ರಿಯಾಲಿಟಿ ಷೋನೋ ಅಥ್ವಾ ಸೆ*.. ಷೋ ನೋ? ಅವಾರ್ಡ್​ ಫಂಕ್ಷನ್​ನಲ್ಲಿ ಅಶ್ಲೀಲ ಸಂಭಾಷಣೆ- ಹಿಗ್ಗಾಮುಗ್ಗಾ ತರಾಟೆಗೆ

 ರಿಯಾಲಿಟಿ ಷೋಗಳಲ್ಲಿ ಡಬಲ್​ ಮೀನಿಂಗ್​, ಅಶ್ಲೀಲ ಸಂಭಾಷಣೆ ಹೆಚ್ಚಾಗುತ್ತಿರುವುದಕ್ಕೆ ನೆಟ್ಟಿಗರು ಗರಂ ಆಗಿದ್ದಾರೆ. ಈ ವೈರಲ್​ ವಿಡಿಯೋ ನೋಡಿ!
 

double meaning and obscene conversations are increasing in reality shows netizens reacts suc

ಇಂದು ಬಹುತೇಕ ರಿಯಾಲಿಟಿ ಷೋಗಳು ರಿಯಾಲಿಟಿ ಆಗಿ ಉಳಿದಿಲ್ಲ. ಡಾನ್ಸ್​ ಷೋ, ಗಾಯನ ಷೋ ಆಗರಲಿ, ಇನ್ನೇನೇ ಆಗಿರಲಿ... ಅಲ್ಲಿ ಮೊದಲೇ ಎಲ್ಲವೂ ನಿಗದಿಯಾಗಿರುತ್ತದೆ, ಎಲ್ಲವೂ ಸ್ಕ್ರಿಪ್ಟೆಡ್​ ಎನ್ನುವುದು ಏನೂ ಗುಟ್ಟಾಗಿ ಉಳಿದಿಲ್ಲ. ಎಲ್ಲಾ ರಿಯಾಲಿಟಿ ಷೋಗಳಲ್ಲಿಯೂ ಸ್ಪರ್ಧಿಗಳು ಆಡುವ ಮಾತುಗಳು, ಮಾಡುವ ತಮಾಷೆ, ಅಳುವುದು... ಹೀಗೆ ಎಲ್ಲವೂ ಮೊದಲೇ ಸೆಟ್​ ಮಾಡಿರಲಾಗುತ್ತದೆ ಎಂಬ ಬಗ್ಗೆ ಇದಾಗಲೇ ಹಲವರು ಸೋಷಿಯಲ್​  ಮೀಡಿಯಾಗಳಲ್ಲಿ ಹೇಳುವುದು ಉಂಟು. ಡಾನ್ಸ್​, ಹಾಡು, ನಾಟಕ... ಹೀಗೆ ರಿಯಾಲಿಟಿ ಷೋಗಳಲ್ಲಿ ಸ್ಪರ್ಧಿಗಳನ್ನು ಆಯ್ಕೆ ಮಾಡುವ ಮುನ್ನ ನಿಮ್ಮ ಜೀವನದಲ್ಲಿ ಅಳುವಂಥ ಘಟನೆಗಳು ಯಾವುದಾದರೂ ಇದ್ದರೆ, ಅದನ್ನು ನೆನಪಿಸಿಕೊಂಡು ಅಳಬೇಕು, ಇಲ್ಲದಿದ್ದರೆ ನಿಮಗೆ ಅವಕಾಶ ಇಲ್ಲ... ಎನ್ನುವಂಥ ಮೀಮ್ಸ್​ಗಳು ಸೋಷಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿರುವುದನ್ನು ನೋಡಿರಬಹುದು. ಇದಕ್ಕೆ ಸಾಕ್ಷಿ ಎಂಬಂತೆ ಇಂದಿನ ರಿಯಾಲಿಟಿ ಷೋಗಳಲ್ಲಿ ಸ್ಪರ್ಧಿಗಳು ಆಡುವುದು, ನರ್ತಿಸುವುದು, ಹಾಡು ಹೇಳುವುದು... ಇವೆಲ್ಲಕ್ಕಿಂತಲೂ ಹೆಚ್ಚಾಗಿ ಹೈಲೈಟ್​ ಆಗುವುದು ಅಳುವುದು. ಅದನ್ನು ನೋಡಿ ತೀರ್ಪುಗಾರರು ಕಣ್ಣೀರು ಹಾಕುವುದು,  ಅವರ ಮೇಲೆ ಕ್ಯಾಮೆರಾ ಫೋಕಸ್​ ಮಾಡಿ ಪ್ರೇಕ್ಷಕರೂ ಕಣ್ಣೀರು ಹಾಕುವಂತೆ ಮಾಡುವುದು...  ಹೀಗೆ ಎಲ್ಲಾ ಭಾಷೆಗಳ ರಿಯಾಲಿಟಿ ಷೋಗಳಲ್ಲಿಯೂ ಅಳುವ ದೃಶ್ಯಗಳು ಇದ್ದೇ ಇರುತ್ತವೆ, ಇಲ್ಲದಿದ್ದರೆ ಅದು ರಿಯಾಲಿಟಿ ಷೋ ಅನ್ನಿಸುವುದೇ ಇಲ್ಲ! ಇಂಥ ಷೋಗಳ ರಿಯಾಲಿಟಿಯ ಬಗ್ಗೆ ಹಲವರು ಇದಾಗಲೇ ಸಂದೇಹ ವ್ಯಕ್ತಪಡಿಸುತ್ತಿರುವುದೂ ಇದೆ. 

