Asianet Suvarna News Asianet Suvarna News

ಇಂಥ ಮಹಿಳೆಯರನ್ನು ಎಂದೂ ಮರೆಯಲ್ಲ ಗಂಡಸ್ರು!

ಹೆಣ್ಣಿನ ಆಕರ್ಷಣೆ ಆಕೆಯ ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯದಲ್ಲಿರಬೇಕು. ಆಕೆಯಲ್ಲಿ ಕೆಲವೊಂದು ಅಮೂಲ್ಯ ಗುಣ – ಸ್ವಭಾವವಿದ್ರೆ ಮೇಕಪ್ ಮಾಡದೆ ಆಕೆ ಚೆಂದ ಕಾಣ್ತಾಳೆ. ಪುರುಷನನ್ನು ಶಾಶ್ವತವಾಗಿ ಆಕರ್ಷಿಸುತ್ತಾಳೆ.

These Unique Qualities Of An Woman Makes Her Unforgettable For A Men roo
Author
First Published Oct 26, 2023, 2:13 PM IST

ಮಹಿಳೆಯ ಸೌಂದರ್ಯವನ್ನು ಪದಗಳಿಂದ ಹೊಗಳಲು ಸಾಧ್ಯವಾಗೋದಿಲ್ಲ. ಪ್ರತಿಯೊಬ್ಬ ಮಹಿಳೆಯೂ ಸೌಂದರ್ಯದಲ್ಲಿ ಮುಂದಿರ್ತಾಳೆ. ಒಬ್ಬಳು ತೆಳ್ಳಗೆ- ಬೆಳ್ಳಿಗಿದ್ರೆ, ಇನ್ನೊಬ್ಬಳು ಕಪ್ಪಗಿದ್ರೂ ಲಕ್ಷಣವಾಗಿರ್ತಾಳೆ.  ಈ ಬಾಹ್ಯ ಸೌಂದರ್ಯಕ್ಕೆ ಪುರುಷ ಮೊದಲು ಮರುಳಾಗೋದು ಎಂಬ ಮಾತು ನೂರಕ್ಕೆ ನೂರು ಸತ್ಯ. ಒಂದು ಸುಂದರವಾದ ಹುಡುಗಿ ತನ್ನ ಪಕ್ಕದಲ್ಲಿ ಹೋಗ್ತಿದ್ದರೆ ಬಿಟ್ಟ ಕಣ್ಣು ಬಿಟ್ಟಂತೆ ನೋಡ್ತಿರುತ್ತಾನೆ ಪುರುಷ. ಆದ್ರೆ ಆ ಹುಡುಗಿ ಆತನ ನೆನಪಿನಿಂದ ಬಹಳ ಬೇಗ ಮರೆಯಾಗಿರ್ತಾಳೆ. ಆಕೆ ಕಣ್ಮುಂದೆ ಇಲ್ಲವೆಂದ್ರೆ ಆಕೆ ಹಾಗೂ ಆಕೆ ಸೌಂದರ್ಯವನ್ನು ಪುರುಷ ಮರೆಯುತ್ತಾನೆ. ಸದಾ ಪುರುಷನ ನೆನಪಿನಲ್ಲಿರುವ ಮಹಿಳೆ ಸೌಂದರ್ಯವತಿ ಆಗಿರದೆ ಇರಬಹುದು. ಆಕೆಯ ಕೆಲ ಸ್ವಭಾವ ಹಾಗೂ ವರ್ತನೆ, ಪುರುಷನನ್ನು ಶಾಶ್ವತವಾಗಿ ಆಕರ್ಷಿಸುತ್ತದೆ. ಆ ಮಹಿಳೆಯನ್ನು ಪುರುಷ ಎಂದಿಗೂ ಮರೆಯಲಾರ. ಅವಳಿಗೊಂದು ವಿಶೇಷ ಗೌರವ, ಸ್ಥಾನವನ್ನು ಪುರುಷ ತನ್ನ ಜೀವನದಲ್ಲಿ ನೀಡ್ತಾನೆ. ಬಾಹ್ಯ ಸೌಂದರ್ಯ ಯಾವಾಗ್ಲೂ ತಾತ್ಕಾಲಿಕ. ಆಂತರಿಕ ಸೌಂದರ್ಯ ಶಾಶ್ವತ. ನಾವಿಂದು ಪುರುಷನನ್ನು ಸದಾ ಸೆಳೆಯುವ ಮಹಿಳೆಯ ಸೌಂದರ್ಯ ಯಾವುದು ಎಂಬುದನ್ನು ಹೇಳ್ತೇವೆ.

