Asianet Suvarna News Asianet Suvarna News

2ನೇ ಮಡದಿ ದೀಪಾ ಬಗ್ಗೆ ಹೊಟ್ಟೆಕಿಚ್ಚೇನೂ ಇಲ್ಲವೆಂದ ಗಾಯಕ ಉದಿತ್ ನಾರಾಯಣ್ ಮೊದಲ ಪತ್ನಿ ರಂಜನಾ

ಎಲ್ಲರ ಜೀವನದಲ್ಲೂ ಏನಾದರೊಂದು ಅಹಿತಕರ ಘಟನೆಗಳು ಜರುಗುತ್ತವೆ. ನಿನ್ನೆಯಷ್ಟೇ 68ನೇ ಹುಟ್ಟುಹಬ್ಬ ಆಚರಿಸಿಕೊಂಡಿರುವ ಬಾಲಿವುಡ್ ಕಂಡ ಮಹಾನ್ ಗಾಯಕರಾದ ಉದಿತ್ ನಾರಾಯಣ್ ಜೀವನದಲ್ಲೂ ಅಂಥದ್ದೊಂದು ಸಂದರ್ಭ ಎದುರಾಗಿತ್ತು. ಅವರ ಮೊದಲ ಪತ್ನಿ ರಂಜನಾ “ಎರಡನೇ ಪತ್ನಿ ದೀಪಾ ಅವರ ಬಗ್ಗೆ ಯಾವುದೇ ಕಂಪ್ಲೇಂಟ್ ಇಲ್ಲ’ ಎಂದಿದ್ದುದು ಮಾತ್ರ ಜನಮಾನಸದಿಂದ ಮರೆಯಾಗುವುದಿಲ್ಲ. 
 

Udit Narayans first wife had no hate and jealous for second wife Deepa sum
Author
First Published Dec 2, 2023, 1:52 PM IST

ಬಾಲಿವುಡ್ ಸಂಗೀತ ಕ್ಷೇತ್ರ ಕಂಡ ಅತ್ಯಂತ ಜನಪ್ರಿಯ ಗಾಯಕರ ಪೈಕಿ ಉದಿತ್ ನಾರಾಯಣ್ ಪ್ರಮುಖ ಸ್ಥಾನದಲ್ಲಿ ನಿಲ್ಲುತ್ತಾರೆ. ನಿನ್ನೆ, ಡಿಸೆಂಬರ್ 1ರಂದು ಉದಿತ್ ನಾರಾಯಣ್ ತಮ್ಮ 68ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಬಾಲಿವುಡ್ ಸಂಗೀತದಲ್ಲಿ ತಮ್ಮ ಇಷ್ಟು ವರ್ಷಗಳ ಪಯಣವನ್ನು ಅವರು ಸ್ಮರಿಸಿದ್ದಾರೆ. 1980ರಲ್ಲಿ ಚಿತ್ರ “ಉನ್ನೀಸ್ ಬೀಸ್’ ನ “ಮಿಲ್ ಗಯಾ ಮಿಲ್ ಗಯಾ’ ಹಾಡಿನ ಮೂಲಕ ಬಾಲಿವುಡ್ ಪಯಣ ಆರಂಭಿಸಿದ ಈ ಗಾಯಕ ವೃತ್ತಿ ಜೀವನದ ಉನ್ನತ ಹಂತಕ್ಕೂ ಏರಿದ್ದಾರೆ. ಉದಿತ್ ಮೂಲತಃ ಬಿಹಾರದ ಬೈಸಿ ಗ್ರಾಮದವರು. ಇದು ಸುಪೌಲ್ ಜಿಲ್ಲೆಯಲ್ಲಿದೆ. 1955ರ ಡಿಸೆಂಬರ್ 1ರಂದು ಜನಸಿದ ಇವರ ತಂದೆ ಹರೇಕೃಷ್ಣ ಝಾ, ತಾಯಿ ಭುವನೇಶ್ವರಿ ದೇವಿ. ಈಕೆ ಜಾನಪದ ಹಾಡುಗಾರ್ತಿ. ಉದಿತ್ ಬಾಲಿವುಡ್ ಪ್ರವೇಶಕ್ಕೆ ತಾಯಿಯೇ ಸ್ಫೂರ್ತಿ. ತನ್ನ ಮಗ ಗಾಯಕನಾಗಿ ವೃತ್ತಿ ಮಾಡಬೇಕು, ಜೀವನ ಕಂಡುಕೊಳ್ಳಬೇಕು ಎನ್ನುವುದು ಈಕೆಯ ಆಸೆಯಾಗಿತ್ತು. ಅದರಂತೆ ಉದಿತ್ ಇಡೀ ದೇಶ ಗುರುತಿಸುವ, ಎಲ್ಲರ ಮನೆಮಾತಾದ ಗಾಯಕನಾಗಿ ಬೆಳೆದರು. ಪ್ರತಿಷ್ಠಿತ ಪದ್ಮಶ್ರೀ, ಪದ್ಮಭೂಷಣ ಗೌರವಕ್ಕೂ ಪಾತ್ರರಾಗಿದ್ದಾರೆ. 
ಮಹಾನ್ ಗಾಯಕನಾಗಿ ಉದಿತ್ ನಾರಾಯಣ್ (Udit Narayan) ಎಲ್ಲರಿಗೂ ಚಿರಪರಿಚಿತರು. ಆದರೆ, ಇವರ ಖಾಸಗಿ (Private) ಜೀವನದ ಬಗ್ಗೆ ಬಹಳ ವರ್ಷಗಳ ಕಾಲ ಯಾರಿಗೂ ಹೆಚ್ಚು ಗೊತ್ತಿರಲಿಲ್ಲ. ಇವರು 1985ರಲ್ಲಿ ದೀಪಾ ಗೆಹತ್ರಾಜ್ (Deepa Gehatraj) ಅವರನ್ನು ವಿವಾಹವಾಗಿ 1987ರಲ್ಲಿ ಗಂಡು ಮಗುವನ್ನು ಪಡೆದರು. ಇವರೇ ಆದಿತ್ಯ ನಾರಾಯಣ್ (Aditya). ಇಂದು ಗಾಯಕರಾಗಿಯೂ (Singer) ಖ್ಯಾತ ಹೋಸ್ಟ್ ಆಗಿಯೂ ಗುರುತಿಸಿಕೊಂಡಿದ್ದಾರೆ. 

