Zodiac Sign: ಇವರನ್ನ ಯಾಮಾರಿಸೋಕಾಗಲ್ಲ! ನಿಮ್ಮಲ್ಲಿ ನಿಜವಾಗ್ಲೂ ಪ್ರೀತಿ ಇದ್ಯಾ ಇಲ್ವಾ ಅಂತ ಗ್ರಹಿಸಿಬಿಡ್ತಾರೆ!
ಸಂಗಾತಿಯ ಭಾವನೆಗಳು, ಅವರ ಮನಸ್ಥಿತಿಯ ಕುರಿತು ಹಲವರಿಗೆ ಸ್ವಲ್ಪವೂ ಕಾಳಜಿಯಿರುವುದಿಲ್ಲ. ಅದರ ಬಗ್ಗೆ ಅವರು ಯೋಚನೆಯನ್ನೂ ಮಾಡುವುದಿಲ್ಲ. ಆದರೆ, ಈ ಐದು ರಾಶಿಗಳ ಜನ ಮಾತ್ರ ತಮ್ಮ ಸಂಗಾತಿಯ ಮನದಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಚೆನ್ನಾಗಿ ಅರಿಯುತ್ತಾರೆ. ಏಕಮುಖ ಪ್ರೀತಿಯನ್ನು ಗ್ರಹಿಸುತ್ತಾರೆ.
ಕೆಲವು ಜನರು ತಮ್ಮ ಪ್ರೀತಿಪಾತ್ರರ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದೇವೆ ಎಂದುಕೊಳ್ಳುತ್ತಾರೆ. ತಮ್ಮವರಿಗಾಗಿ ಎಲ್ಲ ವಸ್ತುಗಳನ್ನೂ ಖರೀದಿ ಮಾಡುತ್ತಾರೆ. ಅವರು ಓಡಾಡಲು, ಉಂಡು-ತೊಡಲು ಯಾವ ಕೊರತೆಯೂ ಆಗದಂತೆ ನೋಡಿಕೊಳ್ಳುತ್ತಾರೆ. ಆದರೆ, ಅವರು ಹೇಳಿದಂತೆ ಇವರು ಕೇಳಲೇಬೇಕು, ಅವರ ನಿರ್ದೇಶನದಂತೆ ಇವರ ಜೀವನ ಇರಬೇಕು. ತಾವು ಬಯಸಿದಂತೆ ಮತ್ತೊಬ್ಬರ ಜೀವನದ ಮೇಲೆ ಅಧಿಕಾರ ಹೊಂದುವುದನ್ನೇ ಪ್ರೀತಿ ಎಂದುಕೊಳ್ಳುತ್ತಾರೆ. ತಮ್ಮ ಸಂಗಾತಿಯ ಮನದಲ್ಲೇನಿದೆ? ಅವರಿಗೆ ಏನನಿಸುತ್ತಿದೆ? ತಮ್ಮನ್ನು ನಿಜಕ್ಕೂ ಪ್ರೀತಿಸುತ್ತಿದ್ದಾರಾ? ಇವೆಲ್ಲ ಮುಖ್ಯವಾಗುವುದಿಲ್ಲ. ಅದರ ಬಗ್ಗೆ ಗಮನವನ್ನೂ ನೀಡುವುದಿಲ್ಲ. ಆದರೆ, ಕೆಲವು ಜನ ಹಾಗಲ್ಲ. ಅವರು ತಮ್ಮ ಸಂಗಾತಿಯ ಮನದಲ್ಲಿ ಮೂಡುವ ಪ್ರೀತಿಯ ಭಾವನೆಗಳನ್ನು ಸೂಕ್ಷ್ಮವಾಗಿ ಗ್ರಹಿಸಬಲ್ಲರು. ಅವರ ಮನಸ್ಸಿನಲ್ಲಿ ತಮ್ಮ ಬಗ್ಗೆ ಪ್ರೀತಿ ಇದೆಯೋ ಇಲ್ಲವೋ ಎನ್ನುವುದನ್ನು ಅರಿಯಬಲ್ಲರು. ಪ್ರಮುಖವಾಗಿ 5 ರಾಶಿಗಳ ಜನರಲ್ಲಿ ಈ ಗುಣ ಧಾರಾಳವಾಗಿ ಕಂಡುಬರುತ್ತದೆ. ಪ್ರೀತಿಗೆ ಸಂಬಂಧಿಸಿ ಇವರನ್ನು ಮೋಸಗೊಳಿಸಲು ಅಥವಾ ಯಾಮಾರಿಸಲು ಸಾಧ್ಯವಿಲ್ಲ. ಪ್ರೀತಿಯ ವಿಚಾರದಲ್ಲಿ ಇವರೊಂಥರ ಲೈ ಡಿಟೆಕ್ಟರ್ ಇದ್ದಂತೆ!
