Asianet Suvarna News Asianet Suvarna News

ಮಕ್ಕಳು ಪೋಷಕರಿಂದ ಯಾವಾಗ ಬೇರೆ ಮಲಗಿದರೆೊಳ್ಳೆಯದು?

ಮಕ್ಕಳನ್ನು ಯಾವ ಸಮಯದಲ್ಲಿ ಪ್ರತ್ಯೇಕ ಮಲಗಿಸಲು ಆರಂಭಿಸಬೇಕು ಎನ್ನುವ ಗೊಂದಲ ಪಾಲಕರಲ್ಲಿ ಸಾಮಾನ್ಯವಾಗಿರುತ್ತದೆ. ಹರೆಯಪೂರ್ವದ ಹಂತದಲ್ಲಿ ಮಕ್ಕಳು ಪಾಲಕರಿಂದ ದೂರ ಮಲಗಿದರೆ ಇಬ್ಬರಿಗೂ ಅನುಕೂಲ, ಮಕ್ಕಳ ಆರೋಗ್ಯಕ್ಕೂ ಉತ್ತಮ.

Parents should know on which stage children should sleep separately
Author
Bangalore, First Published Jul 26, 2022, 5:22 PM IST

ಮಕ್ಕಳು ಚಿಕ್ಕವರಿರುವಾಗ, ದಿನವೂ ನಿದ್ರೆಗೆ ಭಂಗ ತರುವಾಗ ಅವರು ಬೇಗ ದೊಡ್ಡವರಾಗಿ ದೂರ ಮಲಗಿದರೆ ಸಾಕು ಎನಿಸುತ್ತದೆ. ಆದರೆ, ಮಕ್ಕಳನ್ನು ನಿಜಕ್ಕೂ ಪ್ರತ್ಯೇಕ ಮಲಗಿಸುವ ಸಮಯ ಬಂದಾಗ ಪಾಲಕರು ಭಾರೀ ಸಂಕಷ್ಟಕ್ಕೆ ಒಳಗಾಗುತ್ತಾರೆ. ಭಾರತೀಯ ಕುಟುಂಬಗಳಲ್ಲಿ ಗಂಡು ಮಕ್ಕಳಾಗಲೀ, ಹೆಣ್ಣು ಮಕ್ಕಳಾಗಲೀ ಪಾಲಕರ ಬಳಿಯೇ ಮಲಗುವುದು ಸಾಮಾನ್ಯ. ಇಬ್ಬರು ಮಕ್ಕಳಿದ್ದರೆ ಅವರನ್ನು ಜತೆಯಾಗಿ ಮಲಗಿಸುವುದು ಸುಲಭ. ಒಂದೇ ಮಗುವಿದ್ದಾಗ ಪಾಲಕರೊಂದಿಗೇ ಮಲಗುವುದು ಅಭ್ಯಾಸ ಆಗಿಬಿಡುತ್ತದೆ. ಆದರೂ ಎಷ್ಟು ಕಾಲ ಪಾಲಕರು ಅವರನ್ನು ತಮ್ಮೊಂದಿಗೆ ಮಲಗಿಸಿಕೊಳ್ಳಲು ಸಾಧ್ಯ? ಒಂದು ಹಂತದ ಬಳಿಕ ಪಾಲಕರು ತಮ್ಮ ಬಳಿಯೇ ಮಕ್ಕಳನ್ನು ಮಲಗಿಸಿಕೊಳ್ಳುವ ಪದ್ಧತಿಯಿಂದ ಇಬ್ಬರಿಗೂ ನಷ್ಟವಾಗುತ್ತದೆ, ಮಕ್ಕಳಿಗೂ ಅನೇಕ ವಿಧದಲ್ಲಿ ಸಮಸ್ಯೆ ಆಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ, ಮಕ್ಕಳನ್ನು ಯಾವ ಸಮಯದಲ್ಲಿ ದೂರ ಮಲಗಿಸಲು ಆರಂಭಿಸಬೇಕು ಎನ್ನುವ ಗೊಂದಲ ಪಾಲಕರಿಗೆ ಇದ್ದೇ ಇದೆ. ಏಕೆಂದರೆ, ಕೆಲವು ಮಕ್ಕಳು ಸುಲಭವಾಗಿ ದೂರ ಮಲಗಲು ಆರಂಭಿಸಿ ಬಿಡುತ್ತಾರೆ. ಆದರೆ, ಕೆಲವು ಮಕ್ಕಳು ಭಯಪಡುತ್ತಾರೆ. ಹೀಗಾಗಿ, ಯಾವ ವಯಸ್ಸಿನಲ್ಲಿ ಮಕ್ಕಳನ್ನು ಮಲಗಿಸಬೇಕು ಎನ್ನುವ ಸ್ಪಷ್ಟತೆ ಪಾಲಕರಿಗೆ ಇರಬೇಕು.