ಪುರುಷ (Male) ರನ್ನು ಆಕರ್ಷಿಸುತ್ತೆ ಮಹಿಳೆ ಈ ಗುಣ :  

ಸೆಲ್ಫ್ ಇಂಡಿಪೆಂಡೆಂಟ್ (Self Independent): ಈಗಿನ ದಿನಗಳಲ್ಲಿ ಮಹಿಳೆ ಸ್ವಾವಲಂಬಿಯಾಗ್ತಿದ್ದಾಳೆ. ಯಾವುದಕ್ಕೂ ಯಾರನ್ನೂ ಅವಲಂಬಿಸದೆ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಮಹಿಳೆ, ಪುರುಷರನ್ನು ಸೆಳೆಯುತ್ತಾಳೆ. ತನ್ನ ಶಕ್ತಿಯನ್ನು ಅರಿತ ಮಹಿಳೆ ಅದನ್ನು ಹೇಗೆ ಬಳಸಿಕೊಳ್ಳಬೇಕೆಂಬುದನ್ನು ತಿಳಿದಿರುತ್ತಾಳೆ. ಪತಿ, ತಂದೆ ಸೇರಿದಂತೆ ಯಾವ ಪುರುಷರು ಅಥವಾ ತನ್ನ ಕುಟುಂಬಸ್ಥರು, ಸಂಬಂಧಿಕರನ್ನು ಅವಲಂಬಿಸದೆ  ಜವಾಬ್ದಾರಿ (Responsibility) ಯಿಂದ ದೊಡ್ಡ ಹುದ್ದೆಯನ್ನು ಕೂಡ ನಿಭಾಯಿಸುತ್ತಾಳೆ. ಆಕೆಯ ಸೆಲ್ಫ್ ಇಂಡಿಫೆಂಡೆನ್ಸಿ ಪುರುಷ ಗಮನ ಸೆಳೆಯುತ್ತದೆ. 

ರಾಮ - ಸೀತೆಯಂಥಹ ಪತಿ- ಪತ್ನಿ ನೀವಾಗಲು ಈ ವಿಷಯ ಅರ್ಥ ಮಾಡ್ಕೊಳಿ

ಹಾಸ್ಯ ಪ್ರಜ್ಞೆ – ಸೃಜನಶೀಲತೆ (Humerous and Creativity): ಸದಾ ಮುಖ ಗಂಟಿಕ್ಕಿಕೊಂಡು ಓಡಾಡುವ ಅಥವಾ ಮಾತನಾಡಿದ್ರೆ ಕೋಪಮಾಡಿಕೊಳ್ಳುವ ಮಹಿಳೆ ಪುರುಷನನ್ನು ಆಕರ್ಷಿಸಲು ಸಾಧ್ಯವಿಲ್ಲ. ಬಿಗಿಯಾಗಿದ್ದ ವಾತಾವರಣವನ್ನು ತನ್ನ ಉತ್ತಮ ಹಾಸ್ಯದೊಂದಿಗೆ ತಿಳಿಗೊಳಿಸಬಲ್ಲ, ಸದಾ ಮುಖದ ಮೇಲೊಂದು ಮುಗುಳ್ನಗೆ ಹೊಂದಿರುವ ಮಹಿಳೆಯರನ್ನು ಪುರುಷರು ಕಣ್ಣು ಮಿಟುಕಿಸದೆ ನೋಡ್ತಾರೆ. ಅವರ ಈ ವ್ಯಕ್ತಿತ್ವ ಪುರುಷರಿಗೆ ಇಷ್ಟವಾಗುತ್ತದೆ.

