Asianet Suvarna News Asianet Suvarna News

ಯಾರಿಗೂ ಹೆದರದ ಹುಡುಗ ಪ್ರೀತಿಸಿದವಳ ಮುಂದೆ ಮಂಡಿಯೂರೋದೇಕೆ?

ಪ್ರೀತಿಯಲ್ಲಿ ಬಿದ್ದ ವ್ಯಕ್ತಿ ತನ್ನ ಭಾವನೆಯನ್ನು ಬಹಿರಂಗವಾಗಿ ಹೇಳದೆ ಇರಬಹುದು. ಆದ್ರೆ ಆತನ ವರ್ತನೆಯೇ ಆತನ ಪ್ರೀತಿ ಕಥೆಯನ್ನು ಹೇಳುತ್ತದೆ. ನಿಮ್ಮ ಸಂಗಾತಿ ನಿಮ್ಮನ್ನು ಅಪಾರವಾಗಿ ಪ್ರೀತಿಸ್ತಾನೆ ಅನ್ನೋದನ್ನು ಇದ್ರಿಂದಲೂ ತಿಳಿದುಕೊಳ್ಳಬಹುದು. 
 

The reasons behind mens fear of their favorite women roo
Author
First Published Jun 26, 2024, 2:03 PM IST

ಪ್ರೀತಿಗೆ ತಾಕತ್ತು ಹೆಚ್ಚು. ಪ್ರೀತಿಯಲ್ಲಿ ಬಿದ್ದ ವ್ಯಕ್ತಿ ತನ್ನ ಸಂಗಾತಿಗಾಗಿ ಏನು ಬೇಕಾದ್ರೂ ಮಾಡಬಲ್ಲ. ಅದ್ರಲ್ಲೂ ಪುರುಷರ ಸ್ವಭಾವ ಸಾಕಷ್ಟು ಭಿನ್ನವಾಗಿರುತ್ತದೆ. ಅವರು ಇಡೀ ಪ್ರಪಂಚ ಎದುರು ಬಂದ್ರೂ ಅದನ್ನು ಎದುರಿಸಬಲ್ಲರು. ಆದ್ರೆ ಪ್ರೀತಿಸುವ ಹುಡುಗಿ ಮುಂದೆ ಸೋತು ಮಂಡಿಯೂರುತ್ತಾರೆ. ಅಪ್ಪ – ಅಮ್ಮ, ಸ್ನೇಹಿತರ ಜೊತೆ ಕಿತ್ತಾಡುವ, ಜಗಳ ಮಾಡುವ, ದ್ವೇಷ ಕಟ್ಟಿಕೊಳ್ಳುವ ಹುಡುಗ, ತನ್ನ ಹುಡುಗಿ ಮುಂದೆ ಮಾತ್ರ ಬೆಣ್ಣೆಯಂತೆ ಕರಗುತ್ತಾರೆ. ನಿಮ್ಮ ಪತಿ ಅಥವಾ ಸಂಗಾತಿ ನಿಮ್ಮ ಮಾತನ್ನು ಚಾಚೂ ತಪ್ಪದೆ ಕೇಳೋದು ಏಕೆ, ನಿಮ್ಮ ಮಾತಿಗೆ ಮನ್ನಣೆ ನೀಡೋದು ಏಕೆ ಎಂಬುದನ್ನು ನೀವು ತಿಳಿದ್ರೆ ನಿಮ್ಮ ಸಂಗಾತಿ ಮೇಲಿನ ಪ್ರೀತಿ ದುಪ್ಪಟ್ಟಾಗೋದ್ರಲ್ಲಿ ಸಂಶಯವಿಲ್ಲ. 

