ಮೊದಲೆಲ್ಲ ಮದುವೆಯಲ್ಲಿ ಶಾಸ್ತ್ರಗಳಿಗೆ ಆದ್ಯತೆ ಕೊಡಲಾಗುತ್ತಿತ್ತು. ಈಗ ಫೋಟೋಶೂಟ್‌, ಮೇಕಪ್‌ಗೆ ಗೌರವ ಜಾಸ್ತಿ. ಶಾಸ್ತ್ರಗಳಿಗಿಂತ ಹೆಚ್ಚಾಗಿ ಸಂಭ್ರಮವೇ ಜೋರಾಗಿದೆ ಎಂಬ ದೂರಿದೆ. ಈಗಿನ ಮದುವೆಯಲ್ಲಿ ಏನೇನು ದೋಷಗಳು ಆಗುತ್ತಿವೆ ಎಂದು ಓರ್ವರು ಬರೆದಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. 

ಮದುವೆ ಸಮಾರಂಭಗಳಲ್ಲಿ ಪುರೋಹಿತರಿಗೆ, ವೇದ ಮಂತ್ರಗಳಿಗೆ, ದೇವರಿಗೆ, ಶಾಸ್ತ್ರಕ್ಕೆ ಸ್ವಲ್ಪವೋ ಗೌರವ ಕೊಡಲ್ಲ. ಪುರೋಹಿತರ ಮಾತು ಸ್ವಲ್ಪವೂ ಗೌರವಿಸುವುದಿಲ್ಲ. photographers, makeup ನವರು ಹೇಳಿದ್ದನ್ನೇ ಗೌರವದಿಂದ ಮಾಡುತ್ತಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮದುವೆ ಆದ 2 ದಿನಕ್ಕೆ 2 ಕಡೆ ಹಿರಿಯರು ಸೇರಿ ನ್ಯಾಯ - ಪಂಚಾಯಿತಿ ಮಾಡಿ 3 ನೇ ದಿನ ಮದುವೆ ಮಾಡಿಸಿದ ಪುರೋಹಿತರ ಹತ್ತಿರ ಬಂದು ನೂತನ ದಂಪತಿಗಳ ಜಾತಕ ನೋಡಿ ಇವರ ಜೀವನ ಸರಿ ಮಾಡಿ ಅಂತ ಕೇಳುತ್ತಾರೆ.

ಪುರೋಹಿತರು ಹೇಳುತ್ತಾರೆ…

1)ಮದುವೆಯಲ್ಲಿ ವೇದ ಆಶೀರ್ವಾದ ಬೇಡ ಅಂದ್ರಿ.

2) ಶಾಸ್ತ್ರ ಬೇಡ, ಪೂಜೆ ಹೋಮ ಬೇಗ ಬೇಗ ಆಗಲಿ ಅಂತ ಪುರೋಹಿತರ ಮೇಲೆ ಜೋರು ಮಾಡಿ ಬೇಗ ಆಗಲಿ ಅಂದ್ರಿ, ದೇವರಿಗೆ ಭಕ್ತಿ ಇಂದ ನಮಸ್ಕಾರ ಬೇಡ ಅಂದ್ರಿ.

3) ಕಾಲಿಗೆ Boot, slippers ಹಾಕಿಕೊಂಡು ಬಂದವರ ಕೈಲಿ ಅಕ್ಷತೆ ಹಾಕಿಸಿಕೊಂಡ್ರಿ.

4)ನಾಂದಿ ಆಗಿದೆ ಬೇಡ ಅಂದ್ರೆ ಈರುಳ್ಳಿ- ಬೆಳ್ಳುಳ್ಳಿ, ನಿಶಿದ್ಧ ಪದಾರ್ಥಗಳು ತಿನ್ನಲೇಬೇಕು ಅಂದ್ರಿ.

5)ಸ್ತ್ರೀ - ಪರ ಪುರುಷನ ಕೈ ಕುಲಕಬಾರದು, ಪುರುಷ - ಪರ ಸ್ತ್ರೀ ಕೈ ಕುಲಕಬಾರದು ಅಂದ್ರೆ, ಇಲ್ಲ ಇಲ್ಲ shake hand ಮಾಡಲಿಲ್ಲ ಅಂದ್ರೆ ಮರ್ಯಾದೆ ಹೋಗುತ್ತೆ ಅಂದ್ರಿ.