ಇಮೇಜ್ ಧಕ್ಕೆ!
2006ರವರೆಗೆ ಎಲ್ಲವೂ ಚೆನ್ನಾಗಿಯೇ ನಡೆದಿತ್ತು, ಉದಿತ್ ವೃತ್ತಿಯಲ್ಲಿ (Profession) ಹೊಸ ಹೊಸ ಅವಕಾಶಗಳನ್ನು ಪಡೆಯುತ್ತ ಸಾಗಿದ್ದರು. ಆದರೆ, ಇದೇ ಸಮಯದಲ್ಲಿ ಖ್ಯಾತ ಗಾಯಕನ ಅಭಿಮಾನಿಗಳು ಶಾಕ್ ಆಗುವಂತೆ ಸುದ್ದಿಯೊಂದು ಹೊರಬಿದ್ದಿತ್ತು. ಅದೆಂದರೆ, ಉದಿತ್ ಅವರ ಮೊದಲ ಪತ್ನಿ ತಾನೆಂದು ರಂಜನಾ ಝಾ (Ranjana Jha) ನಾರಾಯಣ್ ಸಾರ್ವಜನಿಕವಾಗಿ ಮುಂದೆ ಬಂದಿದ್ದರು. ಈಕೆ ಬೆಳಕಿಗೆ ಬಂದಿದ್ದು ಸಹ ನಾಟಕೀಯವಾಗಿ.

ಸರಿಯಾಗಿ ನಿದ್ರೆ ಮಾಡಿಲ್ಲ ಅಂದ್ರೆ ದಾಂಪತ್ಯ ಜೀವನವೇ ಹಾಳಾಗುತ್ತಂತೆ!

ಪಾಟ್ನಾದ ಹೋಟೆಲೊಂದರಲ್ಲಿ ಉದಿತ್ ನಾರಾಯಣ್ ತಂಗಿದ್ದ ಸಮಯದಲಲ್ಲಿ ಬಲವಂತವಾಗಿ ಕೆಲವು ವರದಿಗಾರರೊಂದಿಗೆ ಅಲ್ಲಿಗೆ ಪ್ರವೇಶಿಸಿದ್ದರು ರಂಜನಾ ಝಾ. ತಾವು ನ್ಯಾಯ ಕೇಳಲು ಬಂದಿರುವುದಾಗಿ ತಿಳಿಸಿದ್ದರು. ಇದು ಪ್ರತಿಯೊಬ್ಬರಿಗೂ ಶಾಕ್ ನೀಡಿದ್ದ ಘಟನೆಯಾಗಿತ್ತು. ಮೊದಲ ಪತ್ನಿಗೆ ವಿಚ್ಛೇದನ (Divorce) ನೀಡದೆಯೇ ಮತ್ತೊಂದು ಮದುವೆಯಾಗಿದ್ದಾರೆ ಎನ್ನುವುದೂ ಸಹ ಸಾಕಷ್ಟು ಚರ್ಚೆಗೀಡಾಯಿತು. “2004ರಲ್ಲಿ ತಾವು ಹಾಗೂ ಉದಿತ್ ವಿವಾಹವಾಗಿದ್ದೆವು. ಬಿಹಾರದಲ್ಲಿ ಹೆಚ್ಚಿನ ಅವಕಾಶಗಳು ಸಿಗದ ಕಾರಣದಿಂದಾಗಿ ಮುಂಬೈಗೆ ಹೋಗುವುದಾಗಿ, ಅಲ್ಲಿ ಖ್ಯಾತರಾಗಿ ಮರಳಿ ಬರುವುದಾಗಿ ತಿಳಿಸಿದ್ದರು. ಯಶಸ್ಸು (Success) ಗಳಿಸುವುದನ್ನು ನೋಡಲು ಕಾದಿರು ಎಂದು ಹೇಳಿದ್ದರು. ಆದರೆ, ದೀಪಾ ಅವರನ್ನು ವಿವಾಹವಾಗಿದ್ದುದು ಮನಸ್ಸನ್ನು ಒಡೆದಿತ್ತು. ಹೀಗಾಗಿ, ದೂರವೇ ಇದ್ದೆ. ಈಗ ನ್ಯಾಯ ಕೇಳುತ್ತಿದ್ದೇನೆ’ ಎಂದು ಹೇಳಿದ್ದರು. 