ಬುದ್ಧಿವಂತ ಮಹಿಳೆ (Intelligent Women) : ತನಗೆ ಸ್ಪರ್ಧೆ ನೀಡಬಲ್ಲ ಬುದ್ಧಿವಂತ ಮಹಿಳೆಯನ್ನು ಪುರುಷ ಇಷ್ಟಪಡೋದಿಲ್ಲ ಎನ್ನುವ ಮಾತಿದೆ. ಅದು ಸುಳ್ಳು. ತನ್ನ ಬುದ್ಧಿವಂತಿಕೆ ಉಪಯೋಗಿಸಿ ಅರೆ ಕ್ಷಣದಲ್ಲಿ ಸಮಸ್ಯೆ ಬಗೆಹರಿಸುವ, ದೊಡ್ಡ ದೊಡ್ಡ ಸಮಸ್ಯೆಗಳನ್ನು ಕೂಡ ಕೂಲ್ ಆಗಿ ನಿಭಾಯಿಸಬಲ್ಲ ಮಹಿಳೆಯನ್ನು ಪುರುಷರು ಇಷ್ಟಪಡ್ತಾರೆ. ಆಕೆ ಜೊತೆ ಅವರು ಚರ್ಚೆ ನಡೆಸಿ, ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸ್ತಾರೆ.

ಲೈಫ್ ಹ್ಯಾಪಿಯಾಗಿರ್ಬೇಕೆಂದ್ರೆ ಸ್ವಲ್ಪ ವೈಫನ್ನು ಖುಷಿಯಾಗಿಡೋದು ಹೇಗೆ ಕಲೀರಿ!

ಉತ್ತಮ ಕೇಳುಗ (Good Listener) : ಮಹಿಳೆ ಸದಾ ಮಾತನಾಡ್ತಾಳೆ ಎನ್ನುವ  ಒಂದು ಆರೋಪವಿದೆ. ಬೇರೆಯವರ ಮಾತನ್ನು ಆಲಿಸದೆ ತನ್ನ ಮಾತಿನಲ್ಲೇ ಮಹಿಳೆ ಮುಳುಗಿ ಹೋಗ್ತಾಳೆ ಎಂದು ಅನೇಕರು ಹೇಳ್ತಾರೆ. ಆ ಎಲ್ಲ ಮಾತಿನ ಮಲ್ಲಿಯರ ಮಧ್ಯೆ ಒಬ್ಬ ಮಹಿಳೆ ಎಲ್ಲವನ್ನೂ ಶಾಂತವಾಗಿ ಕೇಳ್ತಿದ್ದರೆ, ಎಲ್ಲರ ಮಾತನ್ನು ಆಲಿಸಿ ಅದಕ್ಕೆ ಸ್ಪಂದಿಸುತ್ತಿದ್ದರೆ ಆಕೆಯನ್ನು ಪುರುಷರು ಇಷ್ಟಪಡ್ತಾರೆ. ಅವಳನ್ನು ಪುರುಷರು ಎಂದಿಗೂ ಮರೆಯುವುದಿಲ್ಲ.

ನಡೆ, ನುಡಿಯಲ್ಲಿ ಸಭ್ಯತೆ (Descency in Bevaiour): ಒಂದೇ ಸಮನೆ ಮಾತನಾಡುವುದು ಬೇರೆ, ಅನವಶ್ಯಕ ಮಾತು ಬೇರೆ. ಮಹಿಳೆ ಚೆಲ್ಲುಚೆಲ್ಲಾಗಿ ವರ್ತನೆ ಮಾಡ್ತಿದ್ದರೆ ಅದು ಪುರುಷರಿಗೆ ಇಷ್ಟವಾಗೋದಿಲ್ಲ. ತಮಾಷೆಗೆ ನಿಮ್ಮ ಜೊತೆ ಮಾತನಾಡಬಹುದೇ ವಿನಃ ನೀವು ಅವರ ನೆನಪಿನಲ್ಲುಳಿಯಲು ಸಾಧ್ಯವೇ ಇಲ್ಲ. ಮಹಿಳೆಯ ವರ್ತನೆ, ಸಭ್ಯತೆ, ನುಡಿ ಎಲ್ಲವೂ ಹಿತ, ಮಿತವಾಗಿದ್ದಾಗ ಪುರುಷ ಸದಾ ನೆನೆಯುತ್ತಾನೆ. 
 

Follow Us:
Download App:
  • android
  • ios