1980ರಿಂದ ಇಲ್ಲಿಯವರೆಗೂ ಪತ್ರ ಬರೆಯುತ್ತಿದ್ದ ಸ್ನೇಹಿತೆಯರ ಮೊದಲ ಭೇಟಿ..
ಪತ್ರದಲ್ಲಿ ಮೂಡುವ ಅಕ್ಷರದಲ್ಲಿ ಭಾವನೆಗಳ ಭಾರ, ಮೊಬೈಲ್ ನಲ್ಲಿ ಟೈಪ್ ಮಾಡುವ ಅಕ್ಷರಕ್ಕಿಂತ ಹೆಚ್ಚಿರುತ್ತದೆ. ನಿಮ್ಮ ಆಪ್ತರು ಬರೆದ ಪತ್ರಗಳನ್ನು ಮತ್ತ್ಯಾವಾಗ್ಲೂ ಓದಿ ನೀವು ಖುಷಿಪಡಬಹುದು. ಪತ್ರದ ಮೂಲಕವೇ ಈಗ ಇಬ್ಬರು ಸ್ನೇಹಿತೆಯರು ಸುದ್ದಿಯಾಗಿದ್ದಾರೆ.
ಸ್ನೇಹಕ್ಕೆ ಸಾಮಾಜಿಕ ಜಾಲತಾಣ, ಫೋನ್ ಅವಶ್ಯಕತೆ ಇಲ್ಲ. ಪತ್ರದ ಮೂಲಕ ಕೂಡ ಒಬ್ಬರಿಗೊಬ್ಬರು ಸಂಪರ್ಕದಲ್ಲಿರಬಹುದು. ಹಿಂದೆ ಅಂಚೆ ಅಣ್ಣನೆ ನಮ್ಮೆಲ್ಲರ ಬಂಧುವಾಗಿದ್ದ. ಈಗಿನ ದಿನಗಳಲ್ಲಿ ಪತ್ರ ವಿನಿಮಯ ಮಾಡುವವರಿಲ್ಲ. ಒಬ್ಬರಿಂದ ಒಬ್ಬರಿಗೆ ಪತ್ರ ರವಾನೆಯಾಗಲು ಅನೇಕ ದಿನಗಳು ಬೇಕು. ಅಷ್ಟು ಕಾಯುವ ತಾಳ್ಮೆ ಈಗ ಜನರಿಗಿಲ್ಲ. ತಕ್ಷಣ ಫೋನ್ ಅಥವಾ ಸಂದೇಶದ ಮೂಲಕ ಮಾಹಿತಿಯನ್ನು ರವಾನೆ ಮಾಡಲಾಗುತ್ತದೆ. ಫೋನ್, ಸಾಮಾಜಿಕ ಜಾಲತಾಣದಿಂದ ಜೀವನ ಸುಖಮವಾಗಿದೆ ನಿಜ. ಆದ್ರೆ ಪತ್ರಗಳ ಮೂಲಕ ಭಾವನೆ ಹಂಚಿಕೊಳ್ಳುವುದ್ರಲ್ಲೂ ವಿಶೇಷ ಖುಷಿಯಿದೆ. ಎಷ್ಟೋ ವರ್ಷಗಳ ಕಾಲ ಮುಖ ನೋಡಿಕೊಳ್ಳದೆ, ಪರಸ್ಪರ ಮಾತನಾಡದೆ, ಬರೀ ಅಕ್ಷರಗಳಲ್ಲಿ ಭಾವನೆ ಹಂಚಿಕೊಂಡ್ರೂ ಬಲವಾಗಿರಬಹುದಾದ ಸಂಬಂಧವೆಂದ್ರೆ ಅದು ಸ್ನೇಹ ಮಾತ್ರ. ಅದಕ್ಕೆ ಈ ಇಬ್ಬರು ಸ್ನೇಹಿತೆಯರು ಸಾಕ್ಷ್ಯ. ಪತ್ರ, ಸ್ನೇಹ ಹಾಗೂ ಭೇಟಿ ವಿಷ್ಯದಲ್ಲಿ ಈಗ ಗೆಳತಿಯರಿಬ್ಬರು ಸುದ್ದಿಯಲ್ಲಿದ್ದಾರೆ.