ಹುಡುಗಿ (Girl) ಮುಂದೆ ಹುಡುಗ ಸೋಲೋದೇಕೆ? : 

ಸಂಗಾತಿ ಮೇಲಿನ ಅಪಾರ ಪ್ರೀತಿ (Love) : ನಿಮ್ಮ ಹುಡುಗನಿಗೆ ನಿಮ್ಮ ಮೇಲೆ ಸ್ವಲ್ಪ ಭಯವಿದೆ ಎಂದಾದ್ರೆ ಆತ ನಿಮ್ಮನ್ನು ಅಪಾರವಾಗಿ ಪ್ರೀತಿಸ್ತಾನೆ ಎಂದೇ ಅರ್ಥ. ಒಬ್ಬ ಹುಡುಗ ಒಂದು ಹುಡುಗಿಯನ್ನು ಆಳವಾಗಿ ಪ್ರೀತಿಸಿದಾಗ ಆಕೆ ಹೇಳಿದ ಪ್ರತಿಯೊಂದು ಮಾತನ್ನು ಕೇಳ್ತಾನೆ. ಆಕೆ ಮನಸ್ಸು ನೋಯದಂತೆ ನೋಡಿಕೊಳ್ಳಲು ಬಯಸ್ತಾನೆ. ನನ್ನ ಮಾತಿನಿಂದ ಅಥವಾ ನನ್ನ ಕೆಲಸದಿಂದ ನನ್ನ ಸಂಗಾತಿಗೆ ಯಾವುದೇ ಕಷ್ಟವಾಗೋದು ಆತನಿಗೆ ಇಷ್ಟವಿರೋದಿಲ್ಲ. ಹಾಗಾಗಿಯೇ ಆಕೆ ಹೇಳಿದ್ದನ್ನು ತಪ್ಪಿಲ್ಲದೆ ಮಾಡಿ ಮುಗಿಸ್ತಾನೆ.

ಮದ್ವೇಲಿ ಸಿಂಧೂರ ಇಟ್ಟಿದ್ದಕ್ಕೆ ಅನ್ಯ ಕೋಮಿನವರಿಂದ ಸೋನಾಕ್ಷಿ ಸಿನ್ಹಾಗೆ ಕ್ಲಾಸ್!

ಕಳೆದುಕೊಳ್ಳುವ ಆತಂಕ : ಪ್ರೀತಿಸುವ ವ್ಯಕ್ತಿ ತನ್ನ ಸರ್ವಸ್ವವನ್ನೇ ಸಂಗಾತಿಗೆ ಧಾರೆ ಎರೆದಿರುತ್ತಾನೆ. ಅಪಾರವಾಗಿ ಪ್ರೀತಿಸುವ ಸಂಗಾತಿ ತನ್ನಿಂದ ದೂರವಾಗುವುದನ್ನು ಪುರುಷ ಸಹಿಸೋದಿಲ್ಲ. ಆಕೆಯಿಲ್ಲದ ಬಾಳನ್ನು ಆತನಿಗೆ ಕಲ್ಪಿಸಿಕೊಳ್ಳಲು ಸಾಧ್ಯವಿರೋದಿಲ್ಲ. ತನ್ನ ತಪ್ಪಿನಿಂದಾಗಿ ಆಕೆ ತನ್ನಿಂದ ದೂರವಾದ್ರೆ ಎನ್ನುವ ಭಯ ಅವನಿಗಿರುತ್ತದೆ. ಹಾಗಾಗಿಯೇ ಯಾರನ್ನು ಎದುರಿಸಿ ನಿಂತ್ರೂ ಹುಡುಗಿ ಮುಂದೆ ಮಾತ್ರ ಶಾಂತವಾಗ್ತಾನೆ. 

ಹಕ್ಕು ಚಲಾಯಿಸುವ ಹುಡುಗಿ ಇಷ್ಟ : ಕೆಲ ಹುಡುಗರಿಗೆ ಪ್ರೇಮಿ ಅಥವಾ ಪತ್ನಿ ತನ್ನ ಹಕ್ಕನ್ನು ಚಲಾಯಿಸಬೇಕು ಎನ್ನುವ ಆಸೆ ಇರುತ್ತದೆ. ಆಕೆ ಮುಂದೆ ತಪ್ಪು ಮಾಡಿದಾಗ ಆಕೆ ಬೈದ್ರೆ ಅವರಿಗೆ ಖುಷಿಯಾಗುತ್ತದೆ. ಆಕೆಯಿಂದ ಬೈಸಿಕೊಂಡು ಮತ್ತೆ ಆಕೆಯನ್ನು ಸಂತೈಸುವುದು ಅವರ ಪ್ರೀತಿಯ ಒಂದು ವಿಧಾನ. ಅನೇಕ ಹುಡುಗರು ಪತ್ನಿ ಅಥವಾ ಪ್ರೇಮಿ ಕೋಪಗೊಂಡಾಗ ಆಕೆಯನ್ನು ಒಲೈಸಲು ಬಯಸ್ತಾರೆ. ತಮ್ಮನ್ನು ತಾವು ಬದಲಿಸಿಕೊಳ್ಳುವ ಪ್ರಯತ್ನ ನಡೆಸುತ್ತಾರೆ. ತನ್ನ ನೆಚ್ಚಿನ ಹುಡುಗಿ ಹೇಳಿದ್ದನ್ನು ತಪ್ಪದೆ ಪಾಲಿಸ್ತಾರೆ, ಅವಳ ಆಸೆ ಈಡೇರಿಸುತ್ತಾರೆ. ಅವಳು ಇಷ್ಟಪಟ್ಟಿದ್ದನ್ನು ನೀಡ್ತಾರೆ. 

