Asianet Suvarna News Asianet Suvarna News

ಒಂಟಿ ಒಂಟಿಯಾಗಿರುವುದು ಬೋರೋ ಬೋರು..

ಒಬ್ಬರಿಗೆ ಫ್ರೆಂಡ್ ಬೇರೆ ಊರಿಗೆ ಶಿಫ್ಟ್ ಆಗುತ್ತಾನೆ, ಮತ್ತೊಬ್ಬರಿಗೆ ಮಗುವಾಗುತ್ತದೆ, ಮತ್ತೊಬ್ಬರು ವಾರದ 70 ಗಂಟೆ ಕೆಲಸ ಮಾಡುತ್ತಲೇ ಇರುತ್ತಾರೆ, ಮಗದೊಬ್ಬರಿಗೆ ಸಂಗಾತಿ ಮರಣ ಹೊಂದುತ್ತಾರೆ... ಒಟ್ಟಿನಲ್ಲಿ ಒಂಟಿತನ ಎಂಬುದು ಎಲ್ಲರನ್ನೂ ಒಂದಿಲ್ಲೊಂದು ಬಾರಿ ಕಾಡಿರುತ್ತದೆ. ಅದರ ಕಷ್ಟ, ಬೇಸರ, ನೋವು ಅನುಭವಿಸಿದವರ ಅರಿವಿಗೆ ಬಾರದಿರದು. ಈ ಒಂಟಿತನವೆಂಬ ಶತ್ರುವನ್ನು ದೂರವಿಡೋದು ಹೇಗೆ?

Tips to overcome loneliness
Author
Bengaluru, First Published Dec 11, 2019, 11:35 AM IST

ಒಂಟಿತನ ಆಗಾಗ ಎಲ್ಲರಿಗೂ ಅನುಭವಕ್ಕೆ ಬರುತ್ತದೆ. ಇದಕ್ಕೆ ಒಂಟಿಯಾಗಿರಲೇಬೇಕೆಂದಿಲ್ಲ. ಕೆಲವೊಮ್ಮೆ ಸುತ್ತಲೂ ಗೆಳೆಯರು, ಕುಟುಂಬವರ್ಗ ತುಂಬಿದ್ದೂ ಒಂಟಿ ಎನಿಸುತ್ತದೆ. ಇದು ದೈಹಿಕವಾಗಿ, ಮಾನಸಿಕವಾಗಿ  ನಿಧಾನವಾಗಿ ನಮ್ಮನ್ನು ಸಂಪೂರ್ಣ ಜರ್ಝರಿತಗೊಳಿಸಬಹುದು. ಕೆಲವೊಮ್ಮೆ ಈ ಪರಿಸ್ಥಿತಿ ಕೈಮೀರಿ ಹೋಗುತ್ತದೆ. ಆಗ ಆಪ್ತರ, ಆಪ್ತ ಸಲಹೆಗಾರರ ಸಹಾಯ ಬೇಕಾಗಬಹುದು. ಒಂಟಿತನದಿಂದ ಹೊರಬರುವುದು ನಾವು ನೀವೆಣಿಸಿದ್ದಕ್ಕಿಂತ ಹೆಚ್ಚು ಸವಾಲಿನ ವಿಷಯ. ಹೀಗೆ ಒಂಟಿತನ ಆವರಿಸಿಕೊಂಡಾಗ ಸುತ್ತಲಿನವರ ಪ್ರೀತಿ, ಕಾಳಜಿ ಎಲ್ಲವನ್ನೂ ನೆಗೆಟಿವ್ ಆಗಿ ನೋಡಲು ಆರಂಭಿಸುತ್ತೇವೆ. ಜೀವನ ಅರ್ಥಹೀನವಾಗಿ ಕಾಣಲಾರಂಭಿಸುತ್ತದೆ. ಎಲ್ಲರೂ ನಮ್ಮನ್ನು ದೂರವಿಡುತ್ತಿದ್ದಾರೆ ಎನಿಸುತ್ತದೆ. ಆದರೆ, ನಿಜವಾಗಿ ನಾವೇ ಎಲ್ಲರಿಂದ ದೂರ ಸರಿಯುತ್ತಿರುತ್ತೇವೆ. ಇದು ಮುಂದುವರಿದಾಗ ನಿಜವಾಗಿಯೂ ಯಾರೂ ನಮ್ಮ ಹತ್ತಿರ ಸುಳಿಯುವುದಿಲ್ಲ. ಇದರಿಂದ ಮತ್ತಷ್ಟು ಖಿನ್ನತೆ ಆವರಿಸುತ್ತದೆ. ಆದರೆ ಈ ಒಂಟಿತನವೆಂಬ ಭೂತವನ್ನು ಓಡಿಸಲು ಸಾಧ್ಯವಿದೆ. ಅದಕ್ಕೂ ಮುನ್ನ ನಾವು ಒಂಟಿತನದಿಂದ ಬಳಲುತ್ತಿದ್ದೇವೆ ಎಂಬುದನ್ನು ಅರಿತುಕೊಳ್ಳಬೇಕು ಹಾಗೂ ಅದರಿಂದ ಹೊರಬರಲು ಮನಸ್ಸು ಮಾಡಬೇಕು. ಇಂಥ ಆಳದ ಒಂಟಿತನದ ವಿರುದ್ಧ ಹೋರಾಡಲು ಸೈಕಾಲಜಿಸ್ಟ್ ಸಲಹೆ ಮಾಡುವ ಕೆಲವೊಂದು ಟಿಪ್ಸ್‌ಗಳು ಇಲ್ಲಿವೆ. 

