Asianet Suvarna News Asianet Suvarna News

viral post : ಶಿಕ್ಷಕಿ ದೊಡ್ಡ ಬ್ರೆಸ್ಟ್ ಬಗ್ಗೆ ಪಾಲಕರ ಕಂಪ್ಲೇಂಟ್ : ಮುಚ್ಚಿಡೋದು ಕಷ್ಟ ಎಂದ ಟೀಚರ್

ಶಾಲೆಯಲ್ಲಿ ಮಕ್ಕಳ ಕಣ್ಣು ಇಡೀ ಪ್ರಪಂಚವನ್ನು ನೋಡ್ತಿರುತ್ತದೆ. ಈಗಿನ ಅತೀ ಬುದ್ಧಿವಂತ ಮಕ್ಕಳನ್ನು ಹಿಡಿದಿಡೋದು ಕಷ್ಟ. ವಿದ್ಯಾರ್ಥಿಯೊಬ್ಬ ಶಿಕ್ಷಕರ ಅಂಗಾಂಗದ ಬಗ್ಗೆ ಮಾತನಾಡಿದ್ದಾನೆ. ಪಾಲಕರು ಕಂಪ್ಲೇಂಟ್ ಹಿಡಿದು ಶಾಲೆಗೆ ಬಂದಿದ್ದಾರೆ.
 

parents complained in the school about the teachers big breast roo
Author
First Published Aug 24, 2024, 12:00 PM IST | Last Updated Aug 24, 2024, 12:00 PM IST

ಸ್ಕೂಲಿ (school) ಗೆ ಹೋಗ್ವಾಗ ಟೀಚರ್ಸ್ ಮೇಲೆ ಕ್ರಶ್ (crush) ಆಗೋದು ಸಾಮಾನ್ಯ. ಇವರೇ ನನ್ನ ಡ್ರೀಮ್ ಗರ್ಲ್, ನನ್ನ ಡ್ರೀಮ್ ಬಾಯ್ (dream boy) ಅಂತ ಮಕ್ಕಳು ಮಾತನಾಡ್ತಿರುತ್ತಾರೆ. ಟೀಚರ್ಸ್ ಅಡಿಯಿಂದ ಮುಡಿಯವರೆಗೆ ನೋಡುವ ಮಕ್ಕಳು, ಲುಕ್ಕಿಂಗ್ ಬ್ಯೂಟಿಫುಲ್ ಅಂತ ಕಮೆಂಟ್ ಮಾಡ್ತಿರುತ್ತಾರೆ. ಇದು ಸಾಮಾನ್ಯವಾಗಿ ಎಲ್ಲ ಶಿಕ್ಷಕರಿಗೆ ಅಭ್ಯಾಸವಾಗಿರುತ್ತೆ. ಆದ್ರೆ ಈಗಿನ ಮಕ್ಕಳು ನಾಲ್ಕು ಪಟ್ಟು ಮುಂದಿದ್ದಾರೆ. ಬರೀ ಬ್ಯೂಟಿ ಅಲ್ಲ, ಅನಗತ್ಯ ವಿಷ್ಯವನ್ನು ಅವರು ನೋಡೋದಲ್ಲದೆ ಕಮೆಂಟ್ ಮಾಡ್ತಾರೆ. ಈಗ ಟೀಚರ್ ಒಬ್ಬರು ತಮ್ಮ ಸಮಸ್ಯೆಯನ್ನು ರೆಡ್ಡಿಟ್ (Reddit) ನಲ್ಲಿ ಪೋಸ್ಟ್ ಮಾಡಿದ್ದಾರೆ. 

