ನಿಮಗೆ ದೇಹಕ್ಕೀಗ ಸೆಕ್ಸ್ ಬೇಕು ಅನ್ನೋದರ ಸೂಚನೆಗಳಿವು!

ನಮ್ಮ ದೇಹಕ್ಕೆ ಸೆಕ್ಸ್‌ ಅನ್ನು ಬೇಡುತ್ತದೆ ಅನ್ನೋ ಕೆಲವು ಸೂಚನೆಗಳನ್ನು ದೇಹವೇ ನೀಡುತ್ತದೆ. ಅಂಥಾ ಸೂಚನೆಗಳೇನು? ಈ ಅನುಭವ ನಿಮಗೂ ಆಗಿದೆಯಾ?

These are indications of sex need

ನೀವಿದನ್ನು ನಂಬ್ತೀರೋ ಇಲ್ಲವೋ ಗೊತ್ತಿಲ್ಲ. ಆದರೆ ದೇಹ ಕೆಲವೊಂದು ಸೂಚನೆಗಳನ್ನು ನೀಡುತ್ತದೆ. ಅದನ್ನು ನೀವು ಡೀಕೋಡ್ ಮಾಡಿದರೆ ದೇಹದ ಭಾಷೆ ಅರ್ಥವಾಗುತ್ತದೆ. ಆದರೆ ಹೆಚ್ಚಿನವರು ಕೆಲವು ದೇಹಭಾಷೆಯನ್ನ ಅರ್ಥ ಮಾಡಿಕೊಳ್ಳದೇ ಒದ್ದಾಡುತ್ತಾರೆ. ಒಂದು ಸಿಂಗಲ್ ಲುಕ್ ಅನ್ನು ಅರ್ಥ ಮಾಡಿಕೊಂಡರೆ ರಿಲೇಶನ್‌ಶಿಪ್‌ ಮತ್ತೊಂದು ಲೆವೆಲ್‌ಗೆ ಹೋಗಬಲ್ಲದು. ಆದರೆ ಎಷ್ಟೋ ಮಂದಿ ಅದರಲ್ಲೂ ಹೆಂಗಸರು ಇಂಥಾ ದೇಹ ಭಾಷೆಯನ್ನು ಅವಾಯ್ಡ್ ಮಾಡುತ್ತಾರೆ. ಅದರಿಂದ ಏನೇನೋ ಮಾನಸಿಕ ಸಮಸ್ಯೆ ಎದುರಿಸುತ್ತಾರೆ. ಎಷ್ಟೋ ಜನರಿಗೆ ತನ್ನ ದೇಹ ಬೇಡುತ್ತಿರುವುದು ಅ ಅನುಭವವನ್ನು ಅನ್ನೋದೇ ಅರ್ಥ ಆಗಲ್ಲ. ಕೆಲವರು ಅದು ಅರ್ಥ ಆದರೂ ಸೆಕ್ಸ್ ಅಪರಾಧ ಅನ್ನೋ ಥರ ಫೀಲ್ ಆಗುತ್ತಾರೆ. ದೇಹ ತನಗೆ ಸೆಕ್ಸ್ ನ ಅಗತ್ಯ ಇದೆ ಅನ್ನೋದನ್ನು ತೋರಿಸೋದು ಈ ಸೂಚನೆಗಳ ಮೂಲಕ.

ಸುಮ್ಮನಿದ್ದರೂ ಏದುಸಿರು: ದೇಹ ಹೆಚ್ಚು ಎಕ್ಸೈಟ್ ಆಗುತ್ತದೆ. ಬೇಗ ಬೇಗ ಉಸಿರಾಡಬೇಕು ಅನಿಸುತ್ತದೆ. ಉಸಿರಾಟ ತೀವ್ರವಾಗುತ್ತಿರುವ ಹಾಗೆ ಏದುಸಿರು ಬರಲು ಶುರುವಾಗುತ್ತದೆ. ಹೃದಯ ಬಡಿತ ಹೆಚ್ಚಾಗುತ್ತದೆ. ದೇಹ ಆ ಕ್ರಿಯೆಗೆ ಸಜ್ಜಾಗುತ್ತಿರುವಾಗ ಅಂಗಾಗಗಳಿಗೆ ಹೆಚ್ಚಿನ ಆಮ್ಲಜನಕದ ಅಗತ್ಯ ಇರುತ್ತದೆ. ಹೀಗಾಗಿ ಹೆಚ್ಚು ಆಮ್ಲಜನಕಕ್ಕಾಗಿ ದೇಹ ಹಾತೊರೆಯುತ್ತದೆ. ಆಗ ಈ ಎಲ್ಲ ದೈಹಿಕ ಸೂಚನೆಗಳೂ ಕಾಣಬಹುದು. ಯಾಕೋ ಉಸಿರಾಡಲು ಕಷ್ಟ ಪಡ್ತಾ ಇದೀನಿ ಅನ್ನೋ ಫೀಲ್ ಬರಬಹುದು. ಹೃದಯ ಬಡಿತ ಹೆಚ್ಚಾಗೋದು, ಉಸಿರಾಟ ತೀವ್ರವಾಗೋದು ಇತ್ಯಾದಿಗಳು ಸೆಕ್ಸ್‌ಗೆ ದೇಹ ಎದುರು ನೋಡುತ್ತಿದೆ ಅನ್ನೋದರ ಸೂಚನೆ.

