ಮಳೆಗಾಲದ ಸೆಕ್ಸ್ ದುಬಾರಿಯಾಗ್ಬಾರದೆಂದ್ರೆ ಇಲ್ಲಿವೆ ಟಿಪ್ಸ್

ಹೊರಗೆ ಧಾರಾಕಾರವಾಗಿ ಸುರಿಯುವ ಮಳೆ, ಮನೆಯ ಬೆಚ್ಚನೆ ವಾತಾವರಣ, ಸಂಗಾತಿಯನ್ನು ಸನಿಹಕ್ಕೆ ಸೆಳೆಯುತ್ತದೆ. ಮಳೆಗಾಲದಲ್ಲಿ ಶಾರೀರಿಕ ಸಂಬಂಧ ಬೆಳೆಸುವುದನ್ನು ಅನೇಕರು ಇಷ್ಟಪಡ್ತಾರೆ. ಆದ್ರೆ ಈ ಋತುವಿನಲ್ಲಿ ಮಹಿಳೆಯರನ್ನು ಕೆಲ ಸಮಸ್ಯೆ ಕಾಡುತ್ತದೆ. ಅದ್ರಿಂದ ದೂರ ಇರ್ಬೇಕೆಂದ್ರೆ ಈ ಟಿಪ್ಸ್ ಫಾಲೋ ಮಾಡಿ.
 

Sex In Monsoon Problems And Tips To Avoid Them roo

ಶಾರೀರಿಕ ಸಂಬಂಧ ಬೆಳೆಸಲು ಯಾವುದೇ ನಿರ್ದಿಷ್ಟ ಋತು ಅಥವಾ ಸಮಯ ನಿಗದಿಪಡಿಸಲಾಗಿಲ್ಲ. ತುಂತುರು ಮಳೆಯಲ್ಲಿ  ಸಂಗಾತಿಯೊಂದಿಗೆ ಸಮಯ ಕಳೆಯುವ ಆಸೆ ಎಲ್ಲರಿಗೂ ಇರುತ್ತೆ. ಹೆಚ್ಚಿನ ಜನರು ಮಳೆಯಲ್ಲಿ ಒದ್ದೆಯಾಗಲು ಮತ್ತು ಈ ವಾತಾವರಣದಲ್ಲಿ ಸಂಭೋಗ ಬೆಳೆಸಲು ಇಷ್ಟಪಡುತ್ತಾರೆ. ಈ ಋತುವಿನಲ್ಲಿ ನೀವು ಸಹ ಲೈಂಗಿಕತೆ ಆನಂದಿಸುವ ಮನಸ್ಸು ಹೊಂದಿದ್ದರೆ ಕೆಲವೊಂದು ವಿಷ್ಯಗಳ ಬಗ್ಗೆ ಕಾಳಜಿ ವಹಿಸುವುದು ಮುಖ್ಯ. 

ಮಳೆ (Rain) ಯಲ್ಲಿ ಒದ್ದೆಯಾದ ಸಂದರ್ಭದಲ್ಲಿ ನೀವು ಶಾರೀರಿಕ ಸಂಬಂಧ ಬೆಳೆಸಲು ಮುಂದಾದ್ರೆ  ಯೋನಿ (vagina) ಯಲ್ಲಿ ತುರಿಕೆ, ದದ್ದು ಮತ್ತು ಕಿರಿಕಿರಿ ಸಮಸ್ಯೆ ಕಾಣಿಸಬಹುದು. ನಾವಿಂದು ಮಾನ್ಸೂನ್ ಸೆಕ್ಸ್ ವೇಳೆ ಕಾಣಿಸುವ ಸಮಸ್ಯೆ ಹಾಗೂ ಅದಕ್ಕೆ ಪರಿಹಾರವೇನು ಎಂಬುದನ್ನು ನಿಮಗೆ ಹೇಳ್ತೇವೆ.  ತಜ್ಞರ ಪ್ರಕಾರ, ಮಳೆಗಾಲದಲ್ಲಿ ಯೋನಿ ಸದಾ ತೇವಾಂಶದಿಂದ ಕೂಡಿರುತ್ತದೆ. ಶಾಖ ಮತ್ತು ಆರ್ದ್ರತೆಯ ಭಾವನೆ ಬ್ಯಾಕ್ಟೀರಿಯಾವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದ್ರಿಂದ ಯೋನಿಯಲ್ಲಿ ದದ್ದು, ಉರಿಯೂತ ಮತ್ತು ಯುಟಿಐ ಅಪಾಯವನ್ನು ಹೆಚ್ಚಿಸುತ್ತದೆ. ಮಳೆಗಾಲದಲ್ಲಿ ಸಂಭೋಗದ ಮೊದಲು ಯೋನಿಯ ಸ್ವಚ್ಛತೆ ಬಗ್ಗೆ ಜಾಗರೂಕರಾಗಿರಬೇಕು. ಸರಿಯಾದ ಪ್ಯಾಂಟಿ ಸೇರಿದಂತೆ ಸೆಕ್ಸ್ ವೇಳೆ  ಶುಚಿತ್ವ ಕಾಯ್ದುಕೊಳ್ಳದೆ ಹೋದ್ರೆ ಸಮಸ್ಯೆ ಶುರುವಾಗುತ್ತದೆ.

