Asianet Suvarna News Asianet Suvarna News

ಪ್ರೀತಿ ಗೆದ್ದವರು: ಹಸೆಮಣೆ ಏರಲಿರುವ ಸಲಿಂಗಿ ತೀರ್ಪಿನ ವಕೀಲೆಯರು!

ಸಲಿಂಗಕಾಮವನ್ನು ಮಾನ್ಯಗೊಳಿಸಿ ಸುಪ್ರೀಂಕೋರ್ಟ್ ತೀರ್ಪು| ಐಪಿಸಿ ಸೆಕ್ಷನ್ 377 ರದ್ದುಗೊಳಿಸಿರುವ ಸುಪ್ರೀಂಕೋರ್ಟ್| ಎಲ್‌ಜಿಬಿಟಿ ಸಮುದಾಯದ ಪರ ಸುಪ್ರೀಂನಲ್ಲಿ ವಾದ ಮಂಡಿಸಿದ್ದ ವಕೀಲೆಯರ ಮದುವೆ| ಹಸೆಮಣೆ ಏರಲಿರುವ ಮೇನಕಾ ಗುರುಸ್ವಾಮಿ ಹಾಗೂ ಅರುಂಧತಿ ಕಾಟ್ಜು| ಟ್ವೀಟ್ ಮೂಲಕ ಮಾಹಿತಿ ನೀಡಿರುವ ವಕೀಲೆ ಅರುಂಧತಿ ಕಾಟ್ಜು| 

Section 377 Women Lawyers Come Out as a Couple
Author
Bengaluru, First Published Jul 19, 2019, 5:13 PM IST

ನವದೆಹಲಿ(ಜು.19): ಅದು ಸೆ.6, 2018. ಸಲಿಂಗಕಾಮವನ್ನು ಮಾನ್ಯಗೊಳಿಸಿ ಸುಪ್ರೀಂಕೋರ್ಟ್ ತೀರ್ಪು ನೀಡಿದ ಐತಿಹಾಸಿಕ ದಿನ. ಸುಪ್ರೀಂಕೋರ್ಟ್’ನ ಈ ತೀರ್ಪಿನಿಂದಾಗಿ ಸಮಾನತೆಯ ಅಧಿಕಾರಕ್ಕಾಗಿ ಕಾತರದಿಂದ ಕಾಯುತ್ತಿದ್ದ ಎಲ್‌ಜಿಬಿಟಿ ಸಮುದಾಯ ನಿಟ್ಟುಸಿರು ಬಿಟ್ಟಿತ್ತು.

ಭಾರತೀಯ ದಂಡ ಸಂಹಿತೆ(ಐಪಿಸಿ) ಸೆಕ್ಷನ್ 377 ರದ್ದುಗೊಂಡ ದಿನ ಎಲ್‌ಜಿಬಿಟಿ ಸಮುದಾಯ ಅಕ್ಷರಶಃ ಸಂಭ್ರಮಿಸಿತ್ತು. ದೀರ್ಘ ಕಾಲದ ತಮ್ಮ ಹೋರಾಟಕ್ಕೆ ಸಿಕ್ಕ ಜಯವನ್ನು ಆನಂದಿಸಿತ್ತು. 

ಸುಪ್ರೀಂನ ಈ ತೀರ್ಪಿನ ಹಿಂದೆ ಇಬ್ಬರು ಮಹಿಳಾ ವಕೀಲೆಯರ ಪರಿಶ್ರಮವಿದೆ. ಸುಪ್ರೀಂಕೋರ್ಟ್ ವಕೀಲೆಯರಾದ ಮೇನಕಾ ಗುರುಸ್ವಾಮಿ ಹಾಗೂ ಅರುಧಂತಿ ಕಾಟ್ಜು ಸಲಿಂಗಕಾಮ ಅಪರಾಧ ಅಲ್ಲ ಎಂದು ವಾದಿಸಿ ಅದರ ಮಾನ್ಯತೆಗಾಗಿ ದಿಟ್ಟತನದಿಂದ ವಾದಿಸಿದ್ದರು.

ಇದೀಗ ಸಲಿಂಗಕಾಮವನ್ನು ಮಾನ್ಯಗೊಳಿಸಿ ಒಂದು ವರ್ಷವಾದ ಬಳಿಕ, ಮೇನಕಾ ಗುರುಸ್ವಾಮಿ ಮತ್ತು ಅರುಂಧತಿ ಕಾಟ್ಜು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಈ ಕುರಿತು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿರುವ ಅರುಂಧತಿ ಕಾಟ್ಜು, ಶೀಘ್ರದಲ್ಲೇ ಮನೇಕಾ ಅವರೊಂದಿಗೆ ಹಸೆಮಣೆ ಏರಲಿರುವುದಾಗಿ ತಿಳಿಸಿದ್ದಾರೆ.

Follow Us:
Download App:
  • android
  • ios