Asianet Suvarna News Asianet Suvarna News

ಜೀವನದಲ್ಲಿ ಅತೃಪ್ತಿ ಕಾಡೋದು ಸಹಜವಾ? ತೃಪ್ತಿ ಇಲ್ಲವಾದ್ರೆ ಹೀಗೆಲ್ಲ ಯಾಕಾಗುತ್ತೆ?

ಅತೃಪ್ತಿಯ ಭಾವನೆ ಮನದಲ್ಲಿರುವಾಗ ಹಲವು ರೀತಿಯಲ್ಲಿ ಅದು ಗೋಚರಿಸಬಹುದು. ವಿವಿಧ ರೀತಿಯಲ್ಲಿ ನಮ್ಮ ಸತ್ವವನ್ನು ನಾಶ ಮಾಡಬಹುದು. ಒಂದೊಮ್ಮೆ ನಿಮಗೂ ಈ ಭಾವನೆಗಳು ಪದೇ ಪದೆ ಕಾಡುತ್ತಿದ್ದರೆ ಎಚ್ಚೆತ್ತುಕೊಳ್ಳಿ.

Some feelings shows you are secretly unsatisfied in life
Author
First Published Sep 29, 2023, 5:43 PM IST

ನಮಗೆಲ್ಲ ಎಷ್ಟೋ ಬಾರಿ ಅತೃಪ್ತಿ ಕಾಡುತ್ತದೆ. ಕೆಲವು ವಿಚಾರಗಳ ಬಗ್ಗೆ, ನಮ್ಮದೇ ಜನರ ಬಗ್ಗೆ ಬೇರೆ ಬೇರೆ ರೀತಿಯಲ್ಲಿ ಅತೃಪ್ತಿಗಳಿರುತ್ತವೆ. ಆದರೆ, ಒಟ್ಟಾರೆ ಜೀವನದಲ್ಲೇ ಅತೃಪ್ತಿ ಕಾಡದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮದೇ ಆಗಿದೆ. ಏಕೆಂದರೆ, ಅತೃಪ್ತಿ ಇದ್ದರೆ ಬದುಕಿನಲ್ಲಿ ಸಂಪೂರ್ಣತೆಯ ಭಾವನೆ ಇರುವುದಿಲ್ಲ. ಒಂದು ಮಾತನ್ನು ಕೇಳಿರಬಹುದು, “ಭಾವನೆಗಳು ಅಲೆಗಳಿದ್ದಂತೆ. ಅವುಗಳನ್ನು ತಡೆಯಲು ನಮ್ಮಿಂದ ಸಾಧ್ಯವಿಲ್ಲ. ಆದರೆ, ಯಾವುದು ತೇಲಿ ಮುಂದೆ ಸಾಗಬೇಕು ಎನ್ನುವುದನ್ನು ಆಯ್ಕೆ ಮಾಡುವುದು ನಮ್ಮಿಂದ ಸಾಧ್ಯವಿದೆʼ ಎಂದು. ಇದು ನಿಜ. ಭಾವನೆಗಳು ಶಕ್ತಿಯುತವಾಗಿರುತ್ತವೆ. ಅವು ನಮ್ಮ ಜೀವನದ ಗುಣಮಟ್ಟವನ್ನು ಸೂಚಿಸುತ್ತವೆ. ಕೆಲವೊಮ್ಮೆ ನಾವು ನಮ್ಮ ಅರಿವಿನ ಮಟ್ಟದಲ್ಲಿ ಅತೃಪ್ತಿಯನ್ನು ಕಡೆಗಣಿಸುತ್ತಿರಬಹುದು. ಅತೃಪ್ತಿ ಕಾಡದಂತೆ ಪ್ರಯತ್ನಿಸುತ್ತಿದ್ದಿರಬಹುದು. ಆದರೆ, ಕೆಲವು ಭಾವನೆಗಳು ನಿಮಗೆ ಪದೇ ಪದೆ ಮೂಡುತ್ತಿವೆ ಎಂದಾದರೆ, ನಿಮ್ಮ ಅಂತರಂಗದಲ್ಲಿ ಅತೃಪ್ತಿ ಕೆನೆಗಟ್ಟಿದೆ ಎಂದರ್ಥ. ಅವು ನಿಮ್ಮ ಉದ್ಯೋಗ, ಸಂಬಂಧ ಹಾಗೂ ದೈನಂದಿನ ಜೀವನಕ್ಕೆ ಸಂಬಂಧಿಸಿ ಇರಬಹುದು. ಅತೃಪ್ತಿ ಇದ್ದಾಗ ಕೆಲವು ಲಕ್ಷಣಗಳು ಕಂಡುಬರುತ್ತವೆ. 

