Relationship Tips : ಕೆಲಸ ಮಾಡೋ ಹುಡುಗಿಗೆ ಓಕೆ ಎನ್ನುವ ಮುನ್ನ ಇದು ಗೊತ್ತಿರಲಿ!

ಮದುವೆ ಇಡೀ ಜೀವನದಲ್ಲಿ ಆಗುವ ದೊಡ್ಡ ಬದಲಾವಣೆ. ಆರಂಭದಲ್ಲಿ ಎಲ್ಲ ಚೆನ್ನಾಗಿದ್ರೂ ಅತಿ ಬೇಗ ವಿಚ್ಛೇದನ ಪಡೆಯುವವರ ಸಂಖ್ಯೆ ಹೆಚ್ಚಾಗ್ತಿದೆ. ಉದ್ಯೋಗಸ್ಥ ಮಹಿಳೆ ಮದುವೆಯಾದಾಗ ಮತ್ತೊಂದಿಷ್ಟು ಜವಾಬ್ದಾರಿ ತಲೆಮೇಲಿರುತ್ತದೆ. ಅದನ್ನು ತಿಳಿದು ಮುನ್ನಡೆದ್ರೆ ಒಳ್ಳೆಯದು.
 

Things Every Man Should Know Before Marrying A Independent Working Woman

ಮನೆ ಕೆಲಸ ಹಾಗೂ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಯಾವಾಗ್ಲೂ ಮಹಿಳೆಯರ ಮೇಲಿರುತ್ತದೆ. ಅನಾದಿಕಾಲದಿಂದಲೂ ಮಹಿಳೆಯರನ್ನು ಮನೆ ಕೆಲಸಕ್ಕೆ ಸೀಮಿತಗೊಳಿಸಲಾಗಿದೆ. ಈಗಿನ ದಿನಗಳಲ್ಲಿ ಮಹಿಳೆಯರು ಮನೆಯಿಂದ ಹೊರಗೆ ಬಂದು ಕೆಲಸ ಮಾಡಲು ಬಯಸ್ತಾರೆ. ಎಲ್ಲ ಕ್ಷೇತ್ರದಲ್ಲೂ ಪುರುಷರ ಸಮಾನವಾಗಿ ಬದುಕಲು ಆಸಕ್ತಿ ತೋರುತ್ತಿದ್ದಾರೆ. ಆದ್ರೆ ಈ ಸಂಖ್ಯೆ ತುಲನಾತ್ಮಕವಾಗಿ ಬಹಳ ಕಡಿಮೆಯಿದೆ. 

ಹಿಂದಿನ ಕಾಲಕ್ಕೆ ಹೋಲಿಕೆ ಮಾಡಿದ್ರೆ ಈಗಿನ ಪುರುಷರ ಆಲೋಚನೆ (Thought) ಬದಲಾಗಿದೆ. ಮನೆಯಿಂದ ಹೊರಗೆ ಹೋಗಿ ಕೆಲಸ ಮಾಡುವ ಹುಡುಗಿಯರನ್ನು ಹುಡುಗರು ಇಷ್ಟಪಡುತ್ತಿದ್ದಾರೆ. ಅವರಿಗೆ ಪ್ರೋತ್ಸಾಹ ನೀಡ್ತಿದ್ದಾರೆ.  ದೊಡ್ಡ ದೊಡ್ಡ ಹುದ್ದೆ (Designation) ಯಲ್ಲಿರುವ, ಸಾಧನೆ ಮಾಡುವ ಗುರಿ ಹೊಂದಿರುವ ಹುಡುಗಿಯರನ್ನು ಮದುವೆಯಾಗಲು ಹೆಮ್ಮೆಪಡುವ ಹುಡುಗರು ನಮ್ಮಲ್ಲಿದ್ದಾರೆ. ಕೆಲಸ ಮಾಡುವ ಹುಡುಗಿಯನ್ನು ಮದುವೆಯಾಗಲು ಬಯಸಿದ್ರೆ, ಅವಳ ಜೊತೆ ಖುಷಿಯಿಂದ ದೀರ್ಘಕಾಲ ಬಾಳಬೇಕು ಎಂದಾದ್ರೆ ಕೆಲವೊಂದು ವಿಷ್ಯವನ್ನು ತಿಳಿದಿರಬೇಕು. ಅನೇಕ ಬಾರಿ ಈ ಉತ್ಸಾಹ ಕೆಲ ದಿನ ಮಾತ್ರ ಇರುತ್ತದೆ. ಮನೆ, ಮಕ್ಕಳನ್ನು ನೋಡಿಕೊಳ್ಳಲು ಯಾರೂ ಇಲ್ಲ ಎನ್ನುವ ಭಯ (Fear) ಶುರುವಾದಾಗ  ಅಥವಾ ಪತ್ನಿಗೆ ತನಗಿಂತ ಹೆಚ್ಚು ಸಂಬಳ ಬರ್ತಿದೆ ಎಂದಾಗ ಸಂಬಂಧ ಹಾಳಾಗಲು ಶುರುವಾಗುತ್ತದೆ. ನಾವಿಂದು ಉದ್ಯೋಗದಲ್ಲಿರುವ ಹುಡುಗಿಯನ್ನು ಮದುವೆಯಾಗ್ಬೇಕೆಂದ್ರೆ ಹುಡುಗ ಏನೆಲ್ಲ ವಿಷ್ಯ ತಿಳಿದಿರಬೇಕು ಎಂಬುದನ್ನು ನಿಮಗೆ ಹೇಳ್ತೇವೆ.

