ಜಂಜಾಟದ ಜೀವನ ಅನೇಕರಿಗೆ ಜಿಗುಪ್ಸೆ ತರಿಸಿದೆ. ಮುಂದೆ ಮಕ್ಕಳ ಭವಿಷ್ಯ ಭಯ ಹುಟ್ಟಿಸ್ತಿದೆ. ಕೆಲವರು ಮಕ್ಕಳಿಗಾಗಿ ದಿಟ್ಟ ಹೆಜ್ಜೆ ಇಡ್ತಿದ್ದಾರೆ. ನಗರ ತೊರೆದು ಹಳ್ಳಿಗೆ ಶಿಫ್ಟ್ ಆಗ್ತಿದ್ದಾರೆ. 

ಬೆಳಿಗ್ಗೆ ಎದ್ದು ಓಡೋಕೆ ಶುರು ಮಾಡಿದ್ರೆ ರಾತ್ರಿ ಮಲಗುವವರೆಗೂ ಕೆಲ್ಸ. ಮಕ್ಕಳು ಮಾರ್ಕ್ಸ್, ಸ್ಪರ್ಧೆ ಹಿಂದೆ ಬಿದ್ದಿದ್ದಾರೆ. ನಿಸರ್ಗದ ಜೊತೆ ಕಲಿಕೆ, ಆಟ, ತಾಳ್ಮೆ, ಶಾಂತ ಬದುಕು ಮಕ್ಕಳಿಗೆ ಮರೀಚಿಕೆಯಾಗಿದೆ. ಟೈಂ ಜೊತೆ ಹಣಕ್ಕಾಗಿ ಹೋರಾಡುವ ಅನೇಕರಿಗೆ ಈ ಜಂಜಾಟದ ಬದುಕು ಸಾಕಾಗಿದೆ. ಪಟ್ಟಣದಲ್ಲಿ ಐಷಾರಾಮಿ ಜೀವನ ನಡೆಸ್ತಿದ್ದ ಕೆಲವರು ಹಳ್ಳಿ ಕಡೆ ಮುಖ ಮಾಡ್ತಿದ್ದಾರೆ. ಸಿಂಗಾಪುರದಲ್ಲಿ ನೆಲೆಸಿದ್ದ ಫ್ಯಾಮಿಲಿಯೊಂದು ಈಗ ಉತ್ತರಾಖಂಡಕ್ಕೆ ಬಂದಿದೆ. ಮಗನಿಗೆ ಯಾವುದೇ ಶಾಲೆಯಿಲ್ಲ. ಓದಿನ ಟೆನ್ಷನ್ ಇಲ್ಲ. ಮಾರ್ಕ್ಸ್, ಕಾಂಪಿಟೇಷನ್ ತಲೆಬಿಸಿಯಿಲ್ಲ. ಅವನನ್ನು ಸುಂದರ ಪರಿಸರದಲ್ಲಿ ಖುಷಿಯಾಗಿಡಲು ಪಾಲಕರು ನಿರ್ಧರಿಸಿದ್ದಾರೆ.

ಗರಿಮಾ ಮತ್ತು ಆದಿತ್ಯ ದಂಪತಿ ಮಗ ವೇದ್ ಜೊತೆ ಸಿಂಗಾಪುರ (Singapore)ದಿಂದ ಉತ್ತರಾಖಂಡ (Uttarakhand)ದ ಶಾಂತ ಜೀವನಕ್ಕೆ ಸ್ಥಳಾಂತರಗೊಂಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಅವರ ಸ್ಟೋರಿ ಹಂಚಿಕೊಂಡಿದ್ದಾರೆ. ನಗರ ತೊರೆದು ಹಳ್ಳಿಗೆ ಬರುವ ಅವರ ಈ ನಿರ್ಧಾರ ಹಿಂದೆ ಆಧುನಿಕ ಜೀವನದ ವಿರುದ್ಧ ದಂಗೆ ಎಳುವ ಉದ್ದೇಶವಿಲ್ಲ. ಬದಲಾ ಸರಳತೆ ಮತ್ತು ಅಂತಃಪ್ರಜ್ಞೆಗೆ ಮರಳುವುದಾಗಿದೆ.