ಮೊದಲು ಉದಿತ್ ನಾರಾಯಣ್ “ಈಕೆ ಯಾರೋ ಗೊತ್ತಿಲ್ಲ, ತಮ್ಮ ಹೆಸರಿಗೆ ಮಸಿ ಬಳಿಯಲು ಹೀಗೆ ಮಾಡಿದ್ದಾರೆ’ ಎಂದೆಲ್ಲ ಹೇಳಿದರೂ, ಬಿಹಾರದ ಮಹಿಳಾ ಆಯೋಗದಲ್ಲಿ ದೂರು ದಾಖಲಾಗಿ, ವಿಚಾರಣೆಗಳ ಬಳಿಕ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರು. ರಂಜನಾ ಝಾ ತಮ್ಮ ಮೊದಲ ಪತ್ನಿ (Wife) ಯಾಗಿದ್ದು, ಪ್ರತಿ ತಿಂಗಳು ಜೀವನಾಂಶ ನೀಡುವುದಾಗಿ ತಿಳಿಸಿದ್ದರು.

ಹೊಸದಾಗಿ ಮದುವೆಯಾದವರಲ್ಲಿ ಕಾಡುವ ಆತಂಕ! ನಿಮಗೂ ಹೀಗಾಗ್ತಿದೆಯೇ?

ಎರಡನೇ ಪತ್ನಿ ಬಗ್ಗೆ ದೂರುಗಳಿಲ್ಲ!
ರಂಜನಾ ಅವರು “ಉದಿತ್ ಪತ್ನಿ ದೀಪಾ ನಾರಾಯಣ್ ಹಾಗೂ ಮಗ ಆದಿತ್ಯ ನಾರಾಯಣ್ ಅವರ ಬಗ್ಗೆ ಯಾವುದೇ ಕಂಪ್ಲೇಂಟ್ ಇಲ್ಲ, ಜಲಸ್ ಇಲ್ಲ, ಅವರ ವಿರುದ್ಧ ಯಾವುದೇ ನೋವಿಲ್ಲ’ ಎಂದು ಹೇಳಿಕೆ ನೀಡಿದ್ದುದು ಭಾರೀ ಸುದ್ದಿಯಾಗಿತ್ತು. ಆದರೆ, ಈ ಎಲ್ಲ ಘಟನೆಗಳಿಂದ ಉದಿತ್ ಅವರ ಎರಡನೇ ಮದುವೆಯಲ್ಲೂ ಸಾಕಷ್ಟು ಕೋಲಾಹಲಗಳಾಗಿದ್ದವು. ಆಗಷ್ಟೇ 19 ವರ್ಷದ ಆದಿತ್ಯ ಮೇಲೆಯೂ ಇದು ಪರಿಣಾಮ ಬೀರಿತ್ತು. ಈ ಕೆಲವು ವರ್ಷಗಳು ಉದಿತ್ ಜೀವನದ ಕೆಟ್ಟ ಸಮಯವಾಗಿದ್ದಿರಬಹುದು. ಆದರೆ, ಕಾಲಕ್ಕೆ (Time) ಎಲ್ಲವನ್ನೂ ಮಾಯಿಸುವ ಶಕ್ತಿಯಿದೆ. ಇಂದು ಪತ್ನಿ ದೀಪಾ, ಮಗ ಆದಿತ್ಯ, ಸೊಸೆ ಶ್ವೇತಾ ಅಗರ್ವಾಲ್ ಹಾಗೂ ಮೊಮ್ಮದು ತ್ವಿಷಾ ಅವರೊಂದಿಗೆ ಸುಖಿ ಸಂಸಾರ ನಡೆಸುತ್ತಿದ್ದಾರೆ. ಇಂದಿಗೂ ಉದಿತ್ ಕಂಠಕ್ಕೆ ಕುಂದಿಲ್ಲ, ಜನಪ್ರಿಯತೆಗೂ ಬರವಿಲ್ಲ.

Follow Us:
Download App:
  • android
  • ios