ಹೈಸ್ಕೂಲ್ ಮಕ್ಕಳಿಗೆ ಕಲಿಸುವ ಶಿಕ್ಷಕಿಗೆ ಬ್ರೆಸ್ಟ್ ದೊಡ್ಡ ಸಮಸ್ಯೆ : ಶಾಲೆ ಮಕ್ಕಳು ಲವ್ ಲೆಟರ್ ನೀಡಿದಾಗ ಅದನ್ನು ನಿರಾಕರಿಸುವ ಅಥವಾ ಮಕ್ಕಳಿಗೆ ಬುದ್ದಿ ಹೇಳುವ ಶಿಕ್ಷಕರು ತಮ್ಮ ದೇಹದ ವಿಷ್ಯಕ್ಕೆ ಬಂದಾಗ ಸ್ವಲ್ಪ ಶಾಕ್ ಗೆ ಒಳಗಾಗ್ತಾರೆ. ಈ ಶಿಕ್ಷಕಿಗೂ ಈಗ ಇದೇ ಸ್ಥಿತಿಯುಂಟಾಗಿದೆ. ರೆಡ್ಡಿಟ್ ನಲ್ಲಿ ಶಿಕ್ಷಕಿ ಪೋಸ್ಟ್ ಹಂಚಿಕೊಂಡಿದ್ದಾಳೆ. ಆಕೆ ಕಳೆದ ಆರು ವರ್ಷಗಳಿಂದ ಹೈಸ್ಕೂಲ್ ಮಕ್ಕಳಿಗೆ ಕಲಿಸುತ್ತಿದ್ದಾಳೆ. ಆಕೆ ಬ್ರೆಸ್ ಸಾಮಾನ್ಯಕ್ಕಿಂತ ಸ್ವಲ್ಪ ದೊಡ್ಡದಿದೆ. ಇದು ಮುಜುಗರತರಿಸಬಾರದು ಎನ್ನುವ ಕಾರಣಕ್ಕೆ ಶಿಕ್ಷಕಿ ಸದಾ ಡ್ರೆಸ್ ಕೋಡ್ ಪಾಲನೆ ಮಾಡ್ತಾರೆ. ಒಂದು ದಿನವೂ ಯುನಿಫಾರ್ಮ್ ಮರೆಯದ ಶಿಕ್ಷಕಿ, ಬಹಳ ಎಚ್ಚರಿಕೆಯನ್ನು ವಹಿಸ್ತಾಳೆ. ಇಷ್ಟಾದ್ರೂ ಎಂಟನೇ ತರಗತಿ ಓದುವ ವಿದ್ಯಾರ್ಥಿಯೊಬ್ಬನ ಕಣ್ಣು ಅದ್ರ ಮೇಲೆ ಬಿದ್ದಿದೆ. 

ಪೋಷಕರು ಮಾಡೋ ಈ ತಪ್ಪಿನಿಂದ ಮಕ್ಕಳು ಮಂಗಳಮುಖಿರಾಗ್ತಾರಾ?

ಶಿಕ್ಷಕಿ ಮೇಲೆ ದೂರು ನೀಡಿದ ಪಾಲಕರು :  ವಿದ್ಯಾರ್ಥಿ ಪಾಲಕರು, ಸ್ಕೂಲ್ ಗೆ ಬಂದು ಶಿಕ್ಷಕಿ ಬ್ರೆಸ್ಟ್ ಬಗ್ಗೆ ಮಗ ಮಾತನಾಡ್ತಿದ್ದ ಎಂದಿದ್ದಾರೆ. ಶಿಕ್ಷಕಿ ಡ್ರೆಸ್ ಕೋಡ್ ಪಾಲನೆ ಮಾಡ್ತಿಲ್ಲ, ಹಾಗಾಗಿ ಮಗ ಇಂಥ ವಿಷ್ಯವನ್ನು ಮಾತನಾಡ್ತಿದ್ದಾನೆಂದು ಪಾಲಕರು ಆತಂಕ ವ್ಯಕ್ತಪಡಿಸಿದ್ದರು. ಹೆಚ್ ಎಂ, ಶಿಕ್ಷಕಿಯನ್ನು ಕರೆದು ಇದ್ರ ಬಗ್ಗೆ ಮಾತನಾಡಿದ್ದಾರೆ. ಮಕ್ಕಳು ತನ್ನ ಬ್ರೆಸ್ಟ್ ಬಗ್ಗೆ ಚರ್ಚೆ ಮಾಡ್ತಿದ್ದಾರೆ ಎಂಬುದು ತಿಳಿಯುತ್ತಿದ್ದಂತೆ ಶಿಕ್ಷಕಿ ಆಘಾತಕ್ಕೊಳಗಾಗಿದ್ದಾಳೆ. ನನ್ನ ದೇಹದ ಬಗ್ಗೆ ನನ್ನ ಪಾಲಕರು ಎಂದೂ ಮಾತನಾಡಿಲ್ಲ. ನಿಮಗೆ ಇಂಥ ಸಮಸ್ಯೆ ಕಾಡಿದೆಯಾ? ನಾನು ಆರೋಗ್ಯವಂತ ಮಹಿಳೆ, ದೈಹಿಕವಾಗಿ ನಾನು ಅದನ್ನು ಮರೆಮಾಚಲು ಸಾಧ್ಯವಿಲ್ಲ ಎಂದು ಮಹಿಳೆ ಪೋಸ್ಟ್ ಹಂಚಿಕೊಂಡಿದ್ದಾಳೆ.

