Asianet Suvarna News Asianet Suvarna News

Relationship Tips: ಎಲ್ಲದಕ್ಕೂ ಮತ್ತೊಬ್ಬರ ಅನುಮತಿಗೆ ಕಾಯೋದ್ಯಾಕೆ?

ಮತ್ತೊಬ್ಬರು ನಮ್ಮ ಜೀವನವನ್ನು ನಿರ್ಧರಿಸುವುದಿಲ್ಲ. ನಮ್ಮ ಜೀವನಕ್ಕೆ ನಾವೇ ಬಾಸು. ಹೀಗಾಗಿ, ಚಿಕ್ಕಪುಟ್ಟ, ಕೆಲವೊಮ್ಮೆ ದೊಡ್ಡ ನಿರ್ಧಾರಗಳಿಗೂ ಯಾರನ್ನೂ ಡಿಪೆಂಡ್‌ ಆಗುವ ಅಗತ್ಯವಿರುವುದಿಲ್ಲ. ಅಷ್ಟಕ್ಕೂ ನಿರ್ಧಾರ ಕೈಗೊಳ್ಳುವಾಗ ಯಾಕಾಗಿ ಇನ್ನೊಬ್ಬರ ಅನುಮತಿಯ ಅಗತ್ಯವಿಲ್ಲ ಎನ್ನುವುದು ಗೊತ್ತೇ?
 

Stop seeking approval from others it is not good for your life
Author
First Published May 31, 2023, 4:31 PM IST

ಎಲ್ಲದಕ್ಕೂ ಬೇರೆಯವರ ಅನುಮತಿ ಪಡೆದೇ ಯಾವುದಾದರೂ ಕೆಲಸ ಮಾಡುವ ಅಭ್ಯಾಸ ಅನೇಕರಿಗೆ ಇರುತ್ತದೆ. ಚಿಕ್ಕಪುಟ್ಟ ನಿರ್ಧಾರಗಳಿಗೂ ಅವರು ಬೇರೆಯವರನ್ನು ಡಿಪೆಂಡ್‌ ಆಗುತ್ತಾರೆ. ಪತಿಯನ್ನೋ, ಪತ್ನಿಯನ್ನೋ ಕೇಳಿ ತಿಳಿಸುವುದು ಹಲವರಿಗೆ ಅಭ್ಯಾಸವಾಗಿರುತ್ತದೆ. ಕುಟುಂಬಕ್ಕೆ ಸಂಬಂಧಿಸಿದ ವಿಚಾರಗಳನ್ನು ಇಬ್ಬರೂ ಕೂಡಿಯೇ ನಿರ್ಧರಿಸುವುದು ಅತ್ಯುತ್ತಮ. ಆದರೆ, ಅಗತ್ಯವೇ ಇಲ್ಲದ ಚಿಕ್ಕಪುಟ್ಟ ಸಂಗತಿಗಳಿಗೂ  ಮತ್ತೊಬ್ಬರನ್ನು ಕೇಳಿಯೇ ಏನಾದರೂ ನಿರ್ಣಯ ಕೈಗೊಳ್ಳುವ ಅಭ್ಯಾಸ ಒಳ್ಳೆಯದಲ್ಲ. ಒಂದು ಮಾತಿದೆ, ಯಾರದ್ದೇ ಅನುಮತಿಯ ಅಗತ್ಯವಿಲ್ಲದಿದ್ದರೂ ನಮ್ಮ ಬಗ್ಗೆ ನಮಗೆ ಒಳ್ಳೆಯ ಭಾವನೆ ಮೂಡುತ್ತಿದ್ದರೆ ಅದು ನಿಜವಾದ ಸುಖ ಎನ್ನಲಾಗುತ್ತದೆ. ಕೆಲವರಿಗೆ ಎಲ್ಲದಕ್ಕೂ ಬೇರೆಯವರ ಅನುಮತಿ ಪಡೆಯುವುದು ಅದು ಹೇಗೋ ಅಭ್ಯಾಸವಾಗಿಬಿಡುತ್ತದೆ. ನಿಮ್ಮಲ್ಲೂ ಈ ಗುಣವಿದ್ದರೆ ಬದಲಾವಣೆ ತಂದುಕೊಳ್ಳಿ. ಏಕೆಂದರೆ, ಇನ್ನೊಬ್ಬರ ಅನುಮತಿ ಪಡೆಯುತ್ತ ನಾವು ನಮ್ಮ ಬದುಕಿನ ಮೇಲೆ ನಿಯಂತ್ರಣ ಕಳೆದುಕೊಂಡು ಬಿಡುತ್ತೇವೆ. ಅಸಲಿಗೆ, ನಮ್ಮ ಜೀವನಕ್ಕೆ ನಾವೇ ಬಾಸು. ಹಾಗೆಂದು ಯಾವುದಕ್ಕೂ ಯಾರನ್ನೂ ಕೇಳಬಾರದು ಎಂದಲ್ಲ. ನಿರ್ಧಾರಗಳು ನಮ್ಮವೇ ಆಗಿರಬೇಕು. ಏಕೆಂದರೆ, ಇತರರಿಗೆ ನಿಮ್ಮ ಬದುಕಿನ ಬಗ್ಗೆ ನಿಮಗೆ ಚೆನ್ನಾಗಿ ತಿಳಿದಿಷ್ಟು ಗೊತ್ತಿರುವುದಿಲ್ಲ. 