ಡಿವೋರ್ಸ್ ಅನ್ನೋದು ಕೆಟ್ಟ ಶಬ್ದವಲ್ಲ ಅಂದಿದ್ಯಾಕೆ ರಾಜ್‌ ಶೆಟ್ಟಿ, ಅಂಥದ್ದೇನಾಯ್ತು?

ಯುಟಿಐ : ಸೆಕ್ಸ್, ಮಹಿಳೆಯರಲ್ಲಿ ಮೂತ್ರನಾಳದ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಮುಟ್ಟು ನಿಲ್ಲಲು ಹತ್ತಿರ ಬರ್ತಿದ್ದಂತೆ  ಯೋನಿ ಒಳಪದರ ದಪ್ಪವಾಗಲು ಪ್ರಾರಂಭವಾಗುತ್ತದೆ. ಇದು ಯುಟಿಐಗಳ ಅಪಾಯವನ್ನು ಹೆಚ್ಚಿಸುತ್ತದೆ. ಇದಲ್ಲದೆ ಮಳೆಗಾಲದಲ್ಲಿ ಸಂಗಾತಿ ಯಾವುದೇ ಬ್ಯಾಕ್ಟೀರಿಯಾದ ಸೋಂಕಿಗೆ ಬಲಿಯಾಗಿದ್ದರೆ ಅದು ಮಹಿಳೆಯರಲ್ಲಿ ಯುಟಿಐ ಅಪಾಯಕ್ಕೆ ಕಾರಣವಾಗುತ್ತದೆ. 

ಲೈಂಗಿಕ ರೋಗದ ಅಪಾಯ : ಯೋನಿಯಲ್ಲಿ ಕಾಣಿಸಿಕೊಳ್ಳುವ ಸೋಂಕು, ವೈಟ್ ಡಿಸ್ಜಾರ್ಜ್, ತುರಿಕೆ ಮತ್ತು ಉರಿ ಸಮಸ್ಯೆಯನ್ನು ತರುತ್ತದೆ. ಇದು ಲೈಂಗಿಕವಾಗಿ ಹರಡುವ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಟ್ರೈಕೊಮೋನಿಯಾಸಿಸ್, ಗೊನೊರಿಯಾ, ಜನನಾಂಗದ ಹರ್ಪಿಸ್ ಮತ್ತು ಕ್ಲಮೈಡಿಯದಂತಹ ರೋಗಗಳು ಹೆಚ್ಚಾಗುವ ಅಪಾಯವಿದೆ. 

ಯಪ್ಪಾ..! ಇವಳೆಂಥವಳು.. ಸಾಯೋವಾಗ್ಲೂ ಗಂಡನ ಮೇಲಿನ ಸೇಡು ತೀರಿಸಿಕೊಳ್ಳೋದಾ?

ಯೀಸ್ಟ್ ಸೋಂಕು : ಮಳೆಗಾಲದಲ್ಲಿ ಯೀಸ್ಟ್ ಸೋಂಕು ಹೆಚ್ಚಾಗುವ ಅಪಾಯವಿದೆ. ಯೋನಿಯು ಎಲ್ಲಾ ಸಮಯದಲ್ಲೂ ತೇವವಾಗಿರುವುದರಿಂದ ಈ ಸೋಂಕು ಸುಲಭವಾಗಿ ಹರಡಲು ಪ್ರಾರಂಭಿಸುತ್ತದೆ. ಇದು ದೀರ್ಘಕಾಲ ನಿಮ್ಮನ್ನು ಕಾಡುತ್ತದೆ. 

