Asianet Suvarna News Asianet Suvarna News

ಇದು ಸಂಸಾರಸ್ಥರಿಗಾಗಿ ಮಾತ್ರ! ನೀವಿದನ್ನು ಓದಲೇಬೇಕು!

ನಮ್ಮ ಇವತ್ತಿನ ತಂತ್ರಜ್ಞಾನವನ್ನು ನಾವು ಅತಿಯಾಗಿ ಬಳಸಿದರೆ, ಅವು ಹೇಗೆ ನಮ್ಮನ್ನು ಸಂಕಟಕ್ಕೆ ತಳ್ಳಬಲ್ಲವು ಅನ್ನುವುದನ್ನು ಹೇಳುವ ಈ ಕತೆಗಳು ಆಧುನಿಕ ಸಂಸಾರಸ್ಥರ ಅನಿವಾರ್ಯ ಸಂಕಟಗಳಂತೆ ಕಂಡರೆ, ನಮ್ಮ ಕಾಲಕ್ಕೊಂದು ನಮಸ್ಕಾರ ಹೇಳಿ!

This is how technology can hurts relationship
Author
Bengaluru, First Published Oct 14, 2019, 5:24 PM IST

ಪೋನಿನಲ್ಲಿ ಮಾತನಾಡುತ್ತಾ ಕಾರು ಮನೆ ತಲುಪಿದ. ಸ್ನೇಹಿತ ಇನ್ನೂ ಮಾತನಾಡುತ್ತಿದ್ದ. ‘ಮನೆ ಬಂತು ಕಣೋ ಮತ್ತೆ ಮಾತಾಡ್ತೀನಿ’ ಪೋನಿಟ್ಟು ಹಾರ್‌್ನ ಮಾಡಿದ. ಒಳಗಿನಿಂದ ಯಾರೂ ಬರಲಿಲ್ಲ. ಬೇಸರದಿಂದ ಕಾರಿನಿಂದಿಳಿದು ತಾನೇ ಗೇಟು ತೆರೆದು ಕಾರ್‌ ಪಾರ್ಕ್ ಮಾಡಿದ. ಇಡೀ ದಿನದ ಉತ್ಸಾಹ ಒಂದು ಘಳಿಗೆಯಲ್ಲೇ ತೆಗೆದು ಬಿಡ್ತಾಳೆ. ಕಾರ್‌ ಶಬ್ದ ಆದ್ರೂ ಹೊರಗಡೆ ಬಂದು ರಿಸೀವ್‌ ಮಾಡಲ್ಲ ಎಂದುಕೊಂಡ.

ಕಾಲ ಕೆಟ್ಟೋಗಿಲ್ಲ ಸ್ವಾಮಿ, ನಮ್ಮ ಕಾಲನೇ ಬೆಸ್ಟ್!

ಅಡುಗೆಮನೆಯಲ್ಲಿ ಆಕೆಯ ಯೋಚನೆ ಹೀಗೆ ಸಾಗಿತ್ತು. ಕಾರ್‌ ಒಳಗಿಟ್ಟು ಸೀದಾ ಒಳಗೆ ಬರಬಹುದಲ್ವಾ? ಹಾರ್ನ್‌ ಮಾಡಿದ ಕೂಡಲೇ ಓಡಿ ಹೋಗಿ ಗೇಟು ತೆಗೀಲಿಕ್ಕೆ ನಾನೇನು ಆಳಾ? ನನ್ನ ಕೆಲಸಗಳೇ ನನಗೆ ಸಾವಿರ ಇರುತ್ತೆ. ಹೋಗಿ ಹಲ್ಲು ಕಿರೀತಾ ನಿಂತ್ರೆ ಅಡುಗೆ ಸೀದ್ಹೋಗೋದಿಲ್ವಾ? ತನ್ನಲ್ಲೇ ಹೇಳಿಕೊಂಡಳು.

ಅವನಿಗೆ ಒಳಗೆ ಹೋಗಲು ಮನಸ್ಸಾಗಲಿಲ್ಲ. ‘ಈ ಸೌಭಾಗ್ಯಕ್ಕೆ ಫ್ರೆಂಡ್‌ ಫೋನ್‌ ಕಟ್‌ಮಾಡಿದೆ’ ಎಂದು ಕೊಂಡು ಮತ್ತೆ ಗೆಳೆಯನಿಗೆ ಫೋನು ಮಾಡಿದ.

ಮನೆಗೆ ಬಂದರೂ ಫೋನ್‌ ಮುಗಿಯೋದಿಲ್ಲ. ಇವಕ್ಕೆಲ್ಲ ಹೆಂಡತಿ ಬೇಕಾ? ಆಕೆಯ ಸ್ವಗತ.

ಅಪಾಯಕಾರಿ ಸಂಬಂಧದಲ್ಲಿದ್ದೀರಾ ಚೆಕ್ ಮಾಡಿಕೊಳ್ಳಿ

ಮಗ ಕಾರ್‌ ಶಬ್ದ ಕೇಳಿ ಅಪ್ಪನನ್ನು ಹೆದರಿಸಲು ಬಾಗಿಲ ಹಿಂದೆ ಅವಿತು ನಿಂತಿದ್ದ. ಹೊತ್ತಾದರೂ ತಂದೆ ಒಳ ಬರದಿದ್ದಕ್ಕೆ ಬೇಸರಗೊಂಡು ಬಾಗಿಲು ತೆರೆದು ನೋಡಿದ. ತಂದೆಯಿನ್ನೂ ಫೋನಿನಲ್ಲಿರುವುದನ್ನು ಕಂಡು ಸಪ್ಪೆ ಮೋರೆ ಹಾಕಿ ಒಳ ನಡೆದ.

Follow Us:
Download App:
  • android
  • ios