• ಮೇಷ (Aries)
ಪ್ರೀತಿಗೆ (Love) ಸಂಬಂಧಿಸಿ ಇವರು ಸದಾ ಮುಂದಿರುತ್ತಾರೆ. ಅತ್ಯುತ್ಸಾಹ ತೋರುತ್ತಾರೆ. ಆದರೆ, ಇವರನ್ನು ಯಾಮಾರಿಸಬಹುದು ಎಂದುಕೊಳ್ಳಬೇಡಿ. ಪ್ರೀತಿಯಲ್ಲಿ ಇವರು ಮುಗ್ಧರಲ್ಲ. ಬಯಕೆಗಳಲ್ಲಿ ಸಾಕಷ್ಟು ತೀವ್ರತೆ ಹೊಂದಿರುವ ಇವರು, ತಮ್ಮ ಪ್ರೀತಿಪಾತ್ರರನ್ನು ಮೇಳೈಸಬಲ್ಲರು. ಆದರೆ, ನಿಮ್ಮಲ್ಲಿ ಭಾವನೆಗಳ (Feelings) ಕೊರತೆ ಕಂಡುಬಂದರೆ ತಕ್ಷಣ ಗ್ರಹಿಸುತ್ತಾರೆ. ಒಂದೊಮ್ಮೆ ನೀವು ಮೇಷ ರಾಶಿಯವರ ಸಹವಾಸ (Relation) ಮಾಡಿದ್ದರೆ ಪಾರದರ್ಶಕತೆ (Transparency) ಬೆಳೆಸಿಕೊಳ್ಳಿ. ನೇರವಾದ ನಡೆನುಡಿ ಅಭ್ಯಾಸ ಮಾಡಿಕೊಳ್ಳಿ. ನಿಮಗೇನು ಅನಿಸುತ್ತದೆಯೋ ನೇರವಾಗಿ ಹೇಳಿಕೊಳ್ಳಿ. ಈ ಗುಣವನ್ನು ಇವರು ಗೌರವಿಸುತ್ತಾರೆ.
ಮನೆಯಲ್ಲಿ ಮರೆತೂ ಈ ಹೂವುಗಳನ್ನು ಇಡಬೇಡಿ..!
• ಕರ್ಕಾಟಕ (Cancer)
ಸಂಬಂಧದಲ್ಲಿ ಉಂಟಾಗುವ ಚಿಕ್ಕಪುಟ್ಟ ಏರಿಳಿತವನ್ನೂ ಅತ್ಯಂತ ಸೂಕ್ಷ್ಮವಾಗಿ ಅನುಭವಿಸುವ ರಾಶಿ ಕರ್ಕಾಟಕ. ಭಾವನಾತ್ಮಕ (Emotions) ವಿಚಾರದಲ್ಲಿ ಇವರನ್ನು ಹಿಂದೆ ಹಾಕಲು ಯಾರಿಗೂ ಸಾಧ್ಯವಿಲ್ಲ. ಇವರಲ್ಲಿ ಅಂತಃದೃಷ್ಟಿಯಿದ್ದು, ಇತರರ ಭಾವನೆಗಳನ್ನು ಚೆನ್ನಾಗಿ ಅರಿಯುತ್ತಾರೆ. ಇವರ ಬಳಿ ಸುಳ್ಳುಸುಳ್ಳೇ ಪ್ರೀತಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ಅರ್ಥಪೂರ್ಣ (Valuable) ಸಂಬಂಧಕ್ಕೆ ಬೆಲೆ ನೀಡುತ್ತಾರೆ. ಕರ್ಕಾಟಕ ರಾಶಿಯವರು ಭಾವನೆಗಳ ಸುರಕ್ಷತೆಗೆ ಆದ್ಯತೆ ನೀಡುವುದರಿಂದ ಇವರ ಸಹವಾಸ ಮಾಡುವವರು ಪ್ರಾಮಾಣಿಕವಾಗಿರಬೇಕು. ನಿಮಗೇನು ಅನಿಸುತ್ತದೆಯೋ ಅದನ್ನು ಪ್ರಾಮಾಣಿಕವಾಗಿ (Prompt) ಹೇಳಿಕೊಳ್ಳಿ.