•    ನಿರಾಸಕ್ತಿ (Apathy)
ಜೀವನದಲ್ಲಿ ಅತೃಪ್ತಿ (Unsatisfied) ಇದೆ ಎಂದಾದರೆ ಮೊದಲನೆಯದಾಗಿ ನಿರಾಸಕ್ತಿ ಮೂಡುತ್ತದೆ. ದಿನದಿಂದ ದಿನಕ್ಕೆ ನಿಮ್ಮನ್ನು ನೀವು ಖುಷಿ (Happy) ಪಡಿಸಿಕೊಳ್ಳಲು ಸೋತರೆ ಅಥವಾ ಪ್ರಯತ್ನಿಸಿಯೇ ಇಲ್ಲ ಎಂದಾದರೆ ಕ್ರಮೇಣ ದೈನಂದಿನ ಬದುಕು ಹತಾಶೆಗೊಳಿಸುತ್ತ ಸಾಗುತ್ತದೆ. ಉಸಿರು ಕಟ್ಟಿದಂತೆ ಭಾಸವಾಗುತ್ತದೆ, ಆಗ ಎಲ್ಲದರ ಕುರಿತೂ ನಿರಾಸಕ್ತಿ ಕಾಡುತ್ತದೆ. ನಿಮ್ಮೊಳಗನ್ನು ಕೊಂದು ಬಿಡುವಂತೆ ಉದ್ಯೋಗದಲ್ಲಿ (Job) ಮುಳುಗಿದ್ದರೆ, ನಿಮ್ಮ ಆಸೆ (Interest), ಕನಸುಗಳಿಗೆ ತಿಲಾಂಜಲಿ ಕೊಟ್ಟಂತೆ. ಕೇವಲ ಉದ್ಯೋಗವೊಂದಲ್ಲ. ಮನೆಯಲ್ಲೇ ಇರುವವರೂ ಅದದೇ ಕೆಲಸ ಮಾಡುತ್ತ ಮಾಡುತ್ತ, ಸುರಕ್ಷಿತ ಭಾವನೆಯಲ್ಲಿ ಮುಳುಗುತ್ತ, ನೈಜ ಭಾವನೆಗಳನ್ನು ಬಾಟಲಿಯಲ್ಲಿ ಹಾಕಿ ಮುಚ್ಚಿಬಿಡುತ್ತಾರೆ. ನಿಮ್ಮ ಆಸಕ್ತಿಯನ್ನು ಮುಚ್ಚಿಡುವುದು ಎಲ್ಲ ಎನರ್ಜಿಯನ್ನೂ (Energy) ಕೊನೆಗೊಳಿಸಿಬಿಡುತ್ತದೆ. 

ನಾನೇ ಮೇಲು ಅಂತ ಸಾಯ್ತಿದ್ದರೆ ಇವತ್ತೇ ನಿಮ್ಮನ್ನು ತಿದ್ದಿಕೊಳ್ಳಿ!

•    ಭರವಸೆ (Hopelessness) ಕಳೆದುಕೊಳ್ಳುವುದು
ಎಂದಾದರೊಮ್ಮೆ ಒಳ್ಳೆಯ ದಿನಗಳು ಬರುತ್ತವೆ ಎನ್ನುವುದು ಎಲ್ಲರ ನಿರೀಕ್ಷೆ. ಈ ಭರವಸೆಯೇ ಎಷ್ಟೋ ಜನರನ್ನು ಜೀವಂತವಾಗಿ ಇಡುತ್ತದೆ. ಆದರೆ, ನಿಮಗೆ ಭರವಸೆಯೇ ಇಲ್ಲವಾದರೆ ನಿಮಗೆ ಜೀವನದಲ್ಲಿ ಭಾರೀ ಅತೃಪ್ತಿಯಿದೆ ಎಂದರ್ಥ. ಈಗ ನಿಮ್ಮ ಜೀವನ (Life) ಇರುವಂತೆ ನೀವು ನೋಡಿಕೊಂಡರೆ, ನೀವು ಎತ್ತ ಸಾಗುತ್ತಿದ್ದೀರಿ ಎನ್ನುವುದು ತಿಳಿಯುತ್ತಿಲ್ಲವೇ? ಪ್ರತಿಬಾರಿಯೂ ನೀವು ಅಂದುಕೊಂಡಿದ್ದು ಆಗುತ್ತಿಲ್ಲವೇ? ಎಷ್ಟೇ ಪ್ರಯತ್ನಿಸಿದರೂ ಒಂದು ಹಂತವನ್ನು ತಲುಪಲು ಸಾಧ್ಯವಾಗಿಲ್ಲವೇ? ಇಂತಹ ಸಮಯದಲ್ಲಿ ನೀವು ಭರವಸೆ ಕಳೆದುಕೊಂಡರೆ ಅದು ಮುಳುಗಿಸಿಬಿಡುತ್ತದೆ. 