•    ನಿಮ್ಮ ದಾರಿ (Path) ನಿಮ್ಮದು
ನಿಮ್ಮ ಬದುಕಿನ (Life) ದಾರಿ ನಿಮ್ಮೊಬ್ಬರದ್ದೇ ಆಗಿರುತ್ತದೆ. ಅದಕ್ಕೆ ಬೇಕಾದ ಎಲ್ಲವನ್ನೂ ಪೂರೈಸುವುದು ನೀವೇ ಆಗಿರುತ್ತೀರಿ. ಮತ್ತೊಬ್ಬರ ಅಭಿಪ್ರಾಯ (Opinion), ಅನಿಸಿಕೆ, ಅನುಮತಿ (Approval) ಗಳನ್ನು ಆಧರಿಸಿ ಕೈಗೊಳ್ಳುವ ನಿರ್ಧಾರಗಳು ನಿಮಗೆ ಪೂರಕವಾಗದೇ ಇರಬಹುದು. ಹೀಗಾಗಿ, ನಿಮ್ಮ ಮನದ ಮಾತನ್ನು ಕೇಳಿ ಸಾಗಬೇಕು. ನಿಮ್ಮ ಮೇಲೆ ಮೊದಲು ನಿಮಗೆ ನಂಬಿಕೆ (Trust) ಇರಬೇಕು, ಆಗ ಜಗತ್ತೂ ನಿಮ್ಮನ್ನು ನಂಬುತ್ತದೆ.

Relationship Tips: ಗಂಡ ನನ್ನನ್ನು ದ್ವೇಷಿಸ್ತಾನಾ? ಇಷ್ಟಪಡೋಲ್ವಾ? ಮಹಿಳೆಯರನ್ನ ಕಂಗಾಲು ಮಾಡೋ ಪ್ರಶ್ನೆ ಇದು

•    ನಿಮ್ಮ ಖುಷಿಗೆ (Happiness) ನೀವೇ ಆಧಾರ
ಇತರರು ನಿಮ್ಮ ಖುಷಿಗೆ ಕೊಡುಗೆ ನೀಡಬಹುದು. ಆದರೆ, ಖುಷಿಯನ್ನು ಸೃಷ್ಟಿಸಿಕೊಳ್ಳುವವರು ನೀವೇ. ನಿಮ್ಮ ಕನಸುಗಳು (Dreams), ಯೋಜನೆಗಳ (Plans) ಬಗ್ಗೆ ಇತರರಿಗೆ ಚೆನ್ನಾಗಿ ತಿಳಿದಿರಲು ಸಾಧ್ಯವಿಲ್ಲ. ಹೀಗಾಗಿ, ನಿಮ್ಮ ಸಂತಸವನ್ನು ಇನ್ನೊಬ್ಬರಲ್ಲಿ ಅರಸುವುದು ಸರಿಯಲ್ಲ. ನಿಮಗೆ ನಿಜವಾಗಿ ಏನು ಬೇಕು, ಏನು ಬಯಸುತ್ತೀರಿ ಎನ್ನುವುದು ನಿಮಗೆ ಮಾತ್ರ ಸ್ಪಷ್ಟವಾಗಿ ತಿಳಿದಿರುತ್ತದೆ.

•    ಸಮಯ (Time) ಬೇಕು
ಮತ್ತೊಬ್ಬರ ಅಭಿಪ್ರಾಯ, ಅನುಮತಿ ಕೇಳಲು ಸ್ವಲ್ಪವಾದರೂ ಸಮಯ ಬೇಕಾಗುತ್ತದೆ. ಏನಾದರೂ ಯೋಜನೆ ಹೊಂದಿದ್ದರೆ ಅದನ್ನು ಕೈಗೊಳ್ಳಿ. ಅದರ ಬದಲು ಇನ್ನೊಬ್ಬರ ಅನುಮತಿ ಕೇಳಲು ಸಮಯ ಬೇಕಾಗುತ್ತದೆ. ಸಮಯ ಅತ್ಯಮೂಲ್ಯ. ಕೆಲವು ವಿಚಾರಗಳಲ್ಲಿ ಚೂರೂ ವೇಸ್ಟ್‌ (Waste) ಮಾಡದೆ ಮುಂದೆ ಸಾಗಬೇಕು. 