ಪ್ರತಿ ಪಾಲಕರು (Parents) ತಮ್ಮ ಮಕ್ಕಳ (Children) ಬಗ್ಗೆ ಕಾಳಜಿ (Care) ವಹಿಸುತ್ತಾರೆ. ಅವರಲ್ಲಿ ಸುರಕ್ಷಿತವಾಗಿರುವ ಭಾವನೆ ಮೂಡಿಸಲು ತಮ್ಮ ಬಳಿಯೇ ಮಲಗಿಸಿಕೊಳ್ಳುವುದು ಸಹಜ. ಆದರೆ, ನಿರ್ದಿಷ್ಟ ವಯಸ್ಸಿನ ಬಳಿಕ ಅವರನ್ನು ಸಮೀಪ ಮಲಗಿಸಿಕೊಳ್ಳುವುದರಿಂದ ಮಕ್ಕಳಿಗೆ ಮುಂದೆ ತೊಂದರೆ ಆಗುತ್ತದೆ. ಮನೋತಜ್ಞರ (Psychologist) ಪ್ರಕಾರ, ಮಕ್ಕಳನ್ನು ಪಾಲಕರು ತಮ್ಮ ಹಾಸಿಗೆಯಲ್ಲೇ ಮಲಗಿಸಿಕೊಳ್ಳುವುದು ಅವರ ಮಾನಸಿಕ ಆರೋಗ್ಯಕ್ಕೆ ಉತ್ತಮ. ಮಕ್ಕಳು ಯಾರೊಂದಿಗೆ ಸೇಫ್‌ ಫೀಲಿಂಗ್‌ (Safe Feeling) ಅನುಭವಿಸುತ್ತಾರೋ ಅವರ ಸಾಮೀಪ್ಯದಲ್ಲಿರುವುದು ಅವರ ಆರೋಗ್ಯಕ್ಕೆ ಉತ್ತಮ.

ಹೆಣ್ಣಕ್ಕಳು ಸ್ವಾವಲಂಬಿಯಾಗಲು ಪೋಷಕರು ಅವರನ್ನು ಹೀಗೆ ಬೆಳೆಸಬೇಕು

ಹರೆಯಪೂರ್ವದ ಹಂತದಲ್ಲಿ ದೂರ ಇರಲಿ 
ಮಕ್ಕಳಲ್ಲಿ ಯಾವತ್ತು ದೈಹಿಕ ಬದಲಾವಣೆ ಕಾಣಲು ಆರಂಭ ಆಗುತ್ತದೆಯೋ ಆಗ ಅವರನ್ನು ದೂರ ಮಲಗಿಸಬೇಕು. ಈ ಹಂತವನ್ನು ಪ್ರಿ ಪ್ಯೂಬರ್ಟಿ (Pre Pubarty) (ಹರೆಯ ಪೂರ್ವದ ಹಂತ) ಎಂದು ಕರೆಯಲಾಗುತ್ತದೆ. ಅಂದರೆ ಈ ಸಮಯದಲ್ಲಿ ಮಕ್ಕಳ ದೇಹದಲ್ಲಿ ಬದಲಾವಣೆಗಳು (Changes) ಆರಂಭವಾಗುತ್ತವೆ. ಗಂಡು ಮಕ್ಕಳಿಗಾದರೆ ತುಟಿ (Lip) ಮೇಲ್ಭಾಗದಲ್ಲಿ, ಜನನಾಂಗದ (Genital) ಬಳಿ ಕೂದಲು ಬೆಳೆಯುತ್ತವೆ, ದನಿ ಒಡೆಯುತ್ತದೆ. ಹಾಗೂ ಜನನಾಂಗದ ಗಾತ್ರ ಹಿಗ್ಗಲು ಆರಂಭವಾಗುತ್ತದೆ. ಇವೆಲ್ಲ ದೈಹಿಕ ಅವಸ್ಥೆಗಳು. ಹಾಗೆಯೇ ಮಾನಸಿಕವಾಗಿಯೂ ಅವರಲ್ಲಿ ಬದಲಾವಣೆಗಳು ಕಂಡುಬರುತ್ತವೆ. ಕಿರಿಕಿರಿ ಹೆಚ್ಚಿ ಕೋಪಿಸಿಕೊಳ್ಳುವುದು ಹೆಚ್ಚಾಗುತ್ತದೆ. ಹೆಣ್ಣುಮಕ್ಕಳಲ್ಲೂ ಸ್ತನಗಳ (Breast) ಆಕಾರ ದೊಡ್ಡದಾಗುವುದು, ಜನನಾಂಗದ ಬಳಿ ಕೂದಲು ಬೆಳೆಯುವುದು ಆರಂಭವಾಗುತ್ತದೆ. ಈ ಹಂತದಲ್ಲಿ ಪಾಲಕರು ಅವರನ್ನು ತಮ್ಮ ಬಳಿ ಮಲಗಿಸಿಕೊಳ್ಳುವುದನ್ನು ಬಿಡಬೇಕಾಗುತ್ತದೆ. 

