Asianet Suvarna News Asianet Suvarna News

School Admission ವೇಳೆ ಮಕ್ಕಳು ಮಾತ್ರವಲ್ಲ ಪಾಲಕರೂ ಸಿದ್ಧರಾಗ್ಬೇಕು!

ಮಕ್ಕಳ ಅಡ್ಮಿಷನ್ ಹೇಳಿದಷ್ಟು ಸುಲಭವಲ್ಲ. ಹಣ ಹೊಂದಿಸುವ ಜೊತೆಗೆ ಬುದ್ಧಿವಂತಿಕೆ ಕೂಡ ಮುಖ್ಯವಾಗುತ್ತದೆ. ಮಕ್ಕಳ ಅಡ್ಮಿಷನ್ ಸಂದರ್ಭದಲ್ಲಿ ಪಾಲಕರು ಆರಾಮವಾಗಿ ಹೋಗಲು ಸಾಧ್ಯವಿಲ್ಲ. ಶಾಲೆಯಲ್ಲಿ ಪಾಲಕರಿಗೂ ಪ್ರಶ್ನೆ ಕೇಳಲಾಗುತ್ತದೆ.
 

Private School Interview Questions For Parents
Author
First Published Dec 28, 2022, 2:36 PM IST

ಹಿಂದೆ ಮಕ್ಕಳಿಗೆ ಆರು ವರ್ಷವಾಗ್ತಿದ್ದಂತೆ ಅಂಗನವಾಡಿಗೆ ಹಾಕ್ತಿದ್ದರು. ವರ್ಷ ಏಳಾಗ್ತಿದ್ದಂತೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಅಡ್ಮಿಷನ್ ಆಗ್ತಿತ್ತು. ಆದ್ರೆ ಈಗ ಸರ್ಕಾರಿ ಶಾಲೆಗಳು ಅಲ್ಲೊಂದು ಇಲ್ಲೊಂದು ಇದೆ. ಗಲ್ಲಿ ಗಲ್ಲಿಗೂ ಖಾಸಗಿ ಶಾಲೆಗಳಿವೆ. ಮಕ್ಕಳಿಗೆ ಉತ್ತಮ ಭವಿಷ್ಯ ನೀಡ್ಬೇಕು ಎಂಬುದು ಪಾಲಕರ ಕನಸು. ಹಾಗಾಗಿ ತುಂಬಾ ಹೆಸರಿರುವ ಶಾಲೆಗೆ ಮಕ್ಕಳನ್ನು ಸೇರಿಸುವ ಪ್ರಯತ್ನವನ್ನು ಪಾಲಕರು ಮಾಡ್ತಾರೆ. ಮಕ್ಕಳನ್ನು ಪಾಲಕರು ಇಷ್ಟಪಟ್ಟ ಶಾಲೆಗೆ ಸೇರಿಸುವುದು ಸುಲಭವಲ್ಲ. 

ಮಕ್ಕಳಿ (Child) ಗೆ ನಾಲ್ಕು ವರ್ಷವಾಗ್ತಿದ್ದಂತೆ ಅರ್ಜಿ ಸಲ್ಲಿಸಲು ಶುರು ಮಾಡ್ಬೇಕು. ದೊಡ್ಡ ಸ್ಕೂಲ್ (School) ಗಳಲ್ಲಿ ಪ್ರೀ ನರ್ಸರಿಯಲ್ಲಿಯೇ ಅಡ್ಮಿಷನ್ (Admission) ಸಿಗೋದು ಕಷ್ಟ. ಹಾಗಿರುವಾಗ ಒಂದನೇ ತರಗತಿಗೆ ನೇರವಾಗಿ ಮಕ್ಕಳನ್ನು ಸೇರಿಸ್ತೇನೆ ಅಂದ್ರೆ ಅದು ಕನಸಿನ ಮಾತು. ಶಾಲೆಗಳಲ್ಲಿ ಮೊದಲು ಮಕ್ಕಳಿಗೆ ಪರೀಕ್ಷೆ ನಡೆಯುತ್ತದೆ. ನಂತ್ರ ಪಾಲಕರಿಗೆ ಪ್ರಶ್ನೆ (Question) ಗಳನ್ನು ಕೇಳಲಾಗುತ್ತದೆ. ಮಕ್ಕಳ ಜೊತೆ ಪಾಲಕರು ಪಾಸ್ ಆದ್ರೆ ಮಾತ್ರ ಮಂದಿನ ಮಾತು. ನಾವಿಂದು ಶಾಲೆ ಅಡ್ಮಿಷನ್ ವೇಳೆ ಪಾಲಕರಿಗೆ ಯಾವೆಲ್ಲ ಪ್ರಶ್ನೆ ಕೇಳಲಾಗುತ್ತದೆ ಎಂಬುದನ್ನು ನಿಮಗೆ ಹೇಳ್ತೆವೆ.