ವಿರುದ್ಧ ಲಿಂಗದವರ ಬಗ್ಗೆ ಆಕರ್ಷಣೆ: ಕಣ್ಣು ಪದೇ ಪದೇ ವಿರುದ್ಧ ಲಿಂಗದವರ ಆಕರ್ಷಣೆಯಲ್ಲಿ ಬೀಳುತ್ತದೆ. ಅವರನ್ನು ಕದ್ದು ಮುಚ್ಚಿ ಗಮನಿಸಲು ಶುರು ಮಾಡುತ್ತದೆ. ಹ್ಯಾಂಡ್‌ಸಮ್ ಅನಿಸೋ ಹುಡುಗ, ಕ್ಯೂಟ್ ಅನಿಸೋ ಹುಡುಗಿ ಎದುರಾದಾಗ ಮನಸ್ಸಲ್ಲಿ ಏನೇನೋ ಭಾವನೆಗಳು ಮೂಡಬಹುದು. ಇದು ದೇಹ ಬಯಸೋದೇನನ್ನು ಅನ್ನೋದರ ಸೂಚನೆ ನೀಡುತ್ತದೆ.

ಸಂಗಾತಿಗೆ ಹೆಚ್ಚು ಹತ್ತಿರಾಗೋದು: ಅಗತ್ಯ ಇರಲಿ, ಇಲ್ಲದಿರಲಿ ಸಂಗಾತಿಯನ್ನು ಮುಟ್ಟೋದು, ಹೆಚ್ಚೆಚ್ಚು ಮುಟ್ಟಿ ಮಾತಾಡಿಸೋದು, ಅವರ ಮೈ ಮೇಲೆ ಬೀಳೋದು, ಕಣ್ಣುಗಳಲ್ಲೇ ಆಟ ಆಡೋದು ಹೀಗೆ ಹಲವು ಸೂಚನೆಗಳನ್ನು ಸಂಗಾತಿಯ ಎದುರು ತೋರ್ಪಡಿಸಿದರೆ ಅದು ದೇಹ ಮನಸ್ಸು ಸೆಕ್ಸ್ ಗಾಗಿ ಒದ್ದಾಡುತ್ತಿರುವುದರ ಸೂಚನೆ.

ಏನೇನೋ ಕಲ್ಪನೆಗಳು: ಕಣ್ಣುಮುಚ್ಚಿದರೆ ಬರೀ ರೊಮ್ಯಾಂಟಿಕ್ ಕಲ್ಪನೆಗಳು, ಏನೇನೆಲ್ಲ ಕನಸು. ಕೈಯಲ್ಲಿರೋ ಮೊಬೈಲಲ್ಲೂ ಅದೇ ಥರದ ದೃಶ್ಯಗಳನ್ನು ನೋಡಬೇಕು ಅನಿಸುತ್ತೆ. ಆ ಥರದ ಸಂಗತಿಗಳನ್ನು ತೀವ್ರವಾಗಿ ಓದಬೇಕು, ನೋಡಬೇಕು ಅನಿಸುತ್ತೆ. ಇದರಿಂದ ನಿದ್ರೆ ಬರದೇ ಹೋಗಬಹುದು.

