Asianet Suvarna News Asianet Suvarna News

ಇಷ್ಟಪಟ್ಟವನನ್ನು ಮದುವೆಯಾಗುವುದು ವ್ಯಕ್ತಿಯ ಹಕ್ಕು, ಕುಟುಂಬದವರು ಆಕ್ಷೇಪಿಸುವಂತಿಲ್ಲ; ಹೈಕೋರ್ಟ್

ಪ್ರತಿಯೊಬ್ಬ ವ್ಯಕ್ತಿಗೂ ತಾನು ಆಯ್ಕೆ ಮಾಡಿಕೊಳ್ಳುವ ವ್ಯಕ್ತಿಯನ್ನು ಮದುವೆಯಾಗುವ ಹಕ್ಕಿದೆ. ಇದನ್ನು ಕುಟುಂಬದವರು ಆಕ್ಷೇಪಿಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್‌ ಹೇಳಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Right to marry person of choice indelible, family cant object, Delhi HC Vin
Author
First Published Oct 27, 2023, 11:09 AM IST

ನವದೆಹಲಿ: ಪ್ರತಿಯೊಬ್ಬ ವ್ಯಕ್ತಿಗೂ ತಾನು ಆಯ್ಕೆ ಮಾಡಿಕೊಳ್ಳುವ ವ್ಯಕ್ತಿಯನ್ನು ಮದುವೆಯಾಗುವ ಹಕ್ಕಿದೆ. ಇದನ್ನು ಕುಟುಂಬದವರು ಆಕ್ಷೇಪಿಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್‌ ಹೇಳಿದೆ. ವಿವಾಹದ ನಂತರ ಕುಟುಂಬದಿಂದ ಬೆದರಿಕೆಯನ್ನು ಎದುರಿಸುತ್ತಿರುವ ದಂಪತಿಗೆ ಪೊಲೀಸ್ ರಕ್ಷಣೆಯನ್ನು ನೀಡಿದ ದೆಹಲಿ ಹೈಕೋರ್ಟ್, ಒಬ್ಬರು ಸ್ವಂತ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗುವ ಹಕ್ಕನ್ನು ಅಳಿಸಲಾಗದು. ಇದು ಸಾಂವಿಧಾನಿಕವಾಗಿ ರಕ್ಷಿಸಲ್ಪಟ್ಟಿದೆ ಮತ್ತು ಕುಟುಂಬದ ಸದಸ್ಯರೂ ಇದನ್ನು ವಿರೋಧಿಸುವಂತಿಲ್ಲ ಎಂದು ಹೇಳಿದೆ. 

ಇತ್ತೀಚಿನ ಆದೇಶದಲ್ಲಿ, ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ, ರಾಜ್ಯವು ತನ್ನ ನಾಗರಿಕರಿಗೆ ರಕ್ಷಣೆ ನೀಡುವ ಸಾಂವಿಧಾನಿಕ ಬಾಧ್ಯತೆಯ ಅಡಿಯಲ್ಲಿದೆ.ಸಾಂವಿಧಾನಿಕ ನ್ಯಾಯಾಲಯವಾಗಿರುವುದರಿಂದ ದಂಪತಿಗಳ (Couple) ಸಾಂವಿಧಾನಿಕ ಹಕ್ಕುಗಳನ್ನು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಒತ್ತಿ ಹೇಳಿದರು. 'ಅರ್ಜಿದಾರರ ಸ್ವಂತ ಆಯ್ಕೆಯ ವ್ಯಕ್ತಿಯನ್ನು ಮದುವೆ (Marriage)ಯಾಗುವ ಹಕ್ಕು ಅಳಿಸಲಾಗದ ಮತ್ತು ಸಂವಿಧಾನದ ಅಡಿಯಲ್ಲಿ ರಕ್ಷಿಸಲ್ಪಟ್ಟಿದೆ, ಅದನ್ನು ಯಾವುದೇ ರೀತಿಯಲ್ಲಿ ದುರ್ಬಲಗೊಳಿಸಲಾಗುವುದಿಲ್ಲ' ಎಂದು ನ್ಯಾಯಾಲಯ (Court) ಸ್ಪಷ್ಟಪಡಿಸಿದೆ.