ವಾಹನ ಸದ್ದಿಲ್ಲ. ಬೆಟ್ಟದ ಮಧ್ಯೆ ನೆಲೆಸಿರುವ ಅವರ ದಿನ ಮಂಜು ಮತ್ತು ಪಕ್ಷಿಗಳ ಚಿಲಿಪಿಲಿಯೊಂದಿಗೆ ಶುರುವಾಗುತ್ತದೆ. ತರಾತುರಿಯಿಲ್ಲದ ಜೀವನವನ್ನು ಅವರು ನಡೆಸ್ತಾರೆ. ಅವರ 6 ವರ್ಷದ ಮಗ ವೇದ್ ಎಂದಿಗೂ ಶಾಲೆಗೆ ಹೋಗಿಲ್ಲ. ಸಮವಸ್ತ್ರವಿಲ್ಲ,ಪುಸ್ತಕವಿಲ್ಲ. ವಾರ್ಷಿಕ ದಿನ ಅಥವಾ ರಿಪೋರ್ಟ್ ಕಾರ್ಡ್ ಇಲ್ಲ. ಇನ್ನು ಆದಿತ್ಯ ಮೆಡಿಕಲ್ ಶಿಕ್ಷಣ ಬಿಟ್ಟು ಫ್ಯಾಷನ್ ಜಗತ್ತಿಗೆ ಕಾಲಿಟ್ಟಿದ್ದರು. ಆಗ್ನೇಯ ಏಷ್ಯಾದಲ್ಲಿ ನೈಕ್ನಂತಹ ಬ್ರ್ಯಾಂಡ್ಗಳೊಂದಿಗೆ ಕೆಲಸ ಮಾಡಿದ್ದರು. ಸಿಂಗಾಪುರದಲ್ಲಿ ಉತ್ತಮ ಸಂಬಳ, ಯಶಸ್ವಿ ವೃತ್ತಿ ಜೀವನ ನಡೆಸುತ್ತಿದ್ದರು. ಇನ್ನು ಗರಿಮಾ ಕೂಡ ವಿನ್ಯಾಸಕಿಯಾಗಿ ಯಶಸ್ವಿಯಾಗಿದ್ದರು. ಆದ್ರೆ ಯಾಂತ್ರಿಕ ಜೀವನ ಆದಿತ್ಯ ಹಾಗೂ ಗರಿಮಾಗೆ ಬೇಸರ ತರಿಸಿತ್ತು. ನಾವು ಏನು ತಿನ್ನುತ್ತಿದ್ದೇವೆ? ನಾವು ಏನು ಖರೀದಿಸುತ್ತಿದ್ದೇವೆ? ನಾವು ವಾಸಿಸುವ ವಿಧಾನದಿಂದ ನಾವು ನಮ್ಮ ಮಕ್ಕಳಿಗೆ ಏನು ಕಲಿಸುತ್ತಿದ್ದೇವೆ? ಎಂಬುದನ್ನು ಅವರು ಆಲೋಚನೆ ಮಾಡಲು ಶುರು ಮಾಡಿದ್ದರು. ಆಹಾರ ಪ್ಲಾಸ್ಟಿಕ್ನಂತೆ ರುಚಿ ನೀಡಲು ಶುರುವಾಗಿತ್ತು, ದಿನಚರಿ ಜಟಿಲವಾಗಿತ್ತು. ಉಸಿರಾಡಲು ಸಮಯ ಇರ್ಲಿಲ್ಲ. ಇದೆಲ್ಲವನ್ನೂ ಬಿಟ್ಟು ಊರಿಗೆ ಬರುವ ನಿರ್ಧಾರಕ್ಕೆ ಆದಿತ್ಯ ದಂಪತಿ ಬಂದಿದ್ದರು. ಇದನ್ನು ಕೇಳಿ ಸ್ನೇಹಿತರು, ಸಂಬಂಧಿರಕು ಆಶ್ಚರ್ಯಗೊಂಡಿದ್ದರು.