1980ರ ನಂತ್ರ ಮೊದಲ ಬಾರಿ ಮುಖಾಮುಖಿಯಾದ ಸ್ನೇಹಿತೆ (Friend) ಯರು: 1980ರಿಂದ ಇವರಿಬ್ಬರ ಮುಖಾಮುಖಿ ಭೇಟಿಯೇ ಆಗಿರಲಿಲ್ಲ. ಕೊನೆಗೂ ಈ ವರ್ಷ ಇಬ್ಬರು ಭೇಟಿಯಾಗಿದ್ದಾರೆ. ಪೆನ್ಸಿಲ್ವೇನಿಯಾ (Pennsylvania) ದಲ್ಲಿ ಇಷ್ಟು ವರ್ಷಗಳ ನಂತ್ರ ಸ್ನೇಹಿತೆಯರ ಮಿಲನವಾಗಿದೆ. ಬಾಲ್ಯ ಸ್ನೇಹಿತೆಯರಾಗಿದ್ದ ಇವರಿಬ್ಬರಿಗೆ ಪರಸ್ಪರರ ಎಲ್ಲ ಮಾಹಿತಿ ತಿಳಿದಿದೆ. ಒಬ್ಬರನ್ನೊಬ್ಬರು ಸಾಕಷ್ಟು ಅರಿತಿದ್ದಾರೆ. ಅದಕ್ಕೆ ಕಾರಣವಾಗಿದ್ದು ಪತ್ರ (Letter) . 1980ರಿಂದ ಇವರು ಈವರೆಗೂ ಪತ್ರದ ಮೂಲಕವೇ ಮಾತನಾಡ್ತಿದ್ದರು ಎಂಬುದು ವಿಶೇಷ.
ZODIAC SIGN: ಇವರನ್ನ ಯಾಮಾರಿಸೋಕಾಗಲ್ಲ! ನಿಮ್ಮಲ್ಲಿ ನಿಜವಾಗ್ಲೂ ಪ್ರೀತಿ ಇದ್ಯಾ ಇಲ್ವಾ ಅಂತ ಗ್ರಹಿಸಿಬಿಡ್ತಾರೆ!
ಯಾರು ಈ ಸ್ನೇಹಿತೆಯರು?: ಒಬ್ಬ ಗೆಳತಿ ಹೆಸರು ಕ್ರಿಸ್ಟಲ್ ಅಲ್ಸ್ಟನ್. ಅವರು ಕ್ಯಾಲಿಫೋರ್ನಿಯಾದ ಒಂಟಾರಿಯೊ ನಿವಾಸಿ. ಇನ್ನೊಬ್ಬರ ಹೆಸರು ಹೈಲಿ ಬ್ರಿಗ್ಸ್. ಅವರು ಪೆನ್ಸಿಲ್ವೇನಿಯಾದ ಡೌಗ್ಲಾಸ್ವಿಲ್ ನಿವಾಸಿ. ಇಬ್ಬರು ಪ್ರಾಥಮಿಕ ಶಾಲೆಯಲ್ಲಿರುವಾಗ ಮೊದಲ ಬಾರಿ ಭೇಟಿಯಾಗಿದ್ದರು. ನಾಲ್ಕು ದಶಕಗಳ ಹಿಂದೆ ಶಾಲೆ ಪ್ರಾಜೆಕ್ಟ್ ಒಂದರಲ್ಲಿ ಇಬ್ಬರು ಸಿಕ್ಕಿದ್ದರು. ಮೊದಲ ಭೇಟಿಯಲ್ಲೇ ಇಬ್ಬರು ಒಳ್ಳೆ ಸ್ನೇಹಿತೆಯರಾದ್ರು. ೧೦ ವರ್ಷದ ಮಕ್ಕಳಿಗೆ ಪತ್ರ ಬರೆಯುವಂತೆ ಶಾಲೆಯ ಪ್ರಾಜೆಕ್ಟ್ ಕ್ಲಾಸ್ ನಲ್ಲಿ ಹೇಳಲಾಗಿತ್ತು. ಆಗ ಇಬ್ಬರು ಪರಸ್ಪರರಿಗೆ ಪತ್ರ ಬರೆದಿದ್ದರು. ಅಲ್ಲಿಂದ ಇವರ ಪತ್ರ ವ್ಯವಹಾರ ಶುರುವಾಯ್ತು.
