Asianet Suvarna News Asianet Suvarna News

ಸ್ಮಾರ್ಟ್ ಆಗಿರೋ ಹುಡುಗೀರು ಲವ್ವಲ್ಲಿ ಫೈಲ್ಯೂರ್ ಆಗೋದ್ಯಾಕೆ?

ಈಗಿನ ಕಾಲದಲ್ಲಿ ಬಹುತೇಕ ಹೆಣ್ಣು ಮಕ್ಕಳು ವಯಸ್ಸು ಮೂವತ್ತು ಕಳೆದರೂ ಅನ್‌ ಮ್ಯಾರೀಡ್ ಆಗಿಯೇ ಉಳಿದುಬಿಡುತ್ತಾರೆ. ಸ್ಮಾರ್ಟ್‌, ಇಂಡಿಪೆಂಡೆಂಟ್‌ ಆದರೂ ಸಂಗಾತಿ ಸಿಗೋದಿಲ್ಲ. ಇಷ್ಟಕ್ಕೂ ಸ್ಮಾರ್ಟ್ ಆಗಿರೋ ಹುಡುಗೀರು ಲವ್ವಲ್ಲಿ ಫೈಲ್ಯೂರ್ ಆಗೋದ್ಯಾಕೆ?

Relationship tips, Reasons why smart women struggle with love Vin
Author
First Published Sep 22, 2023, 2:20 PM IST

ಈಗಿನ ಕಾಲದಲ್ಲಿ ಬಹುತೇಕ ಹೆಣ್ಣು ಮಕ್ಕಳು ವಯಸ್ಸು ಮೂವತ್ತು ಕಳೆದರೂ ಅನ್‌ ಮ್ಯಾರೀಡ್ ಆಗಿಯೇ ಉಳಿದುಬಿಡುತ್ತಾರೆ. ಸ್ಮಾರ್ಟ್‌, ಇಂಡಿಪೆಂಡೆಂಟ್‌ ಆದರೂ ಸಂಗಾತಿ ಸಿಗೋದಿಲ್ಲ. ಇಷ್ಟಕ್ಕೂ ಸ್ಮಾರ್ಟ್ ಆಗಿರೋ ಹುಡುಗೀರು ಲವ್ವಲ್ಲಿ ಫೈಲ್ಯೂರ್ ಆಗೋದ್ಯಾಕೆ? ಸ್ಮಾರ್ಟ್ ಮಹಿಳೆಯರು ಎಂದು ಹೇಳಿದಾಗ, ನಾವು ಸ್ವತಂತ್ರ ಮತ್ತು ಮುಕ್ತ ಮನಸ್ಸಿನ ಮಹಿಳೆಯರು ಎಂದು ಅರ್ಥೈಸುತ್ತೇವೆ, ಅವರು ತಮ್ಮ ಹಕ್ಕುಗಳ ಬಗ್ಗೆ ಚೆನ್ನಾಗಿ ತಿಳಿದಿರುತ್ತಾರೆ. ಹಲವಾರು ಕಾರಣಗಳಿಂದಾಗಿ ಅವರು ಸರಿಯಾದ ಸಂಗಾತಿಯನ್ನು ಕಂಡುಹಿಡಿಯಲು ಹೆಣಗಾಡುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಆದರೆ ಯಾಕೆ ಹೀಗಾಗುತ್ತದೆ. ಸ್ಮಾರ್ಟ್ ಆಗಿರೋ ಹುಡುಗೀರಿಗೆ ಯಾಕೆ ಸಂಬಂಧದಲ್ಲಿ ಕೆಟ್ಟ ಅನುಭವವಾಗುತ್ತದೆ.

