ಬಾಯ್ ಫ್ರೆಂಡ್, ಗರ್ಲ್ ಫ್ರೆಂಡ್ ಸಿಕ್ಕಾಪಟ್ಟೆ ಅವಾಯ್ಡ್ (Avoid) ಮಾಡ್ತಿದ್ದಾರ, ಮೀಟ್ (Meet) ಆಗ್ಬೇಕು ಅಂದಾಗ್ಲೆಲ್ಲಾ ನೋ ಟೈಂ, ಬಿಝಿ (Busy) ಅಂತ ನೆಪ ಹುಡುಕ್ತಿದ್ದಾರ. ನಿಮ್ಮ ಮೆಸೇಜ್, ಕಾಲ್‌ಗೂ ಸರಿಯಾಗಿ ರಿಪ್ಲೈ ಮಾಡಲ್ವಾ. ಹಾಗಿದ್ರೆ ಅವರ ಜೀವನದಲ್ಲಿ ನೀವು ಫಸ್ಟ್ ಪ್ರಿಯಾರಿಟಿ (Priority) ಅಲ್ಲ, ಸೆಕೆಂಡ್ ಚಾಯ್ಸ್ ಆಗಿರಬಹುದು.
ಸಂಬಂಧಗಳೇ ಹಾಗೆ. ಅವು ತುಂಬಾ ಕ್ಲಿಷ್ಟಕರ. ಅರ್ಥ ಮಾಡಿಕೊಳ್ಳಲು ಹೋದಂತೆಲ್ಲಾ ಮತ್ತಷ್ಟು ಜಟಿಲವಾಗುತ್ತಾ ಹೋಗುತ್ತದೆ. ಇನ್ನಷ್ಟು ಕಗ್ಗಂಟಾಗುತ್ತಾ ಹೋಗುತ್ತದೆ. ನಾವು ಪ್ರೀತಿಸುತ್ತಿದ್ದಾರೆ ಎಂದುಕೊಂಡವರು ನಮ್ಮನ್ನು ಪ್ರೀತಿಸುತ್ತಿರುವುದಿಲ್ಲ. ನಾವು ದ್ವೇಷಿಸುತ್ತಿದ್ದಾರೆ ಎಂದವರ ಮನದಲ್ಲೂ ನಮ್ಮ ಬಗ್ಗೆ ಪ್ರೀತಿಯಿರುತ್ತದೆ. ಆದರೆ ಇದೆಲ್ಲವನ್ನೂ ತಿಳಿದುಕೊಳ್ಳುವುದು ಮಾತ್ರ ಕಷ್ಟ. ಹೀಗಾಗಿಯೇ ಹಲವು ಸಂಬಂಧಗಳು ಫೈಲ್ಯೂರ್ ಆಗುತ್ತವೆ. ಲವ್ ವಿಷಯಕ್ಕೆ ಬಂದಾಗ ಯಾರೂ ಕೂಡಾ ಯಾರ ಜೀವನದಲ್ಲೂ ಆಪ್ಶನ್ ಆಗಿರಲು ಇಷ್ಟಪಡುವುದಿಲ್ಲ. ಅವನು ನನ್ನವನು ಅಥವಾ ಅವಳು ನನ್ನವಳು ಎಂಬ ಭಾವನೆಯನ್ನು ಇಟ್ಟುಕೊಳ್ಳುತ್ತಾರೆ.
ಆದರೆ ಅವನು/ ಅವಳು ನಿಮ್ಮನ್ನು ಅವಾಯ್ಡ್ ಮಾಡ್ತಿರೋವಂತೆ ನಿಮಗೆ ಅನಿಸ್ತಿದ್ಯಾ. ಅವರ ಜೀವನ (Life)ದಲ್ಲಿ ನಂಗೇನೂ ಇಂಪಾರ್ಟೆನ್ಸ್ ಇಲ್ವಾ ಅಂತ ಅನಿಸೋಕೆ ಶುರುವಾಗಿದ್ಯಾ. ಹಾಗಿದ್ರೆ ನೀವು ಅವರ ಜೀವನದಲ್ಲಿ ಫಸ್ಟ್ ಪ್ರಿಯಾರಿಟಿ (Priority) ಆಗಿದ್ದೀರೋ ಇಲ್ವಾ, ಸೆಕಂಡ್ ಚಾಯ್ಸಾ ಎಂಬುದನ್ನು ತಿಳಿದುಕೊಳ್ಳಿ.
