ಫಸ್ಟ್ ನೈಟ್ ವಿಡಿಯೋ ಶೇರ್ ಮಾಡಿದ ದಂಪತಿ! ಈ ಕಣ್ಣಿಂದ ಇನ್ನು ಏನೇನು ನೋಡ್ಬೋಕೋ ಅಂತಿರೋ ನೆಟ್ಟಿಗರು...
ರೀಲ್ಸ್ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳಲು ನವ ವಧು-ವರರು ಫಸ್ಟ್ ನೈಟ್ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ನೆಟ್ಟಿಗರು ಏನೆಲ್ಲಾ ಹೇಳ್ತಿದ್ದಾರೆ ನೋಡಿ!
ರೀಲ್ಸ್ನಲ್ಲಿ ಲೈಕ್, ಕಮೆಂಟ್ಸ್ ಪಡೆಯಲು ಜೀವ ಬೇಕಾದ್ರೆ ಬಿಡ್ತಾರೆ ಎನ್ನುವಂತೆ ಅತಿರೇಕದ ವರ್ತನೆ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಕೆಲವರು ಇದಾಗಲೇ ರೀಲ್ಸ್ ಹುಚ್ಚಿನಲ್ಲಿ ಜೀವ ಕೂಡ ಕಳೆದುಕೊಂಡಿದ್ದಾರೆ. ಸೆಲ್ಫಿ, ರೀಲ್ಸ್ ಮಾಡಲು ಹಳಿಗಳ ಮೇಲೆ ನಿಂತು ಟ್ರೇನ್ ಅಡಿ ಆದವರು ಅದೆಷ್ಟೋ ಮಂದಿ. ಬೆಟ್ಟದ ತುದಿಯಲ್ಲಿ, ನದಿಯ ನಡುವೆ, ಜಲಪಾತದ ಬಳಿ... ಹೀಗೆ ರೀಲ್ಸ್ ಹುಚ್ಚಿನಲ್ಲಿ ಪ್ರಾಣ ಕಳೆದುಕೊಂಡವರಿಗೂ ಲೆಕ್ಕವೇ ಇಲ್ಲ. ಅವರು ಅಂದುಕೊಂಡಂತೆ ಆ ರೀಲ್ಸ್ ಹೆಚ್ಚು ಓಡುತ್ತದೆ ನಿಜ. ಆದರೆ, ಆ ಓಡುವ ರೀಲ್ಸ್ ನೋಡಲು ರೀಲ್ಸ್ ಮಾಡಿದವರು ಜೀವಂತ ಇರುವುದಿಲ್ಲ ಅಷ್ಟೇ ಎನ್ನುವ ಸ್ಥಿತಿ ಇಂದಿನದ್ದು. ಇವೆಲ್ಲವೂ ಅತಿರೇಕದ ಪರಮಾವಧಿಯಾಗಿದೆ.
ರೀಲ್ಸ್, ಪ್ರಚಾರಕ್ಕಾಗಿ ಪ್ರಾಣ ಪಡಕ್ಕಿಡುವುದು ಒಂದೆಡೆಯಾದರೆ, ಮಾನ-ಮರ್ಯಾದೆ ಬಿಡುವವರೂ ಇದ್ದಾರಾ? ಹಾಗೆಂದು ಬಟ್ಟೆ ಬಿಚ್ಚಿ ತಿರುಗುವ ಕೆಲವು ನಟಿಯರು ಎಂದುಕೊಂಡರೆ ಅದು ತಪ್ಪು. ಏಕೆಂದರೆ ಅವರಿಂದ ಪ್ರೇರೇಪಿತರಾದವರು ಅಂಥ ಡ್ರೆಸ್ ಮಾಡಿ ತಾವೂ ನಟಿಯರಂತೆ ಕಾಣಿಸುತ್ತೇವೆ ಅಂದುಕೊಳ್ಳುವುದು ಇದ್ದೇ ಇದೆ ಬಿಡಿ. ಆದರೆ ಇಲ್ಲೊಂದು ವಿಡಿಯೋ ಆ ಹಂತವನ್ನೂ ಮೀರಿದ್ದು, ಅದೀಗ ಸೋಷಿಯಲ್ ಮೀಡಿಯಾದಲ್ಲಿ ಹಲ್ಚಲ್ ಸೃಷ್ಟಿಸಿದೆ. ಅಂಥದ್ದೇನು ವಿಡಿಯೋ ಅಂತೀರಾ? ಇದು ಅಂತಿಂಥ ರೀಲ್ಸ್ ಅಲ್ಲ, ನವ ಜೋಡಿ ನಮ್ಮ ಫಸ್ಟ್ ನೈಟ್ ಆಚರಣೆಯನ್ನು ವಿಡಿಯೋ ಮಾಡಿ ಹಾಕಿದ್ದಾರೆ! ನಂಬಲು ಸಾಧ್ಯವಿಲ್ಲ ಅಲ್ಲವೆ? ಈ ಕೆಳಗೆ ಇರುವ ವಿಡಿಯೋ ನೋಡಿದರೆ, ಜನರು ಪ್ರಚಾರಕ್ಕೆ ಯಾವ ಪರಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎನ್ನುವುದನ್ನು ನೋಡಬಹುದು.
