Asianet Suvarna News Asianet Suvarna News

Public Sex: ಪಬ್ಲಿಕ್‌ ಪ್ಲೇಸ್‌ ನಲ್ಲಿ ಲೈಂಗಿಕ ಕ್ರಿಯೆ; ಬಂಧಿಸಿದ ಪೊಲೀಸರು

ಸಾರ್ವಜನಿಕ ಸ್ಥಳದಲ್ಲಿ ಲೈಂಗಿಕ ಕ್ರಿಯೆ ನಡೆಸುವುದನ್ನು ವಿಶ್ವದ ಯಾವುದೇ ದೇಶ ಒಪ್ಪಿಕೊಳ್ಳುವುದಿಲ್ಲ. ಬ್ರಿಟನ್‌ ನಲ್ಲೂ ಇದೀಗ ಇಂತಹ ಘಟನೆಯೊಂದು ಜರುಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಜೋಡಿಯೊಂದು ಸಾರ್ವಜನಿಕ ಪ್ರದೇಶಗಳಲ್ಲಿ ಲೈಂಗಿಕ ಕ್ರಿಯೆ ನಡೆಸುವ ಮೂಲಕ ಬಂಧನಕ್ಕೂ ಒಳಗಾಗಿದೆ.

Public sex accused couple arrested in Liverpool
Author
Bangalore, First Published Aug 10, 2022, 4:36 PM IST

ಸಾರ್ವಜನಿಕ ಸ್ಥಳಗಳಿಗೆ ಅವುಗಳದ್ದೇ ಆದ ಘನತೆ ಇರುತ್ತದೆ. ಜನರ ವರ್ತನೆಗೆ ಕಡಿವಾಣ ಹಾಕುವ ಒಂದಿಷ್ಟು ನಿಯಮಗಳಿರುತ್ತವೆ. ನಮ್ಮ ಭಾರತದಲ್ಲಿ ಇಂಥದ್ದೇ ವರ್ತನೆ ಮಾಡಬಾರದು ಎನ್ನುವ ಕಟ್ಟುನಿಟ್ಟಿನ ಉಲ್ಲೇಖ ಇಲ್ಲವಾದರೂ ಕೆಲವು ವರ್ತನೆಗಳು ಸಾರ್ವಜನಿಕವಾಗಿ ನಿಷಿದ್ಧವಾಗಿವೆ. ನಮ್ಮ ದೇಶಕ್ಕೆ ಹೋಲಿಸಿದರೆ ವಿದೇಶಗಳಲ್ಲಿ ಜನಜೀವನ ಹೆಚ್ಚು ಮುಕ್ತ. ಅಲ್ಲಿ ಸಾರ್ವಜನಿಕವಾಗಿ ರೋಮ್ಯಾನ್ಸ್‌ ಮಾಡುವುದು ತೀರ ಅಪರೂಪವೇನೂ ಅಲ್ಲ, ಅಲ್ಲಿನ ಡ್ರೆಸ್‌, ಜನರ ವರ್ತನೆ ನಮ್ಮದಕ್ಕಿಂತ ತೀರ ಭಿನ್ನ. ಆದರೂ, ಲಂಡನ್‌ ನ ಲಿವರ್‌ ಪೂಲ್‌ ಜನರು ಇದೀಗ ಜೋಡಿಯೊಂದರ ವರ್ತನೆಗೆ ಬೇಸತ್ತಿದ್ದಾರೆ. ಏಕೆಂದರೆ, ಈ ಜೋಡಿ ಸಾರ್ವಜನಿಕವಾಗಿ ಲೈಂಗಿಕ ಕ್ರಿಯೆ ನಡೆಸುವ ಚಟಕ್ಕೆ ಬಿದ್ದಿದ್ದಾರೆ. ಲಿವರ್‌ ಪೂಲ್‌ ನಗರದ ಮಧ್ಯಭಾಗದ ಕೆಲವು ಪ್ರದೇಶಗಳಲ್ಲಿ ಈ ಜೋಡಿ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಇದನ್ನು ಬಿಂಬಿಸುವ ವಿಡಿಯೋಗಳು ಅಲ್ಲೀಗ ವೈರಲ್‌ ಆಗಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಮರ್ಸಿಸೈಡ್ ಪೊಲೀಸರು ಈ ಜೋಡಿಯ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಅಷ್ಟಕ್ಕೂ ಈ ಜೋಡಿಯ ಕೃತ್ಯ ಭಾರೀ ಅಚ್ಚರಿಗೆ ಕಾರಣವಾಗಿದೆ. ಏಕೆಂದರೆ, ಒಂದಲ್ಲ, ಎರಡಲ್ಲ, ಹಲವಾರು ಬಾರಿ ಇವರು ಸಾರ್ವಜನಿಕ ಪ್ರದೇಶಗಳಲ್ಲಿ ಲೈಂಗಿಕ ಕ್ರಿಯೆ ನಡೆಸಿದ್ದಾರೆ.