ಮೊಬೈಲ್ ಕೈಯಲ್ಲಿ ಇಲ್ಲದಾಗರೂ, ಕೆಲವು ಮಕ್ಕಳು ಮಾತೇ ಆಡೋಲ್ಲ! ಯಾಕೀ ಮೌನ?

ಮಕ್ಕಳ ಅಡ್ಮಿಷನ್ ವೇಳೆ ಪಾಲಕರನ್ನು ಕೇಳಲಾಗುತ್ತೆ ಈ ಪ್ರಶ್ನೆ :
ಪಾಲಕರ ಶೈಕ್ಷಣಿಕ (Education) ಅರ್ಹತೆ :
ಮಕ್ಕಳನ್ನು ಶಾಲೆಗೆ ಸೇರಿಸುವಾಗ ಪಾಲಕರ ಶಿಕ್ಷಣವೂ ಮಹತ್ವ ಪಡೆಯುತ್ತದೆ. ಅನೇಕ ಶಾಲೆಗಳಲ್ಲಿ ಪಾಲಕರ ಶೈಕ್ಷಣಿಕ ಅರ್ಹತೆಯ ಬಗ್ಗೆ ಮೊದಲು ಪೋಷಕರನ್ನು ಕೇಳಲಾಗುತ್ತದೆ. ಮಕ್ಕಳ ಅಡ್ಮಿಷನ್ ಸಂದರ್ಶನಕ್ಕೆ ನೀವು ಹೊರಟಿದ್ದರೆ ನೀವು ನಿಮ್ಮ ಶಿಕ್ಷಣದ ಸರ್ಟಿಫಿಕೆಟ್ ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ. ಪಾಲಕರು ಕಡಿಮೆ ಕಲಿತಿದ್ದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ ಎಂದು ಭಾವಿಸುವ ಅನೇಕ ಶಾಲೆಗಳಿವೆ.

ಪೋಷಕರ ಕೆಲಸ ಹಾಗೂ ಆದಾಯ (Income) ದ ಮೂಲ : ಸಂದರ್ಶನದಲ್ಲಿ ಪಾಲಕರ ಕೆಲಸದ ಬಗ್ಗೆಯೂ ಮಾಹಿತಿ ಪಡೆಯುತ್ತದೆ. ಪತಿ ಹಾಗೂ ಪತ್ನಿ ಇಬ್ಬರ ದುಡಿಮೆ ಬಗ್ಗೆಯೂ ಪ್ರಶ್ನೆ ಕೇಳಲಾಗುತ್ತದೆ. ಮಗುವಿನ ಎಲ್ಲ ಅರ್ಹತೆಯನ್ನು ಪಾಲಕರು ಪೂರೈಸಬಲ್ಲರೆ ಎಂಬುದನ್ನು ತಿಳಿಯಲು ಹಾಗೂ ಶಾಲೆಯ ಫೀಸ್ ನೀಡಲು ನೀವು ಅರ್ಹರೆ ಎಂಬುದನ್ನು ತಿಳಿಯಲು ಈ ಪ್ರಶ್ನೆಯನ್ನು ಕೇಳಲಾಗುತ್ತದೆ.

