ಶ್ವಾನಗಳಿದ್ದರೆ ಮನೆಯಲ್ಲಿದ್ದರೆ ಸಂತೋಷ ಹೆಚ್ಚು. ಅವುಗಳ ತುಂಟಾಟ, ಬದ್ಧತೆ ಮನಸಿಗೆ ಮುದ ನೀಡುತ್ತದೆ. ಜೊತೆಗೆ ಮನೆಯಲ್ಲಿ ನಾಯಿಯಿದ್ದರೆ ದಂಪತಿಗಳ ಬಾಂಧವ್ಯವೂ ಗಟ್ಟಿಗೊಳ್ಳುತ್ತದೆಂದು ಸಮೀಕ್ಷೆಯೊಂದು ಅಭಿಪ್ರಾಯ ಪಟ್ಟಿದೆ. ರೋವರ್‌ ಡಾಟ್‌ ಕಾಮ್‌ ಈ ಸಮೀಕ್ಷೆ ಕೈಗೊಂಡಿದ್ದು, ಸಮೀಕ್ಷೆಗೆ ಒಳಪಟ್ಟ60% ನಾಯಿ ಮಾಲಿಕರು ನಾಯಿಗಳಿಂದಲೇ ನಮ್ಮ ದಾಂಪತ್ಯ ಸುಖಮಯವಾಗಿದೆ ಎಂದು ಹೇಳಿದ್ದಾರೆ.

ವಿವಾಹಿತರಿಗೆ 'ಗುಡ್‌ ನ್ಯೂಸ್' ಯಾವಾಗ ಎಂದು ಕೇಳುವ ಅಭ್ಯಾಸ ಬಿಟ್ಬಿಡಿ

ಸಮೀಕ್ಷೆಯಲ್ಲಿ ಭಾಗಿಯಾದ ಅರ್ಧದಷ್ಟುಜನರು ನಾಯಿಯ ಜೊತೆಗೆ ನಾವು ಸಾಕಷ್ಟುಸಮಯ ಕಳೆಯುತ್ತೇವೆ. ನಾಯಿಯೊಂದಿಗೆ ಪಾರ್ಕಿನಲ್ಲಿ ರೊಮ್ಯಾಂಟಿಕ್‌ ವಾಕ್‌ ಮಾಡೋದೇ ಖುಷಿಯ ಸಂಗತಿ ಎಂದು ಹೇಳಿದ್ದಾರೆ. ಅಲ್ಲದೆ 43% ಜನರು ನಾಯಿ ಸಾಕಲು ಆರಂಭಿಸಿದ ನಂತರ ತಮ್ಮ ಸಂಗಾತಿ ಸೆಕ್ಸಿಯಾಗಿದ್ದಾರೆ. ನಾಯಿಯನ್ನು ಹೊರಗೆ ಕರೆದುಕೊಂಡು ಹೋಗುವ ನೆಪದಲ್ಲಾದರೂ ವಾಕ್‌ ಮಾಡುತ್ತಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು ಏಕಾಂಗಿಯಾಗಿರುವವರಿಗೆ ಶ್ವಾನವೇ ಅವರ ಬೆಸ್ಟ್‌ ಪಾರ್ಟನರ್‌ ಅಂತೆ. ಹಾಗೆಯೇ ದಂಪತಿಗಳಿಬ್ಬರೂ ಸೇರಿ ಶ್ವಾನದ ಕಾಳಜಿ ವಹಿಸುತ್ತಿದ್ದರೆ ಇಬ್ಬರ ನಡುವಿನ ಬಾಂಧವ್ಯವೂ ಹೆಚ್ಚಾಗಿ ಸಂಗಾತಿಯ ಬೇಕು ಬೇಡಗಳು, ಭಾವನೆಗಳೂ ಅರ್ಥವಾಗುತ್ತವೆ. ಹಾಗೂ ಲೈಂಗಿಕ ಬಯಕೆಯನ್ನು ಹೆಚ್ಚಿಸುತ್ತದೆ ಎಂದು ಸಮೀಕ್ಷಕರು ಹೇಳಿದ್ದಾರೆ. ಇನ್ನು ಕೆಲವರು ಪ್ರತಿ ದಿನ ರಾತ್ರಿ ನಾಯಿಯೂ ನಮ್ಮೊಂದಿಗೆ ಮಲಗುವುದರಿಂದ ಲೈಂಗಿಕ ಜೀವನ ನೀರಸವಾಗಿದೆ ಎಂದೂ ಅಭಿಪ್ರಾಯ ಪಟ್ಟಿದ್ದಾರೆ.