ಜತೆಗಿರಲು ಆಸಕ್ತಿಯಿಲ್ಲ
ನೀವು ಜತೆಯಾಗಿ ಹೊರ ಹೋಗಬೇಕೆಂದು ಪ್ಲಾನ್ (Plan) ಮಾಡುವಾಗಲ್ಲೆಲ್ಲಾ ಅವನು ಅಥವಾ ಅವಳು ಹೆಚ್ಚು ಆಸಕ್ತಿ ತೋರುತ್ತಿಲ್ವಾ. ದಿನಾಂಕ ಅಥವಾ ಔಟಿಂಗ್ ಹೋಗುವುದರ ಬಗ್ಗೆ ಮುಂಚಿತವಾಗಿ ಪ್ಲಾನ್ ಮಾಡಲು ಬಯಸಿದಾಗ, ಅವನು, ಅವಳು ಯಾವುದಕ್ಕೂ ಆಸಕ್ತಿ ತೋರಿಸುತ್ತಿಲ್ವಾ. ಈ ಮೇಲಿನ ಎರಡು ವಿಷಯಗಳು ನಿಜವಾಗಿದ್ದರೆ, ನೀವು ಅವರ ಮೊದಲ ಆದ್ಯತೆಯಲ್ಲ ಎಂಬುದು ತಿಳಿದುಬರುತ್ತದೆ. ಕೆಲವೊಮ್ಮೆ ಸಮಯಾವಕಾಶದ ಕೊರತೆಯಿಂದ ಕೆಲವರು ಹೀಗೆ ಮಾಡಬಹುದು. ಉಳಿದಂತೆ ಪ್ರತಿಬಾರಿಯೂ ನಿಮ್ಮ ಜತೆಗೆ ಸಮಯ ಕಳೆಯಲು, ಹೊರಗೆ ಸುತ್ತಾಡುವ ಪ್ಲಾನ್ ಮಾಡಿದಾಗಲ್ಲೆಲ್ಲಾ ಅವರು ನಿರಾಕರಿಸುತ್ತಿದ್ದರೆ ಎಂದರೆ ನೀವು ಅವರಿಗೆ ಸೆಕೆಂಡ್ ಪ್ರಿಯಾರಿಟಿ ಎಂದೇ ಅರ್ಥ.
Break up ಗೆ ಕಾರಣವಾಗೋ ತಪ್ಪುಗಳಿವು!
ಮೆಸೇಜ್, ಕಾಲ್‌ಗೆ ಲೇಟ್ ರಿಪ್ಲೈ
ನೀವು ಮೊದಲ ಆದ್ಯತೆಯಾಗಿಲ್ಲದಿದ್ದಾಗ ನಿಮ್ಮ ಜತೆ ಮಾತನಾಡಲು ಅವರು ಹಾತೊರೆಯುವುದಿಲ್ಲ. ಕಾಲ್, ಮೆಸೇಜ್ (Messege) ಮಾಡಿದಾಗಲೂ ತಕ್ಷಣವೇ ರಿಪ್ಲೈ ಕೊಡುವ ಉತ್ಸಾಹ ತೋರುವುದಿಲ್ಲ. ಸಾಮಾಜಿಕ ಮಾಧ್ಯಮದ ನಿಮ್ಮ ಸ್ಟೇಟಸ್, ಫೋಟೋಗಳಿಗೂ ಯಾವುದೇ ರೀತಿ ಪ್ರತಿಕ್ರಿಯೆ ನೀಡುವುದಿಲ್ಲ. ನೀವಾಗಿ ಸಂದೇಶ ಕಳುಹಿಸಿದರೂ ಪ್ರತಿಕ್ರಿಯೆ ನೀಡಲು ಉದಾಸೀನ ತೋರುತ್ತಿದ್ದರೆ ಆ ನಡವಳಿಕೆಯನ್ನು ಪ್ರೋತ್ಸಾಹಿಸಲು ಹೋಗಬೇಡಿ. ಮತ್ತು ಈ ಸಂಬಂಧವನ್ನು ಪ್ರೋತ್ಸಾಹಿಸುವುದರಲ್ಲಿ ಅರ್ಥವಿಲ್ಲ. ಅವರು ನಿಮ್ಮ ಬಗ್ಗೆ ಅತ್ಯಂತ ಕಡಿಮೆ ಆಸಕ್ತಿಯನ್ನು ಹೊಂದಿದ್ದಾರೆ ಎಂಬುದು ಇದರಿಂದ ತಿಳಿದುಬರುತ್ತದೆ.
