Asianet Suvarna News Asianet Suvarna News

ಪತ್ನಿ ಕಾರಣಕ್ಕೆ ಸಾಲ ಹೆಚ್ಚಾಗ್ತಿದೆ.. ದೀವಾಳಿ ಭಯ ಕಾಡ್ತಿದೆ ಏನ್ ಮಾಡ್ಲಿ?

ಮದುವೆಯಾದ್ಮೇಲೆ ಖರ್ಚು ಹೆಚ್ಚು. ಅಗತ್ಯವಿರುವ ವಸ್ತುಗಳ ಜೊತೆ ಒಂದಿಷ್ಟು ಅನಗತ್ಯ ವಸ್ತು ಖರೀದಿ ಮಾಡ್ಬೇಕಾಗುತ್ತದೆ. ಆದ್ರೆ ಮಧ್ಯಮ ವರ್ಗದ ಕುಟುಂಬದಲ್ಲಿ ಅನಗತ್ಯ ಹಾಗೂ ದುಬಾರಿ ವಸ್ತುಗಳ ಖರೀದಿ ಹೆಚ್ಚಾದ್ರೆ, ಬೀದಿ ಪಾಲಾಗೋದು ಗ್ಯಾರಂಟಿ. ಈಗ ಈ ವ್ಯಕ್ತಿಗೂ ಅದೇ ಭಯ ಶುರುವಾಗಿದೆ. 
 

Real Story Of Marriage Problems
Author
First Published Nov 14, 2022, 2:55 PM IST

ವಸ್ತುಗಳ ಖರೀದಿ ಯಾವಾಗ್ಲೂ ಮಿತಿಯಲ್ಲಿರಬೇಕು. ಕೆಲವೊಂದು ಆಸೆಗಳನ್ನು ನಿಯಂತ್ರಣದಲ್ಲಿಟ್ಟುಕೊಂಡ್ರೆ ಮಾತ್ರ ಜೀವನ ಸುಗಮವಾಗಿ ಸಾಗಲು ಸಾಧ್ಯ. ದಾಂಪತ್ಯದಲ್ಲಿ ಒಬ್ಬರು ದುಡಿದು ಇನ್ನೊಬ್ಬರು ಖರ್ಚು ಮಾಡ್ತಿದ್ದರೆ ಸಮಸ್ಯೆ ಶುರುವಾಗುತ್ತದೆ. ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಬರುತ್ತದೆ. ಅನೇಕ ಬಾರಿ ಸಾಲದ ಹೊರೆ ಹೆಚ್ಚಾಗಿ ಆತ್ಮಹತ್ಯೆಗೂ ಇದು ಕಾರಣವಾಗಿದೆ. ಈ ವ್ಯಕ್ತಿ ಕೂಡ ಈಗ ಪತ್ನಿಯ ಖರ್ಚಿಗೆ ಬೇಸತ್ತಿದ್ದಾನೆ. 