ಪುರುಷರು ಎಷ್ಟು ದಿನಕ್ಕೊಮ್ಮೆ ವೀರ್ಯ ಬಿಡುಗಡೆ ಮಾಡಬೇಕು?

ಆ್ಯಕ್ಷನ್
ಒಂಟಿತನದಿಂದ ನಿಮಗೆ ಸರಿಯಾಗಿ ಯೋಚನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಒಪ್ಪಿಕೊಳ್ಳಿ. ಜೊತೆಗೆ,  ನೀವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಪಾಸಿಟಿವ್ ಆಗಿ ಜನ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ನಿಮಗೆ ಸಮಾಜದಿಂದ ಸಂಪರ್ಕ ಕಡಿತಗೊಳಿಸಿಕೊಂಡಂತೆ ಎನಿಸುತ್ತಿದ್ದರೆ ಒಮ್ಮೆ ನಿಮ್ಮ ಫೋನ್‌ನ ಎಲ್ಲ ಕಾಂಟ್ಯಾಕ್ಟ್‌ಗಳನ್ನು ಜಾಲಾಡಿಸಿ, ಮೇಲ್ ಅಡ್ರೆಸ್ ಬುಕ್ ಚೆಕ್ ಮಾಡಿ. ಸೋಷ್ಯಲ್ ಮೀಡಿಯಾ ಕಾಂಟ್ಯಾಕ್ಟ್‌ಗಳನ್ನು ನೋಡಿ. ನಾಲ್ಕರಿಂದ ಐವರಾದರೂ ಹಳೆಯ ಒಳ್ಳೆಯ ಸ್ನೇಹಿತರು ಸಿಕ್ಕೇಸಿಗುತ್ತಾರೆ. ಅವರಿಂದ ಭಾವನಾತ್ಮಕವಾಗಿ ದೂರವಾಗಿ  ಕೆಲ ಸಮಯವಾಗಿರಬಹುದು. ಆದರೆ, ಮತ್ತೆ ಅವರೊಂದಿಗೆ ಕನೆಕ್ಟ್ ಆಗುವುದು ಕಷ್ಟದ ಮಾತಲ್ಲ. ಅವರೆಲ್ಲರಿಗೂ ಮೆಸೇಜ್ ಮಾಡಿ. ಒಮ್ಮೆ ಮೀಟ್ ಆಗೋಣ ಎಂದು ಹೇಳಿ. ಹಾಗೆ ಮಾಡಲು ನಿಮಗೆ ಅವರು ರಿಪ್ಲೈ ಮಾಡುವುದಿಲ್ಲವೆಂದು ಭಯವಾಗಬಹುದು. ಇದೊಂತರಾ ವಿಚಿತ್ರ ಎನಿಸಬಹುದು. ಹಾಗಾಗಿಯೇ,
ಗೊಂದಲದ ಲಾಭ ಪಡೆಯಿರಿ.
ಬೋರ್ ಎನಿಸುವ ಸಂಬಂಧಕ್ಕೆ ರೊಮ್ಯಾನ್ಸ್ ಎಂಬ ಮದ್ದು