ಬಹುತೇಕ ಬರಿಗೈನಲ್ಲಿ ಬಂದಿದ್ದ ಈ ಜೋಡಿ, ಉತ್ತರಾಖಂಡದಲ್ಲಿ ನೆಲೆ ನಿಂತಿದೆ. ವೇದ್ ಅಲ್ಲಿನ ಜೀವನವನ್ನು ಎಂಜಾಯ್ ಮಾಡ್ತಿದ್ದಾನೆ. ಪಕ್ಷಿಗಳ ಹಾಡು ಕೇಳೋದು, ಮಳೆ, ಕಲ್ಲಿನ ಆಟ, ಬಂಡೆ ಹತ್ತುವುದು, ಕೀಟಗಳನ್ನು ನೋಡುವುದು,ಮ ಸಸ್ಯ ಬೆಳೆಸುವುದು, ಅದಕ್ಕೆ ನೀರು ಹಾಕುವುದು, ನದಿಯಲ್ಲಿ ಆಟ ಹೀಗೆ ಆತನ ದಿನ ಸರಳವಾಗಿ ಆದ್ರೆ ಖುಷಿಯಾಗಿ ಕಳೆಯುತ್ತಿದೆ. ಅಲ್ಲಿನ ಸ್ಥಳೀಯ ಮಕ್ಕಳ ಜೊತೆ ಬೆರೆತು ವೇದ್ ಅನೇಕ ವಿಷ್ಯಗಳನ್ನು ಕಲಿತಿದ್ದಾನೆ. ಬಟ್ಟೆಯಿಂದ ಚೆಂಡು ಮಾಡ್ತಾನೆ. ಯಾರೂ ತರಬೇತಿ ನೀಡ್ದೆ ಹೋದ್ರೂ ಲೆಕ್ಕ ಕಲಿಯುತ್ತಿದ್ದಾನೆ. ಅಗತ್ಯವಿದ್ದ ಕಾರಣ ಅವನು ಗುಣಾಕಾರ ಕಲಿತಿದ್ದಾನೆ ಅಂತ ಆದಿತ್ಯ ಮಗಳ ದಿನಚರಿಯನ್ನು ಹೇಳಿದ್ದಾರೆ. ಜಗತ್ತು ತರಗತಿಯ ಕೊಠಡಿ.ಮತ್ತು ಕುತೂಹಲ ಪಠ್ಯಕ್ರಮ ಎನ್ನುತ್ತಾರೆ ಅವರು.

ಜೀವನ ನಡೆಸಲು ಹಣ ಬಹಳ ಮುಖ್ಯ. ಸಿಂಗಾಪುರದಲ್ಲಿ ಗಳಿಸಿದ್ದ ಹಣ ಈಗ ಪ್ರಯೋಜನಕ್ಕೆ ಬಂದಿದೆ. ಆದ್ರೆ ಇಲ್ಲಿ ಖರ್ಚು ಕಡಿಮೆ. ನಗರದಲ್ಲಿರುವಂತೆ ಬಾಡಿಗೆ ಇಲ್ಲ, ಶಾಪಿಂಗ್ ಇಲ್ಲ, ಹೊರಗೆ ಊಟವಿಲ್ಲ, ಸಿಬ್ಬಂದಿ ಇಲ್ಲ. ನಮ್ಮ ಅಗತ್ಯಗಳು ಬಹಳ ಕಡಿಮೆ ಎಂದಿದ್ದಾರೆ ಗರಿಮಾ. ಪುಸ್ತಕ, ಓದು, ಪರೀಕ್ಷೆಯನ್ನು ಈ ದಂಪತಿ ವಿರೋಧಿಸ್ತಿಲ್ಲ. ಆದ್ರೆ ಅವದಿಗೆ ಮೊದಲೇ ಇದ್ರ ಹೇರುವಿಕೆಯನ್ನು ವಿರೋಧಿಸ್ತಿದ್ದಾರೆ.