ನಿಮ್ಮ ಬಗ್ಗೆ ಮಾತನಾಡಲು ಇಷ್ಟಪಡುವುದಿಲ್ಲ
ಇಷ್ಟಪಡುವ ವ್ಯಕ್ತಿಯ ಬಗ್ಗೆ ಇನ್ನೊಬ್ಬರಲ್ಲಿ ಹೇಳಿಕೊಳ್ಳುವಾಗ ಹೇಳಿದಷ್ಟೂ ಮಾತುಗಳು ಮುಗಿಯುವುದಿಲ್ಲ. ಅವರ ಗುಣಗಳನ್ನು ಹೊಗಳಿ ಖುಷಿಪಡುತ್ತೇವೆ. ಆದರೆ, ಒಬ್ಬ ವ್ಯಕ್ತಿ ನಮ್ಮ ಮೊದಲ ಆದ್ಯತೆ ಇಲ್ಲದಿದ್ದಾಗ ಆತನ, ಆಕೆಯ ಬಗ್ಗೆ ಮಾತನಾಡುವ ಆಸಕ್ತಿಯಿರುವುದಿಲ್ಲ. ಮತ್ತೊಬ್ಬರು ಅವಳ/ ಅವನ ಬಗ್ಗೆ ಮಾತನಾಡಿದರೂ ತಡೆಯುತ್ತಾರೆ.
ಪ್ಲಾನ್ ಕ್ಯಾನ್ಸಲ್ ಮಾಡುವುದು
ನೀವು ಆದ್ಯತೆಯಿಲ್ಲದಿದ್ದಾಗ, ಅವರು ನಿಮ್ಮ ಜತೆ ಬರುವ, ನಿಮ್ಮನ್ನು ಭೇಟಿ (Meet) ಮಾಡುವ ಸಂದರ್ಭವನ್ನು ಅವಾಯ್ಡ್ ಮಾಡುತ್ತಾರೆ. ಅವನು/ಅವಳು ನಿಮ್ಮ ಬಗ್ಗೆ ಪ್ರೀತಿಯಿಟ್ಟುಕೊಂಡಿದ್ದೇ ಆದಲ್ಲಿ ನಿಮ್ಮ ಸಮಯವನ್ನು ಗೌರವಿಸುತ್ತಾರೆ. ಬದಲಿಗೆ ಮೀಟ್ ಆಗುವ ಪ್ಲಾನ್ ಮಾಡಿ ಕ್ಯಾನ್ಸಲ್ ಮಾಡುವ ಗೋಜಿಗೆ ಹೋಗುವುದಿಲ್ಲ. ಇದರಿಂದ ನಿಮ್ಮನ್ನು ಮೀಟ್ ಮಾಡಬೇಕೆ, ಬೇಡವೇ ಎಂಬ ಬಗ್ಗೆ ಅವರಿಗೂ ಗೊಂದಲವಿದೆ. ಭೇಟಿಯಾಗುವುದು ಅವರ ಆದ್ಯತೆಯೇ ಅಲ್ಲ ಎಂಬುದು ಸ್ಪಷ್ಟವಾಗುತ್ತದೆ.
Relationship Tips: ಸಂಗಾತಿಯನ್ನು ಖುಷಿಪಡಿಸಲು ಸಿಂಪಲ್ ಟಿಪ್ಸ್
ನೆನಪಿಟ್ಟುಕೊಳ್ಳುವುದು
ನಾವು ಯಾರೊಬ್ಬರ ಬಗ್ಗೆಯಾದರೂ ಆಸಕ್ತಿ ಹೊಂದಿರುವಾಗ, ಅವನು / ಅವಳ ಕುರಿತಾದ ವಿಚಾರವನ್ನು ಯಾವತ್ತೂ ನೆನಪಿಟ್ಟುಕೊಳ್ಳುತ್ತೇವೆ. ಅವನು/ಅವಳು ಧರಿಸಿರುವ ಡ್ರೆಸ್, ಆಭರಣ,ಅವರ ಆಯ್ಕೆ ಅಭಿರುಚಿಗಳನ್ನು ಗಮನಿಸುತ್ತೇವೆ. ಬರ್ತ್ ಡೇ (Birthday), ಸ್ಪೆಷಲ್ ದಿನಗಳ ಬಗ್ಗೆ ಹೇಳಿರುವುದನ್ನು ನೆನಪಿನಲ್ಲಿಟ್ಟುಕೊಳ್ಳುತ್ತೇವೆ. ಅವರ ಬಗ್ಗೆ ಆಸಕ್ತಿಯಿಲ್ಲದಿದ್ದಾಗ ಮಾತ್ರ ಹೇಳಿದ್ದನ್ನು ಸುಲಭವಾಗಿ ಮರೆತುಬಿಡುತ್ತೇವೆ. ವ್ಯಕ್ತಿಗೆ ನೀವು ಎರಡನೇ ಆಯ್ಕೆಯಾಗಿರುವಾಗ, ಇದೇ ಸಂಭವಿಸುತ್ತದೆ. ನೀವು ಅವರಿಗೆ ಹೇಳಿದ್ದನ್ನು ಅವನು/ಅವಳು ಸುಲಭವಾಗಿ ಮರೆತುಬಿಡುತ್ತಾರೆ. ನೀವು ಪದೇ ಪದೇ ಬಲವಂತದಿಂದ ಅದನ್ನು ನೆನಪಿಸಬೇಕಾಗುತ್ತದೆ.