•    ಸ್ವ ಅರಿವು (Self Awareness) ಬೆಳೆಸಿಕೊಳ್ಳಿ
ನಮ್ಮೊಂದಿಗೆ ನಾವು ಚೆನ್ನಾಗಿರುಷ್ಟು ಅತ್ಯುತ್ತಮ ಸಂಬಂಧ (Relation) ಬೇರೊಂದಿಲ್ಲ. ನೀವು ಎಷ್ಟು ಬಾರಿ ನಿಮ್ಮ ಯೋಚನೆಗಳನ್ನು ಕಾರ್ಯಗತಗೊಳಿಸಲು ಹೋರಾಡಿದ್ದೀರಿ? ನಿಮ್ಮ ವಿಚಾರಗಳನ್ನು ಇತರರಿಗೆ ತಿಳಿಸಲು ಶ್ರಮವಹಿಸಿದ್ದೀರಿ? ನಿಮ್ಮ ಧೋರಣೆ ಸರಿ ಎಂದು ಗಟ್ಟಿಯಾಗಿ ಹೇಳಿದ್ದೀರಿ? ಇವೆಲ್ಲವೂ ನಿಮ್ಮ ಮೇಲೆ ನಿಮಗಿರುವ ನಂಬಿಕೆಗಳನ್ನು ತೋರಿಸುತ್ತವೆ. ನಮ್ಮನ್ನು ನಾವು ಚೆನ್ನಾಗಿ ಅರಿತಾಗ ತೆಗೆದುಕೊಳ್ಳುವ ನಿರ್ಧಾರಗಳ (Decision) ಮೇಲೆ ನಂಬಿಕೆ ಮೂಡುತ್ತದೆ.

Relationship Tips: ದಾಂಪತ್ಯದಲ್ಲಿ ನೀವು ಬೆಳೆಯುತ್ತಿದ್ದೀರಾ ಅಥವಾ ಸೊರಗುತ್ತಿದ್ದೀರಾ? ಹೇಗಿದ್ರೆ ಜತೆಯಾಗಿ ಬೆಳೀಬಹ್ದು ನೋಡಿ

•    ಎಲ್ಲರನ್ನೂ ಖುಷಿಪಡಿಸಿ ಬದುಕಲು ಅಸಾಧ್ಯ
ಜೀವನದಲ್ಲಿ ಎಲ್ಲರನ್ನೂ ಖುಷಿಪಡಿಸುವುದು ಸಾಧ್ಯವಿಲ್ಲ. ಎಲ್ಲರೂ ಎಲ್ಲ ಬಾರಿಯೂ ನಿಮ್ಮನ್ನು ಒಪ್ಪಿಕೊಳ್ಳುವುದಿಲ್ಲ. ಪೀಪಲ್‌ ಪ್ಲೀಸರ್‌ (People Pleaser) ಆಗಿದ್ದುಕೊಂಡು ಸಂತಸವಾಗಿ ಬದುಕಲು ಸಾಧ್ಯವಿಲ್ಲ. ಸಂಬಂಧದ ಗುಣಮಟ್ಟ (Quality), ಜೀವನದ ಬಗ್ಗೆ ನಿಮ್ಮ ವಿಚಾರಗಳು, ವೃತ್ತಿ ಆಯ್ಕೆ (Profession Choice) ಎಲ್ಲವೂ ನಿಮ್ಮ ನಿರ್ಧಾರಗಳಾಗಿರುತ್ತವೆ. 

•    ಸ್ವಾತಂತ್ರ್ಯ (Freedom)
ಜೀವನದ ದೊಡ್ಡ ನಿರ್ಧಾರವೊಂದು ಸಂಪೂರ್ಣವಾಗಿ ನಿಮ್ಮದೇ ಆಗಿದ್ದರೆ ಅದರಿಂದ ಎಷ್ಟು ಸಂತಸವಾಗುತ್ತದೆ. ಹಾಗೆಯೇ ಎಲ್ಲವೂ. ಸ್ವತಂತ್ರ ನಿರ್ಧಾರ, ಜೀವನ ಖುಷಿ ಕೊಡುವ ಸಂಗತಿಗಳು. 
  
 

Follow Us:
Download App:
  • android
  • ios