ಹುಡುಗಿ ಕೈ ಕೊಟ್ರೆ ರಿವೆಂಜ್ ಪೋರ್ನ್ ರೂಢಿಸಿಕೊಳ್ತಿದ್ದಾರೆ ಭಗ್ನಪ್ರೇಮಿಗಳು, ಏನಿದು?
ಪ್ರೇಮಿ ಮೋಸ ಮಾಡಿದಾಗ ಕೋಪ, ನೋವು ಆಗೋದು ಸಹಜ. ಹಾಗಂತ ಅವರ ಬಾಳಿಗೆ ಮುಳುವಾಗ್ಬಾರದು. ಅದು ನಮ್ಮ ಜೀವನವನ್ನು ಕೂಡ ಹಾಳು ಮಾಡುತ್ತೆ. ನಮ್ಮನ್ನು ಸಂಪೂರ್ಣ ಬೀದಿಗೆ ತಂದು ನಿಲ್ಲಿಸಬಹುದು. ಅದಕ್ಕೆ ಈ ಮಾಜಿ ಪ್ರೇಮಿ ಸಾಕ್ಷಿ.
ಜನರು ಕೋಪದಲ್ಲಿ ಏನು ಮಾಡ್ತಾರೆ ಎನ್ನುವುದು ಅವರಿಗೆ ತಿಳಿದಿರೋದಿಲ್ಲ. ತಮ್ಮ ಬಯಕೆಯನ್ನು ಈಡೇರಿಸಿಕೊಳ್ಳಲು ಅಥವಾ ಸೇಡು ತೀರಿಸಿಕೊಳ್ಳಲು ಅತ್ಯಂತ ನೀಚ ಕೆಲಸಕ್ಕೆ ಇಳಿಯುತ್ತಾರೆ. ಪ್ರೀತಿ ಸಿಗದ ಕಾರಣ ಕೊಲೆ ಮಾಡಿದ ಅನೇಕ ಘಟನೆಗಳಿವೆ. ಆದ್ರೀಗ ಜನರು ಕೊಲೆ ಜೊತೆ ಮತ್ತೊಂದು ಕೆಲಸಕ್ಕೆ ಕೈ ಹಾಕಿದ್ದಾರೆ. ದ್ವೇಷಿಸುತ್ತಿರುವ ವ್ಯಕ್ತಿಯ ಅಶ್ಲೀಲ ಫೋಟೋ ಅಥವಾ ವಿಡಿಯೋಗಳನ್ನು ಪೋರ್ನ್ ಸೈಟ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಸೇಡು ತೀರಿಸಿಕೊಳ್ತಿದ್ದಾರೆ. ರಿವೆಂಜ್ ಪೋರ್ನ್ ಈಗಿನ ದಿನಗಳಲ್ಲಿ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ.
ಪೋರ್ನ್ ಸೈಟ್ (Porn Site ) ಅಥವಾ ಇತರ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಫೋಟೋ (Photo) ಅಥವಾ ವಿಡಿಯೋ (Video) ಗಳನ್ನು ಹಂಚಿಕೊಂಡ್ರೆ ಸೇಡು ತೀರಿದಂತೆ ಎಂದು ಜನರು ಭಾವಿಸ್ತಿದ್ದಾರೆ. ಇಂಥ ಘಟನೆಯನ್ನು ನಿಯಂತ್ರಿಸಲು ಅಮೆರಿಕಾ ಕೋರ್ಟ್ ಒಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಅಮೆರಿಕಾದ ಕೋರ್ಟ್ ಒಂದು, ವ್ಯಕ್ತಿಯೊಬ್ಬನನ್ನು ಪೋರ್ನ್ ಸೇಡಿನ ದೋಷಿ ಎಂದು ಘೋಷಣೆ ಮಾಡಿದ್ದಲ್ಲದೆ ತನ್ನ ಮಾಜಿ ಪ್ರೇಮಿಗೆ 1.2 ಬಿಲಿಯನ್ ಡಾಲರ್ ಅಂದ್ರೆ 9984 ಕೋಟಿ ರೂಪಾಯಿ ನೀಡಬೇಕೆಂದು ಕೋರ್ಟ್ ಆದೇಶ ನೀಡಿದೆ.
PERSONALITY TIPS: ಖುಷಿಖುಷಿಯಾಗಿರೋರು ಈ ಕೆಲಸಗಳನ್ನ ಎಂದಿಗೂ ಮಾಡೋಲ್ಲ
ಫೇಸ್ಬುಕ್ ಹಾಗೂ ಯುಟ್ಯೂಬ್ ನಲ್ಲಿ ಅಶ್ಲೀಲ ಫೋಟೋ ಹಂಚಿಕೊಂಡಿದ್ದ ವ್ಯಕ್ತಿ :
ಮಾಜಿ ಗೆಳೆಯ, ತನ್ನ ಮಾಜಿ ಗೆಳತಿಯ ನಗ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ನಕಲಿ ಟ್ವಿಟರ್, ಫೇಸ್‌ಬುಕ್ ಮತ್ತು ಯೂಟ್ಯೂಬ್ ಪ್ರೊಫೈಲ್ ಕ್ರಿಯೆಟ್ ಮಾಡಿ ಅದ್ರಲ್ಲಿ ಹಂಚಿಕೊಂಡಿದ್ದಾನೆ ಎಂದು ಮಹಿಳೆ ಆರೋಪ ಮಾಡಿದ್ದಳು. ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ಮಹಿಳೆ ತನ್ನ ಪೂರ್ಣ ಹೆಸರನ್ನು ಹೇಳಿಲ್ಲ. ಆಕೆ ತನ್ನ ಹೆಸರಿನ ಆರಂಭದ ಎರಡು ಅಕ್ಷರವನ್ನು ಮಾತ್ರ ನಮೂದಿಸಿದ್ದಳು. ಡಿಎಲ್ ಎಂಬ ಹೆಸರಿನಲ್ಲಿ ಅರ್ಜಿ ದಾಖಲಾಗಿತ್ತು. 2022 ರಲ್ಲಿ ಹ್ಯಾರಿಸ್ ಕೌಂಟಿ ಸಿವಿಲ್ ಕೋರ್‌್್ನಲ್ಲಿ ಸಿವಿಲ್ ಮೊಕದ್ದಮೆ ಹೂಡಲಾಗಿತ್ತು.
