41 ವರ್ಷಗಳಿಂದ ಜಗಳವಾಡುತ್ತಲೇ ಇದ್ದಾರೆ ದಂಪತಿ.. ಪರಸ್ಪರ 60 ಪ್ರಕರಣ ದಾಖಲು !
ಗಂಡ-ಹೆಂಡತಿ (Husband Wife) ಜಗಳ ಉಂಡು ಮಲಗುವ ತನಕ ಅಂತಾರೆ. ಆದ್ರೆ ಅದು ನಿಜವಲ್ಲ ಅನ್ನೋದನ್ನು ಇಲ್ಲೊಂದು ಜೋಡಿ ಸಾಬೀತುಪಡಿಸಿದೆ. ಪರಸ್ಪರ ದೂರವಾದ ದಂಪತಿ (Couple) 41 ವರ್ಷಗಳ ನಂತರವೂ ಈಗಲೂ ಜಗಳವಾಡುತ್ತಲೇ ಇದ್ದಾರೆ.
ಮದುವೆ (Marriage)ಯೆಂಬುದು ಒಂದು ಸುಂದರ ಅನುಬಂಧ. ಆದರೆ ಇದನ್ನು ಸಮರ್ಥವಾಗಿ ನಿಭಾಯಿಸದಿದ್ದರೆ ಎಷ್ಟೋ ಸಾರಿ ಗಂಡ-ಹೆಂಡತಿ (Husband Wife)ಯ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳ (Fight)ವಾಗುತ್ತದೆ. ಗಂಡ-ಹೆಂಡತಿ ಮಧ್ಯೆ ಪ್ರೀತಿಯಿರುವ ಹಾಗೆಯೇ ಜಗಳಸಹ ಸಾಮಾನ್ಯವಾಗಿರುತ್ತದೆ. ದಂಪತಿ ತಮ್ಮ ತಮ್ಮಲ್ಲೇ ಯಾವುದೋ ವಿಚಾರದಲ್ಲಿ ಜಗಳವಾಡುವುದು, ಮನಸ್ತಾಪ ಮಾಡಿಕೊಳ್ಳುವುದು ಇವೆಲ್ಲವೂ ಸಂಬಂಧದ (Relationship) ಒಂದು ಭಾಗ. ಆದರೆ ಕೆಲವೊಮ್ಮೆ ಸಂಬಂಧದಲ್ಲಿನ ಜಗಳಗಳು ದೊಡ್ಡ ವಿವಾದಕ್ಕೆ ಕಾರಣವಾಗುತ್ತವೆ.
ಸಂಬಂಧಗಳು ತುಂಬಾ ಸೂಕ್ಷ್ಯ. ಅದರ ಮಹತ್ವವನ್ನು ತಿಳಿದಿದ್ದವರು ಅದನ್ನು ಸುಲಭವಾಗಿ ನಿಭಾಯಿಸಿಕೊಂಡು ಹೋಗುತ್ತಾರೆ. ಇಲ್ಲದವರು ಸಣ್ಣಪುಟ್ಟ ಕಾರಣಗಳಿಗೂ ಜಗಳವಾಡಿ ಬೇರೆಯಾಗುತ್ತಾರೆ. ಆದರೆ ಗಂಡ-ಹೆಂಡಿರ ಮಧ್ಯೆ ಜಗಳವಂತೂ ಆಗುತ್ತಲೇ ಇರುತ್ತದೆ. ಜಗಳವಾಡಿ ಕೆಲವೇ ನಿಮಿಷಗಳಲ್ಲಿ ಮತ್ತೆಲ್ಲವನ್ನೂ ಮರೆದು ಮುದ್ದಾಡುತ್ತಾರೆ. ಇದಲ್ಲವೇ ಅನುಬಂಧದ ನಿಜವಾದ ಅರ್ಥ. ಆದರೆ ಕೆಲವೊಮ್ಮೆ ಜಗಳ ವಿಕೋಪಕ್ಕೆ ಹೋಗಿ ಎರಡೂ ಕುಟುಂಬಗಳ ಮಧ್ಯೆ ಜಗಳವೂ ನಡೆದು ವಿಚ್ಛೇದನದ ವರೆಗೆ ಹೋಗುತ್ತದೆ. ದಂಪತಿ ಕಾನೂನು ಪ್ರಕಾರ ಬೇರೆಯಾಗುತ್ತಾರೆ. ಕೋರ್ಟ್ ಮೂಲಕ ಡೈವೋರ್ಸ್ ತೆಗೆದುಕೊಂಡು ಹೊಸ ಜೀವನ ಆರಂಭಿಸುತ್ತಾರೆ. ಆದ್ರೆ ಇಲ್ಲೊಂದು ಜೋಡಿ ಇಬ್ಬರಿಗೂ ಸರಿ ಹೋಗಲ್ಲ ಅಂತ ಬೇರೆ ಬೇರೆಯಾದ್ರೂ ಜಗಳ ಮಾತ್ರ ನಿಂತಿಲ್ಲ.