ಇದನ್ನೂ ಓದಿ: Real Stories: ಮನೆಯಲ್ಲಿ ನಗ್ನವಾಗಿರ್ತಾರೆ ಅಮ್ಮ ಮಗಳು…! ಬೆತ್ತಲಾಗಿರೋದೆ ಖುಷಿಯಂತೆ!

ನಾರ್ತ್‌ ಈಸ್ಟ್‌ ಪ್ರದೇಶದ ಜೋಯ್‌ ಫಿರ್ಬಿ (Joy Firby) ಮತ್ತು ಮೆರ್ಟಾನ್‌ ರಸ್ತೆ ನಿವಾಸಿ ಕೆಲ್ಲಿ ಕಸಿನ್ಸ್‌ (Kelly Cousins) ಸಾರ್ವಜನಿಕ ಸ್ಥಳದ (Public Place) ನಿಯಮ (Rules) ಮತ್ತು ಮರ್ಯಾದೆ (Decency) ಮೀರಿ ವರ್ತನೆ ಮಾಡಿರುವ ಜೋಡಿ. ಆಗಸ್ಟ್‌ 2ರಂದು ಇವರು ಸಾರ್ವಜನಿಕ ಪ್ರದೇಶಗಳಲ್ಲಿ ಲೈಂಗಿಕ ಕ್ರಿಯೆ (Sex) ನಡೆಸಿರುವ ವಿಡಿಯೋ ಎಲ್ಲೆಡೆ ವೈರಲ್‌ (Viral) ಆಗಲು ಆರಂಭವಾಗಿತ್ತು. ಐನ್‌ ಸ್ಟೀನ್‌ ಬೈರ್‌ ಹೌಸ್‌, ಕಾನ್ಸರ್ಟ್‌ ಸ್ಕ್ವೇರ್‌ ಮುಂತಾದ ಕಡೆಗಳಲ್ಲಿ ಇವರು ಲೈಂಗಿಕ ಕ್ರಿಯೆಯ ಭಂಗಿಗಳನ್ನು ಪ್ರದರ್ಶಿಸಿದ್ದರು. ಇಲ್ಲೆಲ್ಲ ಜನರೂ ಇದ್ದರು. 
ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ ಕೆಲವು ರೈಲ್ವೆ ನಿಲ್ದಾಣದಲ್ಲಿ ಸೆಕ್ಸ್‌ ನಡೆಸುತ್ತಿರುವುದನ್ನು ಹೇಳುತ್ತಿವೆ. ಮರ್ಸಿರೇಲ್‌ ಟ್ರೇನ್‌, ಬೋಲ್ಡ್‌ ಸ್ಟ್ರೀಟ್‌ ಗಳಲ್ಲಿ ಒಬ್ಬ ಹುಡುಗ ಮತ್ತು ಹುಡುಗಿ ಲೈಂಗಿಕ ಕ್ರಿಯೆ ನಡೆಸುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಹರಿದಾಡಿದ ಮೂರೇ ದಿನಕ್ಕೆ ಪೊಲೀಸರು ಕೆಲ್ಲಿ ಕಸಿನ್ಸ್‌ ಅನ್ನು ವಿಚಾರಣೆ ನಡೆಸಿದ್ದರು. ಬಳಿಕ, ಫಿರ್ಬಿ ವಿಚಾರಣೆ ನಡೆಸಲಾಗಿತ್ತು. ಆಗಸ್ಟ್‌ 5ರಂದೇ 35 ವರ್ಷದ ಕೆಲ್ಲಿಯನ್ನು ಬಂಧಿಸಲಾಗಿತ್ತು ಹಾಗೂ 23 ವರ್ಷದ ಫಿರ್ಬಿಯನ್ನು ಮೊನ್ನೆಯಷ್ಟೇ ಬಂಧಿಸಲಾಗಿದೆ. ಈ ಪ್ರಕರಣ ಅಲ್ಲೀಗ ಕಾವು ಪಡೆದುಕೊಂಡಿದ್ದು, ಬ್ರಿಟನ್‌ ನಂತಹ ದೇಶದಲ್ಲೂ ಚರ್ಚೆಗೆ ಕಾರಣವಾಗಿದೆ.

