Transgender Problem: ಮಂಗಳಮುಖಿಯರ ನಿತ್ಯದ ನೋವಿದು, ಯಾರು ಕೇಳ್ತಾರೆ ಅವರ ಗೋಳು?

ಮಂಗಳಮುಖಿ ಎದುರು ಬಂದಾಗ ಅದೆಷ್ಟೇ ಸಹಜವಾಗಿ ವರ್ತಿಸುವ ಪ್ರಯತ್ನ ನಡೆಸಿದ್ರೂ ಎಲ್ಲೋ ಒಂದು ಕುತೂಹಲ, ಭಯ ನಮ್ಮನ್ನು ಕಾಡುತ್ತದೆ. ಅವರನ್ನು ಈಗ್ಲೂ ನಮ್ಮ ಸಮಾಜ ಒಪ್ಪಿಕೊಳ್ಳುವ ಮನಸ್ಸು ಮಾಡ್ತಿಲ್ಲ. ಹಾಗಾಗಿಯೇ ನಿತ್ಯ ಹೋರಾಟದ ಜೀವನ ಅವರದ್ದಾಗಿದೆ.
 

transgenders routine  lifestyle  issues that can not be resolved

ತೃತೀಯ ಲಿಂಗಿಗಳು, ಚಕ್ಕಾ, ಹಿಜ್ರಾ ಎಂದು ಮಂಗಳಮುಖಿಯರನ್ನು ಕರೆಯಲಾಗುತ್ತದೆ. ಮಂಗಳಮುಖಿಯರು ಕಣ್ಣಿಗೆ ಬಿದ್ದಾಗ ಅವರನ್ನು ನೋಡುವ ದೃಷ್ಟಿ ಸಾಮಾನ್ಯವಾಗಿ ಭಿನ್ನವಾಗಿರುತ್ತದೆ. ಕೆಲವರು ಅವರನ್ನು ಕುತೂಹಲದಿಂದ ನೋಡಿದ್ರೆ ಮತ್ತೆ ಕೆಲವರು ದಿಟ್ಟಿಸಿ ನೋಡ್ತಾರೆ. ಇನ್ನು ಕೆಲವರು ಅಸಹ್ಯದಿಂದ ನೋಡ್ತಾರೆ.  ಹೊಟ್ಟೆ ಪಾಡಿದಾಗಿ ಅಲ್ಲಲ್ಲಿ ಕೈಚಾಚುವ ಮಂಗಳಮುಖಿ (Transgenders) ಯನ್ನು ನಾವು ನೋಡಿರ್ತೇವೆ. ಅವ್ರ ಬಗ್ಗೆ ತಿಳಿಯುವ ಕುತೂಹಲ ನಮಗಿರುತ್ತದೆ. ಸಮಾಜ (Society) ದಿಂದ ಬಹಿಷ್ಕರಿಸಲ್ಪಟ್ಟ, ತಂದೆ – ತಾಯಿ ಕುಟುಂಬಸ್ಥರ ಪ್ರೀತಿಯಿಂದ ವಂಚನೆಗೊಳಗಾದ ಮಂಗಳಮುಖಿಯರು ನಿತ್ಯ ಎಷ್ಟೋ ಕಷ್ಟಗಳನ್ನು ಎದುರಿಸುತ್ತಾರೆ. 