ಆತನಿಗೆ ಮದುವೆ (Marriage) ಯಾಗಿ ತುಂಬಾ ಸಮಯ ಕಳೆದಿಲ್ಲ. ಇನ್ನೂ ಮಕ್ಕಳಾಗಿಲ್ಲ. ದಾಂಪತ್ಯದಲ್ಲಿ ಪ್ರೀತಿಗೆ ಕೊರತೆಯಿಲ್ಲ. ಆದ್ರೆ ಪತ್ನಿಯ ಒಂದು ಅಭ್ಯಾಸ ಈತನನ್ನು ಉಭಯ ಸಂಕಟಕ್ಕೆ ತಂದು ನಿಲ್ಲಿಸಿದೆ. ಯಾವುದೇ ಆಲೋಚನೆ ಮಾಡದೆ ಎಲೆಕ್ಟ್ರಾನಿಕ್ (Electronic)  ಗ್ಯಾಜೆಟ್‌ ಖರೀದಿ ಮಾಡುವ ಪತ್ನಿಯ ಚಟ ( Addiction) ಪತಿಯನ್ನು ಸಂಕಷ್ಟಕ್ಕೆ ನೂಕುತ್ತಿದೆ. ಮಾರುಟ್ಟೆಗೆ ಯಾವುದೇ ಹೊಸ ಎಲೆಕ್ಟ್ರಾನಿಕ್ ಗ್ಯಾಜೆಟ್‌ ಬಂದ್ರೂ ಅದನ್ನು ಖರೀದಿ ಮಾಡ್ತಾಳಂತೆ ಪತ್ನಿ. ದುಬಾರಿ ಬೆಲೆಯ ವಸ್ತುಗಳ ಮೇಲೆ ಪತ್ನಿಗೆ ಆಸಕ್ತಿ ಹೆಚ್ಚಿದೆಯಂತೆ. ಆಕೆ ಹೇಳಿದ್ದೆಲ್ಲ ವಸ್ತುವನ್ನು ಖರೀದಿಸಿ ಸುಸ್ತಾಗಿದ್ದೇನೆ ಎನ್ನುತ್ತಾನೆ ಪತಿ.  ದುಬಾರಿ ವಸ್ತುಗಳಿಗೆ ಹಣ ಹೊಂದಿಸುವುದು ಕಷ್ಟವಾಗಿದೆ. ಇದಕ್ಕಾಗಿ ಅನೇಕ ಬಾರಿ ಸಾಲ ಮಾಡಿದ್ದೇನೆ ಎಂಬುದು ಪತಿಯ ಅಳಲು. ಈ ಬಗ್ಗೆ ಪತ್ನಿ ಜೊತೆ ಮಾತನಾಡಿಲ್ಲ ಎಂದಲ್ಲ. ಪತ್ನಿಗೆ ಸಮಸ್ಯೆ ಹೇಳುವ ಪ್ರಯತ್ನ ನಡೆಸಿದ್ದೇನೆ. ಆದ್ರೆ ಆಕೆ ನನ್ನ ಮಾತನ್ನು ಕೇಳ್ತಿಲ್ಲ. ಪ್ರತಿ ಬಾರಿಯೂ ನಮ್ಮಿಬ್ಬರ ಮಧ್ಯೆ ಈ ವಿಷ್ಯಕ್ಕೆ ಜಗಳವಾಗುತ್ತದೆ. ಆಕೆ ಚಟ ಹೀಗೆ ಮುಂದುವರೆದ್ರೆ ನಾನು ದಿವಾಳಿಯಾಗ್ತೆನೆ ಎಂಬ ಭಯ ಶುರುವಾಗಿದೆ ಎನ್ನುತ್ತಾನೆ ಪತಿ. 

Relationship Tips: ಮದುವೆಯಾದ ಬಳಿಕ ಎಕ್ಸ್‌ ಜತೆ ಸಂಪರ್ಕದಲ್ಲಿರ್ಬೇಕಾ, ಬೇಡ್ವಾ?

ತಜ್ಞರ ಉತ್ತರ : ನಿಮ್ಮ ಬಜೆಟ್ (Budget) ನಲ್ಲಿಯೇ ಪತ್ನಿ ಜೀವನ ನಡೆಸಬೇಕು ಎಂದು ಬಯಸುವುದು ತಪ್ಪಲ್ಲ. ನೀವು ಈ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎನ್ನುತ್ತಾರೆ ತಜ್ಞರು. ಮೊದಲು ನಿಮ್ಮ ಸಂಬಳ (Package) ಎಷ್ಟು ಎಂಬುದನ್ನು ಪತ್ನಿಗೆ ತಿಳಿಸಬೇಕು ಎನ್ನುತ್ತಾರೆ ತಜ್ಞರು. ನಿಮಗೆಷ್ಟು ಸಂಬಳ ಬರುತ್ತದೆ ಎಂಬ ಜ್ಞಾನವಿಲ್ಲದೆ ಪತ್ನಿ ಹೆಚ್ಚು ಖರ್ಚು ಮಾಡ್ತಿರಬಹುದು. ಹಾಗಾಗಿ ಆಕೆಗೆ ನಿಮ್ಮಲ್ಲಿರುವ ಹಣದ ಬಗ್ಗೆ ಮಾಹಿತಿ ನೀಡಿ. ಜೊತೆಗೆ ಆಕೆಗೆ ಪಾಕೆಟ್ ಮನಿ ಫಿಕ್ಸ್ ಮಾಡಿ ಎನ್ನೋದು ತಜ್ಞರ ಸಲಹೆ.