6) ವಿವಾಹ ಮಂಟಪ ದಲ್ಲಿ photo video ಸಲುವಾಗಿ ಅಸಭ್ಯ ವರ್ತನೆ ಮಾಡಲೇ ಬೇಕು ಅಂದ್ರಿ.

7)ವಿವಾಹ ದಿನ ಜಡೆ ಕತ್ತರಿಸಬಾರದು ಅಂದ್ರೆ ಅಲಂಕಾರ ಕ್ಕೆ ಬೇಕು ಅಂದ್ರಿ, ಹರಿಶಿನ - ಕುಂಕುಮ ಹಚ್ಚಿಕೊಳ್ಳಿ ಅಂದ್ರೆ make up ಹಾಳಾಗುತ್ತೆ ಅಂತ ಅಂದ್ರಿ.

8)ನಿಶಿದ್ಧ ಪದಾರ್ಥ ಸೇವನೆ ಮಾಡಬಾರದು, ಅತಿಥಿಗಳಿಗೆ ಬಡಿಸುವುದು ಶಾಸ್ತ್ರ ವಿರುದ್ದ ಅಂದ್ರೆ, ಈಗಿನ ಕಾಲದಲ್ಲಿ ಸ್ನೇಹಿತರು ಬೇಜಾರು ಮಾಡಿಕೊಳ್ಳುತ್ತಾರೆ ಅಂತ ರಾಜಸಿಕ ಭೋಜನ ಸಮಾರಾಧನೆ ಮಾಡಿದಿರಿ.

9) 4 ಜನ ವೇದ ಆಶೀರ್ವಾದಕ್ಕೆ ಬ್ರಾಹ್ಮಣರನ್ನು ಆಹ್ವಾನ ಮಾಡೋಣ ಅಂದ್ರೆ, ಖರ್ಚು ಅಂದ್ರಿ.

10) ವಿವಾಹಕ್ಕೆ ಮುಂಚೆ pre wedding shoot ಬೇಕೇ ಬೇಕು ಅಂದ್ರಿ.

11) ಸಂಪ್ರದಾಯ ವಸ್ತ್ರ ಧಾರಣೆ ಬೇಡ ಅಂದ್ರಿ.

12) ಮೆಹೆಂದಿ ಹಾಕಿಸಿಕೊಳ್ಳುವಾಗ ಪರ ಪುರುಷ ನಿಮ್ಮ ಕೈ ಸ್ಪರ್ಶ ಮಾಡುವುದು ದೋಷ ಅಂದ್ರೆ ಪರವಾಗಿಲ್ಲ ಅಂದ್ರಿ.

ಇಷ್ಟೆಲ್ಲಾ ತಪ್ಪುಗಳು ಗೊತ್ತಿದ್ದು ಅಹಂಕಾರದಿಂದ ಮಾಡಿ, ದೇವ-ಬ್ರಾಹ್ಮಣ -ಗುರು - ಹಿರಿಯರಿಗೆ ಅಗೌರವ ತೋರಿಸಿ ಈಗ ನಮ್ಮ ಬಳಿ ಬಂದು ಜಾತಕ ನೋಡಿ ಅಂದ್ರೆ ಆ ದೇವರು ಯಾವ ಪುಣ್ಯ ಕೆಲಸ ಮಾಡಿದ್ದೀರಿ ಎಂದು ನಿಮ್ಮ ದಾಂಪತ್ಯ ಜೀವನ ಸುಖವಾಗಿ ಇಡಲು ಸಾಧ್ಯ ಹೇಳಿ.

ಹೋಗಿ photo video, makeup ನವರನ್ನು ಕೇಳಿ ಅವರು ಸರಿಮಾಡಬಹುದು ಎಂದು ಪುರೋಹಿತರು ಸಮಾಧಾನವಾಗಿ ಅವರ ದೋಷಗಳನ್ನು ಎಳೆ -ಎಳೆಯಾಗಿ ತೋರಿಸಿದರು.

ದೋಷ ಇರೋದು ನಿಮ್ಮ ಜಾತಕದಲ್ಲಿ ಅಲ್ಲ ವೇದ - ಗುರು - ಬ್ರಾಹ್ಮಣ- ಶಾಸ್ತ್ರ - ನಡತೆ - ಶ್ರದ್ಧೆ - ಭಕ್ತಿಯಲ್ಲಿ ಮಹಾ ದೋಷ ಇದೆ ಅಂದ್ರು