜಗಳವೇ ಹೆಚ್ಚು
ಕೆಲ ದಂಪತಿ ಏನಾದರೊಂದು ಕಾರಣಕ್ಕೆ ಆಗಾಗ ಜಗಳ ಮಾಡುತ್ತಲೇ ಇರುತ್ತಾರೆ. ಹೊಂದಾಣಿಕೆ ಎಂಬುದೇ ಇರುವುದಿಲ್ಲ. ಅಧಿಕಾರಕ್ಕಾಗಿ ಕಿತ್ತಾಟ ಮಾಡುತ್ತಾರೆ. ತಮ್ಮದೇ ಹೆಚ್ಚುಗಾರಿಕೆ ತೋರುತ್ತಾರೆ. ಇದಕ್ಕೆ ಅವರ ರಾಶಿಚಕ್ರದ ಪ್ರಭಾವವೇ ಅಧಿಕ.
ಸಂಬಂಧಗಳಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಜತೆಯಾಗಿ ಜೀವನವಿಡೀ ಬದುಕುವ ಸಂಕಲ್ಪ ಮಾಡಿದ ದಂಪತಿಯಲ್ಲಿ ಇದೇ ಕಾರಣಕ್ಕಾಗಿ ವಾದ-ವಾಗ್ವಾದಗಳು ನಡಯುತ್ತವೆ. ಸಾಮಾನ್ಯವಾಗಿ ದಾಂಪತ್ಯದಲ್ಲಿ ಜಟಾಪಟಿ, ಜಗಳ, ವಾಗ್ವಾದಗಳನ್ನು ಸಹಜವೆಂದು ನಾವೆಲ್ಲರೂ ಸ್ವೀಕರಿಸಿಬಿಟ್ಟಿದ್ದೇವೆ. ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ, ವಿರುದ್ಧ ನಿಲುವನ್ನು ಹೊಂದಿದ್ದರೂ ಸಾಮರಸ್ಯದಿಂದ ಬದುಕುವ ದಂಪತಿಗಳಿದ್ದಾರೆ. ಬರೀ ಜಗಳ ಮಾಡುತ್ತಲೇ ಜೀವನ ಕಳೆಯುವವರೂ ಇದ್ದಾರೆ. ಈ ಗುಣಕ್ಕೂ ರಾಶಿಚಕ್ರಕ್ಕೂ ಸಂಬಂಧವಿದೆ. ಕೆಲವು ರಾಶಿಗಳ ಜನ ಮಾತ್ರ ಸಂಬಂಧದಲ್ಲಿ ಹೆಚ್ಚು ಜಗಳ ಕಾಯುವ ಬುದ್ಧಿ ಹೊಂದಿರುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದಾಂಪತ್ಯದಲ್ಲಿ ವಾದ ಮಾಡುವ ಜನರ ಪೈಕಿ ಐದು ರಾಶಿಗಳ ಜನರು ಭಾರೀ ಮುಂದಿರುತ್ತಾರೆ. ಸದಾಕಾಲ ಸಂಗಾತಿಯೊಂದಿಗೆ ಏನಾದರೊಂದು ವಾಗ್ವಾದ ಮಾಡುತ್ತಲೇ ಇರುವುದೆಂದರೆ ಇವರಿಗೆ ಸಂತಸ. ಈ ರಾಶಿಗಳ ಜನರು ಸಂಗಾತಿಯ ಜತೆಗೆ ಉತ್ತಮ ಸಂವಹನ, ಹೊಂದಾಣಿಕೆ, ಭಿನ್ನಾಭಿಪ್ರಾಯಗಳ ಕುರಿತು ಗೌರವದ ಭಾವನೆ ಬೆಳೆಸಿಕೊಂಡರೆ ಖಂಡಿತವಾಗಿ ಸಮಸ್ಯೆ ಕಡಿಮೆ ಮಾಡಿಕೊಳ್ಳಲು ಸಾಧ್ಯ. ಈ ರಾಶಿಗಳು ಯಾವುವು ಎಂದು ನೋಡಿ.
