ಅಜ್ಜಂಗೆ 100, ಅಜ್ಜಿಗೆ 90: ಪ್ರೀತಿ ಆಚರಿಸಲು ಈ ಜನ್ಮ ಸಾಕಾಗಿಲ್ಲ ಅಂತಾರೆ ಈ ಹಿರಿಯರು!
ದಾಂಪತ್ಯದಲ್ಲಿ ಯಾರು ಮೇಲು, ಯಾರು ಕೀಳು ಎನ್ನುವುದು ಬರಲೇ ಬಾರದು. ಇಲ್ಲಿ ಹೊಂದಾಣಿಕೆ ಬಹಳ ಮುಖ್ಯ. 100ನೇ ವಯಸ್ಸಿನಲ್ಲೂ ಪತ್ನಿ ಜೊತೆ 72ನೇ ವಾರ್ಷಿಕೋತ್ಸವ ಆಚರಣೆ ಮಾಡೋದು ಅದೃಷ್ಟದ ವಿಷ್ಯ.
10, 18 ವರ್ಷಕ್ಕೆ ಈಗಿನ ಜನರು ಸಾವನ್ನಪ್ಪುತ್ತಿದ್ದಾರೆ. ಮದುವೆಯಾದ ಎರಡೇ ವರ್ಷಕ್ಕೆ ವಿಚ್ಛೇದನವಾಗ್ತಿದೆ. ಹಾಗಿರುವಾಗ 100 ವರ್ಷ ಬದುಕೋದು ಬಹಳ ಅಚ್ಚರಿಯ ಹಾಗೂ ಖುಷಿ ವಿಷ್ಯ. ಕೆಲವರು 80, 90 ವರ್ಷ ಬದುಕುತ್ತಾರೆ. ಆದ್ರೆ ಹಾಸಿಗೆ ಹಿಡಿದು ದೇವರು ಯಾವಾಗ ನಮ್ಮನ್ನು ಕರೆದುಕೊಳ್ತಾನೆ ಎಂದು ಪ್ರಾರ್ಥಿಸುತ್ತಿರುತ್ತಾರೆ. ಬಹುತೇಕರು ಈ ಇಳಿ ವಯಸ್ಸಿನಲ್ಲಿ ಒಂಟಿಯಾಗಿ ಜೀವನ ನಡೆಸೋದೇ ಹೆಚ್ಚು. ಆದ್ರೆ 100ನೇ ವಯಸ್ಸಿನಲ್ಲಿ ಗಟ್ಟಿಮುಟ್ಟಾಗಿದ್ದು, ತನ್ನ ಸಂಗಾತಿ ಜೊತೆ 72ನೇ ಮದುವೆ ವಾರ್ಷಿಕೋತ್ಸವ ಆಚರಣೆ ಮಾಡಿಕೊಳ್ತಿರುವ ಜೋಡಿಯೊಂದು ಇಲ್ಲಿದೆ. ನಾವಿಂದು ಆ ಜೋಡಿ ಬಗ್ಗೆ ಅವರ ಮಾತಿನಲ್ಲೇ ಮಾಹಿತಿ ನೀಡ್ತೇವೆ.
100 ವರ್ಷದ ಅಜ್ಜ (Grandfather )- 90ರ ಅಜ್ಜಿ ಸರಳ ದಾಂಪತ್ಯ : ನನಗೆ 100 ವರ್ಷ. ಆದರೆ ನಾನು ಅವಳನ್ನು ಮೊದಲ ಬಾರಿ ನೋಡಿದ ನೆನಪೂ ಈಗಲೂ ನನಗಿದೆ. ಒಬ್ಬ ಪಂಡಿತರು ನಮ್ಮ ಜಾತಕ ಹೊಂದಿಕೆಯಾಗುತ್ತದೆ ಎಂದಿದ್ದರು. ಹಾಗಾಗಿ ನಾನು ಮತ್ತು ನನ್ನ ಕುಟುಂಬದವರು ಅವಳನ್ನು ಭೇಟಿ ಮಾಡಲು ಹೋದೆವು. ನನ್ನ ಹೆತ್ತವರು ಆಸಕ್ತಿ ತೋರಿಸಿದ್ದರಿಂದ ನಾನು ಇವಳನ್ನು ಮದುವೆ (Marriage ) ಯಾದೆ ಅಂತಾ ಪತ್ನಿಯನ್ನು ಈಗ್ಲೂ ಕಾಲೆಳೆಯುತ್ತಿರುತ್ತೇನೆ. ಆದರೆ ಅವಳು ತುಂಬಾ ಸುಂದರವಾಗಿದ್ದಳು, ನಾನು ಅವಳನ್ನೇ ನೋಡುತ್ತಿದ್ದೆ. ನಾನು ಹತ್ತು ವರ್ಷ ದೊಡ್ಡವಳಾಗಿದ್ದ ಕಾರಣ ಆಕೆ ಒಪ್ಪುತ್ತಾಳೆ ಎಂದುಕೊಡಿರಲಿಲ್ಲ. ಆದರೆ ಹಿರಿಯರು ಮಾತನಾಡಿ ಸಂಬಂಧವನ್ನು ಒಪ್ಪಿಕೊಂಡರು.