ಆಕೆ ಸಂತೋಷದಲ್ಲಿದೆ ಅವರ ಸಂತೋಷ : ಕೆಲ ಪುರುಷರು ತಮ್ಮ ಸಂತೋಷವನ್ನು ಸಂಗಾತಿಯಲ್ಲಿ ಹುಡುಕುತ್ತಾರೆ. ಪತ್ನಿ ಖುಷಿಯಾಗಿದ್ದರೆ ಇವರು ಖುಷಿಯಾಗಿದ್ದಂತೆ. ಆಕೆ ಸಂತೋಷವಾಗಿರಲು ಇವರು ಏನು ಬೇಕಾದ್ರೂ ಮಾಡ್ತಾರೆ. ಆಕೆಯನ್ನು ದುಃಖದಲ್ಲಿ ನೋಡಲು ಅವರಿಗೆ ಇಷ್ಟವಾಗೋದಿಲ್ಲ. ಆಕೆ ಮುಂದೆ ಕೋಪ ವ್ಯಕ್ತಪಡಿಸಿದ್ರೆ ಅವಳಿಗೆ ನೋವಾಗಬಹುದು ಎನ್ನುವ ಕಾರಣಕ್ಕೆ ಅವಳ ಮುಂದೆ ಏನನ್ನೂ ಹೇಳೋದಿಲ್ಲ.

ಇದೇನು ಪ್ರೀತಿ ತೋರಿಸೋ ಅವತಾರವೋ ಅವಮಾನವೋ ಗೊತ್ತಿಲ್ಲ; ನಟ ಶಂಕರ್ ಅಶ್ವಥ್ ಬೇಸರ!

ಬಿಟ್ಟು ಹೋಗುವ ಭಯ : ಪ್ರತಿಯೊಬ್ಬ ಪುರುಷನಲ್ಲೂ ಇಂಥಹದ್ದೊಂದು ಭಯವಿರುತ್ತದೆ. ತಾನು ಪ್ರೀತಿಸುವ ಹುಡುಗಿ ತನ್ನನ್ನು ಬಿಟ್ಟು ಹೋದ್ರೆ ಎಂಬ ಆತಂಕ ಅವರನ್ನು ಕಾಡುತ್ತದೆ. ಆಕೆ ತನ್ನಿಂದ ದೂರವಾಗಬಾರದು ಎನ್ನುವ ಕಾರಣಕ್ಕೆ ಆಕೆ ಹೇಳಿದ್ದೆಲ್ಲವನ್ನೂ ಅವರು ಮಾಡ್ತಾರೆ. ಸಂಗಾತಿ ಇಚ್ಛೆಯಂತೆ ನಡೆದುಕೊಳ್ತಾರೆ. ನಿಮ್ಮ ಸಂಗಾತಿ ಕೂಡ ನಿಮಗೆ ಹೆದರುತ್ತಿದ್ದರೆ ಅಥವಾ ನೀವು ಹೇಳಿದ್ದೆಲ್ಲವನ್ನೂ ಮಾಡ್ತಿದ್ದರೆ ಅವರಿಗೆ ನಿಮ್ಮ ಮೇಲೆ ಅಪಾರ ಪ್ರೀತಿ ಇದೆ ಎಂದೇ ಅರ್ಥ. 

Latest Videos
Follow Us:
Download App:
  • android
  • ios