ಎಲ್ಲವನ್ನೂ ನೇರವಾಗಿ ಹೇಳುತ್ತಾರೆ
ಸ್ಮಾರ್ಟ್‌ ಆಗಿರುವ ಹುಡುಗಿಯರಿಗೆ (Girls) ಸಮಸ್ಯೆಯಾಗಿ ಪರಿಣಮಿಸುವುದು ಇದೇ ವಿಷಯ. ಅವರು ಜೀವನದಲ್ಲಿ ಸ್ಮಾರ್ಟ್ ಆಗಿರುತ್ತಾರೆ. ತಮ್ಮ ಜೀವನದಲ್ಲಿ ನಿರ್ಧಿಷ್ಟವಾಗಿ ಏನು ಬೇಕೆಂಬುದು ಅವರಿಗೆ ತಿಳಿದಿದೆ. ಹಾಗಾಗಿಯೇ ಜೀವನ ಸಂಗಾತಿಯ ವಿಷಯಕ್ಕೆ ಬಂದಾಗ ಅವರು ರಾಜಿ ಮಾಡಿಕೊಳ್ಳುವುದಿಲ್ಲ. ಯಾವುದೇ ವಿಷಯಕ್ಕೆ ಅಡ್ಜೆಸ್ಟ್ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಮತ್ತೊಬ್ಬರು ಇಂಪ್ರೆಸ್ ಮಾಡುವುದಕ್ಕಿಂತ ರಿಯಲಿಸ್ಟಿಕ್ ಆಗಿರುವುದು ಹೆಚ್ಚು ಮುಖ್ಯ ಎಂದು ಇಂಥಾ ಹುಡುಗಿಯರು ಭಾವಿಸುತ್ತಾರೆ. ಹೀಗಾಗಿಯೇ ಅವರಿಗೆ ಸೂಕ್ತ ಪಾರ್ಟ್‌ನರ್ ಸಿಗುವುದು ಕಷ್ಟವಾಗುತ್ತದೆ. 

ಹುಡುಗೀರು ಹೀಗೆಲ್ಲಾ ಟೆಕ್ಸ್ಟ್ ಮಾಡಿದ್ರೆ ಪಕ್ಕಾ ನಿಮ್ ಮೇಲೆ ಲವ್ವಾಗಿದೆ ಅಂತಾನೆ ಅರ್ಥ

ಹೆಚ್ಚು ಚಾಯ್ಸ್‌ ಹೊಂದಿರುವುದಿಲ್ಲ
ಅನೇಕ ಸ್ಮಾರ್ಟ್ ಮಹಿಳೆಯರು ತಮ್ಮದೇ ಮನಸ್ಥಿತಿಯ ಹುಡುಗರನ್ನು ಪಾಲುದಾರರಾಗಿ ಪಡೆಯಲು ಆಸಕ್ತಿ ಹೊಂದಿರುತ್ತಾರೆ. ಉದಾಹರಣೆಗೆ, ಅವರು ಹೆಚ್ಚು ವಿಶೇಷವಾದ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದರೆ ಅಥವಾ ನಿರ್ಧಿಷ್ಟವಾದ ಆಸಕ್ತಿ (Interest)ಗಳನ್ನು ಹೊಂದಿದ್ದರೆ, ಅವರು ಸಮಾನ ಮನಸ್ಕ ವ್ಯಕ್ತಿಗಳನ್ನು ಭೇಟಿ ಮಾಡಲು ಕಡಿಮೆ ಅವಕಾಶಗಳನ್ನು ಹೊಂದಿರಬಹುದು. ಇದು ಪ್ರತ್ಯೇಕತೆಯ ಭಾವನೆ ಮತ್ತು ಹೊಂದಾಣಿಕೆಯ ಪಾಲುದಾರರನ್ನು ಹುಡುಕುವಲ್ಲಿ ತೊಂದರೆಗೆ ಕಾರಣವಾಗಬಹುದು.

ರೂಲ್ ಮಾಡುವುದನ್ನು ಇಷ್ಟಪಡುವುದಿಲ್ಲ
ಸ್ಮಾರ್ಟ್ ಹುಡುಗಿಯರು ಇಂಡಿಪೆಂಡೆಂಟ್‌ ಸಹ ಆಗಿರುತ್ತಾರೆ. ಹೀಗಾಗಿಯೇ ಅವರು ತಮ್ಮ ಜೀವನದ (Life) ಬಗ್ಗೆ  ಸ್ಪಷ್ಟವಾದ ನಿಲುವನ್ನು ಹೊಂದಿರುತ್ತಾರೆ. ಜೀವನದಲ್ಲಿ ಏನು ಬೇಕು ಅಥವಾ ಬೇಡ ಎಂಬುದನ್ನು ಅವರಿಗೆ ಸ್ವತಃ ನಿರ್ಧರಿಸಲು ತಿಳಿದಿದೆ. ಆದರೆ ಬಹುತೇಕ ಪುರುಷರು ಮಹಿಳೆಯ ಮೇಲೆ ಅಧಿಕಾರ ಚಲಾಯಿಸಲು ಇಷ್ಟಪಡುತ್ತಾರೆ. ಹೀಗೆಯೇ ಮಾಡಬೇಕೆಂದು ನಿರ್ದೇಶಿಸುತ್ತಾರೆ ಮತ್ತು ನಿಯಂತ್ರಿಸುತ್ತಾರೆ. ಸಂಬಂಧದಲ್ಲಿ (Relationship) ಪ್ರಾಬಲ್ಯವನ್ನು ತೋರಿಸಲು ಆರಂಭಿಸುತ್ತಾರೆ. ಇದು ಸ್ಮಾರ್ಟ್ ಆಗಿರುವ ಹುಡುಗಿಯರಿಗೆ ಇಷ್ಟವಾಗುವುದಿಲ್ಲ. 