ಮಂಗಳಮುಖಿಯರು ಪ್ರತಿ ನಿತ್ಯ ಅನುಭವಿಸುವ ಕಷ್ಟ :   
ಗುರುತಿನ ಪತ್ರವೇ ಸಿಗುವುದಿಲ್ಲ :
ಮಂಗಳಮುಖಿಯರು ಎಲ್ಲಾದರೂ ಕೆಲಸ ಮಾಡಬೇಕು ಎಂದಾದರೆ ಆಧಾರ ಕಾರ್ಡ್ (Aadhaar Card) ಅಥವಾ ಇನ್ಯಾವುದೋ ಗುರುತಿನ ಪತ್ರವನ್ನು ಕೇಳುತ್ತಾರೆ. ಇಂತಹ ಗುರುತಿನ ಪತ್ರದಲ್ಲಿ ಮಂಗಳಮುಖಿಯರ ಮೊದಲಿನ ಫೋಟೋ ಮತ್ತು ಹೆಸರು ಇರುವುದರಿಂದ ಆ ಗುರುತಿನ ಪತ್ರವನ್ನು ಎಲ್ಲೂ ಸ್ವೀಕರಿಸುವುದಿಲ್ಲ. “ನಮ್ಮ ಉಡುಗೆತೊಡುಗೆಯಲ್ಲಿ ಬದಲಾವಣೆಯಾಗುತ್ತದೆ, ನಮ್ಮ ಗುರುತು ಬದಲಾಗುತ್ತದೆ. ಈ ಕಾರಣದಿಂದಲೇ ನಮಗೆ ಎಲ್ಲೂ ಕೆಲಸ ಸಿಗುವುದಿಲ್ಲ” ಎನ್ನುತ್ತಾರೆ ಮಂಗಳಮುಖಿಯರು. ಇನ್ನು ಕೆಲವು ಹಿಜ್ರಾಗಳ ಮನೆಯವರೇ ಸ್ವತಃ ಅವರ ಗುರುತಿನ ಪತ್ರ, ಮಾರ್ಕ್ಸ್ ಕಾರ್ಡ್ ಮುಂತಾದವುಗಳನ್ನು ಹರಿದು ಹಾಕುತ್ತಾರೆ ಅಥವಾ ಸುಟ್ಟುಹಾಕುತ್ತಾರೆ. 

ಬಾತ್ ರೂಮ್ ಗಳಿಗೆ ಹೋಗುವಂತಿಲ್ಲ : ಬಾತ್ ರೂಮ್ ವಿಷ್ಯದಲ್ಲೂ ಇವರಿಗೆ ನ್ಯಾಯ ಸಿಗೋದಿಲ್ಲ. ಅಲ್ಲಿಯೂ ಬೇಧಭಾವ ಮಾಡಲಾಗುತ್ತದೆ. ಅನೇಕ ಮಂದಿ ಟ್ರಾನ್ಸ್ ಮೇಲ್ ಗಳು ಮುಟ್ಟಿನ ಅವಧಿಯಲ್ಲಿ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಸಮಯದಲ್ಲಿ ಅವರು ಪುರುಷರ ಬಾತ್ ರೂಮ್ ಅನ್ನು ಬಳಸಲು ಆಗುವುದಿಲ್ಲ. ಮಹಿಳೆಯರ ಬಾತ್ ರೂಮಿಗೂ ಪ್ರವೇಶ ಸಿಗುವುದಿಲ್ಲ. ಕೆಲವೊಮ್ಮೆ ದಿನವಿಡೀ ಅವರು ಮೂತ್ರ ವಿಸರ್ಜನೆ ಮಾಡದೆ ಇರ್ತಾರೆ. ಕೆಲಸದ ಮೇಲೆ ಹೊರಗೆ ಹೋಗುವ ಕೆಲವರು ಮಧ್ಯೆ ಮೂತ್ರವಿಸರ್ಜನೆಗೆ ಅರ್ಜೆಂಟ್ ಆಗದಿರಲಿ ಎನ್ನುವ ಕಾರಣಕ್ಕೆ ನೀರನ್ನು ಕುಡಿಯೋದಿಲ್ಲ. 

Women Health: ಕಫ ದೋಷ ಪಿರಿಯಡ್ಸ್ ಮೇಲೂ ಪರಿಣಾಮ ಬೀರುತ್ತಾ?

ಓದಿನಲ್ಲಿ ಬೇಧಭಾವ : ಟ್ರಾನ್ಸ್ ಜೆಂಡರ್ಸ್ ಗಳಿಗೆ ಓದುವ ಅವಕಾಶ ಕೂಡ ಕಡಿಮೆಯೇ ಇರುತ್ತದೆ. ಅನೇಕ ಟ್ರಾನ್ಸ್ ಜೆಂಡರ್ಸ್ ಗೆ ಕಲಿಯಬೇಕು ಎನ್ನುವ ಹಂಬಲವಿದ್ದರೂ ಕೂಡ ಸಮಾಜದಲ್ಲಿ ಅವರಿಗೆ ಸ್ಥಾನಮಾನ ಸಿಗದ ಕಾರಣ ಬಹುತೇಕ ಮಂದಿಯ ಶಿಕ್ಷಣ ಅರ್ಧದಲ್ಲೇ ನಿಂತುಹೋಗುತ್ತದೆ. 