• ತುಲಾ (Libra)
ಸಂಬಂಧದಲ್ಲಿ ಸಮತೋಲನ ಬಯಸುವ ತುಲಾ ರಾಶಿಯ ಜನ ಸೌಹಾರ್ದತೆ (Harmony) ಹಾಗೂ ನ್ಯಾಯಯುತ ವರ್ತನೆಗೆ ಹೆಸರು. ಏಕಮುಖ ಸಂಬಂಧವನ್ನು, ಸಂಗಾತಿಗೆ (Partner) ತಮ್ಮ ಕುರಿತು ಯಾವ ಭಾವನೆಯಿದೆ ಎನ್ನುವುದನ್ನು ಅತ್ಯಂತ ಸುಲಭವಾಗಿ ಗ್ರಹಿಸುತ್ತಾರೆ. ತಮ್ಮ ಆಂತರ್ಯದ ತಕ್ಕಡಿಯಲ್ಲಿ ತೂಗಿ ನಿರ್ಧರಿಸುತ್ತಾರೆ. ತುಲಾ ರಾಶಿಯವರೊಂದಿಗೆ ಸಂಬಂಧ ಹೊಂದಿದ್ದರೆ ಇವರೊಂದಿಗೆ ಸಮತೋಲನ (Balance) ಹಾಗೂ ಮುಕ್ತತೆ ಕಾಪಾಡಿಕೊಳ್ಳಿ.
• ವೃಷಭ (Taurus)
ಬದ್ಧತೆ (Commitment), ಸ್ಥಿರತೆಗೆ ಹೆಸರಾಗಿರುವ ವೃಷಭ ರಾಶಿಯ ಜನ ಹಠಮಾರಿಯಾಗಿದ್ದರೂ ಸಂಬಂಧದ ಮಟ್ಟಿಗೆ ಸೂಕ್ಷ್ಮತೆ ಹೊಂದಿರುತ್ತಾರೆ. ತಮ್ಮದು ಏಕಮುಖ ಪ್ರೀತಿಯೇ ಅಲ್ಲವೇ ಎನ್ನುವುದನ್ನು ಬಹುಬೇಗ ಅರಿತುಕೊಳ್ಳುತ್ತಾರೆ. ಸಂಗಾತಿಯ ಮನದಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಓದಿಕೊಳ್ಳಬಲ್ಲರು. ಹೀಗಾಗಿ, ಇವರ ಇಂಟ್ಯೂಷನ್ (Intuition) ಅನ್ನು ನಿರ್ಲಕ್ಷಿಸಬಾರದು. ಸಂಬಂಧದ ಬದ್ಧತೆಗೆ ಇವರ ಸಂಗಾತಿ ಇವರಷ್ಟೇ ಬೆಲೆ ನೀಡಬೇಕು. ಸಂಬಂಧವನ್ನು ಪೋಷಿಸಲು ಆದ್ಯತೆ ನೀಡಬೇಕು.
ಈ ರಾಶಿಯವರ ಮೇಲೆ ಕುಬೇರನ ಕೃಪೆ,ಹಣದ ಹೊಳೆ ಗ್ಯಾರಂಟಿ
• ಧನು (Sagittarius)
ಧನು ರಾಶಿಯ ಜನ ತಮ್ಮದೇ ಹಲವಾರು ಕಾರ್ಯಗಳಲ್ಲಿ ಬ್ಯುಸಿಯಾಗಿರುತ್ತಾರೆ, ಸಂಬಂಧಗಳಿಗೆ ಇವರಿಗೆ ಸಮಯವಿಲ್ಲ ಎಂದುಕೊಳ್ಳುವಂತಿಲ್ಲ. ಇವರು ಅಂತರಂಗದ (Heart) ಮಾತುಗಳನ್ನು ಸ್ಪಷ್ಟವಾಗಿ ಕೇಳಿಸಿಕೊಳ್ಳಬಲ್ಲರು. ಇವರು ನೈಸರ್ಗಿಕವಾಗಿ ಸತ್ಯವನ್ನೇ (Truth) ನುಡಿಯುವ ಪೈಕಿ. ಸಂಗಾತಿ ತಮ್ಮ ಬಗ್ಗೆ ಯಾವ ಭಾವನೆಯಿಂದ ಕೂಡಿದ್ದಾರೆ ಎನ್ನುವುದು ತಕ್ಷಣ ಅರಿತುಕೊಳ್ಳುತ್ತಾರೆ. ಇವರ ಸಹವಾಸ ಮಾಡಿದ್ದರೆ ನೈಜವಾಗಿದ್ದುಬಿಡಿ. ನೈಜತೆಗೆ (Real) ಇವರು ಬೆಲೆ ನೀಡುತ್ತಾರೆ.