ದಾಂಪತ್ಯದಲ್ಲಿ ಹೀಗಾಗುತ್ತಿದೆ ಎಂದಾಗ ಎಚ್ಚೆತ್ತುಕೊಳ್ಳಿ, ಎಲ್ಲವೂ ಸರಿ ಇಲ್ಲದಾಗ ಸರಿ ಮಾಡ್ಕೊಳ್ಳಿ!

ಸಾಮಾಜಿಕ ಸ್ಟೀರಿಯೊಟೈಪ್ಸ್ ಮತ್ತು ನಿರೀಕ್ಷೆ
ಸಮಾಜವು ಸಾಮಾನ್ಯವಾಗಿ ಸ್ಮಾರ್ಟ್ ಮಹಿಳೆಯರ ಬಗ್ಗೆ ಸ್ಟೀರಿಯೊಟೈಪ್‌ ಮನೋಭಾವವನ್ನು ಹೊಂದಿದೆ. ಅವರು ಕುಟುಂಬ (Family)ವನ್ನು ನಿರ್ವಹಿಸಲು ಸಾಧ್ಯವಿಲ್ಲ. ಉದ್ಯೋಗಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ ಎಂದೆಲ್ಲಾ ಅಂದುಕೊಳ್ಳುತ್ತಾರೆ. ಹಾಗೆಯೇ ಸ್ಮಾರ್ಟ್‌ ಹುಡುಗಿಯರು ಕುಟುಂಬದ ನಿರ್ವಹಣೆ ಪಾಲುದಾರರಿಬ್ಬರ ಕರ್ತವ್ಯ ಎಂಬ ಮನೋಭಾವ ಹೊಂದಿರುತ್ತಾರೆ. ಇಂದು ಸ್ಮಾರ್ಟ್‌ ಹುಡುಗಿಯರನ್ನು ಬಹುತೇಕ ಹಲವು ಮಂದಿ ಇಷ್ಟಪಡದಿರಲು ಕಾರಣವಾಗುತ್ತದೆ.

ಮೂಢನಂಬಿಕೆ ವಿರೋಧಿಸುತ್ತಾರೆ
ನಂಬಿಕೆಯ ಹೆಸರಲ್ಲಿ ಕೆಲವೊಮ್ಮೆ ನಡೆಯುವ ಪದ್ಧತಿ, ಆಚಾರಗಳು ನಿಜವಾಗಿಯೂ ತುಂಬಾ ಅರ್ಥಹೀನವಾಗಿರುತ್ತವೆ. ಇಂಥವರನ್ನು ಎಲ್ಲರಿಗೂ ಆಕ್ಸೆಪ್ಟ್‌ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಸ್ಮಾರ್ಟ್‌ ಹುಡುಗಿಯರು ಇಂಥವರನ್ನು ಮದುವೆಯಾದರೆ ಪ್ರತಿ ಬಾರಿಯೂ ಜಗಳವಾಡಬೇಕಾಗುತ್ತದೆ. ಹೀಗಾಗಿಯೇ ಇಂಥವರ ಬಗ್ಗೆ ತಿಳಿದಾಗ ಸ್ಮಾರ್ಟ್‌ ಹುಡುಗಿಯರು ಸಹಜವಾಗಿ ಸಂಬಂಧದಲ್ಲಿ ಬೀಳಲು ಇಷ್ಟಪಡುವುದಿಲ್ಲ.

Follow Us:
Download App:
  • android
  • ios