ಡಿಎಲ್ ಹೆಸರಿನ ಮಹಿಳೆ ಹಾಗೂ ಮಾರ್ಕಸ್ ಜಮಾಲ್ ಜಾಕ್ಸನ್ ಮಧ್ಯೆ 2016 ರಲ್ಲಿ ಪ್ರೀತಿ ಚಿಗುರಿತ್ತು. ಅವರು 2016ರಿಂದ ಡೇಟಿಂಗ್ ಮಾಡುತ್ತಿದ್ದರು. ಈ ಸಮಯದಲ್ಲಿ, ಡಿಎಲ್ ತನ್ನ ಕೆಲವು ವೈಯಕ್ತಿಕ ಫೋಟೋಗಳನ್ನು ಮಾರ್ಕಸ್ ಜೊತೆ ಹಂಚಿಕೊಂಡಿದ್ದಳು.
ಅದ್ಧೂರಿಯಾಗಿ ಮದುವೆಯಾದ್ರೆ ಸಂಬಂಧ ಉಳಿಯೋದು ಡೌಟು? ಅಧ್ಯಯನ ಹೇಳೋದೇನು?
ಮಹಿಳೆಯ ಸ್ನೇಹಿತರು ಮತ್ತು ಕುಟುಂಬದವರಿಗೂ ಫೋಟೋ ಕಳುಹಿಸಿದ್ದ
ಚಿತ್ರಹಿಂಸೆ ನೀಡ್ತಿದ್ದ ಮಾರ್ಕಸ್ : 2020 ರಲ್ಲಿ ಇಬ್ಬರೂ ಬೇರ್ಪಟ್ಟಿದ್ದರು. ಇದಾದ ನಂತರ ಮಾರ್ಕಸ್ ಡಿಎಲ್ ಗೆ ಚಿತ್ರಹಿಂಸೆ ನೀಡಲು ಆರಂಭಿಸಿದ. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಮತ್ತು ವಯಸ್ಕರ ಸೈಟ್‌ಗಳಲ್ಲಿ ಡಿಎಲ್‌ನ ಖಾಸಗಿ ಚಿತ್ರಗಳನ್ನು ಪೋಸ್ಟ್ ಮಾಡಲು ಪ್ರಾರಂಭಿಸಿದ. ಅಷ್ಟೇ ಅಲ್ಲ ಮಹಿಳೆಯ ಸ್ನೇಹಿತರು ಮತ್ತು ಕುಟುಂಬದವರಿಗೂ ಈ ಫೋಟೋಗಳನ್ನು ಕಳುಹಿಸಿದ್ದ. ನೀನು ನೆಟ್ ನಲ್ಲಿ ಹರಿದಾಡ್ತಿರುವ ನಿನ್ನ ಫೋಟೋಗಳನ್ನು ಡಿಲೀಟ್ ಮಾಡೋದ್ರಲ್ಲಿ ಹಾಗೂ ಅದ್ರಿಂದ ಹೊರಬರುವ ಪ್ರಯತ್ನದಲ್ಲಿಯೇ ನಿನ್ನ ಜೀವನ ಕಳೆಯಬೇಕು ಎಂದು ವ್ಯಕ್ತಿ ಮೆಸ್ಸೇಜ್ ಕಳುಹಿಸಿದ್ದನಂತೆ.
2022ರಲ್ಲಿ ಡಿಎಲ್ ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದಳು. ಆಕೆ ಮಾರ್ಕಸ್ ಕಿರುಕುಳ ನೀಡ್ತಿದ್ದಾನೆಂದು ದೂರು ನೀಡಿದ್ದಳು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ದಂಡ ವಿಧಿಸಿದೆ. ಒಮ್ಮೆ ಇಂಟರ್ನೆಟ್ ನಲ್ಲಿ ಪೋಟೋ ಪೋಸ್ಟ್ ಆದ್ರೆ ಅದನ್ನು ಸಂಪೂರ್ಣ ಡಿಲಿಟ್ ಮಾಡೋದು ಕಷ್ಟ. ಯಾಕೆಂದ್ರೆ ನೀವು ಒಂದು ವೆಬ್ಸೈಟ್ ನಲ್ಲಿ ಫೋಟೋ ಪೋಸ್ಟ್ ಮಾಡಿದ್ದರೂ ಅದು ಬೇರೆ ಬೇರೆ ಸೈಟ್ ಗಳಿಗೆ ಜನರಿಂದ ಹಂಚಿಹೋಗಿರುತ್ತದೆ. ಭಾರತದಲ್ಲಿ ಕೂಡ ಇಂಥ ಸಮಸ್ಯೆ ಎದುರಾದಲ್ಲಿ ನೀವು ಕೋರ್ಟ್ ಮೆಟ್ಟಿಲೇರಿ ನ್ಯಾಯಾಕ್ಕೆ ಹೋರಾಟ ನಡೆಸಬಹುದು.