ಸೆಕ್ಸ್ ವರ್ಕರ್ ಎಂಬ ಭಾವನೆ : ರಾತ್ರಿಯ ಸಮಯದಲ್ಲಿ ಒಬ್ಬ ಟ್ರಾನ್ಸ್ ಫೀಮೇಲ್ ರೆಡಿಯಾಗಿ ರಸ್ತೆಯಲ್ಲಿ ತಿರುಗಾಡಿದರೆ ಜನ ಅವಳನ್ನು ಸೆಕ್ಸ್ ವರ್ಕರ್ ಎಂದೇ ತಿಳಿಯುತ್ತಾರೆ. ಹಾಗಾಗಿಯೇ ಕೆಲವು ಮಂಗಳಮುಖಿಯರು ಗುಂಪಿನಲ್ಲಿ ಓಡಾಡುವುದನ್ನೇ ಇಷ್ಟಪಡುತ್ತಾರೆ.

ಹೆಂಡ್ತಿ, ಗಂಡನಿಂದ ಯಾವಾಗ್ಲೂ ಈ ವಿಷ್ಯಕೇಳೋಕೆ ಬಯಸ್ತಾಳಂತೆ

ಉದ್ಯೋಗದಲ್ಲಿ ಕಿರಿಕಿರಿ : ಯಾವುದಾದರೂ ಒಬ್ಬ ತೃತೀಯ ಲಿಂಗಿ ಸ್ವಂತ ಉದ್ಯೋಗ ಮಾಡಲು ಬಯಸಿದರೂ ಸಾಮಾನ್ಯ ಜನರು ಅದನ್ನು ಒಪ್ಪಿಕೊಳ್ಳುವುದಿಲ್ಲ. ತಮ್ಮ ಸಮಾಜದಲ್ಲಿ ಅವರಿಗೆ ಸ್ಥಾನ ನೀಡುವುದಿಲ್ಲ. ಇದ್ರಿಂದ ಅವರು ಜೀವನ ಕಟ್ಟಿಕೊಳ್ಳುವುದು ಕಷ್ಟವಾಗುತ್ತದೆ.   

ಭಿಕ್ಷುಕರಂತೆ ಕಾಣ್ತಾರೆ ಜನರು : ತೃತೀಯ ಲಿಂಗಿಗಳು ಹೊರಗಡೆ ಓಡಾಡಿದರೆ ಜನರು ಅವರನ್ನು ಭಿಕ್ಷುಕರಂತೆ ಭಾವಿಸುತ್ತಾರೆ. ಈ ಸಮುದಾಯದ ಕೆಲವು ಮಂದಿ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದರೂ ಕೂಡ ಸಮುದಾಯದ ಎಲ್ಲರನ್ನೂ ಹಾಗೆ ನೋಡುವುದು ತಪ್ಪು.

ಸಹಾಯ ಮಾಡೋರು ಸಿಗೋದಿಲ್ಲ : ಸಾಮಾನ್ಯವಾಗಿ ರಸ್ತೆಯಲ್ಲಿ ಯಾರಿಗಾದರೂ ತೊಂದರೆಯಾದರೆ ಯಾರಾದರೂ ಸಹಾಯಕ್ಕೆ ನಿಲ್ಲುತ್ತಾರೆ. ಆದರೆ ಮಂಗಳಮುಖಿಯರು ತೊಂದರೆಗೆ ಸಿಕ್ಕಿದರೆ ಸಹಾಯ ಮಾಡಲು ಮುಂದೆ ಬರೋರು ಬಹಳ ಅಪರೂಪ.

ಬಾಡಿಗೆಗೆ ಮನೆ ಸಿಗೋದೇ ಕಷ್ಟ : ಟ್ರಾನ್ಸಜೆಂಡರ್ ಸಮುದಾಯದವರಿಗೆ ಮನೆ ಹುಡುಕುವುದು ಕೂಡ ಕಷ್ಟ. ಅವರಿಗೆ ಬಾಡಿಗೆ ಮನೆ ನೀಡಲು ಜನರು ಹಿಂಜರಿಯುತ್ತಾರೆ. ಸರಿಯಾದ ಯಾವುದೇ ಮೂಲಭೂತ ಸೌಕರ್ಯ ಇವರಿಗೆ ಧಕ್ಕುವುದಿಲ್ಲ.
 

Latest Videos
Follow Us:
Download App:
  • android
  • ios