Asianet Suvarna News Asianet Suvarna News

ಮಕ್ಕಳು ಹಸಿದಿದ್ರೂ ಬೇರೆಯವ್ರು ತಿಂಡಿ ಕೇಳಿದ್ರೆ ಖುಷಿಯಿಂದ ಕೊಟ್ಟುಬಿಡ್ತಾರಂತೆ!

‘ಪುಟ್ಟ ಮಕ್ಕಳು ತಮಗೆ ಹಸಿವಾಗಿದ್ದಾಗಲೂ ಬೇರೆಯವರಾರಾದರೂ ತಮ್ಮ ಕೈಲಿದ್ದ ತಿಂಡಿಯನ್ನು ಕೇಳಿದರೆ ಕೊಟ್ಟುಬಿಡುತ್ತಾರೆ’ ಎಂಬುದನ್ನು ಅಧ್ಯಯನದ ಮೂಲಕ ಪತ್ತೆಹಚ್ಚಿದೆ. 

study says kids are willing to give up food though they are hungry
Author
Bengaluru, First Published Feb 16, 2020, 3:36 PM IST

ಇದೊಂದು ಕ್ಯೂಟ್‌ ಕ್ಯೂಟ್‌ ಎನ್ನಬಹುದಾದ ಸಮೀಕ್ಷೆ. ಚಿಕ್ಕ ಮಕ್ಕಳು ಎಲ್ಲವನ್ನೂ ಬೇರೆಯವರೊಂದಿಗೆ ಹಂಚಿಕೊಂಡು ತಿನ್ನುವುದು ನಮಗೆಲ್ಲ ಗೊತ್ತು. ಇನ್ನು ಕೆಲ ಮಕ್ಕಳು ಯಾರಿಗೂ ಏನನ್ನೂ ಕೊಡುವುದಿಲ್ಲ.

ಆದರೆ ಅಮೆರಿಕದ ಸಮೀಕ್ಷೆಯೊಂದು, ‘ಪುಟ್ಟಮಕ್ಕಳು ತಮಗೆ ಹಸಿವಾಗಿದ್ದಾಗಲೂ ಬೇರೆಯವರಾರಾದರೂ ತಮ್ಮ ಕೈಲಿದ್ದ ತಿಂಡಿಯನ್ನು ಕೇಳಿದರೆ ಕೊಟ್ಟುಬಿಡುತ್ತಾರೆ’ ಎಂಬುದನ್ನು ಅಧ್ಯಯನದ ಮೂಲಕ ಪತ್ತೆಹಚ್ಚಿದೆ.

ಹೆಂಡತಿಯೊಂದಿಗಿನ ಸೆಕ್ಸ್ ರಹಸ್ಯ ಬಹಿರಂಗವಾಗಿಸಿದ ಸ್ಟಾರ್..ಇಂಥ ಮಾತಾಡೋಕೆ ಗುಂಡಿಗೆ ಬೇಕು!

ಅಮೆರಿಕದ ವಾಷಿಂಗ್ಟನ್‌ ವಿಶ್ವವಿದ್ಯಾಲಯದ ಮೆದುಳು ಅಧ್ಯಯನ ಕೇಂದ್ರವು ಒಂದು ವರ್ಷದೊಳಗಿನ 100 ಮಕ್ಕಳನ್ನು ಅಧ್ಯಯನಕ್ಕೊಳಪಡಿಸಿ ಇದನ್ನು ಕಂಡುಹಿಡಿದಿದೆ.

ಅಧ್ಯಯನದ ವೇಳೆ 100 ಮಕ್ಕಳ ಎರಡು ಗುಂಪು ಮಾಡಿ, ಅವರಿಗೆ ಹಸಿವಾಗುವವರೆಗೆ ಆಟವಾಡಿಸಲಾಯಿತು. ನಂತರ ಅಧ್ಯಯನ ಮಾಡುವವರು ಒಂದು ಗುಂಪಿನ ಮಕ್ಕಳಿಗೆ ತಿಂಡಿ ನೀಡಿ, ಕೆಲ ಕ್ಷಣಗಳ ನಂತರ ವಾಪಸ್‌ ಕೇಳಿದರು. ಆಗ ಶೇ.58.33ರಷ್ಟುಮಕ್ಕಳು ತಿಂಡಿ ವಾಪಸ್‌ ನೀಡಿದರು. ಇನ್ನೊಂದು ಗುಂಪಿನ ಮಕ್ಕಳಿಗೆ ತಿಂಡಿ ನೀಡಿ, ಅವರ ಎದುರು ಅಧ್ಯಯನಕಾರರು ಸುಮ್ಮನೆ ನಿಂತುಕೊಂಡರು. ಆಗ ಶೇ.4.17ರಷ್ಟುಮಕ್ಕಳು ಮಾತ್ರ ತಿಂಡಿ ಮರಳಿ ಕೊಡಲು ಬಂದರು.

‘ತಾವು ಹಸಿದಿದ್ದರೂ ಬೇರೆಯವರಿಗೆ ತಿನ್ನಲು ಕೊಡಬೇಕು ಎಂಬ ನೈತಿಕ ಮೌಲ್ಯ ಮನುಷ್ಯನಲ್ಲಿ ಹುಟ್ಟಿನಿಂದಲೇ ಬಂದಿರುತ್ತದೆ ಎಂಬುದನ್ನು ಇದು ಸೂಚಿಸುತ್ತದೆ’ ಎಂದು ಈ ಅಧ್ಯಯನ ಕೈಗೊಂಡವರು ಹೇಳಿದ್ದಾರೆ.

Follow Us:
Download App:
  • android
  • ios