ಗಂಡ-ಹೆಂಡ್ತಿ ಮಧ್ಯೆ ಜಗಳ ಆಗೋದು ಇದೇ ಕಾರಣಕ್ಕೆ ! ನೀವೂ ಹೀಗೆ ಮಾಡ್ತಿದ್ದೀರಾ ನೋಡ್ಕೊಳ್ಳಿ
ಮದುವೆಯಲ್ಲಿ ಎಲ್ಲವೂ ಸರಿಯಿಲ್ಲ, ಗಂಡ-ಹೆಂಡಿರ ಮಧ್ಯೆ ಯಾವುದೂ ಸರಿ ಹೋಗುತ್ತಿಲ್ಲ ಎಂದು ಅನಿಸಲು ಶುರುವಾದಾಗ ಇಬ್ಬರೂ ಪರಸ್ಪರ ಡೈವೋರ್ಸ್ ಪಡೆದುಕೊಳ್ಳುತ್ತಾರೆ. ಅಲ್ಲಿಗೆ ಚಾಪ್ಟರ್ ಕ್ಲೋಸ್. ಇಬ್ಬರೂ ಖುಷಿಯಿಂದ ಬದುಕಿನ ಇನ್ನೊಂದು ಅಧ್ಯಾಯ ಶುರು ಮಾಡಿಕೊಳ್ಳುತ್ತಾರೆ. ಆದರೆ ಜತೆಗಿದ್ದಾಗ ಕಿತ್ತಾಡುತ್ತಿದ್ದ ಈ ಜೋಡಿ ಒಟ್ಟಿಗಿರೋದು ಬೇಡ ಅಂತ ದೂರವಾದ್ರೂ ಜಗಳ ಮಾತ್ರ ನಿಂತಿಲ್ಲ. ದೂರವಾಗಿ 41 ವರ್ಷಗಳ ನಂತರವೂ ಜಗಳ ಮುಂದುವರೆದಿದೆ. ಬೇರ್ಪಟ್ಟ ದಂಪತಿಗಳು 41 ವರ್ಷಗಳಲ್ಲಿ ಪರಸ್ಪರರ ವಿರುದ್ಧ 60 ಪ್ರಕರಣಗಳನ್ನು ದಾಖಲಿಸಿದ್ದಾರೆ.