ಮೂಡ್‌ ಬಂದಾಗೆಲ್ಲಾ ಅಲ್ಲ..ಯಾವಾಗೆಲ್ಲ ಲೈಂಗಿಕ ಕ್ರಿಯೆ ನಡೆಸಬಾರದು ತಿಳ್ಕೊಳ್ಳಿಳ್ಳಿ

ಉದ್ಯೋಗದಲ್ಲಿರುವ ಹುಡುಗಿ ಮದುವೆಯಾಗ್ಬೇಕಾ? :
ಮನೆ ಕೆಲಸದಲ್ಲಿ ನೆರವಾಗಿ :
ಮನೆ ಮತ್ತು ಕೆಲಸ ಎರಡನ್ನೂ ಸಂಭಾಳಿಸುವುದು ಸುಲಭದ ಕೆಲಸವಲ್ಲ. ಅನೇಕ ಮಹಿಳೆಯರು ಈ ಎರಡರ ಮಧ್ಯೆ ಒದ್ದಾಡುತ್ತಿರುತ್ತಾರೆ. ಉದ್ಯೋಗಸ್ಥ ಮಹಿಳೆಯನ್ನು ಮದುವೆಯಾಗ್ಬೇಕೆಂದ್ರೆ ಪುರುಷರು ಕೂಡ ಮನೆ ಕೆಲಸದಲ್ಲಿ ಪತ್ನಿಗೆ ನೆರವಾಗಬೇಕು. ಆಕೆ ಮನೆ ಕೆಲಸದಲ್ಲಿ ಪರ್ಫೆಕ್ಟ್ ಇರಬಹುದು. ಆದ್ರೆ ಅಡುಗೆ ಕೆಲಸ, ಬಟ್ಟೆ ಒಗೆಯುವುದು ಸೇರಿದಂತೆ ಸಣ್ಣ ಪುಟ್ಟ ಕೆಲಸಗಳಲ್ಲಿ ಸಹಾಯ ಮಾಡಿದ್ರೂ ಆಕೆಯ ಕೆಲಸದ ಹೊರೆ ಕಡಿಮೆಯಾಗುತ್ತದೆ. 