ಅವಳನ್ನು ನೋಡಿದ್ರೆ ಮನಸ್ಸಿನಲ್ಲಿ ಕಚಗುಳಿ, ನಿಮ್ಗೆ ಲವ್ವಾಗಿದ್ಯಾ ತಿಳ್ಕೊಳ್ಳೋದು ಹೇಗೆ?
ನಾವು ಹನಿಮೂನ್ (Honeymoon) ಗೆ ಹೋಗಿರಲಿಲ್ಲ. ನಮ್ಮ ಅವಿಭಕ್ತ ಕುಟುಂಬದಲ್ಲಿ ಕಟ್ಟುನಿಟ್ಟಿನ ನಿಯಮವಿತ್ತು. ಹಣ ಕಡಿಮೆ ಇದ್ದುದರಿಂದ ದಿನವೂ ಹರಸಾಹಸ ಪಡಬೇಕಾಯಿತು. ಅವಳಿಗೆ ಸೀರೆ ಕೊಳ್ಳಲೂ ನನ್ನ ಬಳಿ ಹಣವಿಲ್ಲದ ಕಾರಣ ಅಣ್ಣ ನಮಗಾಗಿ ಬಟ್ಟೆ ಖರೀದಿಸಿದ. ಆದರೆ ಅವಳು ಎಂದಿಗೂ ದೂರು ನೀಡಲಿಲ್ಲ ಎನ್ನುತ್ತಾರೆ ಅಜ್ಜ.
ಇಷ್ಟೇ ಅಲ್ಲ ಕಥೆ ಮುಂದುವರೆಸಿದ ಅಜ್ಜ, ಅಗರಬತ್ತಿಗಳನ್ನು ಹಂಚಲು ನಾನು ಪ್ರತಿ ತಿಂಗಳು 3 ವಾರಗಳ ಕಾಲ ದಕ್ಷಿಣ ಭಾರತವನ್ನು ಸುತ್ತುತ್ತಿದ್ದೆ. ಆದರೆ ಅವಳು ನನ್ನನ್ನು ಎಂದಿಗೂ ತಪ್ಪಿತಸ್ಥರೆಂದು ಭಾವಿಸಲಿಲ್ಲ. ನಾನು ಅವಳನ್ನು ತುಂಬಾ ನಂಬಿದ್ದೆ, ಯಾವುದೇ ನಿರ್ಧಾರವನ್ನು ಅವಳು ಹೇಳಿಲ್ಲವೆಂದ್ರೆ ನನಗೆ ಅದು ಸರಿ ಎನ್ನಿಸುತ್ತಿರಲಿಲ್ಲ. ನನ್ನ ಸ್ವಂತ ವ್ಯವಹಾರ ಶುರು ಮಾಡುವ ವೇಳೆ ಎಲ್ಲರೂ ಅದನ್ನು ಒಪ್ಪದೆ ಹೋದ್ರೂ ಆಕೆ ನನ್ನ ಬೆಂಬಲಕ್ಕೆ ನಿಂತಳು. ಅವಳು ನನಗೆ ಧೈರ್ಯ ತುಂಬಿದ್ದಳು. ನಾವಿಬ್ಬರೂ ಇದನ್ನು ಒಟ್ಟಿಗೆ ನಿಭಾಯಿಸೋಣ ಎಂದಿದ್ದಳು.
ಗರ್ಲ್‌ಫ್ರೆಂಡ್ ರೂಮಿನಿಂದ ಒಳಉಡುಪಿನಲ್ಲಿ ಬಾಲ್ಕನಿಯಿಂದ ಇಳಿಯುವಾಗ ಪೋಷಕರ ಕೈಗೆ ಸಿಕ್ಕಿಬಿದ್ದ ಯುವಕ!
