ಮೊದಲ ಪ್ರೀತಿಯನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ. ಮೊದಲ ಬಾರಿ ನನ್ನವರಲ್ಲದವರ ಮೇಲೆ ಬೆಟ್ಟದಷ್ಟು ಪ್ರೀತಿ ಹುಟ್ಟುವುದು ಒಂದು ಎವರ್‌ಗ್ರೀನ್ ಅನುಭವ. ಜೀವನ ಪೂರ್ತಿ ಇವರ ಜೊತೆಯೇ ಬಾಳಿ, ಬದುಕುವ ಕನಸನ್ನು ಕಂಡಿರುತ್ತೇವೆ. ಸಾಯೋತನಕ ಜೊತೆಯಾಗಿರುವ ಪ್ರಾಮಿಸ್ ಮಾಡಿರುತ್ತೇವೆ. ಒಂದು ಕ್ಷಣವೂ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಹಚ್ಚಿಕೊಂಡಿರುತ್ತೇವೆ. ಯಾಕೆಂದರೆ ಅದು ಫಸ್ಟ್ ಲವ್... 

ಇದೆ ಪ್ರೀತಿ ಏನೋ ಕಾರಣದಿಂದ ದೂರವಾದರೆ ಜಗತ್ತೇ ಮುಳುಗಿ ಹೋದಂತೆ ಭಾಸವಾಗುತ್ತದೆ. ಜೀವನದಲ್ಲಿ ಇನ್ನೇನು ಉಳಿದಿಲ್ಲ ಎಂಬ ಭಾವ ಬೇರೂರುತ್ತದೆ. ಕೆಲವರು ಜೇವನವನ್ನೇ ಕೊನೆ ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ಇನ್ಯಾವತ್ತೂ ಪ್ರೀತಿ ಮಾಡಲೇಬಾರದು ಎಂದು ನಿರ್ಧರಿಸಿ ದೇವದಾಸರಾಗಿ ಬಿಡುತ್ತಾರೆ. ಈ ಎಲ್ಲಾ ನೋವಿನಿಂದ ಹೊರಬರಲು ಮೂರು ತಿಂಗಳು. ಆರು ತಿಂಗಳು, ಇನ್ನು ಕೆಲವರಿಗೆ ವರ್ಷವೇ ಬೇಕಾಗುತ್ತದೆ. ಹಳೆ ನೆನಪುಗಳು ಮಾಸುತ್ತದೆ.  ಹೋದಂತೆ ಮತ್ತೆ ಪ್ರೀತಿ ಹುಟ್ಟಬಹುದು. 

ಹೌದು. ನಮ್ಮ ಮನಸ್ಸನ್ನು ಅದೆಷ್ಟು ಹಿಡಿತದಲ್ಲಿಟ್ಟುಕೊಂಡರೂ, ಹಳೆ ಗಾಯದ ಕಲೆ ಉಳಿದು ಬಿಡುತ್ತೆ. ಎರಡನೇ ಸಲ  ಪ್ರೀತಿ ಉಂಟಾಗುವ ಸಾಧ್ಯತೆಯೂ ಇದೆ. ಈ ಎರಡನೇ ಪ್ರೀತಿ ಇದೆ ಆಲ್ವಾ ಅದು ನಮ್ಮ ಜೀವನವನ್ನೇ ಬದಲಾಯಿಸುತ್ತದೆ. 

ನೈಜ ಪ್ರೀತಿ ಇದು...

  • ಮೊದಲ ಪ್ರೀತಿ ನಮಗೆ ಪ್ರೀತಿ ಎಂದರೆ ಏನೂ ಎನ್ನುವುದನ್ನು ಕಲಿಸಿದರೆ, ಎರಡನೇ ಪ್ರೀತಿ ಯಾವುದು ನಿಜವಾದ ಪ್ರೀತಿ ಅನ್ನೋದನ್ನು ಕಲಿಸುತ್ತದೆ. 
  • ಮೊದಲ ಪ್ರೀತಿಯಲ್ಲಿ ಸೋತವರಿಗೆ ಎರಡನೇ ಪ್ರೀತಿ ಮುಂದೆ ಬಂದು ನಿಂತಾಗ ಅವರು ಇಂಥವರು, ಈ ಪ್ರೀತಿಯನ್ನು ಸ್ವೀಕರಿಸಬಹುದೇ ? ಅವರು ನಿಜವಾಗಿ ಪ್ರೀತಿ ಮಾಡುತ್ತಾರೆಯೇ ಇಲ್ಲವೇ ಎಂಬುದನ್ನು ತಿಳಿಸುತ್ತದೆ. 
  • ಪ್ರೀತಿಯ ನೈಜ ಅರ್ಥ ತಿಳಿಸುವುದು ಎರಡನೇ ಪ್ರೀತಿ. ಆ ಪ್ರೀತಿ ಪ್ರೌಢತೆಯ ಸಂಕೇತವೂ ಆಗಿರುತ್ತದೆ. 
  • ಎರಡನೇ ಪ್ರೀತಿ ಕಣ್ಣೋಟ ಬೆರೆಯುವುದರೊಂದಿಗೆ ಅಥವಾ ಏನೋ ಒಂದು ಕಾರಣದಿಂದ ಹುಟ್ಟುವುದಿಲ್ಲ. ಆ ವ್ಯಕ್ತಿಯ ಬಗ್ಗೆ ಸರಿಯಾಗಿ ತಿಳಿದುಕೊಂಡ ಮೇಲೆಯೇ ಈ ಎರಡನೇ ಪ್ರೀತಿ ಹುಟ್ಟಿಕೊಳ್ಳುತ್ತದೆ. 
  • ಮೊದಲ ಪ್ರೀತಿಯ ಸೋಲಿನಿಂದ ಕಲಿತ ಪಾಠ ನಿಮಗೆ ಎರಡನೇ ಪ್ರೀತಿ ಗೆಲ್ಲಲು ಸಹಕರಿಸುತ್ತದೆ. 
  • ಈ ಪ್ರೀತಿ ಜೀವನದ ಕೊನೆಯ ಕ್ಷಣದವರೆಗೂ ನಿಮ್ಮೊಂದಿಗೆ ಇರುತ್ತದೆ. ಆದುದರಿಂದಲೇ ಹೇಳುತ್ತಾರೆ ಮೊದಲ ಪ್ರೀತಿಗಿಂತ ಎರಡನೇ ಪ್ರೀತಿ ಶ್ರೇಷ್ಠ ಎಂದು. 

ಪ್ರೀತಿ, ಪ್ರೇಮ, ಮುತ್ತು ಮತ್ತು ದೋಖಾ...?