ಮಗುವಿನ ಜವಾಬ್ದಾರಿ ಹಂಚಿಕೊಳ್ಳಿ : ಪತ್ನಿ ಮಾಡಿದ ಅಡುಗೆಯನ್ನು ಎಲ್ಲರೂ ತಿನ್ನುತ್ತೇವೆ. ಆಕೆ ದುಡಿದ ಹಣದಲ್ಲಿ ಮನೆಯ ಸಾಮಗ್ರಿಗಳನ್ನು ಖರೀದಿ ಮಾಡ್ತೇವೆ. ಹಾಗೆಯೇ ಮಕ್ಕಳ ಕೂಡ. ಮಗುವನ್ನು ಜಗತ್ತಿಗೆ ತರಲು ಪುರುಷ ಮತ್ತು ಮಹಿಳೆ ಇಬ್ಬರೂ ಬೇಕು. ಅದೇ ರೀತಿ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿಯೂ ಪುರುಷರ  ಮೇಲಿರುತ್ತದೆ. ಮಕ್ಕಳ ಜವಾಬ್ದಾರಿಯನ್ನು ಪತ್ನಿ ಮೇಲೆ ಹಾಕಿ ಅನೇಕ ಪುರುಷರು ಆರಾಮವಾಗಿರ್ತಾರೆ. ಆದ್ರೆ  ಮಗುವನ್ನು ನೋಡಿಕೊಳ್ಳಲು ಪುರುಷರು ಯಾವಾಗ್ಲೂ ಪತ್ನಿ ಜೊತೆಗಿರಬೇಕು. ನೀವು ಮಕ್ಕಳ ಜವಾಬ್ದಾರಿ ಹೊರಲು ಸಿದ್ಧರಿದ್ದೀರಿ ಎಂದಾದ್ರೆ ಮಾತ್ರ ಕೆಲಸಕ್ಕೆ ಹೋಗು ಮಹಿಳೆಯನ್ನು ಮದುವೆಯಾಗಿ.

ಜಿಮ್‌ ಬೇಡ! ಸೆಕ್ಸ್‌ ಮೂಲಕವೇ ಕಳೆದುಕೊಳ್ಳಬಹುದು ಹೆಚ್ಚಿನ ಮೈತೂಕ!

ಏಕಾಂಗಿಯಾಗಿ ನಿರ್ಧಾರ ತೆಗೆದುಕೊಳ್ಳಬೇಡಿ : ಉದ್ಯೋಗಸ್ಥ ಮಹಿಳೆಯರು ಅನುಭವದಲ್ಲಿ ಯಾರಿಗೂ ಕಡಿಮೆಯಿರೋದಿಲ್ಲ. ಹಾಗಾಗಿ ಮನೆ ಕೆಲಸ ಅಥವಾ ವೃತ್ತಿಗೆ ಸಂಬಂಧಿಸಿದ ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ್ಲೂ ನೀವು ಪತ್ನಿಯ ಜೊತೆ ಮಾತುಕತೆ ನಡೆಸಬೇಕು. ಅವರ ಜೊತೆ ಚರ್ಚಿಸಿ ತೀರ್ಮಾನಿಸಬೇಕು. ಎಲ್ಲ ನಿರ್ಧಾರಗಳನ್ನು ನಾನೊಬ್ಬನೆ ತೆಗೆದುಕೊಳ್ತೇನೆ ಅಂದ್ರೆ ಯಾವುದೇ ಕಾರಣಕ್ಕೂ ಮದುವೆಯಾಗುವ ತೀರ್ಮಾನಕ್ಕೆ ಬರಬೇಡಿ.

ನೌಕರಿ ಬಿಡುವಂತೆ ಒತ್ತಡ ಹೇರಬೇಡಿ : ಕೆಲ ಪುರುಷರು ಉದ್ಯೋಗಸ್ಥ ಮಹಿಳೆಯರನ್ನು ಮದುವೆಯೇನೋ ಆಗ್ತಾರೆ. ಆದ್ರೆ ಮದುವೆ ನಂತ್ರ ಮನೆ ಕೆಲಸ, ಮಕ್ಕಳ ಜವಾಬ್ದಾರಿ ಸೇರಿದಂತೆ ಎಲ್ಲ ಕೆಲಸದಲ್ಲಿ ನೆರವು ನೀಡಲು ಆಗ್ತಿಲ್ಲ ಎಂದಾಗ ಕೆಲಸ ಬಿಡುವಂತೆ ಪತ್ನಿಗೆ ಒತ್ತಡ ಹೇರುತ್ತಾರೆ. ಮನಸ್ಸಿಲ್ಲದ ಮನಸ್ಸಿನಲ್ಲಿ ಕೆಲಸ ಬಿಡುವ ಪತ್ನಿ ತನ್ನ ಕಸನು ಈಡೇರಿಸಿಕೊಳ್ಳಲಾಗದೆ ಸಂಬಂಧವನ್ನೇ ಮುರಿದುಕೊಳ್ಳುವ ಸಾಧ್ಯತೆಯಿರುತ್ತದೆ.  
 

Latest Videos
Follow Us:
Download App:
  • android
  • ios