Relationship : 91 ವರ್ಷದ ವೃದ್ಧನಿಗೆ ಫಿದಾ ಆದ ಮಹಿಳೆ..ಗಂಡನಿಗೆ ಪರಿಚಯಿಸಿದಾಗ?
ಈಗಿನ ದಿನಗಳಲ್ಲಿ ಸ್ನೇಹ - ಪ್ರೀತಿ ಸಂಬಂಧಗಳು ಬದಲಾಗ್ತಿವೆ. ಜನರು ವಯಸ್ಸಿಗಿಂತ ಮನಸ್ಸಿಗೆ ಆದ್ಯತೆ ನೀಡ್ತಿದ್ದಾರೆ. ಇದಕ್ಕೆ ಈ ಮಹಿಳೆ ಹಾಗೂ ವೃದ್ಧನ ಕಥೆ ಉತ್ತಮ ನಿದರ್ಶನ.
ವಯಸ್ಸು ಕೇವಲ ನಂಬರ್ ಎನ್ನಲಾಗುತ್ತದೆ. ನಾವು ಯಾವ ವಯಸ್ಸಿನ ಬಗ್ಗೆ ಆಲೋಚನೆ ಮಾಡ್ತೇವೋ ನಮ್ಮ ಸ್ವಭಾವ, ವರ್ತನೆ ಕೂಡ ಹಾಗೆ ಇರುತ್ತದೆ. ಈಗಿನ ಜನರಲ್ಲಿ ಪ್ರೀತಿಗೆ ಸಂಬಂಧಿಸಿದಂತೆ ಜನರ ಆಲೋಚನೆ ಬದಲಾಗಿದೆ. ಈಗಿನ ದಿನಗಳಲ್ಲಿ ಜನರು ಸಂಬಂಧದ ಬಗ್ಗೆ ಹೆಚ್ಚು ಹತ್ವ ನೀಡ್ತಾರೆಯೇ ವಿನಃ ವಯಸ್ಸಿಗೆ ಆದ್ಯತೆ ನೀಡೋದಿಲ್ಲ. ಪ್ರೀತಿ ಮಾಡುವ ವೇಳೆ ಪ್ರೀತಿಸುವ ವ್ಯಕ್ತಿ ವಯಸ್ಸೆಷ್ಟು ಎಂಬುದನ್ನು ನೋಡಲು ಹೋಗೋದಿಲ್ಲ. ಇದ್ರರ ಬದಲು ತಮ್ಮ ಬಾಂಡಿಂಗ್ ಬಗ್ಗೆ ಗಮನ ಹರಿಸ್ತಾರೆ. 34 ವರ್ಷದ ಮಹಿಳ ಜೀವನದಲ್ಲೂ ಇದೇ ಆಗಿದೆ. ಆಕೆ ತನಗಿಂತ ಅತಿ ಹೆಚ್ಚು ವಯಸ್ಸಿನ ವ್ಯಕ್ತಿಯೊಬ್ಬರ ಸ್ನೇಹ ಬೆಳೆಸಿದ್ದಾಳೆ. ಆಕೆ ಕಥೆ ಏನು ಎಂಬ ವಿವರ ಇಲ್ಲಿದೆ.