ಪೋಷಕರೇ ಮಕ್ಕಳ ಉತ್ಸಾಹ ಕುಂದಿಸಬೇಡಿ

ಹೆಣ್ಣುಮಕ್ಕಳನ್ನು 11 ವರ್ಷಕ್ಕೆ, ಗಂಡು ಮಕ್ಕಳನ್ನು 12 ವರ್ಷಕ್ಕೆ ದೂರ ಮಲಗಿಸುವುದು ಉತ್ತಮ. ಹೆಣ್ಣುಮಕ್ಕಳಿಗೆ 8-11ರ ವಯೋಮಾನದವರೆಗೆ ಹರೆಯಪೂರ್ವದ ಹಂತ ಇರುತ್ತದೆ. ಗಂಡು ಮಕ್ಕಳಲ್ಲಿ 9-14ರ ನಡುವೆ ಈ ಹಂತ ಆರಂಭವಾಗುತ್ತದೆ. ಈ ಸಮಯದಲ್ಲಿ ಮಕ್ಕಳು ಹಲವಾರು ಬದಲಾವಣೆಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ, ಅವರಿಗೆ ತಮ್ಮದೇ ಆದ ಖಾಸಗಿ ಸಮಯದ (Space) ಅಗತ್ಯ ಉಂಟಾಗುತ್ತದೆ. ಹೀಗಾಗಿ, ಅವರನ್ನು ಬೇರೆ ಕೋಣೆಯಲ್ಲಿ ಮಲಗುವ ವ್ಯವಸ್ಥೆ ಮಾಡಬೇಕು. ಇದರಿಂದ ಅವರು ಸಹಜವಾಗಿ ಬೆಳೆಯಬಲ್ಲರು. ಇಲ್ಲವಾದರೆ ಅವರಿಗೆ ಹಾನಿಯಾಗುತ್ತದೆ. ಅವರಿಗೆ ಮೊದಲಿನಂತೆ ಗಾಢವಾದ ನಿದ್ರೆ ಬಾರದಿರಬಹುದು, ಮಧ್ಯೆ ಮಧ್ಯೆ ಎಚ್ಚರವಾಗಬಹುದು. ಇದರಿಂದ ಪಾಲಕರ ಖಾಸಗಿತನಕ್ಕೂ ಧಕ್ಕೆ ಉಂಟಾಗಬಹುದು. ಅವರನ್ನು ಬೇರೆ ಕೋಣೆ (Separate Room) ಅಥವಾ ಹಾಸಿಗೆಯಲ್ಲಿ (Bed) ಮಲಗಿಸಿದರೂ ಸುರಕ್ಷಿತವಾದ ಭಾವನೆ ಇರುವಂತೆ ನೋಡಿಕೊಳ್ಳಬೇಕು. ದೂರ ಮಲಗುವುದು ಅತಿ ಸಾಮಾನ್ಯ ಕ್ರಿಯೆ ಎನ್ನುವಂತೆ ವರ್ತಿಸಬೇಕು, ಅದನ್ನೇ ಹೆಚ್ಚು ಚರ್ಚೆ ಮಾಡುತ್ತಿರುವುದು ಸಲ್ಲದು. 
 

Follow Us:
Download App:
  • android
  • ios