ವಿಚ್ಛೇದನ ಪಡೆದುಕೊಂಡಿರುವ ದಂಪತಿಯ ವರ್ತನೆಗೆ ಕೋರ್ಟ್ ಸಹ ಛೀಮಾರಿ ಹಾಕಿದೆ. ಏನು ಮಾಡುವುದು. ಕೆಲವರು ಜಗಳವಾಡಲು ಇಷ್ಟಪಡುತ್ತಾರೆ. ಅವರು ಯಾವಾಗಲೂ ನ್ಯಾಯಾಲಯದಲ್ಲಿ ಇರಲು ಬಯಸುತ್ತಾರೆ. ಅವರು ನ್ಯಾಯಾಲಯವನ್ನು ನೋಡದಿದ್ದರೆ ಅವರಿಗೆ ನಿದ್ರೆ ಬರುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ಪೀಠ ಹೇಳಿದೆ. ದಂಪತಿಗಳು ಜಗಳ ನಿಲ್ಲಿಸಲು ಧ್ಯಾನದ ಮೊರೆ ಹೋಗುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ.
Life Story : ಪತ್ನಿ ತವರಿಗೆ ಹೋದಾಗ ಮಗಳ ಜೊತೆ ಸಂಬಂಧ..! ಈಗ ಶುರುವಾಗಿದೆ ಸಂಕಷ್ಟ
ಕಳೆದ 41 ವರ್ಷಗಳಲ್ಲಿ ಬೇರ್ಪಟ್ಟ ದಂಪತಿಗಳು ಪರಸ್ಪರರ ವಿರುದ್ಧ 60 ಪ್ರಕರಣಗಳನ್ನು ದಾಖಲಿಸಿರುವ ಬಗ್ಗೆ ವಿಸ್ಮಯಗೊಂಡ ಸುಪ್ರೀಂ ಕೋರ್ಟ್ ವಿವಾದವನ್ನು ಬಗೆಹರಿಸಲು ಮಧ್ಯಸ್ಥಿಕೆಗೆ ಹೋಗುವಂತೆ ಕೇಳಿದೆ. ವಿವಾದವನ್ನು ಸೌಹಾರ್ದಯುತವಾಗಿ ಶಮನಗೊಳಿಸಲು ದಂಪತಿಗಳು ಮಧ್ಯಸ್ಥಿಕೆಗೆ ಹೋಗುತ್ತಾರೆ ಎಂದು ತಿಳಿಸಲಾಗಿದೆ. ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠ, 30 ವರ್ಷಗಳ ದಾಂಪತ್ಯ ಮತ್ತು 11 ವರ್ಷಗಳ ಬೇರ್ಪಡಿಕೆಯಲ್ಲಿ ಪತಿ ಮತ್ತು ಪತ್ನಿ ಒಟ್ಟು 60 ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ತಿಳಿಸಿದಾಗ ಅಚ್ಚರಿಗೊಂಡರು.
ಮಧ್ಯಸ್ಥಿಕೆಗೆ ಕಕ್ಷಿದಾರರನ್ನು ಉಲ್ಲೇಖಿಸುವಾಗ, ಮಧ್ಯಸ್ಥಿಕೆಯು ಕಾಲಮಿತಿಯ ಪ್ರಕ್ರಿಯೆಯಾಗಿರುವುದರಿಂದ, ಈ ಮಧ್ಯೆ ಇತರ ಬಾಕಿ ಪ್ರಕರಣಗಳನ್ನು ಮುಂದುವರಿಸಲು ಕಕ್ಷಿದಾರರಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿತು. ಅದೇನೆ ಇರ್ಲಿ ಗಂಡ-ಹೆಂಡ್ತಿ ಜಗಳ ಉಂಡು ಮಲಗುವ ತನಕವಂತೂ ಖಂಡಿತ ಅಲ್ಲ ಅನ್ನೋದು ಈ ವಿಚಿತ್ರ ಪ್ರಕರಣದಿಂದ ಅರ್ಥ ಮಾಡಿಕೊಳ್ಳಬೇಕಿದೆ. ಅಷ್ಟಕ್ಕೂ 41 ವರ್ಷ ಜಗಳ ಆಡೋದ್ರಲ್ಲಿ ವೇಸ್ಟ್ ಮಾಡ್ಬಿಟ್ರಲ್ಲಾ ಅಂತಿದ್ದಾರೆ ಈ ವಿಷ್ಯ ತಿಳಿದವರು.