ಆಕೆ ಆಸ್ಟ್ರೇಲಿಯಾ (Australia) ನಿವಾಸಿ. ಆಕೆ ವಯಸ್ಸು 34. ಆಕೆ 91 ವರ್ಷದ ವ್ಯಕ್ತಿ ಆಕೆಯ ಅತ್ಯುತ್ತಮ ಸ್ನೇಹಿತ (Friend). ಆತನ ಹೆಸರು ಬ್ರಿಯಾನ್. ಬೇಕರಿಯಲ್ಲಿ ಇವರಿಬ್ಬರ ಮೊದಲ ಭೇಟಿಯಾಗಿತ್ತು. ಸ್ಥಳೀಯ ಬೇಕರಿಯಲ್ಲಿ ಮಹಿಳೆಗೆ ಈ ವೃದ್ಧ ಸಿಕ್ಕಿದ್ದಾರೆ. ಅವರನ್ನು ಅಲ್ಲಿಯೇ ಕುಳಿತುಕೊಳ್ಳುವಂತೆ ಮಹಿಳೆ ಹೇಳಿದ್ದಾಳೆ. ಈ ಸಮಯದಲ್ಲಿ ಇಬ್ಬರೂ ಪರಸ್ಪರ ಪರಿಚಯ ಮಾಡಿಕೊಂಡಿದ್ದಾರೆ. ಇಬ್ಬರ ಮಧ್ಯೆ ಮಾತುಕತೆ ಶುರುವಾಗಿದೆ. ಅವರು ಸ್ನೇಹಪರ ಮತ್ತು ವರ್ಚಸ್ವಿ ವ್ಯಕ್ತಿತ್ವವನ್ನು ಹೊಂದಿದ್ದರು, ಆದ್ದರಿಂದ ನಾನು ಸಾಮಾನ್ಯವಾಗಿ ಎಂದಿಗೂ ಮಾಡದ ಕೆಲಸವನ್ನು ಮಾಡಲು ನಿರ್ಧರಿಸಿದೆ ಎನ್ನುತ್ತಾಳೆ ಮಹಿಳೆ. ವೃದ್ಧ ವ್ಯಕ್ತಿಗೆ ಕಾಫಿ ಮತ್ತು ಕೇಕ್ (Cake) ಆಫರ್ ನೀಡಿದ್ದಾಳೆ . ಮೊದಲು ಅದನ್ನು ವೃದ್ಧ ನಿರಾಕರಿಸಿದ್ದಾನೆ. ನಂತ್ರ ಒಪ್ಪಿಗೆ ನೀಡಿದ್ದಾನೆ.
ರಶ್ಮಿಕಾ ಮಂದಣ್ಣ ಲೈಫ್ಗೆ ಎಂಟ್ರಿ ಕೊಟ್ಟವರಾರು? ನಿಗೂಢ ಪೋಸ್ಟ್ ಹಾಕಿ ಫ್ಯಾನ್ಸ್ ತಲೆಗೆ ಹುಳಬಿಟ್ಟ ನಟಿ
ವಿವಾಹಿತ ಮಹಿಳೆ ಮಾಡ್ತಿರೋದು ಸರಿಯೇ? : ನಾನು ಮಾಡ್ತಿರೋದು ಎಷ್ಟು ಸರಿ ಎಂಬ ಪ್ರಶ್ನೆಗೆ ಆಕೆಯೇ ಉತ್ತರ ನೀಡುವ ಪ್ರಯತ್ನ ಮಾಡಿದ್ದಾಳೆ. ಮೂರು ಮಕ್ಕಳ ತಾಯಿಯಾಗಿರುವ ನಾನು, ಒಬ್ಬ ಅಪರಿಚಿತ ವ್ಯಕ್ತಿ ಜೊತೆ ಕಾಫಿ ಸೇವನೆ ಮಾಡೋದು ತಪ್ಪು. ನೀವು ಇದನ್ನೇ ಇನ್ನೊಂದು ಕಡೆಯಿಂದ ನೋಡಿದ್ರೆ ನಾನು ಮಾಡ್ತಿರೋದು ಸರಿ ಅನ್ನಿಸುತ್ತದೆ ಎಂದು ಮಹಿಳೆ ಹೇಳಿದ್ದಾಳೆ. ಆ ಸಮಯದಲ್ಲಿ ಬ್ರಿಯಾನ್ 91 ವರ್ಷದ ಯುವಕನಾಗಿದ್ದ. ನಾನು 34 ವರ್ಷ ವೃದ್ಧೆಯಾಗಿದ್ದೆ. ನಮ್ಮ ನಡುವೆ 57 ವರ್ಷ ವಯಸ್ಸಿನ ಅಂತರವಿತ್ತು ಎನ್ನುತ್ತಾಳೆ ಮಹಿಳೆ.
ಆಕರ್ಷಕವಾಗಿತ್ತು ಬ್ರಿಯಾನ್ ವ್ಯಕ್ತಿತ್ವ : ಬ್ರಿಯಾನ್ ಒಂದು ಪುಸ್ತಕ ಬರೆಯುತ್ತಿರೋದಾಗಿ ಹೇಳಿದ್ದರು. ಸಣ್ಣ ಸಿಂಗಲ್ ಇಂಜಿನ್ ವಿಮಾನದಲ್ಲಿ ಪ್ರಯಾಣಿಸಿದ್ದರು. ಬ್ರಿಯಾನ್ ಜೊತೆ ಮಾತನಾಡುವಾಗ, ಜೀವನದ ಮೇಲಿನ ಅವರ ಉತ್ಸಾಹವನ್ನು ನಾನು ನೋಡಿದೆ ಎನ್ನುತ್ತಾಳೆ ಮಹಿಳೆ.