ನಿಮ್ಮ ಕಂಪನಿಯನ್ನು ಮುಂಚೆ ಎಂಜಾಯ್ ಮಾಡಿದ್ದರು ಎಂದರೆ ಈಗಲೂ ಅವರು ನಿಮ್ಮೊಂದಿಗಿನ ಸಮಯವನ್ನು ಸಂತೋಷದಲ್ಲಿ ಕಳೆಯಬಲ್ಲರು ಎಂದು ನಿಮಗೆ ನೀವೇ ಹೇಳಿಕೊಳ್ಳಿ. ಅವರು ಸಂಪರ್ಕದಿಂದ ದೂರಾಗಿರಬಹುದು. ಅವರು ಕಾಲ್ ಮಾಡದೆ ವರ್ಷಗಳಾಗಿರಬಹುದು. ಆದರೆ, ಅದಕ್ಕೂ ನಿಮಗೂ ಸಂಬಂಧವಿಲ್ಲ. ಅವರ ಬದುಕಿನ ಜಂಜಡಗಳಲ್ಲಿ ಮುಳುಗಿ ಹಾಗಾಗಿರಬಹುದು. ಹೆಚ್ಚಿನ ಬಾರಿ ಅವರು ನಿಮ್ಮನ್ನು ಸಂಪರ್ಕಿಸುತ್ತಿಲ್ಲ ಎಂದು ನೀವು ಯಾವೆಲ್ಲ ಕಾರಣಗಳನ್ನು ಕೊಟ್ಟುಕೊಂಡಿರುತ್ತೀರೋ, ನಿಜವಾಗಿ ಅವರು ಆ ಯೋಚನೆಯನ್ನೇ ಮಾಡಿರುವುದಿಲ್ಲ. ಹಾಗಾಗಿ, ಹೀಗೆ ಹಳೆಯ ಸ್ನೇಹಗಳನ್ನು ರಿಫ್ರೆಶ್ ಮಾಡುವಾಗ,