• ಮೇಷ (Aries)
ಖಚಿತ ನಿಲುವಿನ ಮೇಷ ರಾಶಿಯ ಜನ ಅಗ್ನಿಯಂತೆ (Fire) ಉರಿಯುತ್ತಾರೆ. ಎಲ್ಲವನ್ನೂ ತಾವೇ ನಿರ್ಧರಿಸುವುದು ಇವರ ಗುಣ. ಅಧಿಕಾರವನ್ನು (Power) ನಿಯಂತ್ರಿಸುವ ಮನೋಭಾವದಿಂದ ಸಂಗಾತಿಯ (Partner) ಜತೆಗೆ ನಿರಂತರವಾಗಿ ಕಲಹ (Fight) ಮಾಡುತ್ತಾರೆ. ದುಡುಕು (Impulsive) ಸ್ವಭಾವದಿಂದ ಸಾಕಷ್ಟು ಬಾರಿ ಅಲ್ಲೋಲಕಲ್ಲೋಲ ಮಾಡಿಕೊಳ್ಳುತ್ತಾರೆ. ಇವರ ಪ್ಯಾಷನೇಟ್ (Passionate) ಸ್ವಭಾವದಿಂದಾಗಿ ಜಗಳ ಮಾಡಿಕೊಂಡರೂ ಬಹುಬೇಗ ಅದನ್ನು ಮರೆತು ಮುನ್ನಡೆಯುತ್ತಾರೆ.
ಅಂಬಾನಿ, ಅದಾನಿ ಸಂಪತ್ತು ವರ್ಷದಿಂದ ವರ್ಷ ಹೆಚ್ಚಳ; ಬಿಲಿಯನೇರ್ ಉದ್ಯಮಿಗಳ ರಾಶಿ ಯಾವುದು?
• ವೃಷಭ (Taurus)
ಭೂತತ್ವದ ವೃಷಭ ರಾಶಿಯ ಜನ ಸ್ವಲ್ಪ ಹಠಮಾರಿಗಳು (Stubborn). ತಮ್ಮದೇ ದಾರಿಯನ್ನು ತಾವು ನಿರ್ಣಯಿಸಿಕೊಳ್ಳುತ್ತಾರೆ. ಇವರು ಸಂಗಾತಿಯ ಕುರಿತು ಪೊಸೆಸಿವ್ ನೆಸ್ (Possessiveness) ಹೊಂದಿರುತ್ತಾರೆ. ಈ ಗುಣದಿಂದಾಗಿ ಅಸೂಯೆ ಹಾಗೂ ಸಂಘರ್ಷವೇರ್ಪಡುತ್ತದೆ. ಸಂಬಂಧದಲ್ಲಿ ಬದ್ಧತೆ (Commitment) ಹಾಗೂ ನಿರ್ಧಾರ ಕೈಗೊಳ್ಳುವ ಇವರ ದೃಢತೆಯಿಂದಾಗಿ ಸಂಬಂಧದಲ್ಲಿ ಎದುರಾಗುವ ಸಮಸ್ಯೆಗಳನ್ನು ನಿವಾರಿಸಿಕೊಂಡು ಸಾಗುತ್ತಾರೆ. ಆಳವಾದ ಮತ್ತು ಎಂದೂ ಮಾಸದ ಪ್ರೀತಿ (Love) ಇವರಲ್ಲಿದ್ದರೂ ಸಂಗಾತಿಯ ಜತೆಗೆ ಕಲಹ ಮಾಡಿಕೊಳ್ಳುತ್ತಲೇ ಇರುತ್ತಾರೆ.
• ಮಿಥುನ (Gemini)
ಎಲ್ಲವನ್ನೂ ಒಳಗೊಳ್ಳುವ, ಹೊಂದಾಣಿಕೆ ಮಾಡಿಕೊಳ್ಳುವ ಗುಣ ಮಿಥುನ ರಾಶಿಯ ಜನಕ್ಕಿದೆ. ಆದರೆ, ಇವರಲ್ಲಿ ನಿರ್ಧಾರ (Decision) ಕೈಗೊಳ್ಳುವ ಸಾಮರ್ಥ್ಯ ಕಡಿಮೆ. ಎಲ್ಲವನ್ನೂ ಅಳೆದು-ತೂಗುವಲ್ಲೇ ಸಮಯ ಕಳೆಯುತ್ತಾರೆ. ಈ ಗುಣದಿಂದಾಗಿ ದಾಂಪತ್ಯದಲ್ಲಿ (Relation) ಜಗಳ ಉಂಟಾಗುತ್ತದೆ. ಇವರ ಗುಣದಿಂದಾಗಿ ದಾಂಪತ್ಯದಲ್ಲಿ ಅಪಾರ್ಥ ಹೆಚ್ಚುತ್ತದೆ. ಹೆಚ್ಚು ಮಾತನಾಡುವ ಗುಣದಿಂದಾಗಿ ಪರಿಸ್ಥಿತಿಯನ್ನು ಅತಿಯಾಗಿ ವಿಮರ್ಶೆ ಮಾಡಲು ಶುರು ಮಾಡಬಹುದು. ಆದರೂ, ತಮ್ಮ ವರ್ಚಸ್ಸು (Charm) ಮತ್ತು ಚುರುಕು (Wit) ಬುದ್ಧಿಯಿಂದಾಗಿ ಎದುರಾಗುವ ಎಲ್ಲ ಸಮಸ್ಯೆಗಳನ್ನು ನಿವಾರಿಸಿಕೊಳ್ಳುತ್ತಾರೆ.