ಬ್ರಿಯಾನ್ ಒಬ್ಬ ಉತ್ತಮ ಮಾತುಗಾರ. ಉತ್ತಮ ವ್ಯಕ್ತಿತ್ವವುಳ್ಳ ವ್ಯಕ್ತಿ. ಆತನ ಜೊತೆ ಸ್ನೇಹ ಬೆಳೆಸಿದ ಮಹಿಳೆ, ತನ್ನ ಪತಿಗೆ ಪರಿಚಯಿಸಿದ್ದಾಳೆ. ಬ್ರಿಯಾನ್, ಆಕೆ ಪತಿಗೂ ಇಷ್ಟವಾಗಿದ್ದಾರೆ. ಮನೆ ಹತ್ತಿರವೇ ಇದ್ದ ಕಾರಣ, ಬ್ರಿಯಾನ್ ಆಗಾಗ ಮನೆಗೆ ಬರ್ತಿರುತ್ತಾರೆ. ಮಕ್ಕಳಿಗೆ ಬಣ್ಣ ಬಣ್ಣದ ಕಥೆಗಳನ್ನುಹೇಳುವ ಬ್ರಿಯಾನ್ ಗೆ ಕುಟುಂಬವೊಂದು ಸಿಕ್ಕಂತಾಗಿದೆ. ಜೀವನದಲ್ಲಿ ಇಷ್ಟೊಂದು ಉತ್ಸಾಹದಿಂದಿರಲು ಕಾರಣವೇನು ಎಂಬುದನ್ನು ಬ್ರಿಯಾನ್ ಹೇಳಿದ್ದಾರೆ. ಅವರು ತನ್ನಲ್ಲಿರುವುದಕ್ಕೆ ಕೃತಜ್ಞನಾಗಿದ್ದಾರೆ. ಅವನು ಭೌತಿಕ ವಸ್ತುಗಳಿಗಿಂತ ಮಾನವ ಸಂಬಂಧಗಳಿಗೆ ಹೆಚ್ಚು ಒತ್ತು ನೀಡಿದ್ದಾರೆ. ಬ್ರಿಯಾನ್ ಹೆಚ್ಚು ಸಕಾರಾತ್ಮಕವಾಗಿ ಆಲೋಚನೆ ಮಾಡ್ತಿದ್ದು ಯುವಕರಂತ ಮನಸ್ಥಿತಿ ಹೊಂದಿದ್ದಾರೆ.
ಪತಿ ಮಾಡೋ ಈ ತಪ್ಪನ್ನು… ಯಾವ ಹೆಂಡತಿಯೂ ಕ್ಷಮಿಸೋದಿಲ್ಲ!
ಸಂತೋಷ, ದುಃಖದ ಸಮಯದಲ್ಲಿ ಸದಾ ಇರುವ ಬ್ರಿಯಾನ್, ಒಳ್ಳೆಯ, ನಂಬಿಕಸ್ತ ಸ್ನೇಹಿತ. ನಾವಿಗ ವಿಕ್ಟೋರಿಯಾದ ಸಣ್ಣ ನಗರಕ್ಕೆ ಶಿಫ್ಟ್ ಆಗಿದ್ದರೂ ಬ್ರಿಯಾನ್ ಜೊತೆ ಮಾತನಾಡ್ತಿರುತ್ತೇನೆ. ಸಂತೋಷ, ನಗು, ನೆಮ್ಮದಿಗಾಗಿ ಅವರ ಜೊತೆ ಮಾತನಾಡೋದು ಬಹಳ ಮುಖ್ಯ. ವೃದ್ಧರ ಬಳಿ ಸಾಕಷ್ಟು ಜ್ಞಾನ ಹಾಗೂ ಮಾತನಾಡುವ ವಿಷ್ಯಗಳಿರುತ್ತವೆ ಎನ್ನುತ್ತಾಳೆ ಮಹಿಳೆ.