Asianet Suvarna News Asianet Suvarna News

ದಕ್ಷಿಣ ಭಾರತದ ನಟಿ ಪ್ರೀತಿಯಲ್ಲಿ ಬಿದ್ದ ಟ್ರಕ್ ಡ್ರೈವರ್.. ಕಿಡ್ನಿ ನೀಡಲೂ ಸಿದ್ಧ!

ಪ್ರೀತಿಯಲ್ಲಿರುವವರು ಜಗತ್ತು ಮರೆಯುತ್ತಾರೆ. ಅದು ಒನ್ ಸೈಡ್ ಲವ್ ಆಗಿರಲಿ ಇಲ್ಲ ಟೂ ಸೈಡ್ ಆಗಿರಲಿ. ಈತ ಕೂಡ ಅದೇ ಕೆಟಗರಿಗೆ ಸೇರ್ತಾನೆ. ಪ್ರೀತಿಯಲ್ಲಿ ಕೆಲಸ ಮರೆತ ಟ್ರಕ್ ಡ್ರೈವರ್ ಗೆ ನಟಿಯೇ ಸರ್ವಸ್ವವಾಗಿದ್ದಾಳೆ.
 

Trending News Sanchita Bashu Truck Driver Loves Actress Sanchita Bashu roo
Author
First Published Oct 21, 2023, 3:24 PM IST

ಕಲಾವಿದರೆಂದ್ಮೇಲೆ ಅಭಿಮಾನಿಗಳಿರಬೇಕು. ಈ ಅಭಿಮಾನಿಗಳ ಅಭಿಮಾನ ವಿಭಿನ್ನವಾಗಿರುತ್ತದೆ. ಕೆಲ ಅಭಿಮಾನಿಗಳು ತಮ್ಮ ನೆಚ್ಚಿನ ಕಲಾವಿದರನ್ನು ದೇವರಂತೆ ಪೂಜಿಸ್ತಾರೆ. ಇನ್ನು ಕೆಲ ಅಭಿಮಾನಿಗಳು ತಮ್ಮ ನೆಚ್ಚಿನ ಕಲಾವಿದರಿಗಾಗಿ ಏನೂ ಮಾಡಲು ಸಿದ್ಧವಿರ್ತಾರೆ. ಅವರ ಸಿನಿಮಾ, ಕಾರ್ಯಕ್ರಮ, ರೀಲ್ಸ್ ಗಳನ್ನು ಬಿಡದೆ ನೋಡ್ತಾರೆ. ಅದಕ್ಕೆ ಕಮೆಂಟ್ ಮಾಡುವುದಲ್ಲದೆ, ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಹಾರಗಳನ್ನು ಹಾಕಿ, ಅಭಿಷೇಕ ಮಾಡುವವರಿದ್ದಾರೆ. ಮತ್ತೆ ಕೆಲ ಅಭಿಮಾನಿಗಳು  ತಮ್ಮ ನೆಚ್ಚಿನ ಕಲಾವಿದರ ಪ್ರೀತಿಯಲ್ಲಿ ಬೀಳ್ತಾರೆ. ಅವರನ್ನು ಪ್ರೀತಿ ಮಾಡಲು, ಮದುವೆಯಾಗಲು ಸಾಧ್ಯವಿಲ್ಲ ಎಂಬ ಸತ್ಯಗೊತ್ತಿದ್ದರೂ ಅದನ್ನು ಒಪ್ಪಿಕೊಳ್ಳೋದಿಲ್ಲ. ಹುಚ್ಚು ಪ್ರೀತಿಯಲ್ಲಿ ಜೀವ ಕಳೆದುಕೊಳ್ಳುವವರಿದ್ದಾರೆ. ಕಲಾವಿದರ ಹಿಂದೆ ಬಿದ್ದು ಅವರಿಗೆನ ಹಿಂಸೆ ನೀಡುವವರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಅಭಿಮಾನಿಗಳ ವಿಡಿಯೋ ವೈರಲ್ ಆಗ್ತಿರುತ್ತದೆ. ಈಗ ಒಂದು ಟ್ರಕ್ ಡ್ರೈವರ್ ಪ್ರೀತಿ ಸುದ್ದಿಯಲ್ಲಿದೆ. ನಟಿಯೊಬ್ಬಳನ್ನು ಪ್ರೀತಿ ಮಾಡ್ತಿರುವ ಟ್ರಕ್ ಡ್ರೈವರ್, ಪ್ರೀತಿಗಾಗಿ ಕಿಡ್ನಿ ನೀಡಲು ಸಿದ್ಧವಿರೋದಾಗಿ ಹೇಳಿದ್ದಾನೆ. ಆತನ ಕಥೆ ಇಲ್ಲಿದೆ.