ಭೇಟಿ ನಂತ್ರ ಸ್ನೇಹಿತೆಯರು ಹೇಳಿದ್ದೇನು? : ಅಲ್ಲಿಂದ ಈವರೆಗೂ ಇಬ್ಬರು ಪತ್ರದಲ್ಲಿ ಮಾತನಾಡ್ತಿದ್ದರು. ಪತ್ರದಲ್ಲಿ ನಾವು ತಿಳಿದುಕೊಂಡಿದ್ದಕ್ಕಿಂತ ಇಬ್ಬರೂ ಸಂಪೂರ್ಣ ಭಿನ್ನವಾಗಿದ್ದೇವೆ. ನಮ್ಮ ಲೈಫ್ಸ್ಟೈಲ್ ನಲ್ಲಿ ಬದಲಾವಣೆ ಇದೆ. ಆದ್ರೆ ಇಬ್ಬರೂ ಆಪ್ತ ಸ್ನೇಹಿತೆಯರು. ನಾವಿಬ್ಬರು ಈಗ ಒಟ್ಟಿಗೆ ಕುಳಿತಿದ್ದೇವೆ ಎಂಬುದನ್ನು ಬಿಟ್ಟರೆ ಈ ಭೇಟಿಯಲ್ಲಿ ಮತ್ತೇನು ವಿಶೇಷತೆ ಇಲ್ಲ. ಯಾಕೆಂದ್ರೆ ನಮ್ಮಿಬ್ಬರ ಬಗ್ಗೆ ನಮಗೆ ಗೊತ್ತು ಎನ್ನುತ್ತಾರೆ ಸ್ನೇಹಿತೆಯರು.
ರಾಮ - ಸೀತೆಯಂಥಹ ಪತಿ- ಪತ್ನಿ ನೀವಾಗಲು ಈ ವಿಷಯ ಅರ್ಥ ಮಾಡ್ಕೊಳಿ
ಮೊದಲ ಭೇಟಿ ಪ್ಲಾನ್ ಹಾಳಾಗಿತ್ತು: ತಮ್ಮ ಐವತ್ತನೇ ಹುಟ್ಟುಹಬ್ಬದಲ್ಲಿ 2020ರಲ್ಲಿ ಇಬ್ಬರೂ ಭೇಟಿಯಾಗುವ ಪ್ಲಾನ್ ಮಾಡಿದ್ದರಂತೆ. ಆದ್ರೆ ಕೊರೊನಾದಿಂದಾಗಿ ಅವರ ಪ್ಲಾನ್ ಹಾಳಾಗಿತ್ತಂತೆ. ಈಗ ಇಬ್ಬರು ಭೇಟಿಯಾಗಿದ್ದಾರೆ. ಆಲ್ಸ್ಟನ್ ಮೊದಲ ಬಾರಿಗೆ ಪೆನ್ಸಿಲ್ವೇನಿಯಾಕ್ಕೆ ಬಂದಿದ್ದಾರೆ. ಅಲ್ಲಿ ತಮ್ಮ ಸ್ನೇಹಿತೆ ಭೇಟಿಯಾಗಿದ್ದಾರೆ. ಇಬ್ಬರು ಒಟ್ಟಿಗೆ ಕುಳಿತು ಹರಟೆ ಹೊಡೆದಿದ್ದಾರೆ. ಇಟಾಲಿಯನ್ ಭೋಜನ ಮಾಡಿದ್ದಾರೆ. ನಾವು ಇನ್ಮುಂದೆಯೂ ಸಂಪರ್ಕದಲ್ಲಿರುತ್ತೇವೆ ಎಂದು ಆಲ್ಸ್ಟನ್ ಹೇಳಿದ್ದಾರೆ. ಇಷ್ಟು ವರ್ಷಗಳ ಕಾಲ ಪತ್ರದ ಮೂಲಕ ಮಾತನಾಡ್ತಿದ್ದ ಸ್ನೇಹಿತೆಯರು ಇನ್ಮುಂದೆ ಸಾಮಾಜಿಕ ಜಾಲತಾಣ ಬಳಸಲು ನಿರ್ಧರಿಸಿದ್ದಾರೆ. ಇದು ಬಹಳ ಸುಲಭ ಮಾರ್ಗ. ಹಾಗೆಯೇ ಒಬ್ಬರ ಮುಖವನ್ನು, ಫೋಟೋವನ್ನು ಇನ್ನೊಬ್ಬರು ನೋಡಬಹುದು ಎನ್ನುವ ಕಾರಣಕ್ಕೆ ಸಾಮಾಜಿಕ ಜಾಲತಾಣ ಬಳಸಲು ಇವರು ನಿರ್ಧರಿಸಿದ್ದಾರೆ.