ಅವಳಿಗೆ ಸ್ವಂತ ಮನೆ ಮಾಡುವ ಕನಸಿತ್ತು. ಆಕೆ ಮನೆ ನೋಡಿಕೊಂಡ್ರೆ ನಾನು ತಡರಾತ್ರಿವರೆಗೂ ಕಚೇರಿಯಲ್ಲಿ ಕೆಲಸ ಮಾಡ್ತಿದ್ದೆ. 17 ವರ್ಷಗಳ ಕಾಲ ಒಂದೊಂದು ರೂಪಾಯಿ ಒಟ್ಟು ಮಾಡಿ ನಾವು ಸ್ವಂತ ಮನೆ ಖರೀದಿ ಮಾಡಿದ್ವಿ. ಈ ಮನೆಯಲ್ಲಿ ಹೊಸ ಬದುಕು ಕಟ್ಟಿಕೊಂಡ್ವಿ ಎನ್ನುತ್ತಾರೆ ಅಜ್ಜ.
ಆ ಮನೆಯಲ್ಲಿ ಪ್ರತಿದಿನ ಬೆಳಿಗ್ಗೆ ಅವಳು ಮೃದುವಾದ ದೋಸೆ ಹಾಕ್ತಿದ್ದರೆ ನಾನು ಹಾಸಿಗೆ ಸರಿ ಮಾಡ್ತಿದ್ದೆ. ಆಕೆ ಸಾಯಂಕಾಲ ತೋಟದ ಹೂವನ್ನು ಕೀಳ್ತಿದ್ದರೆ ನಾನು ಪೇಪರ್ ಓದುವ ನೆಪದಲ್ಲಿ ಆಕೆಯನ್ನು ಇಣುಕಿ ನೋಡ್ತಿದ್ದೆ. ಮನೆಯಲ್ಲಿ ಕರ್ನಾಟಕ ಸಂಗೀತ (Carnatic Music) ಯಾವಾಗ್ಲೂ ಕೇಳ್ತಿತ್ತು. ನಮ್ಮ ಹೆಣ್ಣುಮಕ್ಕಳ ಮದುವೆ ನಂತರ ನಾವು ನಮ್ಮ ಮೊದಲ ವಿದೇಶಿ ಪ್ರವಾಸ ಮಾಡಿದ್ದೇವೆ. ದಾರಿ ತಪ್ಪಿಸಿಕೊಳ್ತೇವೆ, ಟೂರ್ ಬಸ್ ಇಳಿಯೋದು ಬೇಡವೆಂದು ಹಠ ಮಾಡಿದ್ದೆ. ಆದ್ರೆ ಆಕೆ ಏನೂ ಆಗಲ್ಲ ಬಾ ಎಂದಳು. ಇಬ್ಬರೂ ಊರು ಸುತ್ತಿದ್ದೇವೆ. ಈಗ ನನಗೆ 100 ವರ್ಷ. ಈಗ್ಲೂ ನನಗೆ ನನ್ನ ಪತ್ನಿಯ ಸಲಹೆ ಬೇಕು. ಸಣ್ಣ ಸಣ್ಣ ವಿಷ್ಯಕ್ಕೂ ನಾನು ಅವಳ ಮೇಲೆ ಡಿಪೆಂಡ್ ಆಗಿದ್ದೇವೆ. ನನ್ನ ಮಕ್ಕಳು, ನನ್ನನ್ನು ಕೀಟಲೆ ಮಾಡ್ತಾರೆ. ಅಮ್ಮನ ಒಪ್ಪಿಗೆ ಸಿಕ್ಕಿತಾ ಎಂದು ಕೇಳುತ್ತಾರೆ. ಕಳೆದ ವರ್ಷ, ನಮ್ಮ 71 ನೇ ವಾರ್ಷಿಕೋತ್ಸವದಂದು, ನಾವು ನಮ್ಮ ಪ್ರತಿಜ್ಞೆಯನ್ನು ನವೀಕರಿಸಿದ್ದೇವೆ. ಇಬ್ಬರು ಮಕ್ಕಳು, 4 ಮೊಮ್ಮಕ್ಕಳು ಮತ್ತು 2 ಮರಿಮಕ್ಕಳನ್ನು ನಾವು ಹೊಂದಿದ್ದು, ಪ್ರೀತಿಯನ್ನು ಆಚರಿಸಲು ಒಂದು ಜೀವನ ಸಾಕಾಗುವುದಿಲ್ಲ ಎಂಬುದು ನಮಗೆ ಅರ್ಥವಾಗಿದೆ ಎಂದು ಅವರು ಹೇಳಿದ್ದಾರೆ.
Officialhumansofbombay ಇನ್ಸ್ಟಾಖಾತೆಯಲ್ಲಿ ಇವರ ವಿಡಿಯೋ ಹಂಚಿಕೊಳ್ಳಲಾಗಿದೆ. ಅಜ್ಜ –ಅಜ್ಜಿಯ ವಿಡಿಯೋ, ಕಥೆ ಈಗಿನ ಯುವ ಜೋಡಿಗೆ ಸ್ಫೂರ್ತಿಯಾಗಲಿದೆ.