ಅದೇನೇ ಆರೋಪಗಳು ಇದ್ದರೂ, ಇದನ್ನು ಬಹುದೊಡ್ಡ ವರ್ಗದ ಜನರು ಎಂಜಾಯ್​ ಮಾಡುವುದು ಇದೆ ಅನ್ನಿ. ಆದರೆ ಇದೀಗ ಕಾಮಿಡಿ ಹೆಸರಿನಲ್ಲಿ ಡಬಲ್​ ಮೀನಿಂಗ್​, ಅಶ್ಲೀಲತೆ ಎನ್ನುವುದು ಸಾಮಾನ್ಯವಾಗಿ ಬಿಟ್ಟಿದೆ. ಒಂದು ಮಟ್ಟದಲ್ಲಿ ಕೆಲವೊಂದು ಶಬ್ದಗಳು ಬಳಕೆ ಆದರೆ ಅದು ಸಹನೀಯ ಎನ್ನಿಸುವುದು ಉಂಟು. ಆದರೆ ಅಶ್ಲೀಲತೆಯನ್ನೇ ಹೈಲೈಟ್​ ಮಾಡಿ, ಡಬಲ್​  ಮೀನಿಂಗ್​ ಮಾತನಾಡುವಾಗ ಅದನ್ನು ನೋಡಿ ಅಲ್ಲಿ ನೆರೆದವರೂ ಬಿದ್ದೂ ಬಿದ್ದೂ ನಗುವ ರೀತಿ ಕೆಲವೊಮ್ಮೆ ಅಸಹ್ಯ ಎನ್ನಿಸುವುದು ಉಂಟು. ಸಿನಿಮಾಗಳಲ್ಲಿ ಇದಾಗಲೇ ಡಬಲ್​  ಮೀನಿಂಗ್​ಗಳನ್ನೇ ಹಾಸ್ಯ ಎಂದುಕೊಂಡು ನಗಿಸುತ್ತೇವೆ ಎನ್ನುವ ದೃಶ್ಯಗಳನ್ನು ತುರುಕುವುದು ಉಂಟು. ಆದರೆ ಮನೆ ಮಂದಿಯೆಲ್ಲಾ ಕುಳಿತು ನೋಡುವ ರಿಯಾಲಿಟಿ ಷೋಗಳಲ್ಲಿ ಅಶ್ಲೀಲ ಶಬ್ದಗಳ ಬಳಕೆ, ಡಬಲ್​ ಮೀನಿಂಗ್​ ಮಾತುಗಳು ವೀಕ್ಷಕರನ್ನು ಯಾವ ಮಟ್ಟಕ್ಕೆ ತಳ್ಳುತ್ತದೆ ಎನ್ನುವುದಕ್ಕೆ ಈಗ ವೈರಲ್​ ಆಗಿರೋ ವಿಡಿಯೋ ಸಾಕ್ಷಿಯಾಗಿದೆ. 

ನಿಮ್ಮಿಬ್ಬರಲ್ಲಿ ಹೆಚ್ಚು ಪೋಲಿ ಯಾರು ಎಂದು ಪ್ರಶ್ನೆ ಕೇಳಿದ ಅನುಶ್ರೀ: ಸೋನಲ್​- ತರುಣ್​ ಹೇಳಿದ್ದೇನು ಕೇಳಿ...