ಪಾಲಕರಿಗಿರುವ ಸಾಮಾನ್ಯ ಜ್ಞಾನದ ಬಗ್ಗೆ ಪರೀಕ್ಷೆ : ಸಂದರ್ಶನದ ವೇಳೆ ಪಾಲಕರ ಜ್ಞಾನವನ್ನು ಪರೀಕ್ಷಿಸಲಾಗುತ್ತದೆ. ತಂದೆ ಹಾಗೂ ತಾಯಿ ಇಬ್ಬರ ಬುದ್ಧಿವಂತಿಕೆಯನ್ನು ಪರೀಕ್ಷೆ ಮಾಡಲು ಕೆಲ ಶಾಲೆಗಳಲ್ಲಿ ಲಿಖಿತ ಪರೀಕ್ಷೆ ಇಡುತ್ತಾರೆ. ಗಂಟೆಗಟ್ಟಲೆ ಪಾಲಕರ ಸಂದರ್ಶನ ನಡೆಸುವ ಶಾಲೆಗಳಿವೆ.

ವೈವಾಹಿಕ ಜೀವನದ ಬಗ್ಗೆ ಪ್ರಶ್ನೆ : ಕೆಲ ಶಾಲೆಗಳಲ್ಲಿ ಪತಿ ಹಾಗೂ ಪತ್ನಿ ನಡುವೆ ಸಂಬಂಧ ಹೇಗಿದೆ ಎನ್ನುವ ಪ್ರಶ್ನೆಯನ್ನು ಕೂಡ ಕೇಳ್ತಾರೆ. ಕೆಲ ಕುಟುಂಬದಲ್ಲಿ ದಂಪತಿ ಮಧ್ಯೆ ಸಮಸ್ಯೆಯಿರುತ್ತದೆ. ಇದು ಮಕ್ಕಳ ಮೇಲಾಗುತ್ತದೆ. ಇದ್ರಿಂದ ಅವರ ಶಿಕ್ಷಣಕ್ಕೆ ಅಡ್ಡಿಯಾಗುವ ಸಾಧ್ಯತೆಯಿರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಶಾಲೆಗಳು ಈ ಪ್ರಶ್ನೆಯನ್ನು ಕೇಳುತ್ತವೆ. 

ಕುಟುಂಬದ ಬಗ್ಗೆ ಮಾಹಿತಿ ಕೇಳುತ್ತೆ ಶಾಲೆ : ಕುಟುಂಬದ ಬಗ್ಗೆಯೂ ಶಾಲೆಯಲ್ಲಿ ಮಾಹಿತಿ ಕೇಳಲಾಗುತ್ತದೆ. ಕುಟುಂಬದಲ್ಲಿ ಎಷ್ಟು ಜನರಿದ್ದಾರೆ ಎಂಬುದನ್ನು ತಿಳಿಯುತ್ತದೆ. ಎಷ್ಟು ಜನರನ್ನು ನೀವು ನೋಡಿಕೊಳ್ಳುತ್ತಿದ್ದೀರಿ ಎಂಬುದನ್ನು ತಿಳಿಯಲು ಶಾಲೆಯಲ್ಲಿ ಈ ಪ್ರಶ್ನೆ ಕೇಳಲಾಗುತ್ತದೆ. 

ಭಾವನೆಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಇವರಿಂದ ಮಾತ್ರ ಸಾಧ್ಯ!

ಈ ಪ್ರಶ್ನೆಗಳಿಗೆ ಪಾಲಕರು ನೀಡುವ ಉತ್ತರ ಮಹತ್ವಪಡೆಯುತ್ತದೆ. ಅದು ಮಕ್ಕಳ ಅಡ್ಮಿಷನ್ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಪಾಲಕರಾದವರು ಚಿಂತನಶೀಲರಾಗಿ ಉತ್ತರ ನೀಡುವುದು ಮುಖ್ಯ. ಪತಿ ಮತ್ತು ಪತ್ನಿ ಇಬ್ಬರೂ ಇದಕ್ಕೆ ಮೊದಲೇ ಸಿದ್ಧರಾಗಬೇಕು. 
 

Follow Us:
Download App:
  • android
  • ios