ಇಷ್ಟೆಲ್ಲ ಸೂಚನೆ ಸಿಕ್ಕಿದ ಮೇಲೂ ಸೆಕ್ಸ್ ಮಾಡದಿದ್ದರೆ ಒಂದಿಷ್ಟು ಸಮಸ್ಯೆ ಬರಬಹುದು. ಒಂದು ವೇಳೆ ಸೆಕ್ಸ್ ಮಾಡಿದರೆ ಅದರಿಂದ ದೈಹಿಕ ಮಾನಸಿಕ ಪ್ರಯೋಜನಗಳು ಹೆಚ್ಚುತ್ತವೆ. ವಾರಕ್ಕೆರಡು ಬಾರಿ ಲೈಂಗಿಕ ಚಟುವಟಿಕೆಯಲ್ಲಿ ಭಾಗವಹಿಸುವ ಮಂದಿಯಲ್ಲಿ ಹಾರ್ಟ್ ಅಟ್ಯಾಕ್ ಸಮಸ್ಯೆ ಕಡಿಮೆ. ನಿಯಮಿತವಾಗಿ ಲೈಂಗಿಕ ಕ್ರಿಯೆ ನಡೆಸಿದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ವೈರಸ್ ಆಧಾರಿತ ಸಾಮಾನ್ಯ ರೋಗಗಳಾದ ಜ್ವರ ಶೀತ ನೆಗಡಿಗಳಿಂದ ರಕ್ಷಿಸಿಕೊಳ್ಳಲು ದೇಹ ಇನ್ನಷ್ಟು ಸಬಲವಾಗುತ್ತದೆ. ಲೈಂಗಿಕ ಕ್ರಿಯೆಯಲ್ಲಿ(Sex activity) ತೊಡಗಿದಾಗ ಶರೀರದಲ್ಲಿ ಆಗುವಂತಹಾ ಬದಲಾವಣೆಗಳು ವರ್ಕ್ಔಟ್(Workout) ಮಾಡುವಾಗಲೂ ಆಗುತ್ತದೆ. ನಿತ್ಯ ಕಾಡುವ ತಲೆನೋವು ಥರದ ಸಮಸ್ಯೆಗಳು ನಿವಾರಣೆ ಆಗುತ್ತದೆ. ಕಾಮೋತ್ಕಟತೆಯ ಸಮಯದಲ್ಲಿ ದೇಹದಲ್ಲಿ ಆಕ್ಸಿಟೋಸಿನ್ ಎಂಬ ರಸದೂತ ಸ್ರವಿಸುವ ಪ್ರಮಾಣ ಐದು ಪಟ್ಟು ಹೆಚ್ಚುತ್ತದೆ. ಇದು ಮನೋಭಾವವನ್ನು ಉತ್ತಮಗೊಳಿಸುತ್ತದೆ ಹಾಗೂ ನರಗಳನ್ನು ಸಡಿಲಿಸಿ ಹೆಚ್ಚಿನ ರಕ್ತಸಂಚಾರ ಹರಿಸುವ ಮೂಲಕ ತಲೆನೋವಿನ ಸಹಿತ ಹಲವಾರು ನೋವುಗಳನ್ನು ಕಡಿಮೆ ಮಾಡುತ್ತದೆ. ಲೈಂಗಿಕತೆ ವೇಳೆ ಹೃದಯದ ಬಡಿತ(Heartbeat) ಹೆಚ್ಚಿ ಮೆದುಳು ಮತ್ತು ಜನನಾಂಗಗಳಿಗೆ ತಲುಪುವ ರಕ್ತದ ಪ್ರಮಾಣವೂ ಹೆಚ್ಚುತ್ತದೆ. ಹೊಸರಕ್ತ ದೇಹದ ಎಲ್ಲಾ ಜೀವಕೋಶಗಳಿಗೆ ತಲುಪುತ್ತದೆ. ಒಳ್ಳೆಯ ನಿದ್ದೆಯೂ ಬರುತ್ತದೆ. ಮನಸ್ಸಿಗೆ ಖುಷಿ, ದೇಹಕ್ಕೆ ಸುಖ.

ಚೀನಾದಲ್ಲಿ ಜನಸಂಖ್ಯೆ ಹೆಚ್ಚಿಸಲು ಹೊಸ ಪ್ಲ್ಯಾನ್‌: ಅವಿವಾಹಿತ ಮಹಿಳೆಯರಿಗೂ ಮಕ್ಕಳು ಮಾಡಿಕೊಳ್ಳಲು ಅನುಮತಿ?

Latest Videos
Follow Us:
Download App:
  • android
  • ios