ಪಾಸಿಟಿವ್ ಆಗಿರಿ
ತಿರಸ್ಕಾರದ ಭಯ ಇದ್ದೇ ಇರುತ್ತದೆ. ನಿಮ್ಮ ಮನಸ್ಸು ಈಗ ಅಷ್ಟು ಸರಿಯಿಲ್ಲ. ಆದರೆ, ಈ ಸಂದರ್ಭದಲ್ಲಿ ನೀವು ಪಾಸಿಟಿವ್ ಆಗಿ ಯೋಚಿಸಲೇಬೇಕು. ಹಾಗಾಗಿ, ಅವರನ್ನು ಸಂಪರ್ಕಿಸಲು ಉತ್ತಮ ವಿಧಾನ ಎಂದರೆ ಸಂದೇಶ ಕಳುಹಿಸುವುದು. ಆಗ ಎಮೋಜಿಗಳನ್ನು ಬಳಸಿ ನಗುವನ್ನು ಕಳುಹಿಸಬಹುದು. ಇದರಿಂದ ಫೇಕ್ ಆಗಿ ನೀವು ನಗಬೇಕಾಗಿಲ್ಲ. ಈ ಸಂದೇಶದಲ್ಲಿ ಅವರನ್ನು ಆಪಾದಿಸಬೇಡಿ- ನೀನು ನನ್ನ ಸಂಪರ್ಕಿಸಲಿಲ್ಲ, ಮರೆತಿದ್ದಿ ಎಂದೆಲ್ಲ ದೂರಬೇಡಿ. ಬದಲಿಗೆ ಪಾಸಿಟಿವ್ ಸೆಂಟೆನ್ಸ್ ಬಳಸಿ. ಉದಾಹರಣೆಗೆ ಯಾಕೋ ನಿನ್ನ ನೆನಪಾಯಿತು. ಹಳೆಯದನ್ನು ನೆನೆಸಿಕೊಳ್ಳುತ್ತಿದ್ದೆ, ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎನಿಸಿತು ಇತ್ಯಾದಿ. 

ಅಭದ್ರತೆಗೆ ತಳ್ಳುವ ಸಂಬಂಧದ ವಿಷಯಗಳು

ಹೊಸ ಕಾಂಟ್ಯಾಕ್ಟ್ ಬೆಳೆಸಿಕೊಳ್ಳಿ
ಹಳಬರನ್ನು ಸಂಪರ್ಕಿಸಲು ಮನಸ್ಸಾಗುತ್ತಿಲ್ಲದಿರಬಹುದು. ಆದರೆ, ನಿಮ್ಮ ಒಂಟಿತನ ಹೋಗಿಸಬಲ್ಲ ಹೊಸಬರು ಸಿಗಬಹುದಲ್ಲ... ಅವರನ್ನೆಲ್ಲ ಹೇಗೆ ಪರಿಚಯ ಮಾಡಿಕೊಳ್ಳುವುದು ಗೊತ್ತಾಗದಿದ್ದರೆ ಹೀಗೆ ಮಾಡಿ-  ಯೋಗ ಹಾಗೂ ಧ್ಯಾನ ತರಗತಿಗೆ ಸೇರಿಕೊಳ್ಳಿ. ಇದು ಮನಸ್ಸಿಗೂ ದೇಹಕ್ಕೂ ಚೈತನ್ಯ ಕೊಡುವುದರೊಂದಿಗೆ ಅಲ್ಲಿ ಹೊಸಬರು ಪರಿಚಯವಾಗುತ್ತಾರೆ. ಇಲ್ಲವೇ ಜಿಮ್, ಪೇಂಟಿಂಗ್ ಕ್ಲಾಸ್, ಕುಕಿಂಗ್ ಕ್ಲಾಸ್ ಯಾವುದಕ್ಕಾದರೂ ನಿಮ್ಮಿಷ್ಟದ ಹವ್ಯಾಸಕ್ಕೆ ಅನುಗುಣವಾಗಿ ಸೇರಿಕೊಳ್ಳಿ. ಆಗ ತನ್ನಿಂತಾನೇ ಪರಿಚಯವೂ ಆಗುತ್ತದೆ, ವ್ಯಕ್ತಿತ್ವ ವಿಕಸನವೂ ಆಗುತ್ತದೆ. ನಿಧಾನವಾಗಿ ಅವರಲ್ಲಿ ಆತ್ಮೀಯವಾಗಿ ಮಾತನಾಡಲು ಆರಂಭಿಸಿ. ವಾಟ್ಸಾಪ್ ಗ್ರೂಪ್ ಮಾಡಿಕೊಳ್ಳಿ, ಮನೆಗೆ ಆಹ್ವಾನಿಸಿ... ಒಂಟಿತನ ತನ್ನಿಂತಾನೇ ದೂರವಾಗುತ್ತದೆ. 
 

Follow Us:
Download App:
  • android
  • ios