 ಮಗು ಹಾಗು ಪೋಷಕರು ಯಾರು ಎಂಬುದು ನನಗೆ ತಿಳಿದಿಲ್ಲ. ನನಗೆ ವಿದ್ಯಾರ್ಥಿ ಹೀಗೆ ಹೇಳಿದ್ದಾನೆ ಎಂಬುದನ್ನು ನಂಬೋದು ಕಷ್ಟ. ಆ ವಿದ್ಯಾರ್ಥಿ ಯಾರು ಎಂಬುದನ್ನು ತಿಳಿದುಕೊಳ್ಳುವ ಆಸಕ್ತಿ ಇಲ್ಲ. ತಿಳಿದ್ರೆ ಪಾಠ ಮಾಡಲು ತೊಂದರೆಯಾಗುತ್ತದೆ. ಅದು ವೈಯಕ್ತಿಕ ಕಮೆಂಟ್ ಆಗಿರೋದ್ರಿಂದ ನಾನು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಅದನ್ನು ಶಾಲೆ ಆಡಳಿತ ಮಂಡಳಿ ಹ್ಯಾಂಡಲ್ ಮಾಡ್ತಿದೆ ಎಂದು ಶಿಕ್ಷಕಿ ಪೋಸ್ಟ್ ನಲ್ಲಿ ಬರೆದಿದ್ದಾಳೆ. 

ತನ್ನ ಮಗಳನ್ನೇ ಮದುವೆಯಾದ ಆ ರಾಜನ ಬಗ್ಗೆ ನಿಮಗೆ ಗೊತ್ತಾ?

ಶಿಕ್ಷಕಿಯ ಈ ಪೋಸ್ಟ್ ವೈರಲ್ ಆಗಿದೆ. ಬಳಕೆದಾರರು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ತಿದ್ದಾರೆ. ಪಾಲಕರು ಅಡ್ಮಿನ್ ಗೆ ಬಂದು ತಿಳಿಸಿದ ವಿಷ್ಯವನ್ನು ಅಡ್ಮಿನ್ ನಿಮಗೆ ಹೇಳಬಾರದಿತ್ತು ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ. ಇನ್ನೊಬ್ಬರು ಈ ವಿಷ್ಯವನ್ನು ಅಡ್ಮಿನ್ ವರೆಗೆ ತಂದ ಪಾಲಕರನ್ನು ದೂಷಿಸಿದ್ದಾರೆ. ಮಕ್ಕಳಿಗೆ ಬೇರೆಯವರ ದೇಹವನ್ನು ಗೌರವಿಸಬೇಕು, ಅದ್ರ ಬಗ್ಗೆ ಮಾತನಾಡಬಾರದು ಎಂದು ಪಾಲಕರು ಸಲಹೆ ನೀಡಬೇಕು. ಶಿಕ್ಷಕರನ್ನು ಹೇಗೆ ನೋಡ್ಬೇಕು, ಅವರನ್ನು ಹೇಗೆ ಕಾಣಬೇಕು ಎಂಬುದನ್ನು ಪಾಲಕರು ತಿಳಿಸಬೇಕು. ಆದ್ರೆ ಪಾಲಕರು ಇಂಥ ವಿಷ್ಯವನ್ನು ಶಾಲೆಗೆ ತಂದು ಮತ್ತಷ್ಟು ದೊಡ್ಡದು ಮಾಡಿದ್ದಾರೆ. ಇದ್ರಲ್ಲಿ ಪೋಷಕರ ತಪ್ಪು ಹೆಚ್ಚಿದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. 

Latest Videos
Follow Us:
Download App:
  • android
  • ios