'ಲಿವ್-ಇನ್ ರಿಲೇಷನ್ ಶಿಪ್ ಜಸ್ಟ್‌ ಟೈಮ್ ಪಾಸ್'; ರಕ್ಷಣೆ ಕೋರಿದ ಜೋಡಿಯ ಮನವಿ ತಿರಸ್ಕರಿಸಿದ ಹೈಕೋರ್ಟ್‌

'ಅರ್ಜಿದಾರರು ಆಯ್ಕೆ ಮಾಡಿದ ವ್ಯಕ್ತಿಯನ್ನು ಮದುವೆಯಾಗುವ ಸ್ವಾತಂತ್ರ್ಯ ಹೊಂದಿರುತ್ತಾರೆ. ವೈವಾಹಿಕ ಸಂಬಂಧಗಳಿಗೆ ಯಾರೂ, ಕುಟುಂಬದ ಸದಸ್ಯರು ಕೂಡ ಆಕ್ಷೇಪಿಸುವಂತಿಲ್ಲ' ಎಂದು ಪೊಲೀಸ್ ರಕ್ಷಣೆಗಾಗಿ ದಂಪತಿಗಳು ಸಲ್ಲಿಸಿದ ಅರ್ಜಿಯನ್ನು ವ್ಯವಹರಿಸುವಾಗ ನ್ಯಾಯಾಲಯವು ಪ್ರತಿಪಾದಿಸಿತು. ತಂದೆ-ತಾಯಿಯ (Father-mother) ಅಪೇಕ್ಷೆಗೆ ವಿರುದ್ಧವಾಗಿ ಜೋಡಿ ಏಪ್ರಿಲ್‌ನಲ್ಲಿ ವಿವಾಹವಾದರು. ಕುಟುಂಬ ಸದಸ್ಯರು, ವಿಶೇಷವಾಗಿ ಮಹಿಳೆಯ ತಾಯಿಯ ಬೆದರಿಕೆಯನ್ನು ಒಡ್ಡುತ್ತಿದ್ದರು. ಇದು ತಪ್ಪು ಎಂದು ಕೋರ್ಟ್ ತಿಳಿಸಿದೆ.

ನ್ಯಾಯಾಲಯವು ಅರ್ಜಿದಾರರಿಬ್ಬರಿಗೂ ರಕ್ಷಣೆ ನೀಡುವಂತೆ ಮತ್ತು ಅವರಿಬ್ಬರಿಗೂ, ನಿರ್ದಿಷ್ಟವಾಗಿ, ಪೋಷಕರಿಂದ ಅಥವಾ ಕುಟುಂಬದ ಸದಸ್ಯರಿಂದ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಲು, ರಾಜ್ಯಕ್ಕೆ ನಿರ್ದೇಶಿಸಿತು. ನಿಯಮಿತವಾಗಿ ಇದನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸತು.

ನ್ಯಾಯಾಲಯ ಹೇಳಿದರೂ ಸಹಜೀವನ ನಡೆಸದಿದ್ರೆ ವಿಚ್ಛೇದನಕ್ಕೆ ಆಧಾರ: ಹೈಕೋರ್ಟ್‌

ಅರ್ಜಿದಾರರು ಬೇರೆ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದರೆ, ಅರ್ಜಿದಾರರ ವಾಸಸ್ಥಳದ ವಿಳಾಸದ ಮೇಲೆ ಪ್ರಾದೇಶಿಕ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಸಂಬಂಧಪಟ್ಟ ಪೊಲೀಸ್ ಠಾಣೆಯ ಎಸ್‌ಎಚ್‌ಒಗೆ ತಿಳಿಸಬೇಕು ಎಂದು ಸಹ ಕೋರ್ಟ್ ಸೂಚಿಸಿದೆ.

Follow Us:
Download App:
  • android
  • ios