• ಸಿಂಹ (Leo)
ನೈಸರ್ಗಿಕವಾಗಿ ನಾಯಕತ್ವದ (Leadership) ಗುಣ ಹೊಂದಿರುತ್ತಾರೆ ಸಿಂಹ ರಾಶಿಯ ಜನ. ತಮ್ಮ ಕುರಿತು ಎಲ್ಲರೂ ಗಮನ ಹರಿಸಬೇಕು, ಮೆಚ್ಚಿಕೊಳ್ಳಬೇಕು (Admire) ಎನ್ನುವುದು ಇವರ ಅದಮ್ಯ ಆಸೆ. ಎಲ್ಲರ ಕೇಂದ್ರಬಿಂದುವಾಗಬೇಕು ಎನ್ನುವ ಇವರ ಗುಣದಿಂದಾಗಿ ಸಂಬಂಧದಲ್ಲಿ ಆಗಾಗ ಸಮಸ್ಯೆಗಳು ಉಂಟಾಗುತ್ತವೆ. ಕೆಲವೊಮ್ಮೆ ಅತಿಯಾಗಿ ಸ್ವಾರ್ಥಕೇಂದ್ರಿತವಾಗಿ (Self-Center) ಯೋಚನೆ ಮಾಡುತ್ತಾರೆ. ಸೌಹಾರ್ದತೆ (Harmony) ಮತ್ತು ಹಾರ್ದಿಕ ಸ್ವಭಾವ ಹೊಂದಿದ್ದು, ಉತ್ತಮ ಸಂಗಾತಿಯೂ ಆಗಿರುತ್ತಾರೆ. ಹಾಗೆಯೇ, ಚಿಕ್ಕಪುಟ್ಟ ವಿಚಾರಗಳಿಗೆ ಗಲಾಟೆ ಮಾಡುತ್ತಾರೆ.
ಈ 4 ರಾಶಿಯ ಹುಡುಗಿಯರಿಗೆ ಬೀಳದ ಹುಡುಗರೇ ಇಲ್ಲ..!
• ವೃಶ್ಚಿಕ (Scorpio)
ಆಳವಾದ ಮನಸ್ಸು ಹೊಂದಿರುವ ವೃಶ್ಚಿಕ ರಾಶಿಯ ಜನ ಪ್ಯಾಷನೇಟ್ ಆಗಿರುತ್ತಾರೆ. ಸಂಬಂಧದಲ್ಲಿ ಅಧಿಕಾರ ಬಯಸುತ್ತಾರೆ. ಇದೇ ಕಾರಣದಿಂದ ಇವರ ದಾಂಪತ್ಯದಲ್ಲಿ ಕಲಹ ಹೆಚ್ಚು. ನಿಯಂತ್ರಣ (Control) ಮಾಡುವ ಗುಣ ಹಾಗೂ ಗುಟ್ಟುಗುಟ್ಟಾಗಿ ವರ್ತಿಸುವುದರಿಂದ ಸಂಗಾತಿಯ ಜತೆ ಜಗಳ (Clash) ಮಾಡಿಕೊಳ್ಳುತ್ತಾರೆ. ಸಮಸ್ಯೆ ಉಂಟಾದಾಗ ಬದ್ಧತೆ ಮತ್ತು ವಿಶ್ವಾಸದಿಂದ ಅದನ್ನು ನಿವಾರಣೆ ಮಾಡಿಕೊಳ್ಳುವುದು ಇವರ ಉತ್ತಮ ಸ್ವಭಾವ.