ಮಾನ್ಸೂನ್ ಸೆಕ್ಸ್ ನಲ್ಲಿ ಅಪಾಯ ಬರದಂತೆ ಹೀಗೆ ಮಾಡಿ : 

ಪ್ಯುಬಿಕ್ ಕೂದಲ ಶೇವಿಂಗ್ ಬೇಡ : ಯೋನಿ ಸುರಕ್ಷಿತವಾಗಿರಬೇಕು, ಯಾವುದೇ ಬ್ಯಾಕ್ಟೀರಿಯಾ ಸೋಂಕು ನಿಮ್ಮನ್ನು ಕಾಡಬಾರದು ಎಂದಾದ್ರೆ ನೀವು ಪ್ಯುಬಿಕ್ ಕೂದಲನ್ನು ಮಳೆಗಾಲದಲ್ಲಿ ಶೇವ್ ಮಾಡಲು ಹೋಗ್ಬೇಡಿ. ಇದು ಯೋನಿ ರಕ್ಷಿಸುವ ಕೆಲಸ ಮಾಡುತ್ತದೆ. ಸಂಭೋಗದ  ವೇಳೆ ಸೋಂಕು ಚರ್ಮದ ನೇರ ಸಂಪರ್ಕಕ್ಕೆ ಬರದ ಕಾರಣ ಸೋಂಕು ಹರಡುವ ಅಪಾಯ ಕಡಿಮೆ.  

ಮಸಾಲೆ ಆಹಾರದಿಂದ ದೂರವಿರಿ : ಮಳೆಗಾಲದಲ್ಲಿ ಬಿಸಿಯಾದ, ಮಸಾಲೆ ಆಹಾರ ಸೇವನೆಗೆ ಮನಸ್ಸು ಹಾತೊರೆಯುತ್ತದೆ. ಆದ್ರೆ ನೀವು ಮಸಾಲೆ ಆಹಾರವನ್ನು ಅತಿಯಾಗಿ ಸೇವನೆ ಮಾಡಿದ್ರೆ ಯೋನಿಯ ಪಿಹೆಚ್ ಮಟ್ಟದಲ್ಲಿ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ. ಯೋನಿಯಲ್ಲಿ ಶಿಲೀಂಧ್ರಗಳ ಸೋಂಕಿನ ಅಪಾಯವು ಹೆಚ್ಚಾಗುತ್ತದೆ.  

ಸೆಕ್ಸ್ (Sex) ನಂತ್ರ ಯೋನಿ ಸ್ವಚ್ಛತೆ : ಸಂಭೋಗಕ್ಕಿಂತ ಮೊದಲು ಹಾಗೂ ನಂತ್ರ ಮೂತ್ರ ವಿಸರ್ಜನೆ ಮುಖ್ಯವಾಗುತ್ತದೆ. ಅದ್ರ ಜೊತೆ ನೀವು ಸೆಕ್ಸ್ ನಂತ್ರ ಯೋನಿಯನ್ನು ಸ್ವಚ್ಛವಾಗಿ ಕ್ಲೀನ್ ಮಾಡಿ, ಪ್ಯಾಂಟಿ ಬದಲಿಸಿ. ಇದ್ರಿಂದ ದುರ್ವಾಸನೆ ಮತ್ತು ಸೋಂಕಿನ ಎರಡೂ ಸಮಸ್ಯೆಗಳನ್ನು ತಪ್ಪಿಸಬಹುದು.

ಪ್ರೋಬಯಾಟಿಕ್‌ಗಳನ್ನು ಸೇವಿಸಿ : ಆಹಾರದಲ್ಲಿ ಪ್ರೋಬಯಾಟಿಕ್ ಇರುವಂತೆ ನೋಡಿಕೊಳ್ಳಿ. ಮೊಸರು, ಲಸ್ಸಿಯಂತ ಆಹಾರದಲ್ಲಿ ನಿಮಗೆ ಪ್ರೋಬಯಾಟಿಕ್‌ ಸಿಗುತ್ತದೆ.ಇದು ಯೋನಿಯ ಪಿಹೆಚ್ ಮಟ್ಟವನ್ನು ಕಾಪಾಡುತ್ತದೆ. ಕರುಳಿನ ಆರೋಗ್ಯಕ್ಕೂ ಪ್ರಯೋಜನಕಾರಿ.  
 

Latest Videos
Follow Us:
Download App:
  • android
  • ios