ನಟಿ ಪ್ರೀತಿ (Love) ಯಲ್ಲಿ ಬಿದ್ದ ಟ್ರಕ್ (Truck) ಡ್ರೈವರ್: ನಟಿ ಸಂಚಿತಾ ಬಸು ಹಾಗೂ ಟ್ರಕ್ ಡ್ರೈವರ್ ಈಗ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಟ್ರಕ್ ಡ್ರೈವರ್ ಪ್ರೀತಿ ಚರ್ಚೆಯಾಗ್ತಿದೆ. ನಟಿ ಸಂಚಿತಾ ಬಸು, ಬಿಹಾರದ ಭಾಗಲ್ಪುರ್ ನಿವಾಸಿ. ಸಂಚಿತಾ ಬಸು (Sanchiya Basu) ರೀಲ್ಸ್ ಮೂಲಕ ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾರೆ. ರೀಲ್ಸ್ ನಲ್ಲಿ ಸಕ್ರಿಯವಾಗಿರುವ ಸಂಚಿತಾ,  ಸಾಮಾಜಿಕ ಜಾಲತಾಣಗಳಲ್ಲಿ  ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಸಂಚಿಯಾ ಇಷ್ಟಪಡುವ ಅಭಿಮಾನಿಗಳ ಸಂಖ್ಯೆ ಸಾಕಷ್ಟಿದೆ. ಸಂಚಿತಾ, ಸೌತ್ ಚಿತ್ರ ‘ಫಸ್ಟ್ ಡೇ ಫಸ್ಟ್ ಶೋ’ನಲ್ಲಿ ನಾಯಕಿಯಾಗಿ ನಟಿಸಿದ್ದರು. ಸಂಚಿತಾ ಬಸು ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಾರೆ. ಅವರು ಭಾಗಲ್ಪುರದ ಮೌಂಟ್ ಕಾರ್ಮೆಲ್ ಶಾಲೆಯಲ್ಲಿ ಓದಿದ್ದರು.

ಶಿಲ್ಪಾ ಶೆಟ್ಟಿ ಪತಿ ಸಪರೇಟ್‌ ಆಗಿದ್ದು ಯಾಕೆ? ವಿಡಿಯೋ ಮೂಲಕ ಮೌನ ಮುರಿದ ರಾಜ್‌ ಕುಂದ್ರಾ!

ಟ್ರಕ್ ಡ್ರೈವರ್ ಒಬ್ಬರು ಸಂಚಿತಾ ಬಸು ಅವರನ್ನು ಪ್ರೀತಿಸುತ್ತಿದ್ದಾನೆ. ನಾನು ಸಂಚಿತಾರನ್ನು ಪ್ರೀತಿಸುತ್ತೇನೆ. ಅವರಿಲ್ಲದೆ ನಾನು ಬದುಕಲು ಸಾಧ್ಯವಿಲ್ಲ ಎಂದು ಅವನು ಹೇಳಿದ್ದಾನೆ. ಬಾಬಿ ಕುಮಾರ್ ಮಿಶ್ರಾ ಎಂಬ ಫೇಸ್‌ಬುಕ್ ಬಳಕೆದಾರ ಯುವಕನ ವೀಡಿಯೊವನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗುತ್ತಿದ್ದಿದೆ. ನಟಿ ಇಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ಟ್ರಕ್ ಡ್ರೈವರ್ ಹೇಳಿದ್ದಾನೆ. 