ಪಕ್ಕಾ ಬಂಗಾರ್​ ಮಂಡಿ ಎನ್ನುವ ಇನ್​ಸ್ಟಾಗ್ರಾಮ್​ನಲ್ಲಿ ಈ ವಿಡಿಯೋ ಶೇರ್​ ಮಾಡಿಕೊಳ್ಳಲಾಗಿದೆ. ಕಲರ್ಸ್​ ಕನ್ನಡ ಚಾನೆಲ್​ನ ಅನುಬಂಧ ಅವಾರ್ಡ್​ ಫಂಕ್ಷನ್​ನಲ್ಲಿ ಇದು ನಡೆದಿದೆ ಎನ್ನುವುದು ವಿಡಿಯೋ ನೋಡಿದರೆ ತಿಳಿದು ಬರುತ್ತದೆ. ಅವಾರ್ಡ್​ ಪಡೆದುಕೊಂಡಿರುವ ನಟಿ ಮೊದಲನೆಯ ಮೆಟ್ಟಿಲು ಹತ್ತಿಸಿದ್ದೀರಾ ಎಂದು ಹೇಳಿದ್ದಾರೆ. ಆಗ ನಟ, ಇನ್ನು ಎಷ್ಟು ಮೆಟ್ಟಿಲು ಹತ್ತಬೇಕು ಎಂದು ಇದ್ಯಾ, ಸರಿ ಮೊದಲಿಗೆ ನಿಧಾನಕ್ಕೆ ಹತ್ತೋಣ ಎನ್ನುವ ಮೂಲಕ ಡಬಲ್​ ಮೀನಿಂಗ್​ನಲ್ಲಿ ಶುರುವಾಗುವ ಮಾತು, ಅಶ್ಲೀಲ ಸಂಭಾಷಣೆಗೆ ಗಡಿ ದಾಟಿ ಮುಂದುವರೆದಿದೆ. ಆಗ ಆ್ಯಂಕರ್​, ನಿಮಗೆ ಈ ರೀತಿಯ ರೊಮ್ಯಾಂಟಿಕ್​ ಸೀನ್​ನಲ್ಲಿ ಏನು ಇಷ್ಟವಾಗುತ್ತದೆ ಎಂದು ಕೇಳಿದಾಗ, ನಟ ನನಗೆ ನಿಧಾನಕ್ಕೆ ಮಾಡುವುದು ಇದೆಯಲ್ಲ, ಅದು ತುಂಬಾ ಇಷ್ಟವಾಗುತ್ತದೆ ಎಂದಿದ್ದಾರೆ

ಇದನ್ನು ಕೇಳಿ, ಅಲ್ಲಿದ್ದ ಉಳಿದ ನಟ-ನಟಿಯರು ಹೋ ಎಂದು ಖುಷಿಯಿಂದ ಚಪ್ಪಾಳೆ ತಟ್ಟಿ ಖುಷಿ ಹಂಚಿಕೊಂಡಿದ್ದಾರೆ. ಅದಕ್ಕೆ ಸುಮ್ಮನಾಗದ ನಟ, ನಾನೇನೂ ಹೊಸತಾಗಿ ಮಾಡುತ್ತಿಲ್ಲ. ನೀವು ಮಾಡೋದನ್ನೇ ಮಾಡುತ್ತಿದ್ದೇನೆ ಎಂದಿದ್ದಾರೆ  . ಇದನ್ನು ಕೇಳಿ ಅಲ್ಲಿ ಇದ್ದವರು ಇನ್ನಷ್ಟು ಬಿದ್ದೂ ಬಿದ್ದೂ ನಕ್ಕಿದ್ದಾರೆ! ಇದು ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್​ ಆಗುತ್ತಿದೆ. ರಿಯಾಲಿಟಿ ಷೋನಾ, ಅಥವಾ ಸೆಕ್ಸ್​ ಷೋನಾ ಎಂದು ಶೀರ್ಷಿಕೆ ಕೊಟ್ಟು ಈ ವಿಡಿಯೋ ಶೇರ್​ ಮಾಡಲಾಗಿದೆ. ಈ ವಿಡಿಯೋಗೆ ಬಾಯಿಗೆ ಬಂದಂತೆ ನೆಟ್ಟಿಗರು ಬೈಯುತ್ತಿದ್ದಾರೆ. ಅಶ್ಲೀಲತೆಯ ಶಬ್ದಕ್ಕಿಂತಲೂ ಮಿಗಿಲಾಗಿ ಕೆಟ್ಟ ಕೆಟ್ಟ ಪದ ಪ್ರಯೋಗಗಳೊಂದಿಗೆ ಕಮೆಂಟ್​ ಬಾಕ್ಸ್​ ತುಂಬಿ ಹೋಗಿದೆ. 

ಅಭಿಷೇಕ್​ - ಕರಿಷ್ಮಾ ಕಪೂರ್​ ಎಂಗೇಜ್​ಮೆಂಟ್​! ಹೊಸ ಸೊಸೆ ಪರಿಚಯಿಸಿದ್ದ ಜಯಾ ಬಚ್ಚನ್: ವಿಡಿಯೋ ವೈರಲ್​

Latest Videos
Follow Us:
Download App:
  • android
  • ios