ಮಲಕ್ಕೊಂಡು ಎಷ್ಟ್ ಹೊತ್ತಾದ್ರೂ ನಿದ್ದೆ ಬರಲ್ವಾ, ಈ ಟ್ರಿಕ್ ಯೂಸ್ ಮಾಡಿ
ಸುಸ್ತಾಗಿರುತ್ತೆ.ಆದ್ರೆ ಮಲಕ್ಕೊಂಡು ಎಷ್ಟ್ ಹೊತ್ತಾದ್ರೂ ನಿದ್ದೆ ಬರಲ್ಲ ಅನ್ನೋದು ಹಲವರ ಗೋಳು. ಯಾಕೆ ಹೀಗಾಗುತ್ತೆ. ಮಲಗಿದ ತಕ್ಷಣ ನಿದ್ದೆ ಬರೋಕೆ ಏನು ಮಾಡ್ಬೋದು? ಇಲ್ಲಿದೆ ಡೀಟೈಲ್ಸ್.
ಮ್ಯೂಸಿಕ್ ಕೇಳಿ
ನಿದ್ದೆ ಮಾಡುವ ಮೊದಲು ಹದಿನೈದರಿಂದ ಇಪ್ಪತ್ತು ನಿಮಿಷ ಮ್ಯೂಸಿಕ್ ಕೇಳುವ ಅಭ್ಯಾಸ ನಿಮಗೆ ಸುಲಭವಾಗಿ ನಿದ್ದೆ ಬರುವಂತೆ ಮಾಡುತ್ತದೆ. ಇದು ಮನಸ್ಸಿನ ಒತ್ತಡವನ್ನು ನಿವಾಸಿ, ರಿಲ್ಯಾಕ್ಸ್ ಮಾಡುತ್ತದೆ ಎಂದು ಸ್ಲೀಪ್ ಫೌಂಡೇಶನ್ ತಿಳಿಸಿದೆ.
ರೂಮ್ ಟೆಂಪರೇಚರ್ ಕಡಿಮೆ ಮಾಡಿ
ರೂಮಿನ ಟೆಂಪರೇಚರ್ ಕಡಿಮೆ ಮಾಡಿದರೆ ಬೇಗನೇ ನಿದ್ದೆ ಬರುವ ಅನುಭವವಾಗುತ್ತದೆ. ಯಾಕೆಂದರೆ ಸುತ್ತಲೂ ಕತ್ತಲೆ ಇರುವುದರಿಂದ ದೇಹ ಮೆದುಳಿಗೆ ಬೇಗ ನಿದ್ದೆ ಮಾಡುವ ಸಿಗ್ನಲ್ ಕಳುಹಿಸುತ್ತದೆ ಎಂದು ಹೆಲ್ತ್ ಲೈನ್ ಹೇಳಿದೆ.
ಲೈಟ್ ಆಫ್ ಮಾಡಿ
ರೂಮಿನಲ್ಲಿ ಆನ್ ಆಗಿರುವ ಲೈಟ್‌ಗಳನ್ನು ಆಫ್ ಮಾಡಿ. ರೂಮನ್ನು ಸಾಧ್ಯವಾದಷ್ಟು ಕತ್ತಲಾಗಿರಿಸಿ. ಇದು ದೇಹವನ್ನು ಬೇಗನೇ ನಿದ್ದೆ ಮಾಡುವಂತೆ ಉತ್ತೇಜಿಸುತ್ತದೆ.
ಏಳಲು, ಮಲಗಲು ಸಮಯ ನಿಗದಿಪಡಿಸಿ
ನಾವು ಪ್ರತಿನಿತ್ಯ ಯಾವ ಸಮಯಕ್ಕೆ ಮಲಗುತ್ತೇವೆ ಮತ್ತು ಯಾವ ಸಮಯಕ್ಕೆ ಏಳುತ್ತೇವೆ ಎಂಬುದು ತುಂಬಾ ಮುಖ್ಯವಾಗುತ್ತದೆ. ಇದರಂತೆ ಬಾಡಿ ಕ್ಲಾಕ್ ಕಾರ್ಯ ನಿರ್ವಹಿಸುತ್ತದೆ. ಅದು ಅದಲು ಬದಲಾದಾಗ ನಿದ್ದೆ ಬರುವುದಿಲ್ಲ.
ಧ್ಯಾನ
ಧ್ಯಾನ ಮಾಡುವ ಅಭ್ಯಾಸ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಮನಸ್ಸಿನ ಒತ್ತಡವನ್ನು ನಿವಾರಿಸುತ್ತದೆ. ಧ್ಯಾನ ಮಾಡುವ ಅಭ್ಯಾಸ ನಿಮಗೆ ಚಿಂತೆಯಿಲ್ಲದೆ ನಿದ್ದೆ ಮಾಡಲು ಅನುಕೂಲ ಮಾಡಿಕೊಡುತ್ತದೆ. ಸ್ಲೀಪ್ ಫಂಡೇಶನ್ ಈ ವಿಚಾರವನ್ನು ಬಹಿರಂಗಪಡಿಸಿದೆ.
ಹಗಲು ಮಲಗುವುದನ್ನು ತಪ್ಪಿಸಿ
ಹಗಲಿನಲ್ಲಿ ಕೇವಲ 2 ಗಂಟೆ ಮಲಗಿದರೂ ಸಾಕು ರಾತ್ರಿ ನಿದ್ದೆ ಮಾಡಲು ಸಾಧ್ಯವಾಗದೆ ಒದ್ದಾಡಬೇಕಾಗುತ್ತದೆ. ಇದು ದೇಹದ ಸರ್ಕಾಡಿಯನ್ ರಿದಮ್‌ನ್ನು ನಿಯಂತ್ರಿಸುತ್ತದೆ ಹೀಗಾಗಿ ಹಗಲು ಮಲಗುವುದನ್ನು ತಪ್ಪಿಸಿ.