ಸಲಿಂಗ ವಿವಾಹಕ್ಕೆ ಮಾನ್ಯತೆ ಇಲ್ಲ ಎಂದ ತೀರ್ಪು ಕೇಳಿ ಎದೆ ಒಡೆದೋಯ್ತು; ನಟಿ ಲಕ್ಷ್ಮಿ ಮಂಚು ಹೇಳಿದ್ದೇನು?

ರೀಲ್ಸ್ ನೋಡ್ತಾ ಲವ್ ಆಯ್ತು : ಟ್ರಕ್ ಡ್ರೈವರ್ ಪ್ರತಿದಿನ ನಟಿಯ ರೀಲ್ ನೋಡುತ್ತಿದ್ದನಂತೆ. ರೀಲ್ಸ್ ನೋಡ್ತಾ ನೋಡ್ತಾ ಸಂಚಿತಾ ಪ್ರೀತಿಗೆ ಬಿದ್ದಿದ್ದಾನೆ. ಅವನು ರೀಲ್ ನೋಡುತ್ತಿದ್ದರಿಂದ ಕೆಲಸ ಮಾಡಲು ಸಾಧ್ಯವಾಗಲಿಲ್ಲ ಎಂದು ವಿಡಿಯೋದಲ್ಲಿ ಟ್ರಕ್ ಡ್ರೈವರ್ ಹೇಳಿದ್ದಾನೆ. ಸಂಚಿತಾಳನ್ನು ನಾನು ನೋಡಿಲ್ಲ. ಆದ್ರೆ  ಅವರನ್ನು ಪ್ರೀತಿಸುತ್ತಿದ್ದೇನೆ. ಸಂಚಿತಾ ಪ್ರೀತಿಗಾಗಿ ನಾನು ಏನು ಮಾಡಲೂ ಸಿದ್ಧ. ತನ್ನ ಎರಡೂ ಕಿಡ್ನಿಗಳನ್ನು ದಾನ ಮಾಡಲು ರೆಡಿಯಿದ್ದೇನೆಂದು ಆತ ಹೇಳಿದ್ದಾನೆ.

ತನ್ನ ಪ್ರೀತಿ ಏಕಪಕ್ಷೀಯವಾಗಿದೆ ಎಂಬುದನ್ನು ಟ್ರಕ್ ಡ್ರೈವರ್ ಒಪ್ಪಿಕೊಂಡಿದ್ದಾನೆ. ಸಂಚಿತಾಳನ್ನು ತುಂಬಾ ಪ್ರೀತಿಸುತ್ತೇನೆ. ಅವಳಿಲ್ಲದೆ ಬದುಕುವುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಎಂದು ಚಾಲಕ ಹೇಳಿದ್ದಾನೆ. ಚಾಲಕ, ಸಂಚಿತಾ ಅವರ ಅನೇಕ ವಿಡಿಯೋಗಳನ್ನು ತನ್ನ ಫೋನ್‌ನಲ್ಲಿ ಸೇವ್ ಮಾಡಿಕೊಂಡಿದ್ದಾನೆ. ಅದನ್ನು ಆಗಾಗ ನೋಡ್ತಿರುತ್ತಾನೆ.  ತನ್ನ ಎರಡೂ ಕಿಡ್ನಿಗಳನ್ನೂ ದಾನ ಮಾಡಲು ಇಚ್ಛಿಸಿರುವುದಾಗಿ ಚಾಲಕ ಹೇಳಿದ್ದಾನೆ. ಟ್ರಕ್ ಚಾಲಕನ ವಿಶಿಷ್ಟ ಪ್ರೇಮಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಲ್ಲರೂ ಚಾಲಕನ ಪ್ರೀತಿ ಬಗ್ಗೆ ಕಮೆಂಟ್ ಮಾಡ್ತಿದ್ದಾರೆ. 
 

Follow Us:
Download App:
  • android
  • ios