ಆಕೆಯನ್ನು ಪ್ರೋತ್ಸಾಹಿಸಿ : ಪತ್ನಿ ಪ್ರತಿ ತಿಂಗಳು ಏನೆಲ್ಲ ವಸ್ತುಗಳನ್ನು ಖರೀದಿ ಮಾಡ್ತಾಳೆ ಅದ್ರ ಪಟ್ಟಿ ಸಿದ್ಧಪಡಿಸಲು ಹೇಳಿ. ಆಕೆಗೆ ಅಗತ್ಯವಿರುವ ವಸ್ತುಗಳು ಯಾವುವು, ಯಾವುದು ಅಗತ್ಯವಿಲ್ಲ ಹಾಗೆ ಯಾವುದು ಆಕೆ ಬಳಿ ಮೊದಲೇ ಇದೆ ಎಂಬುದನ್ನು ಕೂಡ ಪಟ್ಟಿ ಮಾಡಲು ಹೇಳಿ. ನಂತ್ರ ಖರ್ಚನ್ನು ಬರೆಯಲು ಹೇಳಿ. ತಿಂಗಳಿನ ಖರ್ಚು ಹಾಗೂ ಪಾಕೆಟ್ ಮನಿ ಎರಡನ್ನೂ ಹೋಲಿಕೆ ಮಾಡಲು ಹೇಳಿ. ಈ ಮಧ್ಯೆ ಪತ್ನಿಯನ್ನು ತೆಗಳಬೇಡಿ. ಆಕೆ ಬುದ್ಧಿವಂತೆ. ಖರ್ಚು ಕಡಿಮೆ ಮಾಡಲು ಪ್ಲಾನ್ ಮಾಡ್ತಿದ್ದಾಳೆ. ತಿಂಗಳಿಂದ ತಿಂಗಳಿಗೆ ಖರ್ಚು ಕಡಿಮೆಯಾಗ್ತಿದೆ ಎಂಬ ಮಾತುಗಳನ್ನು ಆಡುವ ಮೂಲಕ ಆಕೆಯನ್ನು ಉಳಿತಾಯ ಮಾಡಲು ಪ್ರೋತ್ಸಾಹಿಸಿ ಎನ್ನುತ್ತಾರೆ ತಜ್ಞರು.

ಈ DATE NIGHT IDEAS ನಿಮ್ಮ ವೈವಾಹಿಕ ಜೀವನದಲ್ಲಿ ರೋಮ್ಯಾನ್ಸ್ ಹೆಚ್ಚಿಸೋದು ಗ್ಯಾರಂಟಿ

ಮಾತುಕತೆ  : ನಿಮ್ಮ ಈ ಯಾವುದೇ ಉಪಾಯ ಫಲಿಸಿಲ್ಲ ಎಂದಾದ್ರೆ ನೀವು ಪತ್ನಿ ಜೊತೆ ಮಾತನಾಡಬೇಕು. ಕುಳಿತು ಆಕೆಗೆ ಎಲ್ಲವನ್ನೂ ವಿವರಿಸಬೇಕು. ಖರ್ಚಿಗೆ ತಕ್ಕಂತೆ ಹಣ ಹೊಂದಿಸಲು ಸಮಸ್ಯೆಯಾಗ್ತಿದೆ ಎಂಬುದನ್ನು ನೇರವಾಗಿ ಹೇಳಬೇಕು. ಅಲ್ಲದೆ ಕೆಲಸಕ್ಕೆ ಸೇರುವಂತೆ ನೀವು ಸಲಹೆ ನೀಡಬಹುದು. ಆಗ ಆಕೆ ತನ್ನ ಖರ್ಚಿಗೆ ಹಣ ಹೊಂದಿಸಿಕೊಳ್ಳಲು ಸಹಾಯವಾಗುತ್ತದೆ. ಜೊತೆಗೆ ದುಡಿದಾಗ್ಲೆ ಹಣದ ಬೆಲೆ ತಿಳಿಯುತ್ತದೆ ಎಂಬುದು ನೆನಪಿರಲಿ.

Follow Us:
Download App:
  • android
  • ios