ಮರ್ಸಿಸೈಡ್‌ ಮೇಯರ್‌ ಜೊಹಾನೆ ಆಂಡರ್ಸನ್‌ ಘಟನೆಗೆ ಆಘಾತ (Shock) ವ್ಯಕ್ತಪಡಿಸಿದ್ದಾರೆ. ಪೊಲೀಸರ ಬೆಂಬಲಕ್ಕೆ ನಿಲ್ಲುವುದಾಗಿ ಹೇಳಿದ್ದಾರೆ. ಟ್ವೀಟ್‌ ಮಾಡಿರುವ ಅವರು, “ನನಗೆ ತೀವ್ರವಾಗಿ ಶಾಕ್‌ ಆಗಿದೆ. ನಗರದ ಸಾರ್ವಜನಿಕ ಸ್ಥಳಗಳಲ್ಲಿ ಲೈಂಗಿಕ ಕ್ರಿಯೆ ನಡೆಸುತ್ತಿರುವ ವಿಡಿಯೋಗಳು ವೈರಲ್‌ ಆಗುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ ಅಲ್ಲ, ಇದು ವಿನೋದವಂತೂ ಅಲ್ಲ, ಹಿಂಸೆ (Disturbing) ನೀಡುವ ಬೆಳವಣಿಗೆʼ ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಮಹಿಳೆಯರಲ್ಲಿ ಸ್ವಾಭಾವಿಕವಾಗಿ ಸೆಕ್ಸ್ ಡ್ರೈವ್ ಹೆಚ್ಚಿಸುವುದು ಹೇಗೆ ?

ಯುವಜನತೆಗೇಕೆ ಇಂತಹ ಉತ್ಸಾಹ?
ಸಾರ್ವಜನಿಕವಾಗಿ ಲೈಂಗಿಕ ಕ್ರಿಯೆ ನಡೆಸುವಷ್ಟರ ಮಟ್ಟಿಗಿನ ಮುಕ್ತತೆಯನ್ನು, ನಾಚಿಕೆಗೇಡನ್ನು ಪ್ರಪಂಚದ ಯಾವ ದೇಶವೂ ಒಪ್ಪುವುದಿಲ್ಲ. ಆದರೂ ಇತ್ತೀಚಿನ ಯುವಜನತೆ (Youngsters) ಇಂತಹ ದುಸ್ಸಾಹಸಗಳಿಗೆ ಕೈ ಹಾಕುವುದು ಆಗಾಗ ವರದಿಯಾಗುತ್ತಲೇ ಇರುತ್ತದೆ. ನಮ್ಮ ದೇಶದಲ್ಲೂ ಹಲವಾರು ಬಾರಿ ಸಾರ್ವಜನಿಕವಾಗಿ ಕಿಸ್‌ ಮಾಡುವುದು, ತೀರ ಅಶ್ಲೀಲವೆನಿಸುವ ಭಂಗಿ ಪ್ರದರ್ಶಿಸುವುದು, ಅಶ್ಲೀಲ ಡ್ರೆಸ್‌ ತೊಡುವ ಯುವಜನತೆಯಿದೆ. ಎಷ್ಟೋ ಬಾರಿ ಪೊಲೀಸರೇ ಅವರನ್ನು ಮನೆಗೆ ಕಳುಹಿಸುವ ವ್ಯವಸ್ಥೆ ಮಾಡುತ್ತಾರೆ. ಮದ್ಯದ (Alcohol) ನಶೆಯಲ್ಲಿ, ಮಾದಕ ವ್ಯಸನಗಳ (Drugs) ಪ್ರಪಂಚದಲ್ಲಿ ಮೈಮರೆಯುವ ಯುವಜನತೆ ಸಾಕಷ್ಟು ಪ್ರಮಾಣದಲ್ಲಿದೆ. ಅವರನ್ನು ಹಾದಿತಪ್ಪದಂತೆ ನೋಡುವ ಜವಾಬ್ದಾರಿ ಸಮಾಜಕ್ಕಿದೆ. 

Follow Us:
Download App:
  • android
  • ios