ರಿಯಾಲಿಟಿ ಷೋನೋ ಅಥ್ವಾ ಸೆ*.. ಷೋ ನೋ? ಅವಾರ್ಡ್ ಫಂಕ್ಷನ್ನಲ್ಲಿ ಅಶ್ಲೀಲ ಸಂಭಾಷಣೆ- ಹಿಗ್ಗಾಮುಗ್ಗಾ ತರಾಟೆಗೆ
ಹಸನಾ ಜರೂರಿ ಹೈ (ನಗುವುದು ಕಡ್ಡಾಯ) ಹೆಸರಿನ ಇನ್ಸ್ಟಾಗ್ರಾಮ್ನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದೆ. ಇದರಲ್ಲಿ ನವ ದಂಪತಿಯ ಫಸ್ಟ್ ನೈಟ್ಗೆಂದು ಕೋಣೆಯನ್ನು ಸಿಂಗರಿಸಿ ಇಟ್ಟಿರುವುದನ್ನು ನೋಡಬಹುದು. ಆರಂಭದಲ್ಲಿ ವರ, ವಧುವಿನ ಆಭರಣ ತೆಗೆಯುತ್ತಾನೆ. ಆಗ ವಧು ನಾಚುವಂತೆ ಪೋಸ್ ಕೊಟ್ಟಿದ್ದಾಳೆ. ಇದಾದ ಬಳಿಕ ಮದುಮಗ ಆಕೆಯ ಬ್ಲೌಸ್ ತೆಗೆಯುವಂತೆ ಮಾಡುವಲ್ಲಿಗೆ ವಿಡಿಯೋ ಕಟ್ ಆಗಿದೆ. ಇವಿಷ್ಟನ್ನೂ ವಿಡಿಯೋ ಮಾಡಿಕೊಂಡಿರುವ ಈ ಜೋಡಿ ಅದನ್ನು ಯಾವುದೇ ಅಂಜಿಕೆ, ಅಳುಕು ಇಲ್ಲದೆಯೇ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದೆ.
ಇದಕ್ಕೆ ಇನ್ನಿಲ್ಲದಂತೆ ಟೀಕೆಗಳು ವ್ಯಕ್ತವಾಗುತ್ತಿವೆ. ಅಸಹ್ಯ, ಅಸಭ್ಯ ಎನ್ನುತ್ತಲೇ ಈ ವಿಡಿಯೋ ನೋಡುತ್ತಿದ್ದಾರೆ ಬಹುತೇಕ ನೆಟ್ಟಿಗರು. ವಿಡಿಯೋ ನೋಡಿದ ಬಳಿಕ ಕೆಟ್ಟದ್ದಾಗಿ ಕಮೆಂಟ್ ಮಾಡುತ್ತಿದ್ದಾರೆ. ಪ್ರಚಾರದ ಹುಚ್ಚು, ಇದು ಅತಿಯಾಯ್ತು, ಮಾನ-ಮರ್ಯಾದೆ ಇಲ್ಲ, ನಮ್ಮ ಸಂಸ್ಕೃತಿ ಎಲ್ಲಿಗೆ ಬಂದಿತು, ಇದನ್ನು ನೋಡುವ ಮುನ್ನ ನನ್ನ ಕಣ್ಣು ಯಾಕೆ ಕಿತ್ತುಕೊಳ್ಳಲಿಲ್ಲಪ್ಪಾ ಎಂದೆಲ್ಲಾ ಹಲವರು ಕಮೆಂಟ್ ಮಾಡಿದ್ರೆ, ಮತ್ತೆ ಕೆಲವು ತರ್ಲೆ ನೆಟ್ಟಿಗರು ತೋರಿಸೋದು ತೋರಿಸಿದ್ರಿ... ಪೂರ್ತಿಯಾದ್ರೂ ವಿಡಿಯೋ ಹಾಕಬಾರದಾ ಎಂದೂ ಕೇಳಿದ್ದಾರೆ! ಒಟ್ಟಿನಲ್ಲಿ ಕೆಲ ದಿನಗಳಿಂದ ಈ ವಿಡಿಯೋ ವೈರಲ್ ಆಗುತ್ತಿದ್ದು, ನೆಟ್ಟಿಗರು ತಲೆ ತಲೆ ಚಚ್ಚಿಕೊಳ್ಳುತ್ತಿದ್ದಾರೆ.
ಲವ್ ಸಲ್ಮಾನ್ ಮೇಲೆ, ಮದ್ವೆಯಾದದ್ದು ಅಭಿಷೇಕ್ಗೆ? ಐಶ್ವರ್ಯ ರೈ ಈ ವಿಡಿಯೋದಿಂದ ರಟ್ಟಾಗೋಯ್ತು ಗುಟ್ಟು...