•    ಆಗಾಗ ಪಶ್ಚಾತ್ತಾಪ (Regret)
ಅಪರಾಧಿ ಭಾವನೆ ಮತ್ತು ಪಶ್ಚಾತ್ತಾಪದ ಭಾವನೆಗಳು ಕತ್ತಿಯ ಅಲಗಿನಂತೆ ಕೊರೆಯಬಲ್ಲವು. ಇಡೀ ದಿನ ಈ ಭಾವನೆ (Feelings) ಮೂಡಬೇಕೆಂದಿಲ್ಲ. ದಿನದ ಕೆಲವೇ ಸಮಯದಲ್ಲಿ ಬಂದರೂ ಸಾಕು, ಮನಸ್ಸಿನಲ್ಲಿ ಅಶಾಂತಿಯ ಬಿರುಗಾಳಿ ಎಬ್ಬಿಸಬಲ್ಲವು. 

•    ಹೆಚ್ಚಿನ ಬಯಕೆ (More Lust)
ಅನೇಕ ಜನರಿಗೆ ಹಗಲುಕನಸಿನಲ್ಲಿ ಮುಳುಗುವುದು ದಿನದ ಬೇಸರವನ್ನು ಕಳೆಯಲು ಇರುವ ಮಾರ್ಗವಾಗಿರುತ್ತದೆ. ಆದರೆ, ಇದರಿಂದ ಏನೂ ಪ್ರಯೋಜನವಿಲ್ಲ. ಜೀವನದಲ್ಲಿ ಇನ್ನೂ ಹೆಚ್ಚಿನದನ್ನೇನೋ ಅರಸುವ ಕನಸು ಕಾಣುತ್ತ ಮಲಗಿದ್ದರೆ ಏನೂ ಬದಲಾವಣೆಯೂ ಆಗುವುದಿಲ್ಲ. 

Optical Illusion Test: ಲೈಫ್‌ಲ್ಲಿ ಯಾವುದರ ಬಗ್ಗೆ ನಿಮ್ಗೆ ಅತೀ ಹೆಚ್ಚು ಭಯ, ಫೋಟೋ ನೋಡಿ ತಿಳ್ಕೊಳ್ಳಿ

•    ಏಕಾಂಗಿತನ (Loneliness)
ಏಕಾಂಗಿಯಾಗಿರುವುದಕ್ಕೂ, ಒಂಟಿತನ ಅನುಭವಿಸುವುದಕ್ಕೂ ವ್ಯತ್ಯಾಸವಿದೆ. ಜನರೊಂದಿಗೆ ಇದ್ದರೂ ಒಂಟಿಯಾಗಿರುವ ಭಾವನೆ ಮೂಡಿದರೆ ನಿಮಗೆ ಜೀವನದಲ್ಲಿ ಅತೃಪ್ತಿ ಗಾಢವಾಗಿದೆ ಎಂದರ್ಥ. ನಿಮಗೆ ಗೊತ್ತೇ? ಅಧ್ಯಯನದ ಪ್ರಕಾರ, ಒಂಟಿತನವು ದಿನಕ್ಕೆ ಹದಿನೈದು ಸಿಗರೇಟ್‌ ಸೇದಿದಷ್ಟು ಹಾನಿಯುಂಟು ಮಾಡುತ್ತದೆ. 

•    ಸ್ವಮರುಕ (Self Pity)
ಸ್ವಮರುಕವೂ ಸಹ ಜೀವನದ ಅತೃಪ್ತಿಯ ಸೂಚಕ. “ನನಗೇ ಯಾವಾಗಲೂ ಹೀಗೆ ಯಾಕಾಗುತ್ತದೆ? ನಾನೆಷ್ಟು ಒಳ್ಳೆಯವಳು/ನುʼ ಎನ್ನುವ ಭಾವನೆ ಕೊನೆಗೊಮ್ಮೆ ಕೋಪಕ್ಕೆ (Angry) ತಿರುಗುತ್ತದೆ. ನಿಮಗೂ ಒಂದೊಮ್ಮೆ ಸ್ವಮರುಕ ಕಾಡುತ್ತಿದೆ ಎಂದಾದರೆ ಜೀವನಕ್ಕೆ ಬದಲಾವಣೆಯ ಅಗತ್ಯವಿದೆ ಎಂದು ಅರಿತುಕೊಳ್ಳಿ.

Follow Us:
Download App:
  • android
  • ios